For Quick Alerts
ALLOW NOTIFICATIONS  
For Daily Alerts

ನಮ್ಮ ಆತ್ಮವು ಮಾನವನ ದೇಹಕ್ಕೆ ಪ್ರವೇಶ ಪಡೆಯಲು 8.4 ಮಿಲಿಯನ್ ಜಾತಿಗಳನ್ನು ದಾಟಿಬರಬೇಕಂತೆ!

|

ಎಲ್ಲಾ ಜೀವಿಗಳಿಗಿಂತ ಬುದ್ಧಿವಂತ ಹಾಗೂ ಅದೃಷ್ಟವಂತ ಪ್ರಾಣಿ ಎಂದರೆ ಮನುಷ್ಯ. ಮನುಷ್ಯನ ಜನ್ಮವು ಅತ್ಯಂತ ಪವಿತ್ರವಾದದ್ದು. ಮಾನವನ ಜನ್ಮ ತಾಳಲು ಸಾಕಷ್ಟು ಪುಣ್ಯವನ್ನು ಮಾಡಿರಬೇಕು. ನವರಸಗಳು ಹಾಗೂ ಸಂವೇದನೆಗಳನ್ನು ಅರ್ಥ ಮಾಡಿಕೊಳ್ಳಬಲ್ಲ ಜೀವಿ ಮಾನವ. ಜೊತೆಗೆ ತನ್ನ ಭಾವನೆ ಹಾಗೂ ಸಂವೇದನೆಗಳಿಂದಲೇ ಇತರರನ್ನು ಅರ್ಥೈಸಿಕೊಳ್ಳುತ್ತಾನೆ. ಸಂಘ ಜೀವನವನ್ನು ಕಟ್ಟಿಕೊಳ್ಳುವನು. ಸಂಸಾರ, ಸಮಾಜ, ದೇಶ ಎನ್ನುವ ಕಲ್ಪನೆಯ ಮೂಲಕ ಸಾಮಾಜಿಕ ಜೀವನವನ್ನು ಸಹ ಸುಂದರವಾಗಿ ನಿರ್ವಹಿಸುವ ಜೀವಿ ಎನಿಸಿಕೊಂಡಿದ್ದಾನೆ. ಹಾಗಾಗಿ ಮಾನವ ಜನ್ಮವನ್ನು ತಾಳಿದ ಮೇಲೆ ಧಾರ್ಮಿಕವಾಗಿ ಕ್ರಿಯಾಶೀಲನಾಗಿರಬೇಕು. ಇತರರಿಗೆ ಸಹಾಯ ಮಾಡುವುದರ ಮೂಲಕ ಜನ್ಮವನ್ನು ಪಾವನಗೊಳಿಸಿಕೊಳ್ಳಬೇಕು ಎಂದು ಪವಿತ್ರ ಗ್ರಂಥಗಳು ಉಲ್ಲೇಖಿಸಿವೆ.

ಪವಿತ್ರವಾದ ಜನ್ಮವನ್ನು ಪಡೆದುಕೊಂಡ ಮಾನವರು ಯಾರಿಗೂ ನೋವು, ಕಷ್ಟವನ್ನು ನೀಡಬಾರದು. ಬದಲಿಗೆ ಇತರರ ಕಷ್ಟ ಹಾಗೂ ನೋವಿಗೆ ನಮ್ಮಿಂದ ಸಹಾಯವಾಗಬೇಕು. ಮನುಷ್ಯನಿಗೆ ಸ್ವಾರ್ಥ, ಆಸೆಗಳಿರುವುದು ಸಹಜ. ಆದರೆ ಅದೆಲ್ಲವನ್ನು ನಿಗ್ರಹಿಸಿ, ವಿಶಾಲವಾದ ಮನೋಭಾವವನ್ನು ಹೊಂದಬೇಕು. ಮೇಲು ಕೀಳು ಎನ್ನುವ ದೋರಣೆಯನ್ನು ತೊರೆದು, ಎಲ್ಲರೂ ಒಂದೇ ಎನ್ನುವ ಭಾವದಲ್ಲಿ ಬಾಳಬೇಕು. ಬಡವ ಶ್ರೀಮಂತ ಎನ್ನುವ ಬೇಧವನ್ನು ಮರೆತು ಬಾಳಿದರೆ ದೇವರನ್ನು ಕಾಣಬಹುದು. ಭಕ್ತಿ ಹಾಗೂ ಧಾನ ಮಾರ್ಗದಲ್ಲಿ ನಡೆದರೆ ನಮ್ಮ ಜನ್ಮವು ಪಾವನವಾಗುವುದು ಎಂದು ಹಿಂದೂ ಧರ್ಮ ಹೇಳುತ್ತದೆ.

ಮಾನವ ಜನ್ಮ

ಮಾನವ ಜನ್ಮ

ಎಲ್ಲಾ ಜನ್ಮಗಳಿಗಿಂತ ಮಾನವ ಜನ್ಮ ದೊಡ್ಡದು. ಮಾನವನ ಜನ್ಮ ಪಡೆಯಬೇಕಾದರೆ ನಮ್ಮ ಆತ್ಮವು 8.4 ಮಿಲಿಯನ್ ಬಗೆಯ ಜೀವಿಗಳಲ್ಲಿ ನಮ್ಮ ಹುಟ್ಟು ಆಗಿ ಬರಬೇಕು. ನಂತರ ಪಡೆದುಕೊಳ್ಳುವ ಶ್ರೇಷ್ಠ ಜನ್ಮ ಮಾನವ ಜನ್ಮ. ಜಗತ್ ಪಾಲಕನಾದ ಶ್ರೀಕೃಷ್ಣನು ಅರ್ಜುನನಿಗೆ ಬುದ್ಧಿ ಹೇಳುವಾಗ ಮಾನವನ ಜನ್ಮ ಶ್ರೇಷ್ಠವಾದದ್ದು. ಈ ಜನ್ಮವನ್ನು ಪಡೆದುಕೊಳ್ಳುವ ಮೊದಲು 8.4 ಮಿಲಿಯನ್ ಪಭೇದಗಳಲ್ಲಿ ಜನ್ಮವನ್ನು ಎತ್ತಿ ಬಂದಿರಬೇಕು. ನಂತರದ ಹಾಗೂ ಕೊನೆಯ ಜನ್ಮವೇ ಮಾನವ ಜನ್ಮ ಎಂದು ಹೇಳಿದ್ದಾನೆ ಎಂದು ಭಗವದ್ಗೀತೆಯಲ್ಲಿ ಉಲ್ಲೇಖವಿದೆ.

Most Read: ದೇಹದ ಈ ಅಂಗದ ಮೇಲೆ ಮಚ್ಚೆ ಇದ್ದರೆ, ಲೈಂಗಿಕತೆಯ ವಿಷಯದಲ್ಲಿ ಅಂದುಕೊಂಡಿರುವುದಕ್ಕಿಂತಲೂ ಹೆಚ್ಚಿನ ಅದೃಷ್ಟವಂತರು ಎಂದರ್ಥ

ಹಿಂದೂ ಧರ್ಮದ ಪ್ರಕಾರ

ಹಿಂದೂ ಧರ್ಮದ ಪ್ರಕಾರ

ಪವಿತ್ರವಾದ ಈ ಜನ್ಮವನ್ನು ಪಡೆದುಕೊಂಡ ನಾವು ನಮ್ಮಿಂದ ಇತರ ಜೀವಿಗೆ ನೋವುಂಟಾಗದಂತೆ ಇರಬೇಕು ಎಂದು ಹೇಳಲಾಗುವುದು. ಈ ಮಾತುಗಳಿಗೆ ಹಾಗೂ ಜೀವನದ ಸದ್ಗತಿಯ ಮಾರ್ಗಗಳಿಗೆ ಅನುಗುಣವಾಗಿ ಸಾಕಷ್ಟು ಗಾದೆಮಾತುಗಳು, ಹಿತವಚನಗಳು, ದೈವ ತತ್ವಗಳು ಇರುವುದನ್ನು ನಾವು ಕಾಣಬಹುದು. ಈ ಉತ್ತಮ ಮಾರ್ಗಗಳಿಗೆ ಅನುಸಾರವಾಗಿ ನಡೆದರೆ ಜೀವನವು ಸಂತೋಷ ಹಾಗೂ ನೆಮ್ಮದಿಯಿಂದ ಕೂಡಿರುತ್ತವೆ ಎಂದು ಹಿಂದೂ ಧರ್ಮದಲ್ಲಿ ಹೇಳಲಾಗುವುದು. ಈ ವಿಯವಾಗಿ ಅನೇಕರು ಸಾಕ್ಷಿ ಹಾಗೂ ವಿಮರ್ಶೆಯನ್ನು ಕೈಗೊಂಡಿರುವುದನ್ನು ಸಹ ನಾವು ಕಾಣಬಹುದು. ಕೆಲವು ಸಂಗತಿಗಳಿಗೆ ಸಾಕ್ಷಿ ಹಾಗೂ ವಿಮರ್ಶೆಗಳಿಂದ ಉತ್ತರವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಕೇವಲ ಅನುಭವಗಳು ಮಾತ್ರ ಜೀವನದ ಪಾಠ ಹಾಗೂ ಅರಿವನ್ನು ಮೂಡಿಸುತ್ತವೆ ಎಂದು ಹೇಳಬಹುದು.

ಪುರಾವೆಗಳು ಏನು?

ಪುರಾವೆಗಳು ಏನು?

ನಮ್ಮ ಆತ್ಮ ಅಥವಾ ನಿಮ್ಮ ಆತ್ಮ 8.4 ಮಿಲಿಯನ್ ಜೀವಿಗಳ ರೂಪವನ್ನು ದಾಟಿ ಬಂದಿದೆ. ಹಾಗಾಗಿಯೇ ನಾವು ಮಾನವನ ಜನ್ಮವನ್ನು ತಾಳಿದ್ದೇವೆ ಎನ್ನುವುದನ್ನು ರುಜುವಾತು ಮಾಡಲು ಯಾವುದೇ ಸಾಕ್ಷಿ ಆಧಾರಗಳು ನಮ್ಮ ಕೈಯಲ್ಲಿ ಇಲ್ಲದೆ ಇರಬಹುದು. ಆದರೆ ಭಗವದ್ಗೀತೆ ಸೇರಿದಂತೆ ಇನ್ನಿತರ ಪವಿತ್ರ ಗ್ರಂಥಗಳಲ್ಲಿ ಮಾನವನ ಜನ್ಮಕ್ಕೆ ಸಂಬಂಧಿಸಿದಂತೆ ಅನೇಕ ಉಲ್ಲೇಖಗಳಿರುವುದನ್ನು ನಾವು ಕಾಣಬಹುದು. ಅವುಗಳಿಗೆ ಅನುಗುಣವಾಗಿಯೇ ಇಂದು ಅನೇಕ ವೈಜ್ಞಾನಿಕ ಸಂಶೋಧನೆಗಳಲ್ಲೂ ಉತ್ತರವನ್ನು ಕಂಡುಕೊಂಡಿದ್ದಾರೆ ಎಂದು ಹೇಳಬಹುದು.

ಭೂಮಿಯ ಮೇಲೆ ಸುಮಾರು 8.7 ಮಿಲಿಯನ್ ಜಾತಿಗಳಿವೆಯಂತೆ

ಭೂಮಿಯ ಮೇಲೆ ಸುಮಾರು 8.7 ಮಿಲಿಯನ್ ಜಾತಿಗಳಿವೆಯಂತೆ

ಇಂದು ನಾವು ನಮ್ಮ ಬುದ್ಧಿವಂತಿಕೆ ಹಾಗೂ ಜಾಣ್ಮೆಯಿಂದಾಗಿ ವೈಜ್ಞಾನಿಕ ಹಾಗೂ ತಾಂತ್ರಿಕವಾಗಿ ಸಾಕಷ್ಟು ಸಾಧನೆ ಹಾಗೂ ಪ್ರಗತಿಯನ್ನು ಹೊಂದಿದ್ದೇವೆ ಎನ್ನುವುದು ಸತ್ಯ. ಇಂತಹ ಒಂದು ಮಾರ್ಗದಿಂದಲೇ ಇಂದು ಭೂಮಿಯ ಮೇಲೆ ಇರುವ ಪ್ರಭೇದ ಅಥವಾ ಜೀವ ಸಂಕುಲಗಳ ಬಗ್ಗೆ ಸಾಕಷ್ಟು ಸಂಶೋಧನೆ ಹಾಗೂ ಅಧ್ಯಯನಗಳನ್ನು ಕೈಗೊಳ್ಳಲಾಗಿದೆ. ಇವುಗಳ ಫಲಿತಾಂಶ ಅಥವಾ ಮಾಹಿತಿಯ ಪ್ರಕಾರ ಭೂಮಿಯ ಮೇಲೆ ಸುಮಾರು 8.7 ಮಿಲಿಯನ್ ಜಾತಿಗಳಿವೆ ಎಂದು ತಿಳಿದುಬಂದಿವೆ. ಪ್ರಸಿದ್ಧ ವೆಬ್‍ಸೈಟ್ ಆಗಿರುವ ಗಾರ್ಡಿಯನ್ ಡಾಟ್ ಕಾಮ್ ವೆಬ್ ಸೈಟ್ ಅಲ್ಲಿ ವಿಶೇಷ ಸಂಗತಿಗಳ ಆಧಾರದ ಮೇಲೆ ನಡೆಯುವ ಸಂಶೋಧನೆ ಹಾಗೂ ಅಧ್ಯಯನಗಳ ನಿಖರವಾದ ಫಲಿತಾಂಶವನ್ನು ಬಹಿರಂಗಪಡಿಸಲಾಗುತ್ತದೆ. ಈ ವೆಬ್ ಸೈಟ್‍ನಲ್ಲಿ ಬಿತ್ತರಿಸಲಾದ ಒಂದು ಮಾಹಿತಿಯ ಪ್ರಕಾರ ಮನುಷ್ಯ ಜಾತಿಯ ಜೊತೆಗೆ ಭೂಮಿಯಲ್ಲಿ 8.7 ಮಿಲಿಯನ್ ಅಷ್ಟು ಜೀವ ಸಂಕುಲಗಳಿವೆ ಎನ್ನುವುದಕ್ಕೆ ನಿಖರವಾದ ಅಂದಾಜುಗಳೊಂದಿಗೆ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ಹಿಂದೆ ವಿಜ್ಞಾನ ಹಾಗೂ ತಂತ್ರಜ್ಞಾನಗಳ ಬಳಕೆ ಇಲ್ಲದೆ ಇರುವಾಗ ಹೇಳಲಾದ ಮಾಹಿತಿಯು ಇಂದು ನಮಗೆ ಸ್ಪಷ್ಟತೆಯನ್ನು ನೀಡಿದೆ ಎಂದರೆ ನಾವು ಆಧ್ಯಾತ್ಮಕ್ಕೆ ಸಂಬಂಧಿಸಿದ ಸಂಗತಿಯನ್ನು ನಂಬಬೇಕಿದೆ.

Most Read: ಭೂತ-ಪ್ರೇತಗಳಂತೆ ಕಾಣುವ ಜೊಂಬಿ ಗೊಂಬೆ ಜತೆಗೆ ಮದುವೆಯಾದ ಮಹಿಳೆ!!

ಆದಷ್ಟು ಉತ್ತಮ ಕೆಲಸಗಳಲ್ಲಿ ತೊಡಗಿಕೊಳ್ಳಲು ಸಿದ್ಧರಾಗಿರಬೇಕು

ಆದಷ್ಟು ಉತ್ತಮ ಕೆಲಸಗಳಲ್ಲಿ ತೊಡಗಿಕೊಳ್ಳಲು ಸಿದ್ಧರಾಗಿರಬೇಕು

ವಿಜ್ಞಾನಿಗಳು ಭರವಸೆಯ ಅಂಶವನ್ನು ನಮಗೆ ತಿಳಿಸಿದ ಮೇಲೆ ನಾವು ಅದರ ಅಂದಾಜು ಹಾಗೂ ಸಂಗತಿಯ ಬಗ್ಗೆ ನಂಬಿಕೆಯನ್ನು ಹೊಂದಬೇಕು. ನಮ್ಮ ಆತ್ಮವು ಪವಿತ್ರ ಗ್ರಂಥಗಳ ಪ್ರಕಾರವೇ ಮಾನವ ಜನ್ಮವನ್ನು ಪಡೆದುಕೊಂಡಿದೆ. ಈ ಜನ್ಮದಿಂದ ನಾವು ಸಾಕಷ್ಟು ಉತ್ತಮ ಕೆಲಸವನ್ನು ಕೈಗೊಳ್ಳಬೇಕು ಎನ್ನುವುದನ್ನು ಮರೆಯಬಾರದು. ನಮ್ಮ ಭೂಮಿಯಲ್ಲಿ ಇರುವ ಎಲ್ಲಾ ಪ್ರಾಣಿಗಳಿಗಿಂತ ಅಮೂಲ್ಯವಾದ ಪರಿಶುದ್ಧವಾದ, ಪವಿತ್ರವಾದ ಜೀವ ರೂಪವನ್ನು ತಾಳಿದ್ದೇವೆ. ಈ ಜನ್ಮವನ್ನು ನಾವು ದುರುಪಯೋಗಗಳಿಗೆ ಬಳಸಿಕೊಳ್ಳುವ ಬದಲು ಆದಷ್ಟು ಉತ್ತಮ ಕೆಲಸಗಳಲ್ಲಿ ತೊಡಗಿಕೊಳ್ಳಲು ಸಿದ್ಧರಾಗಿರಬೇಕು.

ಪರಸ್ಪರ ಪ್ರೀತಿ ವಾತ್ಸಲ್ಯ ಅತ್ಯಗತ್ಯ

ಪರಸ್ಪರ ಪ್ರೀತಿ ವಾತ್ಸಲ್ಯ ಅತ್ಯಗತ್ಯ

ಉತ್ತಮ ಸಂಸ್ಕಾರ, ಪಾಲಕರ ಪ್ರೀತಿ ವಿಶ್ವಾಸವನ್ನು ಪಡೆದುಕೊಂಡ ವ್ಯಕ್ತಿಗಳಾಗಿ ಬದುಕುತ್ತೇವೆ. ಈ ಜನ್ಮದಲ್ಲಿ ನಾವು ನಮ್ಮ ವಿಕಾಸದ ಜೊತೆಗೆ ಧರ್ಮ ಹಾಗೂ ನ್ಯಾಯ, ನೀತಿಗಳಿಗೆ ಬದ್ಧರಾಗಿರಬೇಕು. ನಮ್ಮವರು, ಹಿರಿಯರು, ಗುರುಗಳು, ಬಾಂಧವರು, ಸ್ನೇಹಿತರು ಎನ್ನುವ ಅಭಿಮಾನ ಹಾಗೂ ಗೌರವಗಳು ಇರಬೇಕು. ಸ್ವಾರ್ಥ ಆಸೆಗಳನ್ನು ನಿಯಂತ್ರಣದಲ್ಲಿಟ್ಟು. ಸದ್ಗತಿಗಳಿಗಾಗಿ ಜೀವನವನ್ನು ಮುಡುಪಾಗಿಡಬೇಕು. ಇತರರಲ್ಲಿ ಕ್ರೋದ, ಲೋಭ, ಮದ, ಮತ್ಸರ್ಯಗಳ ಬೀಜವನ್ನು ತೆಗೆದು ಹಾಕಿ, ಪ್ರೀತಿ-ವಾತ್ಸಲ್ಯದ ಬೀಜವನ್ನು ಬಿತ್ತಬೇಕು. ಆಗಲೇ ನಾವು, ನಮ್ಮವರು ಎನ್ನುವ ಭಾವನೆ ಮೂಡುವುದು. ಪರಸ್ಪರ ಪ್ರೀತಿ ವಾತ್ಸಲ್ಯದಿಂದ ಜೀವನ ನಡೆಯುವುದು.

ಸಾಹಿತ್ಯ, ಉಪನಿಷತ್ತು, ಗ್ರಂಥಗಳ ಅನುಸಾರ

ಸಾಹಿತ್ಯ, ಉಪನಿಷತ್ತು, ಗ್ರಂಥಗಳ ಅನುಸಾರ

ಪುರಾತನ ಭಾರತೀಯ ಸಾಹಿತ್ಯ, ಉಪನಿಷತ್ತು, ಗ್ರಂಥಗಳ ಅನುಸಾರ ನಮ್ಮನ್ನು ನಾವು ಮೊದಲು ನಿಯಂತ್ರಿಸಿಕೊಳ್ಳಬೇಕು. ನಮ್ಮ ಭಾವನೆಗಳು ನಮ್ಮ ಹಿಡಿತದಲ್ಲಿ ಇರಬೇಕು. ಇವುಗಳಿಗೆ ಉತ್ತಮ ಮಾರ್ಗ ಎಂದರೆ ಯೋಗ ಮತ್ತು ಧ್ಯಾನ ಎಂದು ಹೇಳಲಾಗುವುದು. ಇವುಗಳ ಮೂಲಕ ನಾವು ದೇಹ ಹಾಗೂ ಮನಸ್ಸನ್ನು ಶಾಂತ ಹಾಗೂ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುವುದು. ಮನುಷ್ಯ ಎಂದು ತನ್ನ ತನದಲ್ಲಿ ನಿಯಂತ್ರಣವನ್ನು ಪಡೆದುಕೊಳ್ಳುತ್ತಾನೋ ಆಗ ಇತರರ ಒಳಿತು ಹಾಗೂ ಸಹಾಯಕ್ಕೆ ಸಿದ್ಧನಾಗುತ್ತಾನೆ ಎಂದು ಹೇಳಲಾಗುವುದು. ಹಾಗಾಗಿ ಇಂದು ನಾವು ಉತ್ತಮ ವಿಚಾರ ಹಾಗೂ ಸಂಗತಿಗಳ ಜೊತೆಗೆ ಸದ್ಗತಿಯನ್ನು ಕಾಣುವುದರ ಮೂಲಕ ಬದಲಾವಣೆಯನ್ನು ತಂದುಕೊಳ್ಳಬೇಕು. ನಂತರ ಇತರರಿಗೆ ಮಾದರಿಯ ವ್ಯಕ್ತಿಗಳಾಗಿ ಅವರನ್ನು ಸನ್ಮಾರ್ಗದಲ್ಲಿ ನಡೆಯಲು ಪ್ರೋತ್ಸಾಹಿಸಬೇಕು. ನಮ್ಮಲ್ಲಿ ಹಾಗೂ ನಮ್ಮವರಲ್ಲಿ ಒಳ್ಳೆಯದನ್ನು ನಾವು ಎಂದು ಕಾಣಲು ಪ್ರಾರಂಭಿಸುತ್ತೇವೋ ಅಂದೇ ನಮಗೆ ದೇವರು ಕಾಣುತ್ತಾನೆ. ನಮ್ಮ ಜನ್ಮವು ಸಾರ್ಥಕತೆಯನ್ನು ಪಡೆದುಕೊಳ್ಳುವುದು.

English summary

soul passes 8.4 million species to get into human body

There is a saying that We got our present human body (or human life) only after our soul is passed through 8.4 million species. In Bhagavad Gita , Lord Sri Krishna himself told to arjuna that the soul passes 8.4 million bodies and at last it will get a human life. There are also many other Grandhas (based on Bhagavad gita) state that we will get a human body/ human life only after the soul passes through 84,00,000 different species and also states that human life is the last one that the soul will get.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more