For Quick Alerts
ALLOW NOTIFICATIONS  
For Daily Alerts

ಬರೋಬ್ಬರಿ 5 ಲೀಟರ್ ಬಿಯರ್ ಕುಡಿಸಿ ವ್ಯಕ್ತಿಯ ಪ್ರಾಣ ಉಳಿಸಿದ ವೈದ್ಯರು!

|

ವೈದ್ಯಕೀಯ ಲೋಕದಲ್ಲಿ ಕೆಲವೊಂದು ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಕೆಲವೊಮ್ಮೆ ಮನುಷ್ಯನನ್ನು ಕಾಡುವಂತಹ ಅಪರೂಪದ ಕಾಯಿಲೆಗಳಿಗೆ ಯಾವುದೇ ಔಷಧಿಗಳು ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ವೈದ್ಯರು ತಮ್ಮದೇ ಆಗಿರುವಂತಹ ವಿಧಾನಗಳನ್ನು ಅನುಸರಿಸುವುದು ಇದೆ. ಇದರಿಂದ ಕೆಲವು ಸಲ ಲಾಭವಾದರೆ, ಇನ್ನು ಕೆಲವೊಂದು ವೇಳೆ ಪ್ರಾಣ ಹಾನಿಯು ಸಂಭವಿಸಬಹುದು. ಇದೆಲ್ಲವೂ ರೋಗಿಯ ಮೇಲೆ ಅವಲಂಬಿತವಾಗಿರುವುದು. ರೋಗಿಯ ಸ್ಥಿತಿಗೆ ಅನುಗುಣವಾಗಿ ವೈದ್ಯರು ಇಂತಹ ಚಿಕಿತ್ಸೆ ನೀಡುವರು. ವೈದ್ಯರು ನೀಡಿರುವಂತಹ ಚಿತ್ರವಿಚಿತ್ರ ಚಿಕಿತ್ಸೆಗಳ ಬಗ್ಗೆ ನಾವು ಕೇಳಿದ್ದೇವೆ ಅಥವಾ ಓದಿರಬಹುದು. ಕೆಲವೊಂದು ದೇಶ ಅಥವಾ ಪ್ರದೇಶಗಳಲ್ಲಿ ವಿಚಿತ್ರವಾಗಿರುವ ಚಿಕಿತ್ಸೆಗಳು ಇದೆ.

ಆದರೆ ಅಧಿಕೃತವಾಗಿ ವೈದ್ಯರು ಇಂತಹ ಚಿಕಿತ್ಸೆ ಮಾಡುವುದು ಯಾವುದೇ ಆಯ್ಕೆಗಳು ಉಳಿಯದೇ ಇರುವಾಗ. ಇಲ್ಲೊಬ್ಬ ವ್ಯಕ್ತಿಗೆ ಆಲ್ಕೋಹಾಲ್ ನಿಂದ ಚಿಕಿತ್ಸೆ ನೀಡಿ ಪ್ರಾಣ ಕಾಪಾಡಲಾಗಿದೆ. ಇದು ನಮಗೆ ವಿಚಿತ್ರವೆಂದು ಅನಿಸಬಹುದು. ಪ್ರಾಣ ತೆಗೆಯುವಂತಹ ಆಲ್ಕೋಹಾಲ್ ನಿಂದ ಪ್ರಾಣ ಉಳಿಸುವುದು ಹೇಗೆ ಎಂಬ ಪ್ರಶ್ನೆ ಬರಬಹುದು. ಆದರೆ ಇದು ನಿಜವಾಗಿಯೂ ನಡೆದಿರುವಂತಹ ಘಟನೆ. ಬಿಯರ್ ಮೂಲಕ ವ್ಯಕ್ತಿಯೊಬ್ಬನ ಪ್ರಾಣ ಕಾಪಾಡಲಾಗಿದೆ. ಸುಮಾರು 15 ಕ್ಯಾನ್ ಗಳಷ್ಟು ಬಿಯರ್ ನ್ನು ವ್ಯಕ್ತಿಯೊಬ್ಬನಿಗೆ ಕುಡಿಸಿ ಆತನ ಪ್ರಾಣ ಉಳಿಸಲಾಗಿದೆ. ಆಲ್ಕೋಹಾಲ್ ವಿಷದಿಂದಾಗಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ವ್ಯಕ್ತಿಯ ಪ್ರಾಣ ಕಾಪಾಡಲು ವೈದ್ಯರು ಸುಮಾರು ಐದು ಲೀಟರ್ ನಷ್ಟು ಬಿಯರ್ ನ್ನು ಆ ವ್ಯಕ್ತಿಗೆ ಕುಡಿಸಿದ್ದಾರೆ. ಈ ವಿಚಿತ್ರ ಬಿಯರ್ ಚಿಕಿತ್ಸೆ ಬಗ್ಗೆ ನೀವು ಈ ಲೇಖನದಲ್ಲಿ ಮುಂದೆ ಓದುತ್ತಾ ಸಾಗಿ....

ಈ ಘಟನೆಯು ವಿಯೆಟ್ನಾಂನಲ್ಲಿ ನಡೆದಿದೆ

ಈ ಘಟನೆಯು ವಿಯೆಟ್ನಾಂನಲ್ಲಿ ನಡೆದಿದೆ

ವರದಿಗಳು ಹೇಳುವ ಪ್ರಕಾರ ಈ ಘಟನೆಯು ವಿಯೆಟ್ನಾಂ ನಲ್ಲಿ ನಡೆದಿದೆ ಮತ್ತು ಆ ವ್ಯಕ್ತಿಗೆ ವಿಯೆಟ್ನಾಂನ ಕ್ಯುಂಗ್ ಟ್ರಿ ಎನ್ನುವ ಪ್ರದೇಶದಲ್ಲಿರುವ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. 48ರ ಹರೆಯದ ವ್ಯಕ್ತಿಯ ಪ್ರಾಣ ಕಾಪಾಡಲು ಸುಮಾರು 15 ಕ್ಯಾನ್ ನಷ್ಟು ಬಿಯರ್ ನ್ನು ಹೊಟ್ಟೆಗೆ ಹಾಕಬೇಕಾಯಿತು ಎಂದು ವೈದ್ಯರು ಹೇಳಿದ್ದಾರೆ.

ವೈದ್ಯರು ಹೇಳುವ ಪ್ರಕಾರ

ವೈದ್ಯರು ಹೇಳುವ ಪ್ರಕಾರ

48ರ ಹರೆಯದ ನ್ಗುಯೇನ್ ವ್ಯಾನ್ ನಟ್ ಎಂಬಾತನ ರಕ್ತದಲ್ಲಿ ಮೆಥನಾಲ್ ಮಟ್ಟವು ಸಾಮಾನ್ಯಕ್ಕಿಂತ 1,119 ಪಟ್ಟು ಹೆಚ್ಚಿಗೆ ಇತ್ತು. ಆತನನ್ನು ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆತನ ಪ್ರಾಣ ಕಾಪಾಡುವ ಸಲುವಾಗಿ ವೈದ್ಯರು ಸುಮಾರು 15 ಕ್ಯಾನ್ ಗಳಷ್ಟು ಬಿಯರ್ ನ್ನು ಆತನ ಹೊಟ್ಟೆಗೆ ಹಾಕಬೇಕಾಯಿತು.

Most Read:ತಾಯಿಗೆ ಸಿಸಿಟಿವಿಯಲ್ಲಿ ಕಾಣಿಸುತ್ತಿದೆಯಂತೆ ಸತ್ತ ಮಗನ ದೃಶ್ಯಗಳು!!

ವೈದ್ಯರು ಆಲ್ಕೋಹಾಲ್ ಬಳಸಿರುವುದಕ್ಕೆ ಕಾರಣಗಳು

ವೈದ್ಯರು ಆಲ್ಕೋಹಾಲ್ ಬಳಸಿರುವುದಕ್ಕೆ ಕಾರಣಗಳು

ವೈದ್ಯರು ಹೇಳುವಂತೆ ಆಲ್ಕೋಹಾಲ್ ನಲ್ಲಿ ಎಥನಾಲ್ ಮತ್ತು ಮೆಥನಾಲ್ ಇದೆ. ಮನುಷ್ಯರು ಆಲ್ಕೋಹಾಲ್ ಸೇವನೆ ಮಾಡಿದ ವೇಳೆ ಲಿವರ್ ಮೊದಲು ಎಥನಾಲ್ ನ್ನು ವಿಘಟಿಸುವುದು. ರೋಗಿಯ ಮೆಥನಾಲ್ ಮಟ್ಟವು ಹೆಚ್ಚಾಗುತ್ತಲೇ ಇದ್ದ ಕಾರಣದಿಂದಾಗಿ ಲಿವರ್ ಮೆಥನಾಲ್ ವಿಘಟನೆಯನ್ನು ವಿಳಂಬ ಮಾಡುವ ಕಾರಣದಿಂದಾಗಿ ವೈದ್ಯರು ರೋಗಿಯ ಹೊಟ್ಟೆಗೆ ಮತ್ತಷ್ಟು ಬಿಯರ್ ಸುರಿದರು. ಇದರಿಂದ ಮೆಥನಾಲ್ ವಿಘಟನೆಯು ತುಂಬಾ ವಿಳಂಬವಾಗುತ್ತಿತ್ತು.

ಆ ವ್ಯಕ್ತಿಯ ಸ್ಥಿತಿ

ಆ ವ್ಯಕ್ತಿಯ ಸ್ಥಿತಿ

ದೇಹದಲ್ಲಿನ ಮೆಥನಾಲ್ ವಿಷಕಾರಿಯಾದ ಬಳಿಕ ಆ ವ್ಯಕ್ತಿಯ ಪ್ರಜ್ಞೆ ತಪ್ಪಿತ್ತು ಮತ್ತು ಫಾರ್ಮಿಕ್ ಆಮ್ಲವು ಉತ್ಪತ್ತಿಯಾಗಿತ್ತು. ಈ ವಿಚಿತ್ರ ಚಿಕಿತ್ಸೆಯಿಂದಾಗಿ ಆ ವ್ಯಕ್ತಿಯು ಮೂರು ವಾರಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು? ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ಹಾಕಿ.

English summary

Doctors Pumped 5 L Of beer To Save The Patient

A man named Nguyen Van Nhat is a 48-year-old man who had a blood methanol level 1,119 times higher than average. He was injected with 15 cans of alcohol to save his life as alcohol contains ethanol and methanol, but the liver breaks down ethanol first. Hence, to stop his methanol levels from rising the medics had to give him more beer.
X
Desktop Bottom Promotion