For Quick Alerts
ALLOW NOTIFICATIONS  
For Daily Alerts

  ಈ 3 ರಾಶಿಯವರೊಂದಿಗೆ ವಾದ ಮಾಡಬೇಡಿ! ದೆವ್ವ ಬಂದವರಂತೆ ವರ್ತಿಸುವರು!!

  By Deepu
  |

  ಚರ್ಚೆಗಳು ಆರೋಗ್ಯವಾಗಿದ್ದರೆ ಆಗ ಅದರಿಂದ ಎರಡು ಜನರಿಗೂ ಸ್ವಲ್ಪ ಮಟ್ಟಿನ ಜ್ಞಾನ ಮತ್ತು ಅನುಭವ ಸಿಗುವುದು. ಆದರೆ ಚರ್ಚೆ ತೀವ್ರವಾಗಿ ಅದು ವಿಕೋಪಕ್ಕೆ ಹೋದರೆ ಅದು ಒಳ್ಳೆಯದಲ್ಲ. ಜೋತಿಷ್ಯದ ಪ್ರಕಾರ ನೀವು ಕೆಲವು ರಾಶಿಗಳ ವ್ಯಕ್ತಿಗಳೊಂದಿಗೆ ಚರ್ಚಿಸಲು ಹೋಗಲೇಬಾರದು. ಯಾಕೆಂದರೆ ನೀವು ಇದರಿಂದ ಪಶ್ಚಾತ್ತಾಪ ಪಟ್ಟುಕೊಳ್ಳಬೇಕಾಗುತ್ತದೆ.

  ಈ ಲೇಖನದಲ್ಲಿ ನೀವು ಚರ್ಚಿಸಲು ಹೋಗಲೇಬಾರದ ಕೆಲವು ರಾಶಿಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ಓದುತ್ತಾ ತಿಳಿಯಿರಿ. ನಿಮ್ಮ ರಾಶಿಯು ಇದರಲ್ಲಿದ್ದರೆ ಅದರ ಬಗ್ಗೆ ನಮಗೆ ತಿಳಿಸಲು ಮೆರೆಯಬೇಡಿ. ಯಾಕೆಂದರೆ ಈ ರಾಶಿಯವರು ಯಾವಾಗಲೂ ವಾದದಲ್ಲಿ ಸೋಲುವುದಿಲ್ಲ...

  ಸಿಂಹ: ಜುಲೈ 23- ಆ.23

  ಸಿಂಹ: ಜುಲೈ 23- ಆ.23

  ತಪ್ಪಾಗಿರುವುದು ಎನ್ನುವುದು ಸಿಂಹ ರಾಶಿಯವರನ್ನು ವರ್ಣಿಸಲು ಇರುವ ಪದವಲ್ಲ. ಇವರು ಯಾವಾಗಲೂ ತಮ್ಮ ಅಹಂನ್ನು ಮುಂದಿಡುವರು, ಎಲ್ಲರ ಮುಂದೆ ಕೇಂದ್ರಬಿಂದುವಾಗಿರಲು ಮತ್ತು ತಾನೇ ಸರಿಯೆಂದು ಇರುವವರು. ಈ ರಾಶಿಯವರೊಂದಿಗೆ ವಾದ ಮಾಡಿಕೊಳ್ಳಲು ನೀವು ಸರಿಯಾದ ತಯಾರಿ ಮಾಡಿಕೊಳ್ಳಬೇಕು. ಯಾಕೆಂದರೆ ಇವರು ವಾದಿಸಲು ನಿಮಗೆ ಒಂದು ಸೆಕೆಂಡು ಕೂಡ ನೀಡಲ್ಲ. ಇವರು ನಿಮ್ಮ ಮಾತುಗಳನ್ನು ತಿರುಗಿಸಿ, ನೀವು ಮಾಡುತ್ತಿರುವ ಆರೋಪದಿಂದ ನೀವೇ ಮೂರ್ಖರಾದಂತೆ ಭಾವಿಸುವಂತೆ ಮಾಡುವರು. ತಮ್ಮತ್ತ ಬೆರಳು ತೋರಿಸಲು ಇವರು ಯಾರಿಗೂ ಅವಕಾಶ ನೀಡಲ್ಲ ಮತ್ತು ಇದು ಅವರ ಪರವಾಗಿ ಕೆಲಸ ಮಾಡುವುದು. ಈ ರಾಶಿಯವರೊಂದಿಗೆ ಯಾವತ್ತೂ ವಾದಿಸಲು ಹೋಗಬಾರದು.

   ಸಿಂಹ

  ಸಿಂಹ

  ಇನ್ನು ಈ ರಾಶಿಯವರು ತುಂಬಾ ಸಿಡಿದುಬೀಳುವವರು. ಇವರು ನಿಮ್ಮ ಗೆಳೆಯರಾಗಿದ್ದರೂ ಸಹಿತ ಒಂದು ವಿಧದಲ್ಲಿ ಇವರು ನಿಮ್ಮ ಶತ್ರುಗಳಾಗಿರುವರು. ನಿಮಗೆ ಅವರೊಂದಿಗೆ ಯಾವುದೇ ರೀತಿಯ ಮನಸ್ತಾಪವಿದ್ದರೆ, ಅದನ್ನು ಸುಲಭವಾಗಿ ಪರಿಹರಿಸ ಬಹುದಾಗಿದ್ದರೂ ಈ ರಾಶಿಯವರು ಮಾತ್ರ ಅದನ್ನು ಬಹುದೊಡ್ಡ ವಿಷಯವೆಂದು ವಾದಿಸುವರು. ಇವರೊಂದಿಗೆ ಮಾತನಾಡುವಾಗ ನೀವು ಬೈಗುಳ ಎದುರಿಸಬಹುದು ಅಥವಾ ಮುಖದ ಮೇಲೆ ಹೊಡೆದಂತೆ ಮಾತನಾಡಬಹುದು. ನಿಮ್ಮನ್ನು ರಕ್ಷಿಸಿಕೊಳ್ಳಲು ಹೆಚ್ಚು ಪ್ರಯತ್ನಿಸಿದಷ್ಟು ಈ ವಾದವು ಮತ್ತಷ್ಟು ಕ್ಲಿಷ್ಟವಾಗುತ್ತಾ ಹೋಗುವುದು. ಅವರೊಂದಿಗೆ ಮಾತನಾಡುವಾಗ ನಿಮ್ಮ ಭಾವನೆಗಳನ್ನು ಕಟ್ಟಿಹಾಕಿಕೊಳ್ಳಬೇಕು ಮತ್ತು ಮುಂದಿನ ಸಲ ಇಂತಹ ವಾಗ್ವಾದ ಎದುರಾಗದಂತೆ ನೋಡಿಕೊಳ್ಳಬೇಕು. ಇನ್ನು ಚತುರತೆಯ ರಾಜ ಸಿಂಹ ಅತ್ಯಂತ ಬುದ್ಧಿವಂತ ರಾಶಿ ಚಿಹ್ನೆ. ಅವರು ತಮ್ಮ ಅಂತರ್ದೃಷ್ಟಿಯಿಂದ ಮತ್ತು ಅವರ ಮಹಾನ್ ಕುತಂತ್ರದಿಂದ ನಿಯಂತ್ರಿಸುತ್ತಾರೆ. ಪ್ರತೀ ವಿಷಯದಲ್ಲಿ ತಮ್ಮ ಗುರಿಗಳನ್ನು ತಲುಪುವಲ್ಲಿ ಅವರಿಗೆ ಹೆಚ್ಚಿನ ಸಮಯವನ್ನು ನೀಡುತ್ತಾರೆ. ಸಿಂಹ ರಾಶಿಯವರು ಯಾವುದೇ ಅಡಚಣೆಗೆ ಶರಣಾಗುವುದಿಲ್ಲ. ಇವರು ಸದಾ ಹೋರಾಟದ ಬುದ್ಧಿಯನ್ನು ಹೊಂದಿರುತ್ತಾರೆ. ಸಿಂಹ ರಾಶಿಯವರು ಟೀಕೆಗಳನ್ನು ಒಪ್ಪಿಕೊಳ್ಳುವುದಿಲ್ಲ. ತಮ್ಮ ಸ್ವಂತ ಆಲೋಚನೆಗಳನ್ನು ರಕ್ಷಿಸಲು ಅವರು ಧೈರ್ಯವನ್ನು ಹೊಂದಿರುತ್ತಾರೆ. ಅದಕ್ಕಾಗಿಯೇ ಅವರು ಇತರರಿಗೆ ಮನವೊಲಿಸುವಲ್ಲಿ ಮಹತ್ತರರಾಗಿರುತ್ತಾರೆ. ಅವರು ಉತ್ತಮ ಭಾಷಣಕಾರರು ಮತ್ತು ರಾಜಕಾರಣಿಗಳು ಆಗಿರುತ್ತಾರೆ.

  ಕನ್ಯಾ

  ಕನ್ಯಾ

  ಕನ್ಯಾ ರಾಶಿಯವರು ಪರಿಪೂರ್ಣರು ಮತ್ತು ತಾವು ಮಾಡುವಂತಹ ಪ್ರತಿಯೊಂದರಲ್ಲೂ ಪರಿಪೂರ್ಣತೆ ಬಯಸುವರು. ಆದರೆ ವಾಸ್ತವಕ್ಕಿಂತ ನಿಜವು ಬೇರೆಯಾಗಿರುವುದು. ಈ ರಾಶಿಯವರಿಗೆ ತುಂಬಾ ಹೇಳಲಿಕ್ಕಿರುವುದು, ಅದರಲ್ಲೂ ತಮ್ಮ ಭಾವನೆಗಳ ಬಗ್ಗೆ. ಇವರು ವಾದದಲ್ಲಿ ಸೋಲುವುದನ್ನು ಬಯಸಲ್ಲ ಮತ್ತು ಇದಕ್ಕಾಗಿ ಅವರು ಏನು ಬೇಕಾದರೂ ಮಾಡವಲ್ಲರು. ನೀವು ನಿಮ್ಮ ಬಗ್ಗೆ ತಿಳಿದುಕೊಂಡಿರುವುದಕ್ಕಿಂತ ಹೆಚ್ಚು ಅವರಿಗೆ ತಿಳಿದಿದೆ ಎಂದು ಭಾವಿಸುವಂತೆ ಮಾಡುವರು. ಇವರೊಂದಿಗೆ ವಾದ ಮಾಡುವುದು ನಿಮ್ಮ ಗುರಿಯನ್ನು ನೀವು ತೋಡಿಕೊಂಡಂತೆ!

   ತುಲಾ: ಸೆ.24-ಅ.23

  ತುಲಾ: ಸೆ.24-ಅ.23

  ಇವರು ಸಮಚಿತ್ತತೆಯೊಂದಿಗೆ ಸಮತೋಲನ ಬಯಸುವ ವ್ಯಕ್ತಿಗಳು. ಈ ವ್ಯಕ್ತಿಗಳೊಂದಿಗೆ ವಾದವನ್ನು ನೀವು ಸೋಲಬಹುದು. ಯಾಕೆಂದರೆ ಇವರಲ್ಲಿ ಬದುಕುಳಿಯುವ ಸಲಕರಣೆಗಳು ಇರುವುದು. ಇದು ಅವರಿಗೆ ಸಂಪೂರ್ಣ ಶಕ್ತಿ ತೋರಿಸಲು ಬಿಡಲ್ಲ. ಇದರಿಂದಾಗಿ ಅವರು ತುಂಬಾ ನಿಷ್ಕ್ರೀಯ ಆಕ್ರಮಣಕಾರಿಯಾಗಬಲ್ಲರು. ಇವರೊಂದಿಗೆ ಯಾರೂ ವಾದಿಸಲು ಹೋಗಬಾರದು. ಯಾಕೆಂದರೆ ನಿಮಗೆ ಸೋತ ಭಾವನೆಯಾಗು ವುದು. ಇವರೊಂದಿಗೆ ವಾದಿಸುವುದು ನಿಮಗೆ ಅತೃಪ್ತಿ ಉಂಟು ಮಾಡುವುದು. ಯಾಕೆಂದರೆ ನೀವು ಹೇಳುವ ಪ್ರತಿಯೊಂದು ವಿಚಾರವು ಅವರಿಗೆ ಸರಿಯಾಗಿಲ್ಲ ಮತ್ತು ಇದರ ಬಗ್ಗೆ ವಾದಿಸಿ ಪ್ರಯೋಜನವಿಲ್ಲವೆನ್ನುವಂತೆ ಮಾಡುವರು.

  English summary

  Zodiac Signs With Whom You Should Never Argue

  These zodiacs will make you feel hopeless and as a loser, even if you seem to be on the right side! Check out the list, and if you belong to any of these signs, then it is a moment you would love to brag about as arguing and never losing the arguments is what makes you feel proud after all.
  Story first published: Tuesday, July 10, 2018, 14:10 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more