For Quick Alerts
ALLOW NOTIFICATIONS  
For Daily Alerts

ಇಲ್ಲಿ ಹುಡುಗಿಯರಲ್ಲಿ ಸ್ತನಗಳು ಬೆಳೆಯದಂತೆ ತಡೆಯಲು ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡಲಾಗುತ್ತದೆಯಂತೆ!

|

ಜಗತ್ತು ಎಷ್ಟೇ ಮುಂದುವರಿದರೂ ಕೆಲವೊಂದು ಅನಾಗರಿಕ, ನೀಚ ಮತ್ತು ಪೈಶಾಚಿಕವಾಗಿರುವಂತಹ ಸಂಪ್ರದಾಯಗಳು, ಆಚರಣೆಗಳು ಈಗಲೂ ಆಚರಣೆಯಲ್ಲಿ ಇದೆ ಎಂದರೆ ಅದನ್ನು ನಾವು ನಂಬಲೇ ಬೇಕು. ಅದರಲ್ಲೂ ಆಫ್ರಿಕಾದ ಕೆಲವೊಂದು ರಾಷ್ಟ್ರಗಳಲ್ಲಿ ಕೆಲವೊಂದು ಆಚರಣೆಗಳ ಬಗ್ಗೆ ಕೇಳಿದರೆ ಅದು ತುಂಬಾ ಭೀತಿ ಉಂಟು ಮಾಡುವುದು ಹಾಗೂ ನಿದ್ದೆ ಗೆಡಿಸುವುದು. ಇಂತಹ ಆಚರಣೆಗಳಿಗೆ ಹೆಚ್ಚಾಗಿ ಮಹಿಳೆಯರನ್ನೇ ಬಳಸಿಕೊಳ್ಳಲಾಗುತ್ತದೆ. ಇದರಿಂದಾಗಿ ಅಲ್ಲಿನ ಮಹಿಳೆಯರು ಪಡಬಾರದ ಕಷ್ಟ ಪಡುತ್ತಿದ್ದಾರೆ. ಅಲ್ಲಿನ ಜನರು ಶಿಕ್ಷಣದಲ್ಲಿ ಹಿಂದುಳಿದಿರುವುದು ಕೂಡ ಇದಕ್ಕೆ ಕಾರಣವಾಗಿದೆ. ಅದೇ ರೀತಿಯಲ್ಲಿ ಅಲ್ಲಿನ ಕಾನೂನು ಕೂಡ ಪ್ರಬಲವಾಗಿರದ ಕಾರಣ ಇಂತಹ ಆಚರಣೆಗಳು ನಡೆಯುತ್ತಲೇ ಇದೆ.

ಆದರೆ ನಾವು ಈ ಲೇಖನದಲ್ಲಿ ಹೇಳಲು ಹೊರಟಿರುವುದು ಶೈಕ್ಷಣಿಕವಾಗಿಯು ತುಂಬಾ ಮುಂದುವರಿದ ಹಾಗೂ ಆರ್ಥಿಕವಾಗಿಯು ಸಬಲವಾಗಿರುವಂತಹ ರಾಷ್ಟ್ರ ಬ್ರಿಟನ್ ಬಗ್ಗೆ. ಇಲ್ಲಿ ಕೂಡ ಇಂತಹ ಒಂದು ಅನಾಗರಿಕ ಆಚರಣೆಯು ಜಾರಿಯಲ್ಲಿದೆ. ಅದು ಏನೆಂದು ಕೇಳಿದರೆ ನೀವು ಖಂಡಿತವಾಗಿಯೂ ಬೆಚ್ಚಿ ಬೀಳಲಿದ್ದೀರಿ. ಅಲ್ಲಿನ ಜನರು ಕೂಡ ಈ ಅಂಧಾಚರಣೆಯನ್ನು ಪಾಲಿಸಿಕೊಂಡು ಹೋಗುತ್ತಲಿದ್ದಾರೆ. ಇಂತಹ ಆಚರಣೆ ಯಾವುದು ಎಂದು ನಿಮಗೆ ಈಗ ಅನಿಸಬಹುದು. ಬ್ರಿಟನ್ ನಲ್ಲಿ ಸಣ್ಣ ಹುಡುಗಿಯರ ಸ್ತನಗಳಿಗೆ ಬಿಸಿಯನ್ನು ಇಡಲಾಗುತ್ತದೆ.

ಅಂದರೆ ಅಲ್ಲಿ ಸ್ತನಗಳು ಬೆಳಯಬಾರದು ಎನ್ನುವ ಕಾರಣಕ್ಕಾಗಿ ಈ ರೀತಿ ಮಾಡಲಾಗುತ್ತದೆ. ಇದರ ಬಗ್ಗೆ ನೀವು ಮುಂದೆ ಓದುತ್ತಾ ಸಾಗಿ... ಹುಡುಗಿಯರಲ್ಲಿ ಸ್ತನಗಳು ಬೆಳೆಯದಂತೆ ತಡೆಯಲು ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡಲಾಗುತ್ತದೆ. ಈ ಅಂಧಾಚರಣೆಯಲ್ಲಿ ವಿಶ್ವಸಂಸ್ಥೆಯು ವಿಶ್ವದಲ್ಲಿರುವ ಮೂಢನಂಬಿಕೆಗಳಲ್ಲಿ ಅಗ್ರ ಐದರಲ್ಲಿ ಒಂದು ಎಂದು ಪರಿಗಣಿಸಿದೆ.

ಪುರುಷರ ಗಮನ ಆಕರ್ಷಣೆಯಾಗದಂತೆ ತಡೆಯಲು ಈ ಆಚರಣೆ

ಪುರುಷರ ಗಮನ ಆಕರ್ಷಣೆಯಾಗದಂತೆ ತಡೆಯಲು ಈ ಆಚರಣೆ

ಈ ಅಮಾನವೀಯವಾಗಿರುವಂತಹ ಆಚರಣೆಯನ್ನು ಹುಡುಗಿಯ ತಾಯಿ ಅಥವಾ ಚಿಕ್ಕಮ್ಮ ಅಥವಾ ದೊಡ್ಡಮ್ಮ ಮಾಡುವರು. ಸ್ತನಗಳು ಬೆಳೆಯದಂತೆ ಮಾಡಲು ಈ ಮಹಿಳೆಯರು ಹುಡುಗಿಯರ ಎದೆಯ ಮೇಲೆ ಬಿಸಿ ಮಾಡಿದಂತಹ ಕಲ್ಲನ್ನು ಇಡುವರು. ಇಂತಹ ಆಚರಣೆಗೆ ಗುರಿಯಾಗುವಂತಹ ಹುಡುಗಿಯರ ವಯಸ್ಸು 9ರಿಂದ 15 ವರ್ಷ ಆಗಿರುವುದು. ಪುರುಷರ ಕಣ್ಣು ಬೀಳದಂತೆ ತಡೆಯಲು ಈ ಆಚರಣೆ ಮಾಡಲಾಗುತ್ತದೆ ಎಂದು ನಂಬಲಾಗಿದೆ.

ಆಫ್ರಿಕಾದಲ್ಲಿ ಈ ಆಚರಣೆಯು ಆರಂಭವಾಯಿತು

ಆಫ್ರಿಕಾದಲ್ಲಿ ಈ ಆಚರಣೆಯು ಆರಂಭವಾಯಿತು

ಆಫ್ರಿಕಾದ ರಾಷ್ಟ್ರಗಳಾಗಿರುವ ಕ್ಯಾಮರೂನ್, ಟಾಂಗೋ, ಗಿನಿಯಾ-ಬಿಸ್ಸೌ, ಚಾಡ್ ನಲ್ಲಿ ಇಂತಹ ಆಚರಣೆಗಳು ಮೊದಲಿಗೆ ಆರಂಭವಾದವು. ಆಫ್ರಿಕಾವನ್ನು ಬಿಟ್ಟು ಇಂಗ್ಲೆಂಡ್ ಗೆ ಬಂದು ನೆಲೆಸಿರುವಂತಹ ಹಲವಾರು ಮಂದಿ ಇದ್ದಾರೆ. ಇಂತಹ ಜನರು ತಮ್ಮ ಆಚರಣೆಯನ್ನು ಮುಂದುವರಿಸಿಕೊಂಡು ಹೋದರು. ಭೀಕರ ಆಚರಣೆಯು ಈಗಲೂ ಚಾಲ್ತಿಯಲ್ಲಿದೆ ಎಂದು ಹೇಳಲಾಗಿದೆ.

Most Read: ಅಯ್ಯಯೋ...!ಸೆಕ್ಸ್ ವೇಳೆ ಸಿಲುಕಿಕೊಂಡ ಜೋಡಿ! ವಿಡಿಯೋ ವೈರಲ್

ಇದು ಮಕ್ಕಳ ಮೇಲಿನ ದೌರ್ಜನ್ಯವೆಂದು ಪರಿಗಣಿಸಲಾಗಿದೆ

ಇದು ಮಕ್ಕಳ ಮೇಲಿನ ದೌರ್ಜನ್ಯವೆಂದು ಪರಿಗಣಿಸಲಾಗಿದೆ

ತಜ್ಞರ ಪ್ರಕಾರ ಈ ರೀತಿಯ ಆಚರಣೆಯಿಂದಾಗಿ ಅದು ಹದಿಹರೆಯದ ಹುಡುಗಿಯರ ಮೇಲೆ ಮಾನಸಿಕವಾಗಿ ಪರಿಣಾಮ ಬೀರುವುದು ಮಾತ್ರವಲ್ಲದೆ, ಅವರಿಗೆ ಜೀವಮಾನವಿಡಿ ಭೀತಿ ಉಂಟು ಮಾಡಬಹುದು. ಇದರಿಂದ ಅವರು ತಮ್ಮ ಜೀವನದ ಮುಂದಿನ ಹಂತದಲ್ಲಿ ಮಕ್ಕಳಿಗೆ ಸ್ತನ್ಯಪಾನ ಮಾಡಲು ಹಿಂಜರಿಯಬಹುದು. ಇದರ ಹೊರತಾಗಿ ಹುಡುಗಿಯರಿಗೆ ಸ್ತನಕ್ಕೆ ಸಂಬಂಧಿಸಿದಂತಹ ಹಲವಾರು ಸೋಂಕುಗಳು ಕಾಣಿಸಿಕೊಳ್ಳಬಹುದು.

ಈ ಆಚರಣೆ ನಡೆಯುತ್ತಿರುವ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳು ಸಿಕ್ಕಿಲ್ಲ!

ಈ ಆಚರಣೆ ನಡೆಯುತ್ತಿರುವ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳು ಸಿಕ್ಕಿಲ್ಲ!

ಈ ಆಚರಣೆಯನ್ನು ಬಹಿರಂಗಪಡಿಸುವಂತಹ ಯಾವುದೇ ರೀತಿಯ ಅಧಿಕೃತ ದಾಖಲೆಗಳು ಇದುವರೆಗೆ ಸಿಕ್ಕಿಲ್ಲ. ಬ್ರಿಟನ್ ನ ಉತ್ತರ ಭಾಗದಲ್ಲಿ ಸಾವಿರಕ್ಕೂ ಹೆಚ್ಚಿನ ಹುಡುಗಿಯರು ಇಂತಹ ಆಚರಣೆಗೆ ಒಳಪಟ್ಟಿದ್ದಾರೆ ಎಂದು ವರದಿಗಳು ಹೇಳಿವೆ. ಇಂತಹ ಆಚರಣೆಗೆ ಗುರಿಯಾಗಿರುವಂತಹ 10 ರ ಹರೆಯದ ಹುಡುಗಿಗೆ ತಾನು ಚಿಕಿತ್ಸೆ ನೀಡಿರುವುದಾಗಿ ನರ್ಸ್ ಒಬ್ಬರು ಹೇಳಿಕೊಂಡಿದ್ದಾರೆ.

Most Read: ಮನೆಕೆಲಸದಾಕೆ ತನ್ನ ಯಜಮಾನನ ಅಡುಗೆ ಮನೆಯಲ್ಲಿಯೇ ಮಲವಿಸರ್ಜನೆ ಮಾಡಿದಳು! ವಿಡಿಯೋ ವೈರಲ್

ಹೋರಾಟ ಮುಂದುವರಿದಿದೆ

ಹೋರಾಟ ಮುಂದುವರಿದಿದೆ

ಈ ವಿಚಾರದ ಬಗ್ಗೆ ನಾಯಕರು ಹಾಗೂ ಸಂಘಸಂಸ್ಥೆಗಳು ಚರ್ಚೆ ಮಾಡುತ್ತಲೇ ಇದೆ. ಆದರೆ ಇಂತಹ ಆಚರಣೆ ತಡೆಯುವ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ. ಇಂತಹ ಅಂಧಾಚರಣೆ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸ್ ಗೆ ಹಾಕಲು ಮರೆಯಬೇಡಿ.

English summary

Girls Here Undergo Breast Ironing!

Breast ironing is an age-old African practice that is being followed even now! In this practice, the experts trained in this ritual run hot items on the chest of pre-teen girls. It is believed that this will delay breast formation. The victims are girls aged between 9 and 15 years old. Currently, this practice is a hit in the UK.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more