For Quick Alerts
ALLOW NOTIFICATIONS  
For Daily Alerts

ಜೂನ್ 9: ಶನಿವಾರದ ದಿನ ಭವಿಷ್ಯ

|

ಸಾಕು ಎಂದವ ಸಾಹುಕಾರನಾಗುತ್ತಾನೆ. ಬೇಕು ಎಂದವ ಬಡವನಾಗುತ್ತಾನೆ. ತೃಪ್ತಿ ಎನ್ನುವುದೇ ನಿಜವಾದ ಶ್ರೀಮಂತಿಕೆ. ನಾವು ಏನನ್ನು ಪಡೆದುಕೊಂಡಿದ್ದೇವೋ ಅದರಲ್ಲಿ ನಮಗೆ ಸಂತೋಷ ಹಾಗೂ ತೃಪ್ತಿಯನ್ನು ಕಂಡುಕೊಂಡರೆ ಜೀವನವು ಆನಂದದಿಂದ ಕೂಡಿರುತ್ತದೆ. ತೃಪ್ತಿ ಎನ್ನುವುದು ನಮಗಿದ್ದರೆ ಜೀವನದಲ್ಲಿ ಬೇಸರ ಉಂಟಾಗದು. ಮನಸ್ಸು ಎಷ್ಟು ಸರಳ ಬಯಕೆ ಹಾಗೂ ಉತ್ತಮ ವಿಚಾರಗಳ ಬಗ್ಗೆ ಆಸಕ್ತಿ ಹೊಂದುತ್ತದೆಯೋ ಅಲ್ಲಿಯ ತನಕ ಬದುಕು ಸುಲಭ ಹಾಗೂ ಸೊಗಸಾಗಿ ಕಾಣುವುದು.

ಕಂಡ ಕನಸುಗಳು ಅಥವಾ ಯೋಜಿತ ಯೋಜನೆಗಳು ನಮ್ಮ ಆಕಾಂಕ್ಷೆಗಳಿಗೆ ಸರಿಯಾಗಿ ಆಗಿಲ್ಲ ಎಂದಾದರೆ ಭರವಸೆಯನ್ನು ಕಳೆದುಕೊಳ್ಳಬಾರದು. ರಾತ್ರಿ ಕಳೆದು ಬೆಳಗಾದಂತೆ ಸತತ ಪ್ರಯತ್ನ ಹಾಗೂ ನಿಷ್ಠೆಯಿಂದ ಉತ್ತಮ ಫಲವು ದೊರೆಯುತ್ತದೆ ಎನ್ನುವುದನ್ನು ಅರಿಯಬೇಕು. ಉತ್ತಮ ಬದಲಾವಣೆ ಹಾಗೂ ಸಕಾರಾತ್ಮಕ ಚಿಂತನೆಗಳ ಕಡೆಗೆ ನಾವು ನಡೆಯಬೇಕೆಂದರೆ ನಮ್ಮ ಕುಂಡಲಿಯಲ್ಲಿ ಇರುವ ಗ್ರಹಗತಿಗಳ ಪ್ರಭಾವ ಸೂಕ್ತವಾಗಿರಬೇಕು.

ಶನಿವಾರವಾದ ಇಂದು ನಿಮ್ಮ ಗ್ರಹಗತಿಗಳು ರಾಶಿಚಕ್ರದ ಅನುಸಾರವಾಗಿ ಯಾವೆಲ್ಲಾ ಹೊಸ ಅನುಭವಗಳನ್ನು ತಂದುಕೊಡುತ್ತದೆ? ಬದುಕು ಹೇಗೆ ವಿಭಿನ್ನ ಅನುಭವಗಳನ್ನು ಸ್ವೀಕರಿಸುವುದು ಎನ್ನುವುದನ್ನು ತಿಳಿಯಲು ಈ ಮುಂದೆ ವಿವರಿಸಲಾದ ರಾಶಿ ಭವಿಷ್ಯದ ವಿವರಣೆಯನ್ನು ಪರಿಶೀಲಿಸಿ.....

ಮೇಷ

ಮೇಷ

ಸ್ಥಿರತೆಯ ಮನೋಭಾವವನ್ನು ಹೊಂದಬೇಕು. ಇದೀಗ ನಿಮ್ಮ ತಾಳ್ಮೆಗೆ ಪರೀಕ್ಷೆಯ ಸಮಯ. ಹಾಗಾಗಿ ಎಲ್ಲಾ ವಿಚಾರದಲ್ಲೂ ಆದಷ್ಟು ಎಚ್ಚರಿಕೆಯಿಂದ ಇರಬೇಕು. ನೀವು ನಿಮ್ಮ ನೆಚ್ಚಿನ ಜನರೊಂದಿಗೆ ಒಂದಿಷ್ಟು ಸಮಯವನ್ನು ಕಳೆಯಿರಿ. ಇದೀಗ ನಿಮಗೆ ವಿಶ್ರಾಂತಿಯ ಸಮಯ ಎನ್ನಬಹುದು. ನಿಮಗೆ ಒಂದಿಷ್ಟು ವಿಶ್ರಾಂತಿಯ ಅಗತ್ಯವಿದೆ. ಅದಕ್ಕೆ ಈ ಸಮಯ ಸೂಕ್ತ ಎಂದು ಹೇಳಬಹುದು.

ವೃಷಭ

ವೃಷಭ

ಇಂದು ನಿಮಗೆ ಗ್ರಹಗತಿಗಳು ಹೆಚ್ಚಿನ ಭಾವನಾತ್ಮಕ ಶಕ್ತಿಯನ್ನು ನೀಡುತ್ತವೆ. ನಿಮ್ಮ ಬೆಂಬಲ ಹಾಗೂ ಸಹಕಾರವನ್ನು ನೀಡುವುದರ ಮೂಲಕ ಇತರಿಗೆ ಇಂದು ಸಹಾಯ ಮಾಡಿ. ನಿಮ್ಮ ಕಾಳಜಿ ಹಾಗೂ ಪೋಷಣೆಯ ಪರಿಯು ಇತರರಿಂದ ಮೆಚ್ಚುಗೆಯನ್ನು ಪಡೆಯುವುದು. ಇತರರೊಂದಿಗೆ ಹಂಚಿಕೊಳ್ಳುವುದರಲ್ಲಿ ಹಿಂಜರಿಯಬೇಡಿ. ಇದರಿಂದ ನಿಮಗೆ ಸಾಕಷ್ಟು ದೊರೆಯುವುದು.

ಮಿಥುನ

ಮಿಥುನ

ಗ್ರಹಗತಿಗಳ ಪ್ರಕಾರ ಇಂದು ನಿಮ್ಮ ಗುರಿ ಸಾಧಿಸಲು ಹೆಚ್ಚು ಒತ್ತಾಯ ಮಾಡಲಾಗುವುದು. ಮುಂದಿನ ಎರಡು ದಿನದಲ್ಲಿ ನಿಮ್ಮ ನಂಬಿಕೆಗಳ ಬಗ್ಗೆ ಭಾವೋದ್ವೇಗ ಅನುಭವಿಸುವಿರಿ. ಜನರು ಸದಾ ನಿಮ್ಮ ಅಭಿಪ್ರಾಯಗಳಿಗೆ ಒಪ್ಪಿಗೆ ನೀಡುವುದಿಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳಿ.

ಕರ್ಕ

ಕರ್ಕ

ಇಂದು ನೀವು ಸೌಹಾರ್ದ ಶಕ್ತಿಯನ್ನು ಅತ್ಯಂತ ಪ್ರಾಯೋಗಿಕ ವಿಧಾನದಲ್ಲಿ ಬಳಸುವಿರಿ. ಗುಂಪಿನಲ್ಲಿ ದೀರ್ಘಕಾಲದ ಊಟಕ್ಕೆ ಮುಂದಾಗುವಿರಿ. ಆದರೆ ನಿಮ್ಮ ವ್ಯಾಪಾರ, ಮಕ್ಕಳು, ಕುಟುಂಬ, ಪೋಷಕರು, ಶಿಕ್ಷಕರು ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಗುಂಪಿನಲ್ಲಿ ಅಥವಾ ಸಭೆಯಲ್ಲಿ ಇರುವಾಗ ಮಾತನಾಡಬೇಡಿ. ಒಂದಿಷ್ಟು ಸಮಯದವರೆಗೆ ನೀವು ಮೇಲೆಬಂದ ಸನ್ನಿವೇಶಗಳನ್ನು ಅಥವಾ ಸಮಯವನ್ನು ಮರೆಯಬೇಕಾಗುವುದು.

ಸಿಂಹ

ಸಿಂಹ

ಇಂದು ನಿಮಗೆ ಸ್ನೇಹಿತರು ಉತ್ತೇಜನ ಹಾಗೂ ಬೆಂಬಲವನ್ನು ನೀಡುವರು. ಹಾಗಾಗಿ ಅವರು ನೀಡುವ ಉತ್ತೇಜನದಿಂದ ಪ್ರಯೋಜನವನ್ನು ಪಡೆದುಕೊಳ್ಳಿ. ಇಂದು ಹೆಚ್ಚಿನ ಕೆಲಸವನ್ನು ಪಡೆದುಕೊಳ್ಳಲು ನಿಮಗೆ ಸ್ವಲ್ಪ ಕಷ್ಟವಾಗಬಹುದು. ಆದರೆ ನಾಳೆ ವ್ಯಾಪಾರಕ್ಕಾಗಿ ಸಾಕಷ್ಟು ಸಮಯ ಸಿಗುವುದು. ಈ ನಿಟ್ಟಿನಲ್ಲಿಯೇ ಮುಂದಿನ ದಿನದಲ್ಲಿ ಸಿಗುವುದನ್ನು ನಿಧಾನವಾಗಿ ಪಡೆದುಕೊಳ್ಳಿ.

ಕನ್ಯಾ

ಕನ್ಯಾ

ಇಂದು ನೀವು ಹೆಚ್ಚು ಆತ್ಮವಿಶ್ವಾಸವನ್ನು ಹೊಂದುವಿರಿ. ನಿಮ್ಮ ಇಂದ್ರಿಯಗಳು ಎಲ್ಲವನ್ನು ನೆನಪಿಸಿಕೊಳ್ಳಲು ಅನುಮತಿ ನೀಡುವುದು. ಕೆಲವು ಸನ್ನಿವೇಶಗಳು ನಿಮ್ಮ ಮೇಲೆ ಪ್ರಭಾವ ಬೀರಲು ಧ್ವನಿಸುತ್ತವೆ. ನಿಮಗಾಗಿ ಕೆಲವು ಶಾಂತ ಸಮಯವನ್ನು ಆನಂದಿಸಿ.

ತುಲಾ

ತುಲಾ

ಇಂದು ನೀವು ಕೆಲವು ಬಲವಾದ ಅಭಿಪ್ರಾಯವನ್ನು ಅನುಭವಿಸುವಿರಿ. ಮೂರ್ಖರು ನೀಡುವ ಸಲಹೆ ಹಾಗೂ ಸಂತೋಷವನ್ನು ಅನುಭವಿಸುವುದಿಲ್ಲ. ಅನಗತ್ಯ ಮುಖಾಮುಖಿಯಾಗುವುದರಿಂದ ದೂರವಿರಿ. ಕೆಲಸದಿಂದ ಉದ್ವಿಗ್ನತೆ ಮತ್ತು ನಿರಾಶೆ ಉಂಟಾಗಬಹುದು. ಆದಷ್ಟು ಶಾಂತವಾಗಿರುವುದರಿಂದ ಈ ದಿನದ ಸಮತೋಲನವನ್ನು ಮರಳಿ ಪಡೆಯುವಿರಿ.

ವೃಶ್ಚಿಕ

ವೃಶ್ಚಿಕ

ನಿಮ್ಮ ಅವಶ್ಯಕತೆ ಮತ್ತು ಬದಲಾವಣೆಗಳ ಭಯವು ಸಂಘರ್ಷಕ್ಕೆ ಬರುವುದನ್ನು ನೀವು ಕಾಣಬಹುದು. ಹಣಕಾಸಿಗೆ ಸಂಬಂಧಿಸಿದ ಕೆಲವು ಅಭಿಪ್ರಾಯಗಳಲ್ಲಿ ಇಂದು ಬದಲಾವಣೆಯನ್ನು ಕಾಣುವಿರಿ.

ಧನು

ಧನು

ಇಂದು ನೀವು ಸೃಜನಾತ್ಮಕವಾದ ದೃಷ್ಟಿಕೋನದಿಂದಾಗಿ ವಾಸ್ತವಿಕತೆಯ ಬಗ್ಗೆ ನಿಜವಾದ ಅರ್ಥವನ್ನು ಕಂಡುಕೊಳ್ಳುವಿರಿ. ಇದರಿಂದ ನೀವು ಸೂಕ್ತ ಆಲೋಚನಾ ಕ್ರಮವನ್ನು ತಿಳಿದುಕೊಳ್ಳುವಿರಿ. ಶಬ್ದ ಮತ್ತು ಆಲೋಚನೆಗಳನ್ನು ಎಂದಿಗೂ ಕಡೆಗಣಿಸದಿರಿ. ಉತ್ತಮವಾದ ಅಥವಾ ಆರೋಗ್ಯಕರವಾದ ಆಸೆಗಳನ್ನು ಹೊಂದಬೇಕು ಎನ್ನುವುದನ್ನು ತಿಳಿಯುವಿರಿ.

 ಮಕರ

ಮಕರ

ಇಂದು ನೀವು ಎಲ್ಲೆಲ್ಲಿ ಇರುವಿರೋ ಅಲ್ಲೆಲ್ಲಾ ಪ್ರಬಲವಾದ ಉಪಸ್ಥಿತಿಯನ್ನು ಹೊಂದುವಿರಿ. ನಿಮ್ಮ ಯೋಜನೆಗಳೊಂದಿಗೆ ಮುಂದುವರಿಯಲು ಇಂದು ಅದ್ಭುತವಾದ ದಿನ. ಮದುವೆ ವಿಚಾರ ಪ್ರಸ್ತಾಪ ಮಾಡಲು, ಮನೆ ಖರೀದಿಸಲು ಅಥವಾ ಹೊಸ ಕೆಲಸ ಪ್ರಾರಂಭಿಸಲು ಉತ್ತಮವಾದ ದಿನ ಎನ್ನಲಾಗುವುದು. ಇಂದು ನೀವು ಅದೃಷ್ಟವನ್ನು ಹೊಂದಿರುವ ದಿನ. ಇತರರಿಗೆ ಸಹಾನುಭೂತಿಯನ್ನು ತೋರಿ. ನಿಮಗೆ ಒಳ್ಳೆಯದಾಗುವುದು.

ಕುಂಭ

ಕುಂಭ

ಇಂದು ನಿಮ್ಮ ಜೀವನದಲ್ಲಿ ಒಂದಷ್ಟು ಒತ್ತಡ ಉಂಟಾಗಬಹುದು. ಹಾಗಾಗಿ ಒಂದಿಷ್ಟು ವಿಶ್ರಾಂತಿ ಪಡೆಯುವುದು ಸೂಕ್ತ. ಎರಡು ದಿನದಲ್ಲಿ ನಿಮ್ಮ ಶ್ರಮಕ್ಕೆ ಸೂಕ್ತ ಯಶಸ್ಸು ದೊರೆಯುವುದು. ಹಾಗಾಗಿ ಜವಾಬ್ದಾರಿಯುತವಾದ ಕೆಲಸ ಮಾಡುವಾಗ ಅದರ ಕುರಿತು ಎರಡು ಬಾರಿ ಚಿಂತನೆ ನಡೆಸುವುದು ಸೂಕ್ತ.

ಮೀನ

ಮೀನ

ಇಂದು ನಿಮ್ಮ ಗ್ರಹಗತಿಗಳಿಂದಾಗಿ ನಿಮ್ಮ ಭವಿಷ್ಯವು ಬೆಳಗುವುದು. ವೈಯಕ್ತಿಕ ಸಂಬಂಧಗಳಲ್ಲಿ ನಿಮ್ಮನ್ನು ನೀವು ವ್ಯಕ್ತಪಡಿಸಿಕೊಳ್ಳಲು ಸುಲಭವಾಗುವುದು. ಇಂದು ನೀವು ಹಲವು ಅಡೆತಡೆಗಳನ್ನು ಜಯಿಸಲು ಸಾಧ್ಯವಾಗುವುದು. ಹಾಗಾಗಿ ನಿಮಗೆ ನೀವೆ ಹೆಚ್ಚು ಮೌಲ್ಯಯುತ ವ್ಯಕ್ತಿಯಾಗಿ ಉಳಿಯುವಿರಿ.

English summary

your-daily-horoscope-9-june

ಸಾಕು ಎಂದವ ಸಾಹುಕಾರನಾಗುತ್ತಾನೆ. ಬೇಕು ಎಂದವ ಬಡವನಾಗುತ್ತಾನೆ. ತೃಪ್ತಿ ಎನ್ನುವುದೇ ನಿಜವಾದ ಶ್ರೀಮಂತಿಕೆ. ನಾವು ಏನನ್ನು ಪಡೆದುಕೊಂಡಿದ್ದೇವೋ ಅದರಲ್ಲಿ ನಮಗೆ ಸಂತೋಷ ಹಾಗೂ ತೃಪ್ತಿಯನ್ನು ಕಂಡುಕೊಂಡರೆ ಜೀವನವು ಆನಂದದಿಂದ ಕೂಡಿರುತ್ತದೆ. ತೃಪ್ತಿ ಎನ್ನುವುದು ನಮಗಿದ್ದರೆ ಜೀವನದಲ್ಲಿ ಬೇಸರ ಉಂಟಾಗದು. ಮನಸ್ಸು ಎಷ್ಟು ಸರಳ ಬಯಕೆ ಹಾಗೂ ಉತ್ತಮ ವಿಚಾರಗಳ ಬಗ್ಗೆ ಆಸಕ್ತಿ ಹೊಂದುತ್ತದೆಯೋ ಅಲ್ಲಿಯ ತನಕ ಬದುಕು ಸುಲಭ ಹಾಗೂ ಸೊಗಸಾಗಿ ಕಾಣುವುದು.Known among many as a rock of stability, your patience may be tested during this holiday season. Spend time with your favourite people and enjoy relaxing pastimes today. You deserve a break, so take one now!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more