For Quick Alerts
ALLOW NOTIFICATIONS  
For Daily Alerts

ಭಾನುವಾರದ ದಿನ ಭವಿಷ್ಯ: ಸಿಂಹ ರಾಶಿಯವರಿಗೆ ಸಂತೋಷನೂ ಇದೆ, ಸವಾಲು ಇದೆ

|

ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:

ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು,

ಆಚಾರ್ಯ ಶ್ರೀ ರಾಘವೇಂದ್ರ ಭಟ್ ಕುಡ್ಲ.

ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಉಪಾಸಕರು

ಪ್ರೀತಿ- ಪ್ರೇಮ ವಿಚಾರ, ಸತಿ- ಪತಿ ಕಲಹ, ಮದುವೆ ವಿಳಂಬ, ಸಂತಾನ, ಉದ್ಯೋಗ, ವ್ಯಾಪಾರ ಸಮಸ್ಯೆ, ದೃಷ್ಟಿ ದೋಷ, ಕುಜ ದೋಷ, ವಾಮಾಚಾರ ಬಾಧಿತರಿಗೆ ಪರಿಹಾರ ನಿಶ್ಚಿತ.

ಹಣಕಾಸು ಸಮಸ್ಯೆ, ಅನಾರೋಗ್ಯ, ಶತ್ರು ಬಾಧೆ, ಗೃಹ ನಿರ್ಮಾಣದಲ್ಲಿ ಅಡೆ-ತಡೆಗಳಿದ್ದಲ್ಲಿ ಸುಲಭ ಪರಿಹಾರ ಒದಗಿಸಲಿದ್ದಾರೆ.

ನಿಮ್ಮ ಯಾವುದೇ ಸಮಸ್ಯೆಗೆ ಒಮ್ಮೆ ಭೇಟಿ ನೀಡಿ. ದುರ್ಗಾ ಅನುಗ್ರಹ ಜ್ಯೋತಿಷ್ಯ ಕೇಂದ್ರ ಮೊಬೈಲ್ ಫೋನ್ ಸಂಖ್ಯೆ 9845000635 .

https://sridurga-astrologer.com

ಸಂವತ್ಸರ: ಶಾರ್ವರಿ

ಆಯನ: ದಕ್ಷಿಣಾಯನ

ಋತು: ಶರದ್

ಮಾಸ: ಆಶ್ವಿನಿ

ನಕ್ಷತ್ರ: ಬೆಳಗ್ಗೆ 08:52 ಸ್ವಾತಿ ನಂತರ ಅಕ್ಟೋಬರ್19 ಬೆಳಗ್ಗೆ 06:08ರವರೆಗೆ ವಿಶಾಖ

ತಿಥಿ: ಶುಕ್ಲ ಪಕ್ಷ

ರಾಹುಕಾಲ: ಸಂಜೆ 04:20ರಿಂದ 05:48ರವರೆಗೆ

ಗುಳಿಕಕಾಲ: ಮಧ್ಯಾಹ್ನ 02:51ರಿಂದ 04:20ರವರೆಗೆ

ಯಮಗಂಡಕಾಲ: ಬೆಳಗ್ಗೆ 11:54ರಿಂದ 01:22ರವರೆಗೆ

ದುರ್ಮುಹೂರ್ತ: ಸಂಜೆ 04:14ರಿಂದ 05:01ರವರೆಗೆ

ಸೂರ್ಯೋದಯ: ಬೆಳಗ್ಗೆ 06:00ಕ್ಕೆ

ಸೂರ್ಯಾಸ್ತ: ಸಂಜೆ 05:48ಕ್ಕೆ

ಮೇಷ ರಾಶಿ:

ಮೇಷ ರಾಶಿ:

ಮೇಷ ರಾಶಿ ಆರೋಗ್ಯದ ಬಗ್ಗೆ ಇಂದು ಎಚ್ಚರ. ಇದು ನಿಮ್ಮ ದಿನವನ್ನು ಹಾಳುಮಾಡುತ್ತವೆ. ನಿಮ್ಮ ದಿನಚರಿ ಸಮತೋಲಿತವಾಗಿರಲಿ. ಬೆಳಗ್ಗೆ ಬೇಗನೆ ಎದ್ದು ಪ್ರತಿದಿನ ಲಘು ವ್ಯಾಯಾಮ ಮಾಡಿ. ನಿಮ್ಮ ಆಹಾರ ಕ್ರಮ ಸರಿಯಾಗಿ ಇರಬೇಕು. ಕಚೇರಿ ಕೆಲಸವನ್ನು ಅಲ್ಲಿಯೇ ಮಾಡಿ ಮುಗಿಸಿ. ನೀವು ಬೇರೆ ಯಾವುದೇ ವಿಷಯಕ್ಕೆ ತಲೆಹಾಕಬೇಡಿ. ನಿಮ್ಮ ಎಲ್ಲರೊಂದಿಗೆ ಬೆರೆಯುವ ಸ್ವಭಾವವೇ ನಿಮಗೆ ಇಂದು ತೊಂದರೆ ಮಾಡಬಹುದು. ಹಣದ ವಿಷಯದಲ್ಲಿ ವ್ಯಾಪಾರಿಗಳು ಇಂದು ಯಾವುದೇ ರಿಸ್ಕ್ ತೆಗೆದುಕೊಳ್ಳದಿದ್ದರೆ ಉತ್ತಮ. ನಿಮ್ಮ ಹಣಕಾಸಿನ ನಿರ್ಧಾರಗಳನ್ನು ನೀವು ಅವಸರದಲ್ಲಿ ತೆಗೆದುಕೊಂಡರೆ, ಅದರಿಂದ ನಿಮಗೇ ಹಾನಿ. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರಲಿದೆ. ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿ. ನಿಮ್ಮ ಪ್ರಿಯತಮೆಗೆ ನಿಮ್ಮ ಭಾವನಾತ್ಮಕ ಬೆಂಬಲ ಬೇಕು.

ಉತ್ತಮ ಬಣ್ಣ: ಆಕಾಶ ನೀಲಿ

ಶುಭ ಸಂಖ್ಯೆ: 8

ಶುಭ ಸಮಯ: ಬೆಳಗ್ಗೆ 8:25 ರಿಂದ ಮಧ್ಯಾಹ್ನ 2 ರವರೆಗೆ

ವೃಷಭ ರಾಶಿ:

ವೃಷಭ ರಾಶಿ:

ಕೆಲಸದ ವಿಷಯದಲ್ಲಿ ಇಂದು ನಿಮಗೆ ಅಷ್ಟು ಉತ್ತಮ ದಿನವಲ್ಲ. ನೀವು ಎಷ್ಟೇ ಪರಿಶ್ರಮ ವಹಿಸಿದರೂ ನಿಮಗೆ ಉತ್ತಮ ಫಲಿತಾಂಶ ಸಿಗುವುದಿಲ್ಲ, ಆದರೆ ನಿರಾಶೆಗೊಳ್ಳುವ ಅಗತ್ಯವಿಲ್ಲ. ಸಮಯ ಬಂದಾಗ ನಿಮ್ಮ ಶ್ರಮದ ಫಲವನ್ನು ನೀವು ಖಂಡಿತವಾಗಿ ಪಡೆಯುತ್ತೀರಿ. ವ್ಯಾಪಾರಸ್ಥರು ದೊಡ್ಡ ಹೂಡಿಕೆ ಮಾಡಬೇಡಿ. ಇಂದು ಕೆಲಸಕ್ಕಾಗಿ ಬೇರೆ ಕಡೆ ಪ್ರಯಾಣಿಸಬೇಕಾಗಬಹುದು. ಈ ನಿಮ್ಮ ಪ್ರವಾಸವು ಸಮಯದೊಂದಿಗೆ ಹಣವನ್ನು ವ್ಯರ್ಥ ಮಾಡುತ್ತದೆ. ಇಂದು ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾದ ದಿನವಾಗಲಿದೆ. ನೀವು ವೃತ್ತಿಪರ ಕೋರ್ಸ್‌ನಲ್ಲಿ ಪ್ರವೇಶ ಪಡೆಯುವ ಬಗ್ಗೆ ಯೋಚಿಸುತ್ತಿದ್ದರೆ ವಿಷಯದಲ್ಲಿ ಸಿಹಿ ಸುದ್ದಿ ನಿಮ್ಮ ಕಿವಿಗೆ ಬೀಳುತ್ತದೆ. ಮನೆಯ ವಾತಾವರಣ ಶಾಂತವಾಗಿರುತ್ತದೆ. ನೀವು ಕುಟುಂಬ ಸದಸ್ಯರಿಂದ ಬೆಂಬಲ ಪಡೆಯುತ್ತೀರಿ. ನಿಮ್ಮ ಸಂಗಾತಿಯ ಆರೋಗ್ಯ ಕ್ಷೀಣಿಸುತ್ತಿರುವುದರಿಂದ ನೀವು ತುಂಬಾ ಚಿಂತೆ ಮಾಡುತ್ತೀರಿ. ಜಾಗ್ರತೆ ವಹಿಸಿ.

ಉತ್ತಮ ಬಣ್ಣ: ಕಡು ಹಸಿರು

ಶುಭ ಸಂಖ್ಯೆ: 10

ಶುಭ ಸಮಯ: ಸಂಜೆ 6:05 ರಿಂದ 9:30 ರವರೆಗೆ

ಮಿಥುನ ರಾಶಿ:

ಮಿಥುನ ರಾಶಿ:

ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಮನೆಯ ಸದಸ್ಯರಲ್ಲಿ ಉತ್ತಮ ಹೊಂದಾಣಿಕೆ ಕಂಡುಬರುತ್ತದೆ. ಇದರಿಂದ ನಿಮ್ಮ ಮನಸ್ಸಿಗೂ ಆನಂದ. ನೌಕರರಿಗೆ ಉತ್ತಮ ಅವಕಾಶ ಸಿಗುತ್ತದೆ. ಇದರಿಂದ ನಿಮ್ಮ ವೃತ್ತಿಜೀವನವು ಹೊಸ ದಿಕ್ಕಿನಲ್ಲಿ ಚಲಿಸುತ್ತದೆ. ಮತ್ತೊಂದೆಡೆ, ವ್ಯವಹಾರಕ್ಕೆ ಸಂಬಂಧಿಸಿದಂತೆ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ಇಂದು ಅದಕ್ಕೆ ಅನುಕೂಲಕರ. ನಿಮ್ಮ ವ್ಯವಹಾರ ನಿರ್ಧಾರಗಳನ್ನು ನೀವು ಜಾಗರೂಕತೆಯಿಂದ ಮಾಡಿದರೆ, ಮುಂದಿನ ದಿನಗಳಲ್ಲಿ ನೀವು ಖಂಡಿತವಾಗಿಯೂ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಇಂದು ಹಣದ ದೃಷ್ಟಿಯಿಂದ ದಿನ ತುಂಬಾ ದುಬಾರಿಯಾಗಲಿದೆ. ವೆಚ್ಚವು ಹೆಚ್ಚಾಗುವ ಸಾಧ್ಯತೆಯಿದೆ. ಆರೋಗ್ಯದ ದೃಷ್ಟಿಯಿಂದ ಇಂದು ನಿಮಗೆ ಒಳ್ಳೆಯದು. ಯಾವುದೇ ದೊಡ್ಡ ಸಮಸ್ಯೆ ಇರುವುದಿಲ್ಲ.

ಉತ್ತಮ ಬಣ್ಣ: ಮರೂನ್

ಶುಭ ಸಂಖ್ಯೆ: 31

ಶುಭ ಸಮಯ: ಮಧ್ಯಾಹ್ನ 3 ರಿಂದ 8 ರವರೆಗೆ

ಕರ್ಕಾಟಕ ರಾಶಿ:

ಕರ್ಕಾಟಕ ರಾಶಿ:

ತಪ್ಪು ತಿಳುವಳಿಕೆಯಿಂದಾಗಿ, ಮನೆಯ ನೆಮ್ಮದಿ ಕೆಡುತ್ತದೆ. ಹಾಗಿರುವಾಗ ನೀವು ತಾಳ್ಮೆಯಿಂದ ವ್ಯವಹರಿಸಿ. ತಪ್ಪುತಿಳುವಳಿಕೆಯನ್ನು ಅರಿತು ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ. ಈ ಸಮಯದಲ್ಲಿ ನಿಮ್ಮ ತಂದೆಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಅಧಿಕ ಒತ್ತಡವು ಅವರ ಆರೋಗ್ಯಕ್ಕೆ ಹಾನಿಕಾರಕವೆಂಬುದು ನಿಮಗೆ ಅರಿವಿರಲಿ. ಇಂದು ಉದ್ಯೋಗಿಗಳಿಗೆ ಸಾಮಾನ್ಯ ದಿನವಾಗಲಿದೆ. ಮತ್ತೊಂದೆಡೆ, ನೀವು ವ್ಯಾಪಾರ ಮಾಡುತ್ತಿದ್ದರೆ ಮತ್ತು ನಿಮ್ಮ ವ್ಯವಹಾರವನ್ನು ಮುಂದುವರೆಸಲು ದೀರ್ಘಕಾಲದವರೆಗೆ ಯಾವುದೇ ಪ್ರಯತ್ನಗಳನ್ನು ಮಾಡುತ್ತಿದ್ದರೆ, ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಇವತ್ತು ಸಿಗುತ್ತದೆ. ನೀವು ತುಂಬಾ ಸಂತೋಷವಾಗಿರುತ್ತೀರಿ ಮತ್ತು ನಿಮ್ಮ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ. ಹಣವು ಉತ್ತಮ ಸ್ಥಿತಿಯಲ್ಲಿರುತ್ತದೆ. ಹಠಾತ್ ಸಂಪತ್ತು ನಿಮ್ಮದಾಗಲಿದೆ. ಇನ್ನು ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ದಿನವು ನಿಮಗೆ ಉತ್ತಮವಾಗಿದೆ.

ಉತ್ತಮ ಬಣ್ಣ: ಹಳದಿ

ಶುಭ ಸಂಖ್ಯೆ: 9

ಶುಭ ಸಮಯ: ಬೆಳಗ್ಗೆ 11 ರಿಂದ ರಾತ್ರಿ 8:05

ಸಿಂಹ ರಾಶಿ:

ಸಿಂಹ ರಾಶಿ:

ಇಂದು ನಿಮಗೆ ಸಂತೋಷದ ಜೊತೆಗೆ ಕೆಲವು ಸವಾಲುಗಳೂ ಎದುರಾಗುತ್ತವೆ. ಯಾವುದೇ ಸಂದರ್ಭಗಳಲ್ಲಿ ನೀವು ಆತ್ಮವಿಶ್ವಾಸದಿಂದ ಇರುತ್ತೀರಿ ಮತ್ತು ನೀವು ಧೈರ್ಯದಿಂದ ಪ್ರತಿಯೊಂದು ಕಷ್ಟವನ್ನೂ ಎದುರಿಸುತ್ತೀರಿ. ಮತ್ತೊಂದೆಡೆ, ನೀವು ಪೂರ್ಣ ಉತ್ಸಾಹದಿಂದ ಸಂತೋಷದ ಕ್ಷಣಗಳನ್ನು ಅನುಭವಿಸುತ್ತೀರಿ. ಕಚೇರಿಯಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಮನಸ್ತಾಪ ಬೇಡ. ನೀವು ತಪ್ಪು ಮಾಡಿದರೆ, ಅದನ್ನು ಮುಕ್ತವಾಗಿ ಒಪ್ಪಿಕೊಳ್ಳಿ. ವ್ಯಾಪಾರಸ್ಥರು ಇಂದು ಸಾಕಷ್ಟು ಶ್ರಮಪಡಬೇಕಾಗಬಹುದು. ಆದಾಗ್ಯೂ ನಿಮ್ಮ ಕಠಿಣ ಪರಿಶ್ರಮ ವ್ಯರ್ಥವಾಗುವುದಿಲ್ಲ ಮತ್ತು ನೀವು ನಿರೀಕ್ಷಿಸಿದಂತೆ ಫಲಿತಾಂಶಗಳನ್ನು ಪಡೆಯುತ್ತೀರಿ. ಹೋಟೆಲ್‌ಗಳು ಅಥವಾ ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡುವ ಜನರಿಗೆ ಸ್ವಲ್ಪ ಸಮಾಧಾನಕರ ದಿನ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಮನಸ್ತಾಪಗಳು ನಡೆಯುತ್ತಿದ್ದರೆ, ಇಂದು ಅವರೊಂದಿಗೆ ಪ್ರೀತಿಯಿಂದ ಮಾತನಾಡಲು ಪ್ರಯತ್ನಿಸಿ ಇಲ್ಲದಿದ್ದರೆ ನಿಮ್ಮ ನಡುವಿನ ಅಂತರವು ಹೆಚ್ಚಾಗಬಹುದು. ಆರೋಗ್ಯದ ಬಗ್ಗೆ ಮಾತನಾಡುವುದಾದರೆ, ನಿಮಗೆ ಇಂದು ನಿದ್ರಾಹೀನತೆಯ ಸಮಸ್ಯೆ ಕಾಡಬಹುದು.

ಉತ್ತಮ ಬಣ್ಣ: ಕೆಂಪು

ಶುಭ ಸಂಖ್ಯೆ: 9

ಶುಭ ಸಮಯ: ಬೆಳಗ್ಗೆ 7:20 ರಿಂದ ಸಂಜೆ 5 ರವರೆಗೆ

ಕನ್ಯಾರಾಶಿ:

ಕನ್ಯಾರಾಶಿ:

ಕೆಲಸಕ್ಕೆ ಸಂಬಂಧಿಸಿದಂತೆ ದಿನದ ಮೊದಲಾರ್ಧ ಉತ್ತಮವಾಘಿದೆ. ಉದ್ಯೋಗ ಅಥವಾ ವ್ಯವಹಾರದಲ್ಲಿ ನೀವು ನಿರೀಕ್ಷಿಸಿದಂತೆ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ನೀವು ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ ಇಂದು ಅದಕ್ಕೆ ಅನುಕೂಲಕರವಾಗಿರುತ್ತದೆ. ನಿಮ್ಮ ಜೊತೆ ನಿಮ್ಮ ಅದೃಷ್ಟವೂ ಸೇರಿದೆ. ಹಣದ ವಿಷಯದಲ್ಲಿ, ಈ ದಿನ ನೀವು ಸಾಕಷ್ಟು ಕಷ್ಟಪಡಬೇಕಾಗಬಹುದು. ಹಣಕಾಸಿನ ಅಡಚಣೆಗಳಿಂದಾಗಿ, ನಿಮ್ಮ ಕೆಲವು ಪ್ರಮುಖ ಕೆಲಸಗಳು ಇಂದು ಮಧ್ಯದಲ್ಲಿ ಸಿಲುಕಿಕೊಳ್ಳಬಹುದು. ಈ ಸಮಯದಲ್ಲಿ ನೀವು ಉಳಿತಾಯದ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಮನೆಯ ಸದಸ್ಯರೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ. ಇಂದು ಯಾವುದೇ ಒಳ್ಳೆಯ ಸುದ್ದಿಯನ್ನು ಕಿರಿಯ ಸಹೋದರ ಅಥವಾ ಸಹೋದರಿಯಿಂದ ಪಡೆಯಬಹುದು. ಆರೋಗ್ಯದ ಬಗ್ಗೆ ಮಾತನಾಡುವುದಾದಲ್ಲಿ, ಇಂದು ಯಾವುದೇ ದೊಡ್ಡ ಸಮಸ್ಯೆ ಇಲ್ಲ. ಆದಾಗ್ಯೂ ನಿಮಗೆ ವಿಶ್ರಾಂತಿಗೆ ಹೆಚ್ಚು ಗಮನ ಕೊಡಬೇಕು.

ಉತ್ತಮ ಬಣ್ಣ: ಹಸಿರು

ಶುಭ ಸಂಖ್ಯೆ: 6

ಶುಭ ಸಮಯ: ಬೆಳಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ

ತುಲಾ:

ತುಲಾ:

ಆರೋಗ್ಯ ಅಸ್ವಸ್ಥತೆ ಉಂಟಾಗಬಹುದು. ಅಸಡ್ಡೆ ಮಾಡದೇ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಕಚೇರಿಯಲ್ಲಿ ಕೆಲಸದ ಹೊರೆ ನಿಮ್ಮ ಒತ್ತಡವನ್ನು ಹೆಚ್ಚಿಸುತ್ತದೆ. ನೀವು ಇಂದು ನಿಭಾಯಿಸಬೇಕಾದ ಅನೇಕ ಕಾರ್ಯಗಳಿವೆ. ಹೀಗಾಗಿ ಆತುರ ಮಾಡದೇ ಕಾರ್ಯವನ್ನು ಮಾಡಿ. ಇಲ್ಲದಿದ್ದರೆ ನಿಮ್ಮಿಂದ ಹೆಚ್ಚು ತಪ್ಪುಗಳಾಗುವ ಸಾಧ್ಯತೆ ಇದೆ. ನಿಮ್ಮ ಕೆಲಸವನ್ನು ನೀವು ಮೊದಲೇ ಯೋಜಿಸಿದರೆ, ನೀವು ಖಂಡಿತವಾಗಿಯೂ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತೀರಿ. ವ್ಯಾಪಾರಿಗಳು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ನಿಮ್ಮ ಕೈಯಲ್ಲಿರುವ ಕೆಲಸ ತಪ್ಪಿಹೋದರೆ ನಿಮಗೆ ಅನನುಕೂಲವಾಗಬಹುದು. ಆದರೆ, ನೀವು ಭಯಪಡಬೇಕಾಗಿಲ್ಲ ಅಥವಾ ಚಿಂತಿಸಬೇಕಾಗಿಲ್ಲ ಏಕೆಂದರೆ ವ್ಯವಹಾರದಲ್ಲಿ ಇಂತಹ ಏರಿಳಿತಗಳು ಬರುತ್ತಲೇ ಇರುತ್ತವೆ. ಮನೆಯ ವಾತಾವರಣ ಉತ್ತಮವಾಗಿರುತ್ತದೆ.

ಉತ್ತಮ ಬಣ್ಣ: ನೀಲಿ

ಶುಭ ಸಂಖ್ಯೆ: 14

ಶುಭ ಸಮಯ: ಸಂಜೆ 6:15 ರಿಂದ 11 ರವರೆಗೆ

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿ:

ಇಂದು ನಿಮ್ಮ ಯಾವುದೇ ಆಸೆಗಳನ್ನು ಈಡೇರಿಸಬಹುದು ಅದು ಮನಸ್ಸನ್ನು ಬಹಳ ಸಂತೋಷಗೊಳಿಸುತ್ತದೆ. ನೀವು ಸಕಾರಾತ್ಮಕ ಭಾವನೆ ಹೊಂದುದ್ದು ನಿಮ್ಮಲ್ಲಿ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ. ನೀವು ನೌಕರಿ ಮಾಡುವವರಾಗಿದ್ದಲ್ಲಿ, ಇಂದು ಕಚೇರಿಯಲ್ಲಿ ನಿಮ್ಮ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ನಿಮ್ಮ ಪ್ರತಿಭೆಯಿಂದಾಗಿ ನೀವು ಇಂದು ಉತ್ತಮ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ನೀವು ಆಹಾರ ಪದಾರ್ಥಗಳ ವ್ಯವಹಾರವನ್ನು ಮಾಡಿದರೆ ನೈರ್ಮಲ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಈ ಸಮಯದಲ್ಲಿ, ಸ್ವಲ್ಪ ನಿರ್ಲಕ್ಷ್ಯ ಕೂಡ ವ್ಯವಹಾರದಲ್ಲಿ ನಷ್ಟವನ್ನು ಉಂಟುಮಾಡುತ್ತದೆ. ಮನೆಯ ವಾತಾವರಣ ಉತಮವಾಗಿರುತ್ತದೆ. ಸಂಗಾತಿಯಿಂದ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಹಣದ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಯಿದೆ. ತಂದೆಯಿಂದ ಆರ್ಥಿಕ ನೆರವು ಪಡೆಯಬಹುದು. ಆರೋಗ್ಯದ ಬಗ್ಗೆ ಮಾತನಾಡುತ್ತಾ, ಜಂಕ್ ಫುಡ್ ನ್ನು ಸೆವಿಸಬೇಡಿ.

ಉತ್ತಮ ಬಣ್ಣ: ನೇರಳೆ

ಶುಭ ಸಂಖ್ಯೆ: 30

ಶುಭ ಸಮಯ: ಬೆಳಗ್ಗೆ 4:10 ರಿಂದ 3:50 ರವರೆಗೆ

ಧನು ರಾಶಿ:

ಧನು ರಾಶಿ:

ಇಂದು ದಿನದ ಆರಂಭ ಅಷ್ಟು ಉತ್ತಮವಾಗಿಲ್ಲ. ನೀವು ನಿಮ್ಮ ಸಂಗಾತಿಯೊಂದಿಗೆ ಬೆಳ ಬೆಳಗ್ಗೆ ಜಗಳವಾಡಬಹುದು. ನಿಮ್ಮಲ್ಲಿ ತಾಳ್ಮೆ ಇದ್ದರೆ ಈ ವಿಷಯ ಅಷ್ಟು ತಾರಕಕ್ಕೆ ಹೋಗುವುದಿಲ್ಲ. ಈ ರೀತಿಯಾಗಿ, ವೃಥಾ ತೊಂದರೆಯಲ್ಲಿ ಸಿಲುಕಿಕೊಂಡು ನಿಮ್ಮ ಸಮಯವನ್ನೂ ವ್ಯರ್ಥ ಮಾಡಿಕೊಳ್ಳಬೇಡಿ. ನಿಮ್ಮ ಕೆಲಸದ ಮೇಲೆ ನೀವು ಹೆಚ್ಚು ಗಮನ ಹರಿಸಬೇಕು ಇದರಿಂದ ನಿಮ್ಮ ಉಜ್ವಲ ಭವಿಷ್ಯದ ಕನಸು ನನಸಾಗಬಹುದು. ವ್ಯಾಪಾರಿಗಳು ತಮ್ಮ ವಿರೋಧಿಗಳೊಂದಿಗೆ ಜಾಗರೂಕರಾಗಿರಬೇಕು. ಇಂದು ಅವರು ನೀವು ಮಾಡುವ ಯಾವುದೇ ಕೆಲಸವನ್ನು ಹಾಳು ಮಾಡಲು ಪ್ರಯತ್ನಿಸಬಹುದು. ಕಚೇರಿಯಲ್ಲಿ ಮೇಲಾಧಿಕಾರಿಗಳ ಮಾತನ್ನು ಗಂಭೀರವಾಗಿ ಪರಿಗಣಿಸಿ. ಅವರ ಸಣ್ಣ ಸಲಹೆಯು ಭವಿಷ್ಯದಲ್ಲಿ ನಿಮಗೆ ಪ್ರಯೋಜನಕಾರಿ. ಹಣದ ಪರಿಸ್ಥಿತಿ ಉತ್ತಮವಾಗಿಲ್ಲ. ಇದ್ದಕ್ಕಿದ್ದಂತೆ ಇಂದು ದೊಡ್ಡ ಖರ್ಚು ನಿಮ್ಮ ಬಜೆಟ್ ಅನ್ನು ಅಸಮತೋಲನಗೊಳಿಸಬಹುದು. ಆರೋಗ್ಯದ ಬಗ್ಗೆ ಮಾತನಾಡುವುದಾದರೆ, ಇಂದು ನಿಮಗೆ ಗ್ಯಾಸ್, ಅಜೀರ್ಣ, ಆಮ್ಲೀಯತೆಯ ಸಮಸ್ಯೆಗಳಿರಬಹುದು.

ಉತ್ತಮ ಬಣ್ಣ: ಗುಲಾಬಿ

ಶುಭ ಸಂಖ್ಯೆ: 8

ಶುಭ ಸಮಯ: ಮಧ್ಯಾಹ್ನ 12:55 ರಿಂದ 7 ಗಂಟೆ

ಮಕರ ರಾಶಿ:

ಮಕರ ರಾಶಿ:

ಇಂದು ಎಲ್ಲಾ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತವೆ. ಇಂದು ನೀವು ನಿಮ್ಮ ಅಗತ್ಯಗಳನ್ನು ಬಿಟ್ಟು, ಕುಟುಂಬಕ್ಕೆ ಆದ್ಯತೆ ನೀಡುತ್ತೀರಿ. ಇಂದು ನಿಮ್ಮ ವೈವಾಹಿಕ ಜೀವನದ ಅತ್ಯುತ್ತಮ ದಿನಗಳಲ್ಲಿ ಒಂದಾಗಬಹುದು. ನಿಮ್ಮ ಸಂಗಾತಿಯೊಂದಿಗೆ ನೀವು ಸ್ಮರಣೀಯ ಸಮಯವನ್ನು ಕಳೆಯುತ್ತೀರಿ. ಕೆಲಸಕ್ಕೆ ಸಂಬಂಧಿಸಿದಂತೆ ಉತ್ತಮ ದಿನ. ಅನುಭವಿ ವ್ಯಕ್ತಿಯಿಂದ ನೀವು ಪ್ರಮುಖ ಸಲಹೆಯೊಂದನ್ನು ಪಡೆಯಬಹುದು. ಹಣಕಾಸಿನ ವಿಷಯದಲ್ಲಿ ಹಣ ಸಂಗ್ರಹಿಸುವ ಬಗ್ಗೆ ಯೋಚಿಸಿ. ನಿಮ್ಮ ಕಠಿಣ ಪರಿಶ್ರಮವು ನಿಮ್ಮ ಜೀವನದಲ್ಲಿ ರಂಗು ತರಬಹುದು. ಆದರೆ ಹಣಕಾಸಿನ ನಿರ್ಧಾರವನ್ನು ಅವಸರದಲ್ಲಿ ತೆಗೆದುಕೊಳ್ಳದಿದ್ದರೆ ಉತ್ತಮ. ಸಂಜೆ, ನಿಮ್ಮ ಹಳೆಯ ಸ್ನೇಹಿತನನ್ನು ಭೇಟಿಯಾಗುವುದು ನಿಮಗೆ ಸಂತೋಷವನ್ನು ನೀಡುತ್ತದೆ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.

ಉತ್ತಮ ಬಣ್ಣ: ಬಿಳಿ

ಶುಭ ಸಂಖ್ಯೆ: 19

ಶುಭ ಸಮಯ: ಸಂಜೆ 6 ರಿಂದ 10 ರವರೆಗೆ

ಕುಂಭ ರಾಶಿ:

ಕುಂಭ ರಾಶಿ:

ಹಣದ ವಿಷಯದಲ್ಲಿ ದಿನವು ಉತ್ತಮವಾಗಿದೆ, ಆದರೆ ನೀವು ವ್ಯವಹಾರದಲ್ಲಿ ವಿಶೇಷ ಕಾಳಜಿ ವಹಿಸಬೇಕು. ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ, ಈ ದಿನ ಒಳ್ಳೆಯದು. ನೀವು ನಿರೀಕ್ಷಿಸಿದಂತೆ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ. ಇಂದು ನಿಮ್ಮ ಪೋಷಕರು ನಿಮ್ಮ ಮೇಲೆ ಕೋಪಗೊಳ್ಳಬಹುದು. ನೀವು ಅವರಿಗೆ ಸಾಕಷ್ಟು ಸಮಯವನ್ನು ನೀಡಬೇಕು. ನೀವು ಅವರನ್ನು ನಿರ್ಲಕ್ಷಿಸಿರುವುದು ಅವರಿಗೆ ಬೇಸರ ತರಿಸುತ್ತಿದೆ. ಜೀವನ ಸಂಗಾತಿಯ ಸ್ವಭಾವದಲ್ಲಿ ಕಿರಿಕಿರಿ ಕಾಣಿಸುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು, ನೀವು ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು. ಕೆಲಸದ ವಿಷಯದಲ್ಲಿ ದಿನವು ಸಾಮಾನ್ಯವಾಗಿರುತ್ತದೆ. ಇಂದು ನೌಕರಸ್ಥರು ಸಮಯದ ಬಗ್ಗೆ ಕಾಳಜಿ ವಹಿಸಬೇಕು. ನಿಮ್ಮ ಆರೋಗ್ಯದ ಬಗ್ಗೆ ಮಾತನಾಡುವುದಾದರೆ ಇಂದು ಮನಸ್ಸು ಸ್ವಲ್ಪ ಮಟ್ಟಿಗೆ ತೊಂದರೆಗೊಳಗಾಗುತ್ತದೆ.

ಉತ್ತಮ ಬಣ್ಣ: ಕೆಂಪು

ಶುಭ ಸಂಖ್ಯೆ: 12

ಶುಭ ಸಮಯ: ಬೆಳಗ್ಗೆ 4 ರಿಂದ ಮಧ್ಯಾಹ್ನ 2 ರವರೆಗೆ

ಮೀನ ರಾಶಿ:

ಮೀನ ರಾಶಿ:

ಇಂದು, ನಿಮ್ಮ ಸಂಪೂರ್ಣ ಗಮನ ನಿಮ್ಮ ಕೆಲಸದ ಮೇಲೆ ಇರುತ್ತದೆ. ನೀವು ಕೆಲವು ದೊಡ್ಡ ಜವಾಬ್ದಾರಿಯುತ ಕೆಲಸಗಳನ್ನು ನಿಭಾಯಿಸಬೇಕಾಗುತ್ತದೆ. ಹಾಗಾಗಿ ನೀವು ಇಂದು ಸಾಕಷ್ಟು ಬ್ಯುಸಿ! ಹಣದ ದೃಷ್ಟಿಯಿಂದ ದಿನ ಶುಭವಾಗಿರುತ್ತದೆ. ಹಣವನ್ನು ಪಡೆಯುವ ಸಾಧ್ಯತೆ ಇದೆ. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಇಂದು ನೀವು ಕುಟುಂಬದೊಂದಿಗೆ ಸುತ್ತಾಡಲು ಹೋಗಬಹುದು. ನೀವು ಧಾರ್ಮಿಕ ಸ್ಥಳ ಅಥವಾ ಸಂಬಂಧಿಕರ ಮನೆಗಳಿಗೆ ಭೇಟಿ ನೀಡಬಹುದು. ಸಂಗಾತಿಯೊಂದಿಗಿನ ಸಾಮರಸ್ಯದ ಸಂಬಂಧ ಮುಂದುವರೆಯುತ್ತದೆ. ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ಸಂಗಾತಿಯ ಸಂಪೂರ್ಣ ಬೆಂಬಲ ಸಿಗುತ್ತದೆ. ಸ್ನೇಹಿತರ ಸಹಾಯದಿಂದ, ಕೆಲವು ಪ್ರಮುಖ ಕೆಲಸಗಳನ್ನು ಇಂದು ಪೂರ್ಣಗೊಳಿಸಬಹುದು, ಇದರಿಂದಾಗಿ ಮುಂಬರುವ ದಿನಗಳಲ್ಲಿ ಉತ್ತಮ ಫಲ ಸಿಗುತ್ತದೆ. ಆರೋಗ್ಯವು ಇಂದು ಉತ್ತಮವಾಗಿರುತ್ತವೆ.

ಉತ್ತಮ ಬಣ್ಣ: ಕಂದು

ಶುಭ ಸಂಖ್ಯೆ: 26

ಶುಭ ಸಮಯ: ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ

ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು,

ಆಚಾರ್ಯ ಶ್ರೀ ರಾಘವೇಂದ್ರ ಭಟ್ ಕುಡ್ಲ.

ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಉಪಾಸಕರು

ಪ್ರೀತಿ- ಪ್ರೇಮ ವಿಚಾರ, ಸತಿ- ಪತಿ ಕಲಹ, ಮದುವೆ ವಿಳಂಬ, ಸಂತಾನ, ಉದ್ಯೋಗ, ವ್ಯಾಪಾರ ಸಮಸ್ಯೆ, ದೃಷ್ಟಿ ದೋಷ, ಕುಜ ದೋಷ, ವಾಮಾಚಾರ ಬಾಧಿತರಿಗೆ ಪರಿಹಾರ ನಿಶ್ಚಿತ.

ಹಣಕಾಸು ಸಮಸ್ಯೆ, ಅನಾರೋಗ್ಯ, ಶತ್ರು ಬಾಧೆ, ಗೃಹ ನಿರ್ಮಾಣದಲ್ಲಿ ಅಡೆ-ತಡೆಗಳಿದ್ದಲ್ಲಿ ಸುಲಭ ಪರಿಹಾರ ಒದಗಿಸಲಿದ್ದಾರೆ.

ನಿಮ್ಮ ಯಾವುದೇ ಸಮಸ್ಯೆಗೆ ಒಮ್ಮೆ ಭೇಟಿ ನೀಡಿ. ದುರ್ಗಾ ಅನುಗ್ರಹ ಜ್ಯೋತಿಷ್ಯ ಕೇಂದ್ರ ಮೊಬೈಲ್ ಫೋನ್ ಸಂಖ್ಯೆ 9845000635 .

https://sridurga-astrologer.com

English summary

Dina Bhavishya 18 October 2020

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Sunday, October 18, 2020, 4:00 [IST]
X