For Quick Alerts
ALLOW NOTIFICATIONS  
For Daily Alerts

ವೃಷಭದಲ್ಲಿ ಏರ್ಪಟ್ಟಿದೆ ಬುಧ-ಆದಿತ್ಯ ಯೋಗ: ಈ 3 ರಾಶಿಯವರಿಗೆ ತುಂಬಾ ಅದೃಷ್ಟದ ಸಮಯವಿದು

|

ಜ್ಯೋತಿಷ್ಯ ದೃಷ್ಟಿಯಿಂದ ಬುಧನೂ ಪ್ರಮುಖವಾದ ಗ್ರಹ, ಆದಿತ್ಯನೂ ಪ್ರಮುಖವಾದ ಗ್ರಹ, ಈ ಗ್ರಹಗಳ ರಾಶಿ ಬದಲಾವಣೆಯ ಪ್ರಭಾವ ಪ್ರತಿಯೊಂದು ರಾಶಿಯ ಮೇಲೆ ಇರುತ್ತದೆ. ಬುಧ ಹಾಗೂ ಸೂರ್ಯ ಯಾವುದಾದರೂ ರಾಶಿಯಲ್ಲಿ ಒಟ್ಟಿಗೆ ಸೇರಿದಾಗ (ಬುಧ-ಆದಿತ್ಯ ಯೋಗ) ಬುಧಾದಿತ್ಯ ಯೋಗ ರೂಪುಗೊಳ್ಳುತ್ತದೆ. ಈ ಬಾರಿ ವೃಷಭ ರಾಶಿಯಲ್ಲಿ ಬುಧ-ಆದಿತ್ಯ ಯೋಗ ಏರ್ಪಟ್ಟಿದೆ.

ಬುಧನು ವೃಷಭ ರಾಶಿಯಲ್ಲಿ ವಕ್ರೀಯ ಚಲನೆಯಲ್ಲಿದೆ, ಜೂನ್ 3ಕ್ಕೆ ಮತ್ತೆ ನೇರವಾಗಿ ಚಲಿಸಲಿದೆ. ಬುಧನು ಜುಲೈ 2ಕ್ಕೆ ಮತ್ತೆ ರಾಶಿ ಬದಲಾಯಿಸಿ ಮಿಥುನ ರಾಶಿ ಪ್ರವೇಶಿಸುವುದು. ಅಲ್ಲಿಯವರೆಗೆ ವೃಷಭ ರಾಶಿಯಲ್ಲೇ ಇರಲಿದೆ. ಮೇ 15ಕ್ಕೆ ಇದೇ ರಾಶಿಗೆ ಸೂರ್ಯ ಸಂಚಾರವಾಗಿದೆ, ಜೂನ್ 15ರವರೆಗೆ ಸೂರ್ಯನು ಇದೇ ರಾಶಿಯಲ್ಲಿ ಇರಲಿದೆ, ನಂತರ ಮಿಥುನ ರಾಶಿ ಪ್ರವೇಶಿಸಲಿದೆ.

ಮೇ15-ಜೂನ್ 15ರವರೆಗೆ ವೃಷಭರಾಶಿಯಲ್ಲಿ ಬುಧ- ಆದಿತ್ಯ ಯೋಗ ಏರ್ಪಟ್ಟಿದೆ. ಈ ಬುಧ- ಆದಿತ್ಯ ಯೋಗದಿಂದಾಗ ಈ 3 ರಾಶಿಗಳಿಗೆ ತುಂಬಾ ಒಳ್ಳೆಯದಿದೆ.

ಮಿಥುನ ರಾಶಿ

ಮಿಥುನ ರಾಶಿ

ವೃಷಭ ರಾಶಿಯಲ್ಲಿ ರೂಪುಗೊಂಡ ಬುಧಾದಿತ್ಯ ಯೋಗವು ಮಿಥುನ ರಾಶಿಯವರಿಗೆ ಹಣದ ಜೊತೆಗೆ ಅನೇಕ ವಿಷಯಗಳಲ್ಲಿ ಶುಭ ಫಲಿತಾಂಶಗಳನ್ನು ನೀಡುತ್ತದೆ. ನೀವು ನಿಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯುತ್ತೀರಿ. ಈ ಸಮಯದಲ್ಲಿ ದೊಡ್ಡ ಸಾಧನೆ ಮಾಡಲು ಹೊರಟರೆ ಅದಕ್ಕೆ ಯೋಗದ ಬೆಂಬಲ ಕೂಡ ಇರುತ್ತದೆ. ರಾಜಕೀಯದಲ್ಲಿ ಇರುವವರು ಪ್ರತಿಷ್ಠೆಯನ್ನು ಗಳಿಸುತ್ತಾರೆ. ಈ ಸಮಯದಲ್ಲಿ ನಿಮ್ಮ ಮಾತಿನ ಪ್ರಭಾವ ನಡೆಯುತ್ತದೆ, ನಿಮಗೆ ದೊಡ್ಡ ಕಾರ್ಯಗಳನ್ನು ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ.

ಕರ್ಕ ರಾಶಿ

ಕರ್ಕ ರಾಶಿ

ಈ ಬುಧಾದಿತ್ಯ ಯೋಗವು ಕರ್ಕ ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ನಿಮ್ಮ ಆದಾಯದಲ್ಲಿ ಗಮನಾರ್ಹ ಹೆಚ್ಚಳವಾಗಬಹುದು. ಹೊಸ ಮಾರ್ಗಗಳಿಂದ ಹಣ ಬರಲಿದೆ. ವ್ಯಾಪಾರಿಗಳು ದೊಡ್ಡ ಆರ್ಡರ್‌ಗಳನ್ನು ಪಡೆಯಬಹುದು. ದೊಡ್ಡ ವ್ಯವಹಾ ರಕುದುರುವುದರಿಂದ ಹಠಾತ್ ಹಣದ ಲಾಭವಾಗುವುದು.

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಬುಧಾದಿತ್ಯ ಯೋಗವು ಬಹಳಷ್ಟು ಸಂತೋಷವನ್ನು ತರುತ್ತಿದೆ. ನಿಮಗೆ ಇತರ ಮೂಲಗಳಿಂದಲೂ ಹಣ ಸಿಗಲಿದೆ. ಕೆಲಸದಲ್ಲಿ ನಿಮ್ಮ ಸ್ಥಾನವು ಸಹ ಪ್ರಯೋಜನಕಾರಿಯಾಗಬಹುದು. ಕೀರ್ತಿ, ಗೌರವ ಹೆಚ್ಚಾಗುತ್ತದೆ. ಈ ಸಮಯವು ಉದ್ಯಮಿಗಳಿಗೆ ತುಂಬಾ ಒಳ್ಳೆಯದು. ಉದ್ಯೋಗಸ್ಥರು ತಮ್ಮ ಕೆಲಸವನ್ನು ಎಷ್ಟು ಚೆನ್ನಾಗಿ ಮಾಡುತ್ತಾರೆ ಎಂದರೆ ಅವರ ಕಾರ್ಯಕ್ಷಮತೆಯನ್ನು ಬಾಸ್‌ ಮೆಚ್ಚಿ ಹೊಗಳುವಂತಿರುತ್ತದೆ.

English summary

Budhaditya Yog in Vrishabha 2022, Will Bring Lucky To These 3 Zodiac Signs

Budhaditya yog in vrishabha 2022, will bring lucky to these 3 zodiac signs, read on.....
X
Desktop Bottom Promotion