For Quick Alerts
ALLOW NOTIFICATIONS  
For Daily Alerts

ಈ ಆರು ರಾಶಿಚಕ್ರದವರು ಎಲ್ಲಾ ಸಮಯದಲ್ಲೂ ಉತ್ತಮ ವರ್ತನೆಯನ್ನು ತೋರುವ ವ್ಯಕ್ತಿಗಳು

|

ಎಲ್ಲಾ ಸಮಯವು ಒಂದೇ ರೀತಿಯಲ್ಲಿ ಇರುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಸನ್ನಿವೇಶಗಳು ಬದಲಾದಂತೆ ಸಂಗತಿಗಳು ಬದಲಾಗುತ್ತವೆ. ಅದಕ್ಕೆ ತಕ್ಕಂತೆ ನಮ್ಮ ಭಾವನೆಗಳಲ್ಲಿ ವ್ಯತ್ಯಾಸ ಉಂಟಾಗುವುದು. ಆದರೆ ಕೆಲವರು ಮಾತ್ರ ಎಂತಹದ್ದೇ ಪರಿಸ್ಥಿತಿ ಎದುರಾದರೂ ಸರಿ ತಮ್ಮ ವರ್ತನೆ ಹಾಗೂ ವ್ಯಕ್ತಿತ್ವದಲ್ಲಿ ಯಾವುದೇ ಬದಲಾವಣೆಯನ್ನು ತೋರುವುದಿಲ್ಲ. ಅದು ಅವರ ವ್ಯಕ್ತಿತ್ವದಲ್ಲಿ ಕಾಣುವ ಒಂದು ವಿಶೇಷ ಸಂಗತಿ ಆಗಿರುತ್ತದೆ.

ಭಾವನೆಗಳನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅಷ್ಟು ಸುಲಭದ ಸಂಗತಿಯಲ್ಲ. ಸನ್ನಿವೇಶಕ್ಕೆ ತಕ್ಕಂತೆ ನಮ್ಮ ಮನಸ್ಸು ಹಾಗೂ ಭಾವನೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಆಗಲೇ ಒಂದು ಸಮುದಾಯದಲ್ಲಿ ಅಥವಾ ಸಮಾಜದಲ್ಲಿ ನಮ್ಮ ತನವನ್ನು ನಾವು ಕಾಪಾಡಿಕೊಳ್ಳಲು ಸಾಧ್ಯ. ಅಲ್ಲದೆ ನಮ್ಮ ಸಮಸ್ಯೆಗಳನ್ನು ಹೊರತು ಪಡಿಸಿ, ಇತರರ ಸಮಸ್ಯೆ ಅಥವಾ ಭಾವನೆಗಳಿಗೆ ಅಗತ್ಯವಾದ ಸಹಾಯ ಹಾಗೂ ಸಲಹೆಯನ್ನು ನೀಡಬಹುದು. ಇತರರಿಗೆ ಸಹಾಯ ಮಾಡಬೇಕು ಅಥವಾ ಸಮಾಜದ ಸುಧಾರಣೆ ಮತ್ತು ಸಹಾಯಕ್ಕೆ ನಿಲ್ಲಬೇಕು ಎಂದಾದರೆ ಮೊದಲು ವ್ಯಕ್ತಿಯ ವ್ಯಕ್ತಿತ್ವದಲ್ಲಿ ನಾಯಕತ್ವದ ಗುಣ ಹಾಗೂ ತನ್ನ ಭಾವನೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಸಾಮಥ್ರ್ಯವನ್ನು ಹೊಂದಿರಬೇಕು. ಆಗಲೇ ಅವರು ಎಲ್ಲಾ ಸಮಯದಲ್ಲೂ ಒಂದೇ ರೀತಿಯ ವರ್ತನೆ ತೋರಲು ಸಾಧ್ಯ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬರು ವಿಶೇಷವಾದ ಕುಂಡಲಿಯನ್ನು ಹೊಂದಿರುತ್ತಾರೆ. ಅದರಲ್ಲಿ ಆಳುವ ಗ್ರಹಗಳು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುತ್ತವೆ. ಅವುಗಳ ಅನುಸಾರವೇ ವ್ಯಕ್ತಿ ತನ್ನ ವ್ಯಕ್ತಿತ್ವದಲ್ಲಿ ಬದಲಾವಣೆಯನ್ನು ಕಂಡುಕೊಳ್ಳುವನು ಎಂದು ಹೇಳಲಾಗುವುದು. ಅದರಲ್ಲೂ ಕೆಲವು ರಾಶಿಚಕ್ರದವರು ನಿರ್ದಿಷ್ಟವಾದ ಭಾವನೆ ಹಾಗೂ ವರ್ತನೆಗಳೊಂದಿಗೆ ಸಮಾಜದಲ್ಲಿ ಆಕರ್ಷಿತರಾಗುವರು. ಅವರು ಯಾವುದೇ ಮೂರನೇ ವ್ಯಕ್ತಿಗಳ ಸಹಾಯ ಇಲ್ಲದೆಯೇ ತನ್ನ ತನವನ್ನು ಕಾಪಾಡಿಕೊಳ್ಳುವರು. ಎಂದಿಗೂ ಅವರ ವರ್ತನೆ ಒಂದೇ ರೀತಿಯಲ್ಲಿ ಇರುತ್ತದೆ ಎಂದು ಹೇಳಲಾಗುವುದು.

ಸಕಾರಾತ್ಮಕವಾದ ವರ್ತನೆಯನ್ನು ಹೇಗೆ ತೋರುವರು?

ಸಕಾರಾತ್ಮಕವಾದ ವರ್ತನೆಯನ್ನು ಹೇಗೆ ತೋರುವರು?

ಬಹುತೇಕ ಮಂದಿ ಕಷ್ಟಗಳು ಅಥವಾ ದುಃಖದ ಸ್ಥಿತಿಯಲ್ಲಿರುವಾಗ ಅತಿಯಾದ ಕಿನ್ನತೆ ಹಾಗೂ ಬೇಸರಕ್ಕೆ ಒಳಗಾಗುತ್ತಾರೆ. ಅದೇ ಖುಷಿ ಅಥವಾ ಸಂತೋಷದ ವಿಷಯ ಬಂದಾಗ ಬಹುಬೇಗ ಹಿಗ್ಗುತ್ತಾರೆ. ಆದರೆ ಕೆಲವರು ವ್ಯಕ್ತಿಗಳು ಮಾತ್ರ ದುಃಖ ಮತ್ತು ಸಂತೋಷ ಯಾವ ಸಂದರ್ಭಗಳು ಎದುರಾದರೂ ಸಹ ಒಂದೇ ರೀತಿಯ ವರ್ತನೆ ಹಾಗೂ ಮಾನಸಿಕ ಸ್ಥಿತಿಯನ್ನು ಹೊಂದಿರುತ್ತಾರೆ. ಎಲ್ಲಾ ಸಮಯದಲ್ಲೂ ಸಕಾರಾತ್ಮಕ ವರ್ತನೆಯನ್ನು ತೋರುವರು ಎಂದು ಹೇಳಲಾಗುವುದು. ಹನ್ನೆರಡು ರಾಶಿಚಕ್ರಗಳಲ್ಲಿ ಕೆಲವು ರಾಶಿಚಕ್ರದವರಲ್ಲಿ ಮಾತ್ರ ಈ ರೀತಿಯ ಉತ್ತಮ ಗುಣಗಳಿರುತ್ತವೆ ಎಂದು ಹೇಳಲಾಗುವುದು. ನಿಮಗೂ ನಿಮ್ಮ ಹಾಗೂ ನಿಮ್ಮವರ ವರ್ತನೆಯ ಬಗ್ಗೆ ಅರಿಯಬೇಕು? ಅವರಲ್ಲಿರುವ ವರ್ತನೆ ಹೇಗಿರುತ್ತದೆ? ಎಲ್ಲಾ ಸಮಯದಲ್ಲೂ ಸಕಾರಾತ್ಮಕವಾದ ವರ್ತನೆಯನ್ನು ಹೇಗೆ ತೋರುವರು? ಅವರಲ್ಲಿ ಇರುವ ಆ ವಿಶೇಷ ಗುಣಗಳು ಯಾವವು? ಎನ್ನುವುದನ್ನು ತಿಳಿದುಕೊಳ್ಳುವ ಬಯಕೆ ನಿಮ್ಮದಾಗಿದ್ದರೆ ಬೋಲ್ಡ್ ಸ್ಕೈ ಲೇಖನದ ಮುಂದಿನ ಭಾಗದಲ್ಲಿ ವಿವರಿಸಿರುವ ವಿವರಣೆಯನ್ನು ಪರಿಶೀಲಿಸಿ.

ಮೇಷ

ಮೇಷ

ಮೇಷ ರಾಶಿಯ ವ್ಯಕ್ತಿಗಳು ಅಪಾರವಾದ ಶಕ್ತಿಯನ್ನು ಹೊಂದಿರುತ್ತಾರೆ. ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಅತ್ಯುತ್ತಮವಾದ ವರ್ತನೆ ಹಾಗೂ ಗುಣಮಟ್ಟವನ್ನು ಹೊಂದಿರುತ್ತಾರೆ ಎನ್ನಲಾಗುವದು. ಇವರು ಯಾವುದಾದರೂ ಗುರಿಯನ್ನು ಹೊಂದಿದ್ದರೆ ಅದನ್ನು ನೆರವೇರಿಸುವ ವರೆಗೆ ಅಥವಾ ಆ ಗುರಿಯ ಸಾಧಿಸುವ ತನಕ ಪ್ರಯತ್ನವನ್ನು ನಿಲ್ಲಿಸುವುದಿಲ್ಲ. ಹಾಗೊಮ್ಮೆ ಅವರ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಅಥವಾ ಅಡೆತಡೆಗಳು ಉಂಟಾದರೂ ಸಹ ಸಾಕಷ್ಟು ತಾಳೆ ಹಾಗೂ ಮಾನಸಿಕ ಸಿದ್ಧತೆಯಿಂದ ಸನ್ನಿವೇಶಗಳನ್ನು ಎದುರಿಸುತ್ತಾರೆ.

Most Read:2019ರಲ್ಲಿ ಈ 5 ರಾಶಿ ಚಕ್ರದವರು ತಾವು ಬಯಸಿದ ಪ್ರೀತಿಯನ್ನು ಪಡೆದುಕೊಳ್ಳುವರು

ಮೇಷ

ಮೇಷ

ಎಲ್ಲಾ ಸಮಯದಲ್ಲೂ ಒಂದೇ ರೀತಿಯ ಮನಃಸ್ಥಿತಿಯನ್ನು ವ್ಯಕ್ತಪಡಿಸುವರು. ಮನಸ್ಸಿಗೆ ಆಘಾತ ಅಥವಾ ನೋವು ಉಂಟಾದಷ್ಟು ಅದರ ಪ್ರತಿಕಾರಕ್ಕಾಗಿ ಅಥವಾ ಅದನ್ನು ಮೆಟ್ಟಿ ನಿಲ್ಲುವ ಉದ್ದೇಶಕ್ಕಾಗಿ ಆದರೂ ಮಾನಸಿಕವಾಗಿ ಧೈರ್ಯವನ್ನು ತಂದುಕೊಳ್ಳುವರು. ಜೊತೆಗೆ ತಮ್ಮ ವರ್ತನೆಯಲ್ಲಿ ಸದಾ ಸಾಮಾನ್ಯ ರೀತಿಯಲ್ಲಿಯೇ ಹಾಸ್ಯ ಹಾಗೂ ನಗುವನ್ನು ನೀಡುವುದರ ಮೂಲಕ ಸಹಜ ವ್ಯಕ್ತಿಗಳಂತೆ ಇರುತ್ತಾರೆ.

ಮಿಥುನ

ಮಿಥುನ

ಮಿಥುನ ರಾಶಿಯವರು ಅತ್ಯಂತ ಚಿಂತಕ ವ್ಯಕ್ತಿಗಳ ಸಾಲಲ್ಲಿ ನಿಲ್ಲುವ ವ್ಯಕ್ತಿಗಳಾಗಿರುತ್ತಾರೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಮಿತಿ ಮೀರಿದಂತಹ ದುಃಖಗಳಿಗೆ ಒಳಗಾದರೆ ಮಾನಸಿಕವಾಗಿ ಸಾಕಷ್ಟು ಕುಗ್ಗುತ್ತಾರೆ. ಆದರೆ ಪರಿಸ್ಥಿತಿ ಅವರ ಕೈ ಮೀರಿ ಹೋಗುತ್ತಿದ್ದರೂ ಅಂತಹ ಸಮಯದಲ್ಲಿ ಯಾವ ರೀತಿಯಲ್ಲಿ ಎಚ್ಚೆತ್ತುಕೊಳ್ಳಬೇಕು? ಎನ್ನುವುದನ್ನು ಅವರು ತಿಳಿದಿರುತ್ತಾರೆ. ಜೊತೆಗೆ ತಮ್ಮ ಭಾವನೆಗಳಲ್ಲಿ ಅಥವಾ ವರ್ತನೆಗಳಲ್ಲಿ ಯಾವುದೇ ಅಹಿತಕರ ಸಂಗತಿಯನ್ನು ವ್ಯಕ್ತಪಡಿಸುವುದಿಲ್ಲ. ಎಲ್ಲವೂ ಸಾಮಾನ್ಯ ಸಂಗತಿಯಂತೆ ನಡೆಯುತ್ತಿದೆ ಎನ್ನುವುದನ್ನು ತೋರಿಸುತ್ತಾರೆ. ಎಲ್ಲಾ ಸಮಯದಲ್ಲೂ ಸಮಾನತೆಯನ್ನು ತೋರುವುದರ ಮೂಲಕ ಜೀವನದಲ್ಲಿ ಮುಂದೆ ಸಾಗುವುದರ ಬಗ್ಗೆ ಹೆಚ್ಚು ಗಮನವನ್ನು ಕೇಂದ್ರೀಕರಿಸುತ್ತಾರೆ.

ಸಿಂಹ

ಸಿಂಹ

ಸಿಂಹ ರಾಶಿಯವರು ಅತ್ಯುತ್ತಮ ಮಾನಸಿಕ ಸ್ಥೈರ್ಯವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಇವರಿಗೆ ಎಲ್ಲಾ ವಿಷಯದಲ್ಲೂ ಆಕರ್ಷಕ ವ್ಯಕ್ತಿ ಹಾಗೂ ಗೆಲುವನ್ನು ಸಾಧಿಸಬೇಕು ಎನ್ನುವ ಆಸೆಯನ್ನು ಹೊಂದಿರುತ್ತಾರೆ. ಸದಾ ಕಾಲ ಆನಂದದಿಂದಲೇ ಇರಬೇಕು ಎಂದು ಬಯಸುವ ವ್ಯಕ್ತಿಗಳು ಇವರಾಗಿರುವರು.

ಸಿಂಹ

ಸಿಂಹ

ಇತರರ ಜೊತೆಗೆ ಅಥವಾ ಸ್ನೇಹಿತರ ಭಾವನೆಯೊಂದಿಗೆ ಹೇಗೆ ವ್ಯವಹರಿಸಬೇಕು? ಅವರ ಸಮಸ್ಯೆಗಳಿಗೆ ಹೇಗೆ ಸಹಕರಿಸಬೇಕು ಎನ್ನುವುದನ್ನು ಅರಿತಿರುತ್ತಾರೆ. ಜೊತೆಗೆ ತಮ್ಮ ವೈಯಕ್ತಿಕ ಸಂಗತಿಗಳನ್ನು ಸೂಕ್ತ ರೀತಿಯಲ್ಲಿ ಪರಿಗಣಿಸುತ್ತಾರೆ. ಎಂತಹ ಸಮಯದಲ್ಲೂ ಭಾವನೆಗಳನ್ನು ಅಥವಾ ವರ್ತನೆಯಲ್ಲಿ ಭಿನ್ನತೆಯನ್ನು ತೋರುವುದಿಲ್ಲ. ಸದಾ ಕಾಲ ಸಕಾರಾತ್ಮಕ ರೀತಿಯಲ್ಲಿ ಇರುವರು.

Most Read:ಈ ವರ್ಷ 2019ರಲ್ಲಿ ಈ ಮೂರು ರಾಶಿಯವರು ದುರಾದೃಷ್ಟದ ದಿನವನ್ನು ಎದುರಿಸಲಿದ್ದಾರಂತೆ!

ತುಲಾ

ತುಲಾ

ಸಮತೋಲನವನ್ನು ಕಾಯ್ದುಕೊಳ್ಳುವ ವ್ಯಕ್ತಿಗಳು ಎಂದರೆ ತುಲಾ ರಾಶಿಯವರು. ಇವರು ಯಾವುದೇ ಕಾರಣಕ್ಕೂ ಇತರರ ವರ್ತನೆಯ ಬಗ್ಗೆ ತಲೆ ಕೆಡಿಸಿಕೊಳ್ಳದ ವ್ಯಕ್ತಿಗಳು. ಇವರೊಂದಿಗೆ ಯಾರೇ ಆದರೂ ಉತ್ತಮ ಅಥವಾ ಕೆಟ್ಟ ವರ್ತನೆ ತೋರಿದರೂ ಅದಕ್ಕೆ ಪ್ರಾಮುಖ್ಯತೆಯನ್ನು ನೀಡುವುದಿಲ್ಲ. ಹೆಚ್ಚಿನ ಸಮಯದಲ್ಲಿ ಇವರು ಧನಾತ್ಮಕ ಚಿಂತನೆಗಳ ಮೂಲಕ ವ್ಯವಹಾರವನ್ನು ಮುಂದುವರಿಸುವರು.

ತುಲಾ

ತುಲಾ

ಜೊತೆಗೆ ತಮ್ಮ ಮುಖದಲ್ಲಿ ನಗುವ ಭಾವನೆಯೊಂದಿಗೆ ಎಲ್ಲಾ ಸಂಗತಿಯನ್ನು ನಿಭಾಯಿಸುವರು. ಇತರರಿಗೆ ಸಹಾಯ ಹಾಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಇವರ ಕಾರ್ಯವೈಖರಿಗಳು ಇರುತ್ತವೆ. ಹಾಗಾಗಿಯೇ ಇವರು ಎಂತಹ ಸಮಯದಲ್ಲಾದರೂ ಸಕಾರಾತ್ಮಕ ಪ್ರಕ್ರಿಯೆ ಹಾಗೂ ವರ್ತನೆಯನ್ನು ತೋರುತ್ತಲಿರುವರು.

ಧನು

ಧನು

ಧನು ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಧೈರ್ಯವಂತ ರಾಗಿರುತ್ತಾರೆ. ಇವರು ಎಲ್ಲಾ ಸಂಗತಿಯನ್ನು ಅಷ್ಟು ಗಂಭೀರವಾಗಿ ಪರಿಗಣಿಸುವುದಿಲ್ಲ. ಹಾಗಾಗಿ ಇವರ ಭಾವನೆಗಳ ಮೇಲೆ ಎಲ್ಲಾ ಸಂಗತಿಗಳು ಅಷ್ಟಾಗಿ ಪ್ರಭಾವ ಬೀರುವುದಿಲ್ಲ ಎಂದು ಹೇಳ ಬಹುದು. ಇವರು ಸದಾಕಾಲ ಸಂತೋಷ ಹಾಗೂ ಮೋಜಿನ ಸಂಗತಿಗಳ ಕುರಿತಾಗಿಯೇ ಹೆಚ್ಚು ಚಿಂತನೆ ನಡೆಸುತ್ತಾರೆ. ತಮ್ಮ ಹೆಚ್ಚಿನ ಸಮಯವನ್ನು ಪ್ರವಾಸದಲ್ಲಿ ಮುಳುಗಿರಲು ಪ್ರಯತ್ನಿಸುತ್ತಾರೆ. ಇವರು ಹೆಚ್ಚು ಧನಾತ್ಮಕ ಚಿಂತನೆ ಹಾಗೂ ಶಕ್ತಿಯ ಬಗ್ಗೆ ಒಲವನ್ನು ಹೊಂದಿರುತ್ತಾರೆ. ಇವರ ಭಾವನೆ ಹಾಗೂ ವರ್ತನೆಗಳು ಸಹ ಸದಾ ಕಾಲ ಸಕಾರಾತ್ಮಕ ರೀತಿಯಲ್ಲಿಯೇ ಇರುತ್ತದೆ ಎಂದು ಹೇಳಲಾಗುವುದು.

ಕುಂಭ

ಕುಂಭ

ಕುಂಭ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಭಾವನಾತ್ಮಕ ಜೀವಿಗಳು ಎಂದು ಹೇಳಬಹುದು. ಇವರು ಋಣಾತ್ಮಕ ಸಂಗತಿಯನ್ನು ಅನುಭವಿಸಿದರೆ ಆ ಭಾವನೆಗಳಿಂದ ಹೊರ ಬರಲು ಸಾಕಷ್ಟು ಕಷ್ಟ ಪಡುವರು. ಹಾಗಾಗಿಯೇ ಅಂತಹ ಸ್ಥಿತಿ ಅಥವಾ ಸನ್ನಿವೆಶಗಳಿಂದ ಆದಷ್ಟು ದೂರ ಇರಲು ಅಥವಾ ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವರು. ಇವರು ಸೃಜನಾತ್ಮಕ ರೀತಿಯಲ್ಲಿ ಅತ್ಯುತ್ತಮ ವ್ಯಕ್ತಿತ್ವ ಹೊಂದಿದವರಾಗಿರುತ್ತಾರೆ. ಇವರು ಹಾಗೊಮ್ಮೆ ಸಮಸ್ಯೆಯಲ್ಲಿ ಸಿಲುಕಿಕೊಂಡರೆ ಅವುಗಳಿಂದ ಬಹುಬೇಗ ಪಾರಾಗುವುದು ಅಥವಾ ಪರಿಹಾರ ಕಂಡು ಕೊಳ್ಳುವುದನ್ನು ತಿಳಿದಿರುತ್ತಾರೆ. ಇದು ಅವರಲ್ಲಿರುವ ಅತ್ಯುತ್ತಮ ಗುಣವಾಗಿದೆ. ಹಾಗಾಗಿಯೇ ಸದಾ ಕಾಲ ಸಕಾರಾತ್ಮಕ ವರ್ತನೆಯನ್ನು ತೋರುತ್ತಾರೆ ಎನ್ನಲಾಗುವುದು.

English summary

Zodiac Signs Who Stay Positive All The Time

Some people are always radiating positivity in the surroundings with all possible means. Despite the failures and hard work, they also succeed in keeping their moods charged up along with the moods of others. Astrology says that this category of people can be grouped on the basis of the zodiac. There are 6 zodiac signs who stay positive all the time.
Story first published: Friday, January 25, 2019, 17:50 [IST]
X
Desktop Bottom Promotion