For Quick Alerts
ALLOW NOTIFICATIONS  
For Daily Alerts

2023ರಲ್ಲಿ ಗ್ರಹಗಳ ಸಂಚಾರಗಳು ಮೇಷ ರಾಶಿಯ ಮೇಲೆ ಬೀರಲಿದೆ ಈ ಪ್ರಭಾವ

|

2023 ರಲ್ಲಿ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಬದಲಾಗುತ್ತಿರುವ ಚಲನೆಗಳು, ಗ್ರಹಗಳ ಸಾಗಣೆ ಮತ್ತು ಅವುಗಳ ವಿಶೇಷ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ಮೇಷ ರಾಶಿಯವರ ಈ ಭವಿಷ್ಯ ಸಿದ್ಧಪಡಿಸಲಾಗಿದೆ. ಈ ಲೇಖನದಲ್ಲಿ ಮೇಷ ರಾಶಿಯವರ ಮೇಲೆ ಗ್ರಹಗತಿಗಳ ಪ್ರಭಾವ ಹೇಗಿರಲಿದೆ ಎಂದು ಹೇಳಲಾಗಿದೆ ನೋಡಿ:

ಶನಿ ಗ್ರಹ , ಗುರು ಗ್ರಹ ಪ್ರಭಾವ

ಜನವರಿ 17 ರಂದು, ಶನಿ ಮಹಾರಾಜನು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಆಗ ಶನಿಯು ನಿಮ್ಮ 11ನೇಮನೆಯಲ್ಲಿ ಇರಲಿದೆ. ಈ ವರ್ಷದಲ್ಲಿ ನಿಮಗೆ ಒಳ್ಳೆಯದಿದೆ ಎಂದು ಹೇಳಬಹುದು. ಏಕೆಂದರೆ ಈ ವರ್ಷ ನಿಮಗೆ ಹಲವು ಕಾರ್ಯಗಳಲ್ಲಿ ಶುಭ ಫಲಿತಾಂಶಗಳನ್ನು ನೀಡಲಿದೆ.

ವರ್ಷದ ಆರಂಭದಲ್ಲಿ, ಮೇಷ ರಾಶಿಯ ಜನರು ಗೊಂದಲದ
ಸ್ಥಿತಿಯಲ್ಲಿರುತ್ತಾರೆ ಮತ್ತು ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗದೇ ಹೋಗಬಹುದು. ಏಕೆಂದರೆ ನಿಮ್ಮ ರಾಶಿಯಲ್ಲಿರುವ ರಾಹುವಿನ ಸ್ಥಾನದಿಂದಾಗಿ ಆ ರೀತಿ ಇರುತ್ತದೆ.

2023 ರ ದ್ವಿತೀಯಾರ್ಧವು ನಿಮಗೆ ತುಂಬಾ ಫಲಪ್ರದ

ಈ ಸಮಯದಲ್ಲಿ, ಸ್ವಂತ ವ್ಯಾಪಾರ ಹೊಂದಿರುವವರು ಅಥವಾ ಉದ್ಯೋಗ ಮಾಡುವವರು ತಮ್ಮ ವೃತ್ತಿಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಈ ಸಮಯದಲ್ಲಿ ನೀವು ಯಾವುದೇ ಕೆಲಸ ಮಾಡಿದರೂ ಅದನ್ನು ಸರಿಯಾದ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಲು ಸಾಧ್ಯವಾಗುವುದು. ಈ ಸಮಯದಲ್ಲಿ ಕೆಲಸದಲ್ಲಿ ಬದಲಾವಣೆ ಬಯಸಿದರೆ ಉತ್ತಮ ಅವಕಾಶಗಳು ಬರುತ್ತವೆ, ಆದರೆ ಆತುರ ಪಡಬಾರದು, ನಿರ್ಧಾರಗಳನ್ನು ಸಮಯವನ್ನು ತೆಗೆದುಕೊಂಡು ಮಾಡುವುದು ಒಳ್ಳೆಯದು.

ವರ್ಷದ ಆರಂಭದಲ್ಲಿ ಕೆಲಸದ ಒತ್ತಡದಿಂದಾಗಿ ಕುಟುಂಬಕ್ಕೆ ಸಮಯ ಕೊಡಲು ಸಾಧ್ಯವಾಗುವುದಿಲ್ಲ. ಆದರೆ ಚಿಂತಿಸಬೇಕಾಗಿಲ್ಲ, ನಿಮ್ಮ ಕೆಲಸಕ್ಕೆ ಕುಟುಂಬದವರ ಬೆಂಬಲ ಇರುತ್ತದೆ, ನಿಮ್ಮ ಪ್ರಗತಿ ಅವರಿಗೆ ಖುಷಿ ತರಲಿದೆ.

ಅವಾಹಿತರಾಗಿದ್ದು ಮದುವೆಗೆ ಸಂಬಂಧ ಹುಡುಕುತ್ತಿದ್ದರೆ ಮದುವೆ ಯೋಗ ಕೂಡಿ ಬರುವ ಸಾಧ್ಯತೆ ಹೆಚ್ಚಿದೆ. ವಾಹನ ಖರೀದಿಸಲು ಪ್ಲ್ಯಾನ್‌ ಮಾಡುತ್ತಿದ್ದರೆ ನೆರವೇರುವುದು, ಕೆಲವರು ಆಸ್ತಿಯನ್ನೂ ಖರೀದಿಸಬಹುದು. ವರ್ಷದ ಮಧ್ಯಭಾಗದಿಂದ ಆರ್ಥಿಕ ಪ್ರಗತಿ ಕಾಣುವಿರಿ.

ಜನವರಿಯಿಂದ-ಮಾರ್ಚ್ ಹೇಗಿರಲಿದೆ?

ಈ ವರ್ಷದ ಆರಂಭದಲ್ಲಿ, ಒಂಬತ್ತನೇ ಮನೆಯಲ್ಲಿ ಸೂರ್ಯ ಮತ್ತು ಹತ್ತನೇ ಮನೆಯಲ್ಲಿ ಶನಿ ಇರುವುದರಿಂದ, ನೀವು ಬಹಳಷ್ಟು ಗೌರವವನ್ನು ಗಳಿಸುತ್ತೀರಿ, ರಾಜಕೀಯ ಕ್ಷೇತ್ರದಲ್ಲಿದ್ದರೆ ಜನಪ್ರಿಯತೆ ಗಳಿಸುತ್ತೀರಿ.

ಫೆಬ್ರವರಿ ತಿಂಗಳಲ್ಲಿ ಶುಕ್ರನು ಹನ್ನೊಂದನೇ ಮನೆಗೆ ಪ್ರವೇಶಿಸಿದಾಗ, ಕೆಲವರಲ್ಲಿ ಪ್ರೇಮ ಚಿಗುರುವುದು.

ಮಾರ್ಚ್ ತಿಂಗಳಿನಲ್ಲಿ ಕೆಲವು ದೈಹಿಕ ಸಮಸ್ಯೆಗಳು ಅವರನ್ನು ಕಾಡಬಹುದು. ಈ ಸಮಯ ನಿಮ್ಮ ವ್ಯಾಪಾರಕ್ಕೆ ಲಾಭದಾಯಕವಾಗಿರುತ್ತದೆ, ನಿಮ್ಮ ಆತ್ಮವಿಶ್ವಾಸ ಹೆಚ್ಚುವುದು.

ಏಪ್ರಿಲ್‌ನಿಂದ- ಜೂನ್ ಹೇಗಿರಲಿದೆ?

ಏಪ್ರಿಲ್ ತಿಂಗಳಲ್ಲಿ ದೇವ ಗುರುವು ತನ್ನ ರಾಶಿ ಬದಲಾಯಿಸಿ ನಿಮ್ಮ ರಾಶಿಯಲ್ಲಿ ಪ್ರವೇಶಿಸಲಿದೆ. ಇದು ಎಲ್ಲಾ ರೀತಿಯಲ್ಲೂ ಉತ್ತಮ ಸಮಯದ ಆರಂಭವಾಗಿದೆ. ಗುರುವಿನ ಕೃಪೆಯಿಂದ ಮಕ್ಳಳ ಕಡೆಯಿಂದ ಸಿಹಿ ಸುದ್ದಿ ಪಡೆಯುವಿರಿ. ವೈವಾಹಿಕ ಜೀವನದಲ್ಲಿ ಇರುವ ಸಮಸ್ಯೆಗಳು ಕಡಿಮೆಯಾಗುತ್ತವೆ. ವ್ಯಾಪಾರದಲ್ಲಿ ಬೆಳವಣಿಗೆ ಇರುತ್ತದೆ ಮತ್ತು ನೀವು ಅದೃಷ್ಟದ ಬೆಂಬಲವನ್ನು ಪಡೆಯುತ್ತೀರಿ, ಇದರಿಂದಾಗಿ ನಿಮ್ಮ ಎಲ್ಲಾ ಕೆಲಸಗಳು ಪ್ರಾರಂಭವಾಗುತ್ತವೆ, ಬಾಕಿ ಉಳಿದಿರುವ ಕೆಲಸವು ವೇಗವನ್ನು ಪಡೆದುಕೊಳ್ಳುತ್ತದೆ.

ಮೇ ಮತ್ತು ಜೂನ್ ನಡುವೆ ನೀವು ಹೊಸ ಆಸ್ತಿಯನ್ನು ಖರೀದಿಸಬಹುದು. ಈ ಸಮಯದಲ್ಲಿ ಕುಟುಂಬದ ಆಸ್ತಿಗೆ ಸಂಬಂಧಿಸಿದಂತೆ ಕೆಲವು ವಿವಾದಗಳು ಸಾಧ್ಯ. ಈ ಸಮಯವು ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಜುಲೈ-ಸೆಪ್ಟೆಂಬರ್

ಜುಲೈ ಮತ್ತು ಆಗಸ್ಟ್ ನಡುವೆ, ನಿಮ್ಮ ಸ್ಪರ್ಧಿಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸಬಹುದು. ನ್ಯಾಯಾಲಯದ ಪ್ರಕರಣವಿದ್ದರೆ ನೀವು ಯಶಸ್ಸನ್ನು ಪಡೆಯುತ್ತೀರಿ. ಈ ಸಮಯದಲ್ಲಿ ವಿದೇಶಕ್ಕೆ ಹೋಗುವ ಅವಕಾಶಗಳು ಬರಬಹುದು. ನೀವು ವ್ಯಾಪಾರ ಮಾಡಿದರೆ ನಿಮ್ಮ ವ್ಯಾಪಾರವನ್ನು ಮತ್ತಷ್ಟು ವಿಸ್ತರಿಸಲು ಅವಕಾಶಗಳು ದೊರೆಯಲಿದೆ.

ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ವ್ಯಾಪಾರದಲ್ಲಿ ಉತ್ಕರ್ಷವಿರುತ್ತದೆ ಆದರೆ ವೈವಾಹಿಕ ಜೀವನದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತದೆ. ಈ ಸಮಯದಲ್ಲಿ, ನಿಮ್ಮ ಸಂಗಾತಿಯ ಸ್ವಭಾವ ಮತ್ತು ಅವರ ಆರೋಗ್ಯದ ಬಗ್ಗೆ ನೀವು ಕಾಳಜಿ ವಹಿಸಬೇಕು, ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.

ವರ್ಷದ ಕೊನೆಯಲ್ಲಿ ಖರ್ಚು ಹೆಚ್ಚಲಿದೆ

ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ವೆಚ್ಚಗಳು ಹೆಚ್ಚಾಗುತ್ತವೆ. ರಾಹು ಹನ್ನೆರಡನೇ ಮನೆಗೆ ಪ್ರವೇಶಿಸಿದರೆ, ಅನಗತ್ಯ ಪ್ರಯಾಣಗಳು ಉಂಟಾಗುತ್ತವೆ, ಅದಕ್ಕಾಗಿ ನೀವು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಅಂತಹ ಕೆಲವು ಖರ್ಚುಗಳು ನಿಮ್ಮ ಮುಂದೆ ಬರುತ್ತವೆ ಅದು ಅನಗತ್ಯವಾಗಿರುತ್ತದೆ ಆದರೆ ನಿಮ್ಮ ವೈಯಕ್ತಿಕ ಜೀವನದಲ್ಲಿ ನೀವು ಸಂತೋಷವಾಗಿ ಇರುತ್ತೀರಿ.

ಒಟ್ಟಿನಲ್ಲಿ ನೋಡುವುದಾದರೆ ಕೆಲವೊಂದು ಸವಾಲುಗಳಿದ್ದರೂ ಒಟ್ಟಾರೆಯಾಗಿ ನೋಡಿದರೆ 2023 ನಿಮಗೆ ಉತ್ತಮವಾಗಿದೆ ಎಂದು ಹೇಳಬಹುದು.

English summary

How 2023 Planet transit Affects on Aries In 2023

Planet transit Affects on Aries zodiac signs read on...
Story first published: Saturday, November 26, 2022, 11:30 [IST]
X
Desktop Bottom Promotion