For Quick Alerts
ALLOW NOTIFICATIONS  
For Daily Alerts

ಕುಂಭ ರಾಶಿಯಲ್ಲಿರುವ ಶನಿ: ಲಾಲ್‌ ಕಿತಾಬ್ ಪ್ರಕಾರ ದ್ವಾದಶ ರಾಶಿಗಳು ಈ ಪರಿಹಾರ ಮಾಡಿದರೆ ಕಷ್ಟ ದೂರಾಗಿ ಅದೃಷ್ಟ ಒಲಿಯಲಿದೆ

|

ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿದೆ, ಇನ್ನು ಎರಡೂವರೆ ವರ್ಷಗಳ ಅದೇ ರಾಶಿಯಲ್ಲಿ ಇರಲಿದೆ. ಶನಿಯು ಕುಂಭ ರಾಶಿಯಲ್ಲಿರುವಾಗ ನಿಮ್ಮ ರಾಶಿಯಲ್ಲಿ ಅದು ಇರುವ ಸ್ಥಾನಕ್ಕೆ ಅನುಸಾರ ಪ್ರಭಾವ ಬೀರಲಿದೆ.

ಆದ್ದರಿಂದ ಈ ಸಂಚಾರ ಈ ಕೆಲವರಿಗೆ ಶುಭವಾಗಿದ್ದರೆ ಇನ್ನು ಕೆಲವರು ತುಂಬಾನೇ ಜಾಗ್ರತೆವಹಿಸಬೇಕಾಗಿದೆ. ಲಾಲ್‌ ಕಿತಾಬ್‌ ಪ್ರಕಾರ ಶನಿಯು ನಿಮ್ಮ ರಾಶಿಯಲ್ಲಿ ಯಾವ ಮನೆಯಲ್ಲಿದೆ ಅದಕ್ಕೆ ತಕ್ಕಂತೆ ಪರಿಹಾರ ಮಾಡಿದರೆ ಶನಿಯ ಕೃಪೆಗೆ ಪಾತ್ರರಾಗಬಹುದು. ಯಾವುದಾದರೂ ರಾಶಿಯವರಿಗೆ ಶನಿಯ ಈ ಸಂಚಾರ ತೊಂದರೆ ನೀಡುತ್ತಿದ್ದರೆ ಈ ಪರಿಹಾರ ಮಾಡಿದರೆ ಶನಿಯ ಕಾಟ ಕಡಿಮೆಯಾಗುವುದು.

ಬನ್ನಿ ನಿಮ್ಮ ರಾಶಿಗೆ ಲಾಲ್‌ ಕಿತಾಬ್‌ ಪ್ರಕಾರ ಯಾವ ರೀತಿಯ ಪರಿಹಾರ ಮಾಡಿದರೆ ಒಳ್ಳೆಯದು ಎಂದು ನೋಡೋಣ:

ಮೇಷ ರಾಶಿಯಲ್ಲಿ 11ನೇ ಮನೆಯಲ್ಲಿರುವ ಶನಿ

ಮೇಷ ರಾಶಿಯಲ್ಲಿ 11ನೇ ಮನೆಯಲ್ಲಿರುವ ಶನಿ

* ನೀವು ಯಾವುದಾದರೂ ಪ್ರಮುಖ ಕೆಲಸಕ್ಕೆ ಹೋಗುವ ಮುನ್ನ ಮನೆಯ ಮುಂದುಗಡೆ ಒಂದು ಪಾತ್ರೆಯಲ್ಲಿ ನೀರು ತುಂಬಿಡಿ, ಅದನ್ನು ನೋಡಿಕೊಂಡು ಮನೆಯಿಂದ ಹೊರಡಿ.

* ಇನ್ನು 43 ದಿನಗಳವರೆಗೆ ಭೂಮಿಗೆ ಸ್ವಲ್ಪ ಎಳ್ಳೆಣ್ಣೆ ಹಾಕಿ

* ಮದ್ಯಪಾನ ಮಾಡಬೇಡಿ, ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯಾಗದಂತೆ ಎಚ್ಚರವಹಿಸಿ.

ವೃಷಭ ರಾಶಿಯಲ್ಲಿ 10ನೇ ಮನೆಯಲ್ಲಿರುವ ಶನಿ

ವೃಷಭ ರಾಶಿಯಲ್ಲಿ 10ನೇ ಮನೆಯಲ್ಲಿರುವ ಶನಿ

* ಪ್ರತಿದಿನ ನಿಮ್ಮ ಸಮೀಪದ ದೇವಾಲಯಕ್ಕೆ ಭೇಟಿ ನೀಡಿ

* ಮಂಗಳವಾರ ಮತ್ತು ಶನಿವಾರ ಶನಿ ದೇವಾಲಯಕ್ಕೆ ಹಾಗೂ ಹನುಮಂತನ ದೇವಾಲಯಕ್ಕೆ ಭೇಟಿ ನೀಡಿ. ಈ ದಿನಗಳಲ್ಲಿ ಸಾತ್ವಿಕ ಆಹಾರವನ್ನಷ್ಟೇ ಸೇವಿಸಿ

* ದೃಷ್ಟಿಯಿಲ್ಲದವರಿಗೆ ನಿಮ್ಮಿಂದ ಆದ ಸಹಾಯ ಮಾಡಿ.

 ಮಿಥುನ ರಾಶಿಯಲ್ಲಿ 9ನೇ ಮನೆಯಲ್ಲಿರುವ ಶನಿ

ಮಿಥುನ ರಾಶಿಯಲ್ಲಿ 9ನೇ ಮನೆಯಲ್ಲಿರುವ ಶನಿ

* ಹರಿಯುವ ನದಿಯಲ್ಲಿ ಸ್ವಲ್ಪ ಅಕ್ಕಿ ಹಾಗೂ ಬಾದಾಮಿ ಬಿಡಿ

* ಶನಿವಾರ ನಿರ್ಗತಿಕರಿಗೆ ನಿಮ್ಮಿಂದ ಆದ ಸಹಾಯ ಮಾಡಿ.

 ಕರ್ಕ ರಾಶಿಯಲ್ಲಿ 8ನೇ ಮನೆಯಲ್ಲಿರುವ ಶನಿ

ಕರ್ಕ ರಾಶಿಯಲ್ಲಿ 8ನೇ ಮನೆಯಲ್ಲಿರುವ ಶನಿ

ಶನಿಯ ಈ ಸ್ಥಾನ ಅನುಕೂಲಕರವಾಗಿದೆ.

* ಚೌಕಾಕಾರದ ಬೆಳ್ಳಿಯ ತುಂಡನ್ನು ನಿಮ್ಮ ಬಳಿ ಸದಾ ಇಟ್ಟುಕೊಳ್ಳಿ.

* ಸ್ನಾನ ನೀರಿಗೆ ಸ್ವಲ್ಪ ಹಾಲು ಹಾಕಿ ಸ್ನಾನ ಮಾಡಿ.

ಸಿಂಹ ರಾಶಿಯಲ್ಲಿ 7ನೇ ಮನೆಯಲ್ಲಿರುವ ಶನಿ

ಸಿಂಹ ರಾಶಿಯಲ್ಲಿ 7ನೇ ಮನೆಯಲ್ಲಿರುವ ಶನಿ

ಶನಿಯು 7ನೇ ಮನೆಯಲ್ಲಿ ಇರುವಾಗ ಈ ರೀತಿಯ ಪರಿಹಾರ ಮಾಡಿದರೆ ಒಳ್ಳೆಯದು

* ಕೊಳಲಿಗೆ ಸಕ್ಕರೆ ತುಂಬಿ ಯಾರೂ ಇಲ್ಲದ ಜಾಗದಲ್ಲಿ ಅದನ್ನು ಸುಟ್ಟು ಹಾಕಿ

*ಶನಿವಾರ ಕಪ್ಪು ಹಸುವಿಗೆ ಮೇವು ತಿನ್ನಿಸಿ.

* ಕರಿ ನಾಯಿಗೆ ಆಹಾರ ನೀಡಿ

ಕನ್ಯಾ ರಾಶಿಯಲ್ಲಿ 6ನೇ ಮನೆಯಲ್ಲಿರಯವ ಶನಿ

ಕನ್ಯಾ ರಾಶಿಯಲ್ಲಿ 6ನೇ ಮನೆಯಲ್ಲಿರಯವ ಶನಿ

* ಕಪ್ಪು ಬೀದಿ ನಾಯಿಗಳಿಗೆ ಆಹಾರವನ್ನು ಹಾಕಿ

* ಹರಿಯುವ ನದಿಯಲ್ಲಿ ತೆಂಗಿನಕಾಯಿ ಹಾಗೂ ಬಾದಾಮಿಯನ್ನು ಬಿಡಿ

* ಬಡ ಮಕ್ಕಳಿಗೆ ಓದಲು ನೆರವಾಗಿ

 ಶನಿಯು ತುಲಾ ರಾಶಿಯಲ್ಲಿ 5ನೇ ಮನೆಯಲ್ಲಿದೆ

ಶನಿಯು ತುಲಾ ರಾಶಿಯಲ್ಲಿ 5ನೇ ಮನೆಯಲ್ಲಿದೆ

ಪರಿಹಾರ

*.ಮಕ್ಕಳ ಹುಟ್ಟು ಹಬ್ಬದ ಸಂದರ್ಭದಲ್ಲಿ ಉಪ್ಪಿನಂಶದ ಆಹಾರ ಹಂಚಿ

* ದೇವಾಲಯದಲ್ಲಿ ಬಾದಾಮಿ ಹಂಚಿ, ನಂತರ ಅರ್ಧ ಬಾದಾಮಿ ಮನೆಗೆ ತನ್ನಿ

 ವೃಶ್ಚಿಕ ರಾಶಿಯಲ್ಲಿ 4ನೇ ಮನೆಯಲ್ಲಿರುವ ಶನಿ

ವೃಶ್ಚಿಕ ರಾಶಿಯಲ್ಲಿ 4ನೇ ಮನೆಯಲ್ಲಿರುವ ಶನಿ

* ದನಗಳಿಗೆ ಆಹಾರ ದಾನ ಮಾಡಿ

* ಬಾವಿಗೆ ಹಾಲು ಹಾಕಿ

* ಹರಿಯುವ ನದಿಯಲ್ಲಿ ರಮ್ ಸುರಿಯಿರಿ.

 ಧನು ರಾಶಿಯಲ್ಲಿ 3ನೇ ಮನೆಯಲ್ಲಿರುವ ಶನಿ

ಧನು ರಾಶಿಯಲ್ಲಿ 3ನೇ ಮನೆಯಲ್ಲಿರುವ ಶನಿ

* ಬೀದಿನಾಯಿಗಳನ್ನು ತಂದು ಆರೈಕೆ ಮಾಡಿ ಸಾಕಿ

* ಬಡವರಿಗೆ ಕಣ್ಣಿನ ಚಿಕಿತ್ಸೆಗೆ ನಿಮ್ಮಿಂದಾಗುವ ಸಹಾಯ ಮಾಡಿ

* ಮನೆಯಲ್ಲಿ ಒಂದು ಕೋಣೆ ಕತ್ತಲಾಗಿದ್ದರೆ ಅದೃಷ್ಟ

 ಮಕರ ರಾಶಿಯಲ್ಲಿ 2ನೇ ಮನೆಯಲ್ಲಿರುವ ಶನಿ

ಮಕರ ರಾಶಿಯಲ್ಲಿ 2ನೇ ಮನೆಯಲ್ಲಿರುವ ಶನಿ

* 43 ದಿನಗಳವರೆಗೆ ಬರಿಗಾಲಿನಲ್ಲಿ ದೇವಾಲಯಕ್ಕೆ ಹೋಗಿ ಪೂಜೆ ಮಾಡಿ ಬನ್ನಿ

* ಹಾಲು ಅಥವಾ ಮೊಸರಿನ ಬೊಟ್ಟನ್ನು ಹಣೆಗೆ ಇಡಿ

* ಹಸುಗಳಿಗೆ ಮೇವು ನೀಡಿ

* ಬಡವರಿಗೆ ದಾನ ಮಾಡಿ.

ಕುಂಭ ರಾಶಿಯಲ್ಲಿ ಲಗ್ನ ಮನೆಯಲ್ಲಿರುವ ಶನಿ

ಕುಂಭ ರಾಶಿಯಲ್ಲಿ ಲಗ್ನ ಮನೆಯಲ್ಲಿರುವ ಶನಿ

* ಶನಿವಾರ, ಮಂಗಳವಾರ ಸಾತ್ವಿಕ ಆಹಾರ ಸೇವಿಸಬೇಕು, ಮದ್ಯಪಾನ ಮಾಡಬಾರದು

* ಆಲದ ಮರಕ್ಕೆ ಹಾಲನ್ನು ಅರ್ಪಿಸಿ ಎಳ್ಳೆಣ್ಣೆ ದೀಪ ಹಚ್ಚಿ ಪೂಜಿಸಿ, ಇದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒಳ್ಳೆಯದು, ಆರೋಗ್ಯ ವೃದ್ಧಿಸುವುದು.

* ಬಡವರಿಗೆ ದಾನ ಮಾಡಿ

* ಮಂಗಳಿಗೆ ಆಹಾರ ನೀಡಿ.

 ಮೀನ ರಾಶಿಯಲ್ಲಿ 12ನೇ ಮನೆಯಲ್ಲಿರುವ ಶನಿ

ಮೀನ ರಾಶಿಯಲ್ಲಿ 12ನೇ ಮನೆಯಲ್ಲಿರುವ ಶನಿ

12 ಬಾದಾಮಿಯನ್ನು ತೆಗೆದು ಅದನ್ನು ಕಪ್ಪು ಬಟ್ಟೆಯಲ್ಲಿ ಸುತ್ತಿ ಕಬ್ಬಿಣದ ಪೆಟ್ಟಿಗೆಯಲ್ಲಿಟ್ಟು, ಆ ಪೆಟ್ಟಿಗೆಯನ್ನು ಮನೆಯ ಕತ್ತಲೆ ಕೋಣೆಯಲ್ಲಿಟ್ಟರೆ ಒಳ್ಳೆಯದು. ಇದರಿಂದ ಅದೃಷ್ಟ ದೊರೆಯಲಿದೆ.

English summary

Lal kitab: Shani Remedies For 12 zodiac Signs in Kannada

Lal kitab: These shani remedies give good result to 12 zodiac signs read on...
Story first published: Monday, January 23, 2023, 11:44 [IST]
X
Desktop Bottom Promotion