For Quick Alerts
ALLOW NOTIFICATIONS  
For Daily Alerts

ಬುಧವಾರದ ದಿನ ಭವಿಷ್ಯ: ಸಿಂಹ ರಾಶಿಯವರಿಗೆ ಹಣದ ವಿಷಯದಲ್ಲಿ ಮಿಶ್ರಫಲ

|

ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:

ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು,

ಆಚಾರ್ಯ ಶ್ರೀ ರಾಘವೇಂದ್ರ ಭಟ್ ಕುಡ್ಲ.

ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಉಪಾಸಕರು

ಪ್ರೀತಿ- ಪ್ರೇಮ ವಿಚಾರ, ಸತಿ- ಪತಿ ಕಲಹ, ಮದುವೆ ವಿಳಂಬ, ಸಂತಾನ, ಉದ್ಯೋಗ, ವ್ಯಾಪಾರ ಸಮಸ್ಯೆ, ದೃಷ್ಟಿ ದೋಷ, ಕುಜ ದೋಷ, ವಾಮಾಚಾರ ಬಾಧಿತರಿಗೆ ಪರಿಹಾರ ನಿಶ್ಚಿತ.

ಹಣಕಾಸು ಸಮಸ್ಯೆ, ಅನಾರೋಗ್ಯ, ಶತ್ರು ಬಾಧೆ, ಗೃಹ ನಿರ್ಮಾಣದಲ್ಲಿ ಅಡೆ-ತಡೆಗಳಿದ್ದಲ್ಲಿ ಸುಲಭ ಪರಿಹಾರ ಒದಗಿಸಲಿದ್ದಾರೆ.

ನಿಮ್ಮ ಯಾವುದೇ ಸಮಸ್ಯೆಗೆ ಒಮ್ಮೆ ಭೇಟಿ ನೀಡಿ. ದುರ್ಗಾ ಅನುಗ್ರಹ ಜ್ಯೋತಿಷ್ಯ ಕೇಂದ್ರ ಮೊಬೈಲ್ ಫೋನ್ ಸಂಖ್ಯೆ 9945699005 .

https://sridurga-astrologer.com

ಸಂವತ್ಸರ: ಶಾರ್ವರಿ

ಆಯನ: ದಕ್ಷಿಣಾಯನ

ಋತು: ಶರದ್

ಮಾಸ: ಆಶ್ವಿಜ

ನಕ್ಷತ್ರ: ಅಕ್ಟೋಬರ್ 22, ಮಧ್ಯಾಹ್ನ 01:30ರವರೆಗೆ ಮೂಲ, ನಂತರ ಪೂರ್ವಾಷಾಢ

ತಿಥಿ: ಶುಕ್ಲ ಪಕ್ಷ

ರಾಹುಕಾಲ: ಮಧ್ಯಾಹ್ನ 12:05ರಿಂದ 01:30ರವರೆಗೆ

ಗುಳಿಕಕಾಲ: ಮಧ್ಯಾಹ್ನ 10:40ರಿಂದ 12:05ರವರೆಗೆ

ಯಮಗಂಡಕಾಲ: ಬೆಳಗ್ಗೆ 07:51ರಿಂದ 09:16ರವರೆಗೆ

ದುರ್ಮುಹೂರ್ತ: ಬೆಳಗ್ಗೆ 11:43ರಿಂದ 12:28ರವರೆಗೆ

ಸೂರ್ಯೋದಯ: ಬೆಳಗ್ಗೆ 06:26ಕ್ಕೆ

ಸೂರ್ಯಾಸ್ತ: ಸಂಜೆ 05:45ಕ್ಕೆ

ಮೇಷ ರಾಶಿ:

ಮೇಷ ರಾಶಿ:

ಇಂದು ಮೇಷ ರಾಶಿಯವರಿಗೆ ಮಿಶ್ರ ಫಲ. ಯಾವುದೇ ಅಡೆತಡೆ ಇಲ್ಲದೇ ಕಚೇರಿ ಕೆಲಸಗಳು ಪೂರ್ಣಗೊಳ್ಳುತ್ತವೆ. ಆದರೆ ಸಹೋದ್ಯೋಗಿಯೊಂದಿಗಿನ ನಿಮ್ಮ ಭಿನ್ನಾಭಿಪ್ರಾಯದಿಂದಾಗಿ ನೀವು ಸ್ವಲ್ಪ ಒತ್ತಡಕ್ಕೆ ಒಳಗಾಗುತ್ತೀರಿ. ಕೆಲವು ನಕಾರಾತ್ಮಕ ವಿಷಯಗಳು ನಿಮ್ಮ ವ್ಯಕ್ತಿತ್ವದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ನೀವು ಇದನ್ನು ನೆನಪಿನಲ್ಲಿಡಿ. ವ್ಯಾಪಾರಸ್ಥರಿಗೆ ಈ ದಿನ ಬಹಳ ಮುಖ್ಯವಾಗುತ್ತದೆ, ವಿಶೇಷವಾಗಿ ನಿಮ್ಮ ಕೆಲಸವು ವಿದೇಶಿ ಕಂಪನಿಗಳಿಗೆ ಸಂಬಂಧಿಸಿದ್ದಲ್ಲಿ, ನೀವು ಉತ್ತಮ ಕೊಡುಗೆಯನ್ನು ಪಡೆಯಬಹುದು. ಇದು ನಿಮ್ಮ ವ್ಯವಹಾರದ ಗತಿ ಹೆಚ್ಚುತ್ತದೆ. ಕುಟುಂಬದಲ್ಲಿ ಎಲ್ಲರೂ ನಿಮ್ಮೊಂದಿಗೆ ತುಂಬಾ ಸಂತೋಷದಿಂದ ಇರುತ್ತಾರೆ. ನೀವು ವಿವಾಹಿತರಾಗಿದ್ದರೆ, ನಿಮ್ಮ ಸಂಗಾತಿಗೆ ಹೆಚ್ಚಿನ ಸಮಯವನ್ನು ನೀಡಲು ಪ್ರಯತ್ನಿಸಿ, ಇಲ್ಲದಿದ್ದರೆ ಅವರಿಗೆ ವೈವಾಹಿಕ ಜೀವನದಲ್ಲಿ ಆಸಕ್ತಿ ಕಡಿಮೆ ಆಗಬಹುದು. ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ. ದೈನಂದಿನ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತವೆ. ಆರೋಗ್ಯದ ಬಗ್ಗೆ ಮಾತನಾಡುವುದಾದರೆ, ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ.

ಉತ್ತಮ ಬಣ್ಣ: ಕಿತ್ತಳೆ

ಶುಭ ಸಂಖ್ಯೆ: 36

ಶುಭ ಸಮಯ: ಬೆಳಗ್ಗೆ 4:15 ರಿಂದ ಸಂಜೆ 5 ರವರೆಗೆ

ವೃಷಭ ರಾಶಿ:

ವೃಷಭ ರಾಶಿ:

ನಿಮ್ಮಲ್ಲಿ ಕೆಲಸದ ಹೊರೆ ಇದ್ದಕ್ಕಿದ್ದಂತೆ ಹೆಚ್ಚಾಗಬಹುದು. ಇಂದು ಕೆಲವು ಹೆಚ್ಚುವರಿ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗಬಹುದು. ಅದಕ್ಕಾಗಿ ನೀವು ತುಂಬಾ ಶ್ರಮಿಸಬೇಕಾಗಬಹುದು. ನೀವು ಇಂದು ಅಧಿಕ ಸಮಯದವರೆಗೆ ಕೆಲಸ ಮಾಡಬೇಕಾಗಬಹುದು. ಆದರೆ ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಬೇಕು. ನಿಮ್ಮ ಕಠಿಣ ಪರಿಶ್ರಮದಿಂದಾಗಿ ನಿಮಗೆ ಶೀರ್ಘದಲ್ಲೇ ಭಡ್ತಿ ಸಿಗಲಿದೆ. ವ್ಯಾಪಾರಸ್ಥರು ಇಂದು ದೊಡ್ಡ ಗ್ರಾಹಕರನ್ನು ಭೇಟಿಯಾಗುವ ಸಾಧ್ಯತೆ. ಇದರಿಂದ ಉತ್ತಮ ಲಾಭ ಗಳಿಸುವಿರಿ. ಇನ್ನು ಹಣದ ಬಗ್ಗೆ ಮಾತನಾಡುತ್ತಾ ನಿಮಗೆ ಬೇಡವಾದರೂ ಸಹ, ನೀವು ಕೆಲವು ದೊಡ್ಡ ಖರ್ಚುಗಳನ್ನು ಮಾಡಬೇಕಾಗಬಹುದು. ವೈವಾಹಿಕ ಜೀವನದಲ್ಲಿ ಸ್ಥಿರತೆ ಇರುತ್ತದೆ. ಜೀವನ ಸಂಗಾತಿಯ ನಡವಳಿಕೆಯಲ್ಲಿ ಉತ್ತಮ ಬದಲಾವಣೆ ಕಾಣುವಿರಿ. ಆರೋಗ್ಯದ ಬಗ್ಗೆ ಮಾತನಾಡುತ್ತಾ, ಗಂಟಲಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಉಂಟಾಗಬಹುದು.

ಉತ್ತಮ ಬಣ್ಣ: ಗುಲಾಬಿ

ಶುಭ ಸಂಖ್ಯೆ: 4

ಶುಭ ಸಮಯ: ಸಂಜೆ 6 ರಿಂದ 10 ರವರೆಗೆ

ಮಿಥುನ ರಾಶಿ:

ಮಿಥುನ ರಾಶಿ:

ಕುಟುಂಬ ಜೀವನ ಅಷ್ಟು ಆರಾಮದಾಯಕವಾಗಿಲ್ಲ. ಆಸ್ತಿಯ ಬಗ್ಗೆ ಮನೆಯಲ್ಲಿ ವಿವಾದಗಳಿರಬಹುದು. ನಿಮ್ಮ ತಾಳ್ಮೆ ನಿಮ್ಮ ಸಮಸ್ಯೆಯನ್ನು ಪರಿಹರಿಸುವಲ್ಲಿ ನೆರವಾಗುತ್ತದೆ. ಆದರೂ ಜಗಳಗಳು ಅಥವಾ ವಾದಗಳಿಂದಾಗಿ ನಿಮ್ಮ ಮಾನಸಿಕ ಶಾಂತಿಯನ್ನು ಕಳೆದುಕೊಳ್ಳುತ್ತೀರಿ. ಅಲ್ಲದೆ, ಇದು ನಿಮ್ಮ ದೈಹಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಆದ್ದರಿಂದ ಅನಗತ್ಯ ಜಗಳ ಕೂಗಾತ ಮಾಡದೇ ತಾಳ್ಮೆ ವಹಿಸಿ. ನೀವು ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ವ್ಯವಹಾರವನ್ನು ಮಾಡಿದರೆ ಇಂದು ನಿಮಗೆ ಉತ್ತಮ ಫಲ ಸಿಗುತ್ತದೆ. ಮತ್ತೊಂದೆಡೆ, ಉದ್ಯೋಗದಲ್ಲಿರುವ ಜನರು ತಮ್ಮ ಅತ್ಯುತ್ತಮ ಸಾಧನೆಗಾಗಿ ಕಚೇರಿಯಲ್ಲಿ ಮೆಚ್ಚುಗೆ ಪಡೆಯುತ್ತಾರೆ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಹಣದ ಪರಿಸ್ಥಿತಿ ಸಾಮಾನ್ಯವಾಗಿರಲಿದೆ. ಈ ಸಮಯದಲ್ಲಿ ಭವಿಷ್ಯದ ಯೋಜನೆಗಳಿಗೆ ಅಡ್ಡಿಯಾಗದಂತೆ ಉಳಿತಾಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಆರೋಗ್ಯದ ಬಗ್ಗೆ ಮಾತನಾಡುವುದಾದರೆ, ಸಣ್ಣ ರೋಗವನ್ನು ಸಹ ನಿರ್ಲಕ್ಷಿಸಬೇಡಿ.

ಉತ್ತಮ ಬಣ್ಣ: ಕೆಂಪು

ಶುಭ ಸಂಖ್ಯೆ: 29

ಶುಭ ಸಮಯ: ಬೆಳಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ

ಕರ್ಕಾಟಕ ರಾಶಿ:

ಕರ್ಕಾಟಕ ರಾಶಿ:

ಕೆಲಸದ ವಿಶಯದಲ್ಲಿ ಇಂದು ನಿಮಗೆ ಮಿಶ್ರ ಫಲ. ವ್ಯಾಪಾರಸ್ಥರಿಗೆ ವ್ಯಾಪಾರದಲ್ಲಿ ಏರಿಳಿತಗಳು ಸಾಮಾನ್ಯ. ಕಠಿಣ ಪರಿಶ್ರಮದ ಹೊರತಾಗಿಯೂ, ನಿಮಗಾಗಿ ಯಾವ ಕೆಲಸವನ್ನು ಮಾಡಲಾಗದಿದ್ದರೆ, ನಿಮ್ಮ ಯೋಜನೆಗಳ ಬಗ್ಗೆ ಗಮನಹರಿಸಿ. ಹೊಸ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿ. ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಪ್ರೋತ್ಸಾಹ ಇರುತ್ತದೆ ಮತ್ತು ನೀವು ಹೆಚ್ಚು ಪರಿಶ್ರಮ ವಹಿಸಿ ಕೆಲಸ ಮಾಡಿ. ಕುಟುಂಬದಲ್ಲಿ ವಾತಾವರಣ ಆರಾಮದಾಯಕವಾಗಿರುತ್ತದೆ. ನಿಮ್ಮ ಪೋಷಕರು ನಿಮ್ಮೊಂದಿಗೆ ಸಂತೋಷವಾಗಿರುತ್ತಾರೆ ಮತ್ತು ನೀವು ಅವರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಮನೆಯ ಜವಾಬ್ದಾರಿಗಳನ್ನು ಪೂರೈಸಲು ಸಂಗಾತಿಯು ನಿಮಗೆ ಸಹಾಯ ಮಾಡಬಹುದು. ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ಇಂದು ಯಾವುದೇ ದೊಡ್ಡ ಸಮಸ್ಯೆ ಇರುವುದಿಲ್ಲ.

ಉತ್ತಮ ಬಣ್ಣ: ನೀಲಿ

ಶುಭ ಸಂಖ್ಯೆ: 5

ಶುಭ ಸಮಯ: ಸಂಜೆ 6:15 ರಿಂದ 9 ರವರೆಗೆ

ಸಿಂಹ ರಾಶಿ:

ಸಿಂಹ ರಾಶಿ:

ಹಣದ ವಿಷಯದಲ್ಲಿ ಇಂದು ನಿಮಗೆ ಮಿಶ್ರ ದಿನವಾಗಿರುತ್ತದೆ. ಯಾಉದೋ ಸಂಪತ್ತು ನಿಮ್ಮನ್ನರಸಿ ಬರಲಿದೆ. ಆದರೆ ಖರ್ಚೂ ಕೂಡ ಅಷ್ಟೇ ಹೆಚ್ಚಳವಾಗಲಿದೆ. ಅನಗತ್ಯ ವಿಷಯಗಳಿಗೆ ಹಣ ವ್ಯಯವಾಗಬಹುದು. ಮತ್ತೊಂದೆಡೆ, ಆಸ್ತಿಗೆ ಸಂಬಂಧಿಸಿದ ವಿಷಯದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗಬಹುದು. ಕಚೇರಿಯಲ್ಲಿ ನಿಮ್ಮ ಅತ್ಯುತ್ತಮ ಕಾರ್ಯವನ್ನು ಮಾಡಿ ತೋರಿಸಿ. ನಿಮ್ಮ ಸಾಮರ್ಥ್ಯವನ್ನು ಗಮನಿಸಿದರೆ, ನಿಮ್ಮ ಬಾಸ್ ಇಂದು ದೊಡ್ಡ ಮತ್ತು ಮಹತ್ವದ ಯೋಜನೆಯಲ್ಲಿ ಕೆಲಸ ಮಾಡಲು ನಿಮಗೆ ಅವಕಾಶ ನೀಡಬಹುದು.ಭವಿಷ್ಯದಲ್ಲಿ ನಿಮ್ಮ ಅಭಿವೃದ್ಧಿಗೆ ಇದೇ ಮುನ್ನುಡಿಯಾಗಬಹುದು. ಧಾನ್ಯಗಳ ವ್ಯಾಪಾರ ವ್ಯವಹಾರಕ್ಕೆ ಇಂದು ಆರ್ಥಿಕವಾಗಿ ಲಾಭಗಳಿಸಬಹುದು. ಮನೆಯ ವಾತಾವರಣ ಚೆನ್ನಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ನೀವು ಸಿಹಿ ಸಿಹಿ ಸಂಭಾಷಣೆಯನ್ನು ಹೊಂದಬಹುದು. ಆರೋಗ್ಯದ ಬಗ್ಗೆ ಮಾತನಾಡುವುದಾದರೆ, ನಿಮಗೆ ಮಲಬದ್ಧತೆ ಇದ್ದರೆ, ನಿಮ್ಮ ಆಹಾರ ಕ್ರಮದ ಬಗ್ಗೆ ಗಮನವಹಿಸಿ.

ಉತ್ತಮ ಬಣ್ಣ: ಕಂದು

ಶುಭ ಸಂಖ್ಯೆ: 28

ಶುಭ ಸಮಯ: ಬೆಳಗ್ಗೆ 9 ರಿಂದ ಮಧ್ಯಾಹ್ನ 2:45 ರವರೆಗೆ

ಕನ್ಯಾರಾಶಿ:

ಕನ್ಯಾರಾಶಿ:

ವಿದ್ಯಾರ್ಥಿಗಳಿಗೆ ಇಂದು ಶುಭ ದಿನ. ನೀವು ಇಂದು ಶಿಕ್ಷಣ ಕ್ಷೇತ್ರದಲ್ಲಿ ಸ್ವಲ್ಪ ಯಶಸ್ಸನ್ನು ಪಡೆಯಬಹುದು. ನಿಮ್ಮ ಕಠಿಣ ಪರಿಶ್ರಮವನ್ನು ಮುಂದುವರಿಸಿರಿ. ಇದರಿಂದ ಉತ್ತಮ ಫಲಿತಾಂಶ ಖಂಡಿತ. ಒತ್ತಡವು ಉಂಟಾಗಬಹುದು. ಕಚೇರಿಯಲ್ಲಿ ಬಾಕಿ ಇರುವ ಕಾರ್ಯಗಳನ್ನು ಪೂರ್ಣಗೊಳಿಸಲು ನೀವು ತುಂಬಾ ಶ್ರಮಿಸಬೇಕಾಗಬಹುದು. ಇದಲ್ಲದೆ, ಹಿರಿಯ ಅಧಿಕಾರಿಗಳ ಕಠಿಣ ವರ್ತನೆ ಸಹ ನಿಮಗೆ ತೊಂದರೆ ಕೊಡಬಹುದು. ಹೀಗಾದಾಗ ನೀವು ನಿಮ್ಮ ಮನಸ್ಸನ್ನು ನಿಗ್ರಹಿಸುವುದು ತುಂಬಾ ಅಗತ್ಯ. ನೀವು ಆಸ್ತಿಗೆ ಸಂಬಂಧಿಸಿದ ಕೆಲಸ ಮಾಡುತ್ತಿದ್ದರೆ, ದಿನ ಸಾಮಾನ್ಯವಾಗಿರಲಿದೆ. ಕೆಲವು ಕಾರಣಗಳಿಗಾಗಿ ತಂದೆ ನಿಮ್ಮ ಮೇಲೆ ಕೋಪಗೊಳ್ಳುತ್ತಾರೆ. ಹಣದ ಬಗ್ಗೆ ಮಾತನಾಡುಡುವುದಾದಲ್ಲಿ, ವೆಚ್ಚಗಳು ಇಂದು ಕಡಿಮೆಯಾಗುತ್ತವೆ ಮತ್ತು ಉಳಿತಾಯವನ್ನು ಮಾಡಬಹುದು. ಆರೋಗ್ಯದ ದೃಷ್ಟಿಯಿಂದ ದಿನವನ್ನು ಮಿಶ್ರವಾಗಿದೆ.

ಉತ್ತಮ ಬಣ್ಣ: ಆಕಾಶ

ಶುಭ ಸಂಖ್ಯೆ: 21

ಶುಭ ಸಮಯ: ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ

ತುಲಾ ರಾಶಿ:

ತುಲಾ ರಾಶಿ:

ಇಂದು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ನಿಮ್ಮ ಮೇಲೆ ಹೆಚ್ಚು ಕೆಲಸದ ಒತ್ತಡ ಹೇರುವ ಮೂಲಕ ನಿಮ್ಮ ಆರೋಗ್ಯದೊಂದಿಗೆ ಆಟವಾಡಬೇಡಿ. ನಿಮ್ಮ ಕೆಲಸವು ನಿಮ್ಮ ಆರೋಗ್ಯದಷ್ಟೇ ಮುಖ್ಯವಾಗಿದೆ. ನೀವು ಸಾಕಷ್ಟು ವಿಶ್ರಾಂತಿ ಪಡೆಯುವುದು ಉತ್ತಮ. ಹಣದ ದೃಷ್ಟಿಯಿಂದ ದಿನ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ಉಳಿತಾಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಇದರಿಂದ ನೀವು ನಿಮ್ಮ ಸಾಲಗಳನ್ನು ಬೇಗನೆ ತೀರಿಸಬಹುದು. ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ, ಮನೆಯ ವಾತಾವರಣವು ಶಾಂತವಾಗಿರುತ್ತದೆ. ಮನೆಯ ಸದಸ್ಯರೊಂದಿಗಿನ ನಿಮ್ಮ ಸಂಬಂಧ ಸರಿಯಾಗಿಲ್ಲದಿದ್ದರೆ, ನೀವು ಪರಸ್ವರ ಸಂವಾದದ ಮೂಲಕ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಬೇಕು. ಮೌನವಾಗಿರುವುದರಿಂದ ತಪ್ಪುಗ್ರಹಿಕೆ ಹಾಗೆಯೇ ಉಲ್ಬಣಗೊಳ್ಳಬಹುದು. ನಿಮ್ಮ ಸಂಗಾತಿಯಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ, ಅದು ನಿಮಗೆ ಸಕಾರಾತ್ಮಕ ಬಲವನ್ನು ನೀಡುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ ಮತ್ತು ನೀವು ಪೂಜೆಯಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ.

ಉತ್ತಮ ಬಣ್ಣ: ಕಡು ಹಸಿರು

ಶುಭ ಸಂಖ್ಯೆ: 5

ಶುಭ ಸಮಯ: ಮಧ್ಯಾಹ್ನ 12:30 ರಿಂದ 6:55 ರವರೆಗೆ

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿ:

ನಿಮ್ಮ ಕೆಲಸದ ಬಗ್ಗೆ ನಿಮಗೆ ಸಂಪೂರ್ಣ ಗಮನ ಇರಲಿ. ಬಾಸ್ ವಹಿಸಿದ ಕೆಲಸವನ್ನು ಬವಾಬ್ದಾರಿಯಿಂದ ನಿಭಾಯಿಸಬೇಕಾಘುತ್ತದೆ. ಈ ಮೂಲಕ ಮೇಲಾಧಿಕಾರಿಗಳ ನಿರೀಕ್ಷೆಗೆ ತಕ್ಕಂತೆ ಕೆಲಸವನ್ನು ಮಾಡಿ. ಇದರಿಂದ ನಿಮಗೆ ಭಡ್ತಿಯೂ ಪ್ರಾಪ್ತಿಯಾಗುತ್ತದೆ. ಇಂದು ನೀವು ಅಂದುಕೊಮ್ಡ ಗುರಿಯನ್ನು ಮುಟ್ಟುತ್ತೀರಿ. ಔಷಧಿ ವೃತ್ತಿಪರರಿಗೆ ಇಂದು ಬಹಳ ಆರ್ಥಿಕವಾಗಿ ಪ್ರಯೋಜನಕಾರಿಯಾಗಲಿದೆ. ಮತ್ತೊಂದೆಡೆ, ನೀವು ಸಣ್ಣ ಉದ್ಯಮಿಯಾಗಿದ್ದರೆ ನಿಮಗೆ ಮಿಶ್ರಫಲ. ಸಹೋದರರೊಂದಿಗೆ ಮನಸ್ತಾಪ, ಇದರಿಂದ ಮನೆಯ ವಾತಾವರಣವು ಉದ್ವಿಗ್ನಗೊಳ್ಳುತ್ತದೆ. ಪರಿಸ್ಥಿತಿ ಏನೇ ಇರಲಿ, ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಡಿ ಮತ್ತು ತಪ್ಪು ಪದಗಳನ್ನು ಬಳಸಬೇಡಿ. ಕುಟುಂಬದಲ್ಲಿನ ಅಪಶ್ರುತಿಯು ನಿಮ್ಮ ತಾಯಿ ಅಥವಾ ತಂದೆಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೀವು ಅವರನ್ನು ಒತ್ತಡದಿಂದ ದೂರವಿರಿಸಲು ಮತ್ತು ಅವರ ಆರೋಗ್ಯವನ್ನು ನೋಡಿಕೊಳ್ಳಲು ಹೆಚ್ಚಾಗಿ ಪ್ರಯತ್ನಿಸುತ್ತೀರಿ.

ಉತ್ತಮ ಬಣ್ಣ: ನೀಲಿ

ಶುಭ ಸಂಖ್ಯೆ: 25

ಶುಭ ಸಮಯ: ಮಧ್ಯಾಹ್ನ 3 ರಿಂದ 10:20 ರವರೆಗೆ

ಧನು ರಾಶಿ:

ಧನು ರಾಶಿ:

ಧನು ರಾಶಿಯವರ ದಿನದ ಮೊದಲಾರ್ಧ ಉತ್ತಮವಾಗಿರುತ್ತದೆ. ಇಂದು ವ್ಯಾಪಾರಸ್ಥರಿಗೆ ಅದೃಷ್ಟದ ದಿನವಾಗಲಿದೆ. ನಿಮ್ಮ ಹಣಕಾಸಿನ ಸಮಸ್ಯೆ ಬಗೆಹರಿಯುತ್ತದೆ. ಅಲ್ಲದೆ, ವ್ಯವಹಾರದಲ್ಲಿ ವಿಸ್ತರಿಸಲು ನಿಮಗೆ ಸುವರ್ಣಾವಕಾಶ ಸಿಗಬಹುದು. ಪಾಲುದಾರಿಕೆಯಲ್ಲ್ ಯಾವುದಾದರೂ ಉದ್ಯೋಗ ಮಾಡಲು ಯೋಚಿಸುತ್ತಿದ್ದರೆ ಇಂದು ಮುಂದುವರೆಯಿರಿ. ನೀವು ಯಾವುದೇ ಹೊಸ ಕೆಲಸವನ್ನು ಸಹಭಾಗಿತ್ವದಲ್ಲಿ ಪ್ರಾರಂಭಿಸಲು ಯೋಜಿಸುತ್ತಿದ್ದರೆ, ಇಂದು ನಿಮ್ಮ ಯೋಜನೆ ಮುಂದುವರಿಯಬಹುದು. ಕಚೇರಿಯಲ್ಲಿ ನಿಮ್ಮ ಬಾಸ್ ಮುಂದೆ ಸರಿಯಾಗಿ ವರ್ತಿಸಿ. ಇಲ್ಲದಿದ್ದರೆ ಸಮಸ್ಯೆ ಎದುರಾಗಬಹುದು. ಹಣದ ದೃಷ್ಟಿಯಿಂದ ಇಂದು ಉತ್ತಮ ದಿನವಾಗಲಿದೆ. ಹಠಾತ್ ಸಂಪತ್ತನ್ನು ಸಿಗಬಹುದು. ಇಂದು ನಿಮ್ಮ ಹೆತ್ತವರೊಂದಿಗೆ ಹೆಚ್ಚು ಸಮಯ ಕಳೆಯಲು ನಿಮಗೆ ಅವಕಾಶ ಸಿಗುತ್ತದೆ ಮತ್ತು ಅವರ ಭಾವನಾತ್ಮಕ ಬೆಂಬಲವನ್ನು ನೀವು ಪಡೆಯುತ್ತೀರಿ. ಸಂಗಾತಿಯು ಇಂದು ಉತ್ತಮ ಮನಸ್ಥಿತಿಯಲ್ಲಿರುತ್ತಾರೆ. ನೀವು ಇಂದು ನಿಮ್ಮ ಪ್ರೀತಿಪಾತ್ರರೊಂದಿಗೆ ಪಿಕ್ನಿಕ್ ಗೆ ಹೋಗಬಹುದು. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ಇಂದು ನರಗಳು ಅಥವಾ ಸ್ನಾಯುಗಳಿಗೆ ಸಂಬಂಧಿಸಿದ ಸಮಸ್ಯೆ ಇರಬಹುದು.

ಉತ್ತಮ ಬಣ್ಣ: ತಿಳಿ ಹಳದಿ

ಶುಭ ಸಂಖ್ಯೆ: 16

ಶುಭ ಸಮಯ: ಸಂಜೆ 6 ರಿಂದ 8:45 ರವರೆಗೆ

ಮಕರ ರಾಶಿ:

ಮಕರ ರಾಶಿ:

ವಿದ್ಯಾರ್ಥಿಗಳಿಗೆ ದಿನ ಶುಭವಾಗಲಿದೆ. ನಿರೀಕ್ಷಿತ ಫಲ ದೊರೆಯಲಿದೆ. ವಿಶೇಷವಾಗಿ ನೀವು ಉನ್ನತ ಶಿಕ್ಷಣ ಪಡೆಯಲು ಯಾವುದೇ ಪ್ರಯತ್ನ ಮಾಡುತ್ತಿದ್ದರೆ, ನೀವು ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಕಚೇರಿಯಲ್ಲಿ ನಿಮ್ಮ ಸಾಮರ್ಥ್ಯವನ್ನು ತೋರಿಸಲು ನಿಮಗಿಂದು ಅವಕಾಶ ಸಿಗುತ್ತದೆ. ನಿಮ್ಮ ಕಠಿಣ ಪರಿಶ್ರಮದಿಂದ ಹಿರಿಯ ಅಧಿಕಾರಿಗಳ ಹೃದಯವನ್ನು ಗೆಲ್ಲಬಹುದು. ವ್ಯಾಪಾರಿಗಳಿಗೆ ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡಬೇಡಿ. ಇದಲ್ಲದೆ, ಯಾವುದೇ ಹೊಸ ಕೆಲಸ ಪ್ರಾರಂಭಿಸಲು ಇದು ಸರಿಯಾದ ಸಮಯವಲ್ಲ. ಮನೆಯ ವಾತಾವರಣ ಸಾಮಾನ್ಯವಾಗಲಿದೆ. ನಿಮ್ಮ ಕುಟುಂಬದೊಂದಿಗೆ, ವಿಶೇಷವಾಗಿ ಒಡಹುಟ್ಟಿದವರೊಂದಿಗೆ ನೀವು ಭಾವನಾತ್ಮಕ ಬಾಂಧವ್ಯವನ್ನು ಹೊಂದಿರುತ್ತೀರಿ, ಇಂದು ವಿಶೇಷ ದಿನವಾಗಲಿದೆ. ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮವಾಗಿ ದಿನ ಕಳೆಯಲಿದ್ದೀರಿ. ಅವರ ಸಂಪೂರ್ಣ ಬೆಂಬಲ ನಿಮಗೆ ಸಿಗುತ್ತದೆ. ಆರೋಗ್ಯದ ಬಗ್ಗೆ ಮಾತನಾಡುವುದಾದರೆ, ಇಂದು ನೀವು ಮೊಣಕಾಲು ನೋವಿನಿಂದ ತೊಂದರೆಗೊಳಗಾಗುತ್ತೀರಿ.

ಉತ್ತಮ ಬಣ್ಣ: ಬಿಳಿ

ಶುಭ ಸಂಖ್ಯೆ: 40

ಶುಭ ಸಮಯ: ಮಧ್ಯಾಹ್ನ 2 ರಿಂದ 5 ರವರೆಗೆ

ಕುಂಭ ರಾಶಿ:

ಕುಂಭ ರಾಶಿ:

ಹಣದ ವಿಷಯದಲ್ಲಿ ಇಂದು ಒಳ್ಳೆಯದೇ ಆಗುತ್ತದೆ. ನೀವು ಹಣಕಾಸಿನ ಲಾಭಗಳನ್ನು ಪಡೆಯುವ ಸಾಧ್ಯತೆಯಿದೆ. ಆದರೆ ಹಣಕಾಸಿನ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಏಕೆಂದರೆ ನೀವು ತುಂಬಾ ಶ್ರಮವಹಿಸಿದ ನಂತರವೇ ನಿಮಗೆ ಯಶಸ್ಸು ಸಿಕ್ಕಿದೆ ಎಂಬುದು ನೆನಪಿರಲಿ. ಇನ್ನು ಕೆಲಸದ ಬಗ್ಗೆ ಮಾತನಾಡುವುದಾದರೆ, ಇಂದು ನಿಮಗೆ ಹೆಚ್ಚಿನ ಕೆಲಸದ ಒತ್ತಡವಿರುವುದಿಲ್ಲ ಮತ್ತು ನಿಮ್ಮ ಎಲ್ಲಾ ಕಾರ್ಯಗಳನ್ನು ನೀವು ಶಾಂತಿಯಿಂದ ನೆರವೇರಿಸುತ್ತೀರಿ. ನಿಮ್ಮಲ್ಲಿ ಹೊಸ ಆಲೋಚನೆಗಳು ಹುಟ್ಟಿಕೊಳ್ಳಬಹುದು. ನೀವು ಹಿರಿಯ ಅಧಿಕಾರಿಗಳೊಂದಿಗೆ ಕೆಲವು ಪ್ರಮುಖ ಚರ್ಚೆಗಳನ್ನು ನಡೆಸಬಹುದು. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಸಂಗಾತಿಯ ಮನಸ್ಥಿತಿ ಚೆನ್ನಾಗಿರುತ್ತದೆ. ನೀವು ಪರಸ್ಪರ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತೀರಿ. ಆರೋಗ್ಯವಾಗಿರಲು, ನಿಮ್ಮ ಆಹಾರ ಮತ್ತು ಪಾನೀಯದ ಅಭ್ಯಾಸದಲ್ಲಿ ನೀವು ಕೆಲವು ಬದಲಾವಣೆಗಳನ್ನು ಮಾಡಬೇಕು.

ಉತ್ತಮ ಬಣ್ಣ: ಕ್ರೀಮ್

ಶುಭ ಸಂಖ್ಯೆ: 9

ಶುಭ ಸಮಯ: ಬೆಳಗ್ಗೆ 8:45 ರಿಂದ ಮಧ್ಯಾಹ್ನ 2:20

ಮೀನ ರಾಶಿ:

ಮೀನ ರಾಶಿ:

ಇಂದು ಕೆಲಸದ ವಿಷಯದಲ್ಲಿ ಫಲಪ್ರಾಪ್ತಿ. ನೀವು ಕೆಲಸಮಾಡುವಲ್ಲಿ ಕೆಲವು ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಆದಾಗ್ಯೂ ನೀವು ಚಿಂತಿಸಬೇಕಾಗಿಲ್ಲ ಏಕೆಂದರೆ ಇದು ತಾತ್ಕಾಲಿಕವಷ್ಟೇ. ಶೀಘ್ರದಲ್ಲೇ ನಿಮ್ಮ ತೊಂದರೆಗಳು ದೂರವಾಗುತ್ತವೆ. ಇಂದು ಸಹೋದ್ಯೋಗಿಗಳೊಂದಿಗೆ ಸಹ ಚರ್ಚೆಗಳು ಉಂಟಾಗಬಹುದು. ವ್ಯಾಪಾರಸ್ಥರಿಗೆ ಇಂದು ಸಾಕಷ್ಟು ತೊಂದರೆಗಳ ನಂತರ, ಅಂತಿಮವಾಗಿ ದೊಡ್ಡ ವ್ಯವಹಾರವನ್ನು ಪಡೆಯುವ ಬಲವಾದ ಸಾಧ್ಯತೆಯಿದೆ. ಇಂದು ನಿಮ್ಮ ಕೌಟುಂಬಿಕ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸಲು ಸಾಧ್ಯವಾಗುತ್ತದೆ. ಮನೆಯಲ್ಲಿ ನಡೆಯುವ ಯಾವುದೇ ವಿವಾದವನ್ನು ಕೊನೆಗೊಳಿಸಲು ನೀವು ಕೆಲವು ಪ್ರಮುಖ ನಿರ್ಧಾರಗಳನ್ನು ಸಹ ತೆಗೆದುಕೊಳ್ಳಬಹುದು. ಸಂಗಾತಿಯಲ್ಲಿನ ಬದಲಾವಣೆ ನಿಮ್ಮ ಚಿಂತೆಗಳನ್ನು ದೂರಮಾಡುತ್ತವೆ. ಆದಾಗ್ಯೂ, ನಿಮ್ಮ ಆರೋಗ್ಯದ ಬಗ್ಗೆಯೂ ನೀವು ಸಂಪೂರ್ಣ ಕಾಳಜಿ ವಹಿಸಬೇಕು. ನಿಮ್ಮ ಸಣ್ಣ ಸಮಸ್ಯೆಗಳನ್ನೂ ಸಹ ನಿರ್ಲಕ್ಷಿಸಬೇಡಿ.

ಉತ್ತಮ ಬಣ್ಣ: ಹಸಿರು

ಶುಭ ಸಂಖ್ಯೆ: 27

ಒಳ್ಳೆಯ ಸಮಯ: ಮಧ್ಯಾಹ್ನ 2 ರಿಂದ 7 ರವರೆಗೆ

ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು,

ಆಚಾರ್ಯ ಶ್ರೀ ರಾಘವೇಂದ್ರ ಭಟ್ ಕುಡ್ಲ.

ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಉಪಾಸಕರು

ಪ್ರೀತಿ- ಪ್ರೇಮ ವಿಚಾರ, ಸತಿ- ಪತಿ ಕಲಹ, ಮದುವೆ ವಿಳಂಬ, ಸಂತಾನ, ಉದ್ಯೋಗ, ವ್ಯಾಪಾರ ಸಮಸ್ಯೆ, ದೃಷ್ಟಿ ದೋಷ, ಕುಜ ದೋಷ, ವಾಮಾಚಾರ ಬಾಧಿತರಿಗೆ ಪರಿಹಾರ ನಿಶ್ಚಿತ.

ಹಣಕಾಸು ಸಮಸ್ಯೆ, ಅನಾರೋಗ್ಯ, ಶತ್ರು ಬಾಧೆ, ಗೃಹ ನಿರ್ಮಾಣದಲ್ಲಿ ಅಡೆ-ತಡೆಗಳಿದ್ದಲ್ಲಿ ಸುಲಭ ಪರಿಹಾರ ಒದಗಿಸಲಿದ್ದಾರೆ.

ನಿಮ್ಮ ಯಾವುದೇ ಸಮಸ್ಯೆಗೆ ಒಮ್ಮೆ ಭೇಟಿ ನೀಡಿ. ದುರ್ಗಾ ಅನುಗ್ರಹ ಜ್ಯೋತಿಷ್ಯ ಕೇಂದ್ರ ಮೊಬೈಲ್ ಫೋನ್ ಸಂಖ್ಯೆ 9845000635 .

https://sridurga-astrologer.com

English summary

Dina Bhavishya 21 October 2020

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Wednesday, October 21, 2020, 4:00 [IST]
X