Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಸೂರ್ಯ ಗ್ರಹಣದ ನಂತರ ಈ ನಾಲ್ಕು ರಾಶಿಗಳ ಅದೃಷ್ಟವೇ ಬದಲಾಗಲಿದೆ!

ಗ್ರಹಣಕ್ಕೆ ಹಿಂದೂ ಪಂಚಾಗದಲ್ಲಿ ಮಹತ್ತರವಾದ ಸ್ಥಾನವನ್ನು ನೀಡಲಾಗಿದೆ. ಪ್ರಕೃತಿಯ ಸಮತೋಲನವನ್ನು ಕಾಪಾಡುವ ಸೂರ್ಯ ಮತ್ತು ಚಂದ್ರರಿಗೆ ಗ್ರಹಣ ಉಂಟಾದರೆ ವಾತಾವರಣದಲ್ಲಿ ಮಾಲಿನ್ಯ ಅಥವಾ ಅಶುಚಿಯುಂಟಾಗುವುದು ಎಂದು ಹೇಳಲಾಗುತ್ತದೆ. ಇಂತಹ ಸಮಯದಲ್ಲಿ ಉಪವಾಸ ಗೈದು, ದೇವರ ನಾಮವನ್ನು ಸ್ಮರಿಸುತ್ತಾ ಭಕ್ತಿ ಭಾವದಲ್ಲಿ ಲೀನವಾಗಬೇಕು. ಆಗ ನಮ್ಮ ಸುತ್ತಮುತ್ತಲಲ್ಲಿ ನಡೆಯುವ ಅನೇಕ ಅನಾಹುತಗಳನ್ನು ತಪ್ಪಿಸಬಹುದು ಎನ್ನುವ ನಂಬಿಕೆ ಇರುವುದನ್ನು ಕಾಣಬಹುದು.
ಗ್ರಹಣವು ಕೆಲವು ರಾಶಿಗಳ ಮೇಲೆ ಹಿಡಿದಾಗ, ಆ ರಾಶಿಯಲ್ಲಿ ಜನಿಸಿದವರು ದೀಪದ ಕಾಣಿಯನ್ನು ದಾನ ಮಾಡಬೇಕು. ಆಗ ದೋಷಗಳು ಪರಿಹಾರವಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಗ್ರಹಣದಿಂದಾಗಿ ಹೇಗೆ ಪರಿಸರದಲ್ಲಿ ಕಲುಶಿತತೆ ಉಂಟಾಗುವುದೋ ಹಾಗೆಯೇ ರಾಶಿಚಕ್ರದ ಮೇಲೂ ಮಹತ್ತರವಾದ ಬದಲಾವಣೆಗಳು ಸಂಭವಿಸುವುದು. ಇವು ವ್ಯಕ್ತಿಯ ನಿತ್ಯದ ಜೀವನದ ಮೇಲೆ ಪ್ರಭಾವ ಬೀರುವುದು.
ಜುಲೈ 13ರಂದು ಸೂರ್ಯ ಗ್ರಹಣ ಹಾಗೂ ಜುಲೈ 27ರಂದು ಚಂದ್ರ ಗ್ರಹಣವು ಸಂಭವಿಸಲಿದೆ. ಒಂದೇ ತಿಂಗಳಲ್ಲಿ ಎರಡು ಗ್ರಹಣಗಳು ಕಾಣಿಸಿಕೊಳ್ಳುತ್ತಿರುವುದನ್ನು ನೋಡಬಹುದು. ಈ ಬದಲಾವಣೆಯ ಜೊತೆಗೆ ಮಂಗಳ, ಪ್ಲುಟೋ, ನೆಪ್ಚೂನ್, ಶನಿ, ಗುರು ಈ ಐದು ಗ್ರಹಗಳು ವಿಭಿನ್ನ ಬದಲಾವಣೆಯನ್ನು ಪಡೆದುಕೊಳ್ಳುತ್ತದೆ. ಇದರ ಪರಿಣಾಮವು ಕೆಲವು ರಾಶಿಚಕ್ರದವರ ಮೇಲೆ ಗಂಭೀರ ಪ್ರಭಾವ ಬೀರುವುದು ಎಂದು ಅಂದಾಜಿಸಲಾಗಿದೆ. ಗ್ರಹಣ ಹಾಗೂ ಗ್ರಹಗತಿಗಳ ಪ್ರಭಾವ ನಿಮ್ಮ ರಾಶಿಚಕ್ರದ ಮೇಲೆ ಪ್ರಭಾವ ಬೀರುವುದೇ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಮುಂದಿರುವ ವಿವರಣೆಯನ್ನು ಪರಿಶೀಲಿಸಿ....

ಕರ್ಕ
ಈ ರಾಶಿಚಕ್ರದವರು ಗ್ರಹಗತಿಗಳ ಪ್ರಭಾವದಿಂದಾಗಿ ಊಹಿಸಲಾಗದಂತಹ ಆಶ್ವರ್ಯಕರ ಬದಲಾವಣೆಯನ್ನು ಕಾಣುವರು. ತಮ್ಮ ವಯಸ್ಸಿಗಿಂತ ಮಿಗಿಲಾದ ರೀತಿಯಲ್ಲಿ ಶಾಂತತೆಯನ್ನು ಅನುಸರಿಸುವರು. ಸಾಕಷ್ಟು ತೊಡಕು ಅಥವಾ ಅಡ್ಡಿಗಳು ಎದುರಾದರೂ ಅಂತಿಮವಾಗಿ ನೆಮ್ಮದಿಯ ನಿಟ್ಟುಸಿರು ಬಿಡುವಿರಿ. ಕೆಲವು ಪ್ರದೇಶಗಳಿಗೆ ನೀವು ಪ್ರವಾಸ ಕೈಗೊಳ್ಳುವ ಸಾಧ್ಯತೆಗಳಿವೆ ಅಥವಾ ಉತ್ತಮ ಚಿಕಿತ್ಸೆಗೆ ಒಳಗಾಗುವಿರಿ. ಆಧ್ಯಾತ್ಮಿಕ ಚಿಂತನೆಯ ಕಡೆಗೆ ಗಮನವನ್ನು ಕೇಂದ್ರೀಕರಿಸಿ. ಆಗಾಗ ನಿಮ್ಮ ಸ್ನೇಹಿತರೊಂದಿಗೆ ಸಮಯವನ್ನು ಕಳೆಯಿರಿ. ಆಗ ಒಂದಷ್ಟು ಸುಂದರ ಅನುಭವವನ್ನು ಹೊಂದುವಿರಿ.

ಸಿಂಹ
ಈ ತಿಂಗಳು ನೀವು ಕೆಲವು ಕುತೂಹಲಕಾರಿ ಅಥವಾ ಪತ್ತೆದಾರಿ ಆಟವನ್ನು ಆಡುವ ಸಾಧ್ಯತೆಗಳಿವೆ. ಕೆಲವು ರಹಸ್ಯವನ್ನು ಅರಿಯಲು ಪ್ರಯತ್ನಿಸುವಿರಿ. ಅಂತಿಮವಾಗಿ ಅದಕ್ಕೆ ಸೂಕ್ತ ಉತ್ತರವನ್ನು ಪಡೆದುಕೊಳ್ಳುವರು. ಕೈಗೊಳ್ಳುವ ಕೆಲಸದಲ್ಲಿ ಸಂತೋಷವಾಗಿಯೇ ನಿಮ್ಮನ್ನು ನೀವು ತೊಡಗಿಸಿಕೊಳ್ಳುವಿರಿ. ಆಧ್ಯಾತ್ಮಿಕ ಚಿಂತನೆಗಳ ಕಡೆಗೆ ಒಲವು ತೋರುವಿರಿ. ನಿಮ್ಮ ನಂಬಿಕೆಗಳು ಪುನಃ ಸ್ಥಾಪನೆಗೊಳ್ಳುವುದು.

ಧನು
ಈ ತಿಂಗಳು ನೀವು ನಿಮ್ಮ ಶಕ್ತಿಯ ಬಗ್ಗೆ ಸಾಕಷ್ಟು ತಿಳಿದುಕೊಳ್ಳುವಿರಿ. ನಿಧಾನವಾಗಿ ನಿಮ್ಮ ಉದ್ದೇಶ, ಕನಸು ಹಾಗೂ ಗುರಿಯ ಬಗ್ಗೆ ಪರಿಶೀಲಿಸಿ. ಆಗ ನೀವು ನಿಮ್ಮ ಕನಸಿನ ಜೀವನವನ್ನು ಪಡೆಯಬಹುದು. ನಿಮ್ಮ ವೈಯಕ್ತಿಕ ಜೀವನ ಮತ್ತು ನಿಮ್ಮ ಸಂತೋಷವನ್ನು ನೀವೇ ಕಂಡುಕೊಂಡರೆ ಎಲ್ಲವೂ ಉತ್ತಮವಾಗಿರುತ್ತದೆ. ಪ್ರತಿಯೊಂದು ವಿಚಾರದ ಬಗ್ಗೆಯೂ ಪ್ರಾಥಮಿಕ ಚಿಂತನೆ ನಡೆಸಿ. ಸಂತೋಷದ ಮಾರ್ಗವನ್ನು ಅಪ್ಪಿಕೊಂಡರೆ ನಿಮ್ಮ ಮಾರ್ಗವು ಸುಗಮವಾಗುವುದು.

ಕುಂಭ
ಇವರು ಜುಲೈ ತಿಂಗಳಲ್ಲಿ ಪರಿಸ್ಥಿತಿ ಹಾಗೂ ಅವಕಾಶಗಳು ಸಿಕ್ಕ ಹಾಗೆ ಜಾರಿಕೊಳ್ಳಬೇಕು. ಇದೀಗ ಜೀವನದಲ್ಲಿ ಸಂತೋಷವನ್ನು ಹೊಂದಲು ಅರ್ಹರಾಗಿದ್ದೀರಿ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಸಂತೋಷವನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಆಗ ನೀವು ಹೆಚ್ಚು ಆನಂದದಿಂದ ಇರಬಹುದು ಎಂದು ಹೇಳಲಾಗುವುದು. ಜೀವನದ ಚಿಕ್ಕ ಬದಲಾವಣೆಯು ಹೆಚ್ಚು ಸಂತೋಷವನ್ನು ನೀಡುವುದು. ಗ್ರಹಗಳ ಹಿಮ್ಮುಖ ಚಲನೆಯು ಒಂದಿಷ್ಟು ತೊಡಕನ್ನು ತಂದೊಡ್ಡಬಹುದು. ಅಂತಹ ಸಂದರ್ಭದಲ್ಲಿ ಸೂಕ್ತ ನಿರ್ವಹಣೆ ನಡೆಸುವ ಜಾಣ್ಮೆಯನ್ನು ನೀವು ವಹಿಸಬೇಕು.



Click it and Unblock the Notifications
