For Quick Alerts
ALLOW NOTIFICATIONS  
For Daily Alerts

ಜನ್ಮ ತಿಂಗಳ ಪ್ರಕಾರ 2019ರ ನಿಮ್ಮ ಭವಿಷ್ಯವನ್ನು ತಿಳಿಯಿರಿ

|

ವರ್ಷದಲ್ಲಿ ಬರುವ 12 ತಿಂಗಳುಗಳು ಒಂದೊಂದು ವಿಶೇಷತೆಯನ್ನು ಒಳಗೊಂಡಿದೆ. ಪ್ರಕೃತಿಗೆ ಅನುಗುಣವಾಗಿ ಚಳಿ, ಮಳೆ, ಬೇಸಿಗೆ ಕಾಲಗಳೆಂದು ವಿಂಗಡಿಸಲಾಗುವುದು. ಈ ಕಾಲಗಳು ತಿಂಗಳಿಗನುಗುಣವಾಗಿಯೂ ಇರುತ್ತವೆ. ವಾತಾವರಣದಲ್ಲಿ ಪಂಚ ಭೂತಗಳ ಬದಲಾವಣೆಯು ನೈಸರ್ಗಿಕವಾಗಿ ನಡೆಯುತ್ತವೆ. ಅವು ನಮ್ಮ ಭವಿಷ್ಯ ಹಾಗೂ ನಿತ್ಯದ ಜೀವನ ಕ್ರಮದ ಮೇಲೂ ಗಮನಾರ್ಹ ಬದಲಾವಣೆಯನ್ನು ಉಂಟುಮಾಡುತ್ತವೆ ಎಂದು ಹೇಳಬಹುದು. ಕೆಲವು ತಿಂಗಳುಗಳು ನಮ್ಮ ವೃತ್ತಿ ಹಾಗೂ ಆರೋಗ್ಯದ ಮೇಲೆ ಹೆಚ್ಚಿನ ಪ್ರಭಾವ ಬೀರುವುದು ಸುಳ್ಳಲ್ಲ.

ಹಾಗಾಗಿಯೇ ತಿಂಗಳಿಗೆ ಅನುಗುಣವಾಗಿ ವ್ಯಕ್ತಿಯ ವರಮಾನದಲ್ಲಿ ಏರಿಕೆ ಹಾಗೂ ಇಳಿಕೆ ಉಂಟಾಗುವುದು. ಅದು ವ್ಯಾಪಾರಸ್ತರು ಅಥವಾ ಸ್ವಂತ ಉದ್ಯೋಗದಲ್ಲಿ ತೊಡಗಿಕೊಳ್ಳುವವರ ಮೇಲೆ ಹೆಚ್ಚಿನ ಬದಲಾವಣೆಗಳು ಉಂಟಾಗುತ್ತವೆ ಎಂದು ಹೇಳಬಹುದು. ಅಂತೆಯೇ ಕೆಲವೊಮ್ಮೆ ವಾತಾವರಣಕ್ಕೆ ಅನುಗುಣವಾಗಿ ಆರೋಗ್ಯ ಸಮಸ್ಯೆ, ಮಾನಸಿಕ ಚಿಂತನೆಗಳು ಮತ್ತು ಮನೆಯಲ್ಲಿ ಪರಿಸ್ಥಿತಿಗಳ ಪ್ರಭಾವ ಎಲ್ಲವೂ ವಿಭಿನ್ನ ಬದಲಾವಣೆಯನ್ನು ತೋರುತ್ತವೆ ಎಂದು ಹೇಳಲಾಗುವುದು.

ಪ್ರತಿಯೊಂದು ಮಾಸವು ವಿಭಿನ್ನ ದೇವಾನು ದೇವತೆಗಳಿಗೆ ಪ್ರಸಿದ್ಧವಾಗಿರುತ್ತವೆ. ಆಗ ನಾವು ಜನಿಸಿದ ಮಾಸಕ್ಕೆ ಅನುಗುಣವಾಗಿ ಗ್ರಹಗತಿಗಳ ಪ್ರಭಾವ ಹಾಗೂ ಬದಲಾವಣೆಗಳು ಪ್ರಮುಖ ವಾಗಿರುತ್ತದೆ. ಅವುಗಳ ಆಧಾರದ ಮೇಲೆಯೇ ನಮ್ಮ ಭವಿಷ್ಯವನ್ನು ನಿರ್ಧರಿಸಬಹುದು. ಆಯಾ ತಿಂಗಳಲ್ಲಿ ಬರುವ ನಕ್ಷತ್ರಗಳಿಗೆ ಅನುಗುಣವಾಗಿ ನಮ್ಮ ಜನ್ಮ ನಕ್ಷತ್ರ ಹಾಗೂ ಅದೃಷ್ಟಗಳು ನಿರ್ಧಾರವಾಗುವುದು. ಅವುಗಳಿಗೆ ತಕ್ಕಂತೆಯೇ ನಮ್ಮ ಜೀವನದ ಉದ್ದಕ್ಕೂ ಅದೃಷ್ಟ ಹಾಗೂ ದುರಾದೃಷ್ಟವು ನಿಂತಿರುತ್ತವೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾವು ಹುಟ್ಟಿದ ತಿಂಗಳು ನಮ್ಮ ಅದೃಷ್ಟದ ಬಗ್ಗೆ ವಿವಿರವಾದ ಮಾಹಿತಿಯನ್ನು ತೆರೆದಿಡುತ್ತವೆ. ಅವು ಪ್ರತಿಯೊಂದು ವರ್ಷದಲ್ಲೂ ವಿಭಿನ್ನವಾದ ಅನುಭವಗಳನ್ನು ನೀಡುತ್ತವೆ. ಇದೀಗ 2018ರ ವರ್ಷಕ್ಕೆ ನಮಸ್ಕಾರವನ್ನು ಹೇಳಿ 2019ರ ವರ್ಷಕ್ಕೆ ಸ್ವಾಗತವನ್ನು ಕೋರುವ ಸಮಯ. ಈ ವೇಳೆಯಲ್ಲಿ ಹೊಸ ವರ್ಷದ ಉದ್ದಕ್ಕೂ ನಿಮ್ಮ ಅದೃಷ್ಟಗಳು ಹೇಗಿರುತ್ತವೆ ಎನ್ನುವುದನ್ನು ನೀವು ಹುಟ್ಟಿದ ತಿಂಗಳಿಗೆ ಅನುಗುಣವಾಗಿ ವಿಷಯವನ್ನು ತಿಳಿಯಬಹುದು. ನಿಮಗೆ ನಿಮ್ಮ ಅದೃಷ್ಟದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬೇಕು ಎನ್ನುವ ಕುತೂಹಲವಿದ್ದರೆ ಬೋಲ್ಡ್ ಸ್ಕೈ ವಿವರಿಸಿರುವ ಮಾಸದ ಅದೃಷ್ಟ ವಿಷಯವನ್ನು ಅರಿಯಿರಿ...

ಜನವರಿ

ಜನವರಿ

ಜನವರಿ ತಿಂಗಳಲ್ಲಿ ಜನಿಸಿದ ವ್ಯಕ್ತಿಗಳಿಗೆ 2019ರ ವರ್ಷ ಜೀವನದ ಅತ್ಯಂತ ನಿರ್ಣಾಯಕವಾದ ವರ್ಷವಾಗಲಿದೆ. ನಿಮ್ಮ ಅದೃಷ್ಟದಲ್ಲಿ ಕೆಲಸ, ಪ್ರಣಯ, ಶಿಕ್ಷಣ ಸೇರಿದಂತೆ ಇನ್ನಿತರ ಪ್ರಮುಖ ವಿಚಾರದಲ್ಲಿಯೂ ಮಹತ್ವವಾದ ಸಾಧನೆಮತ್ತು ಆಚರಣೆಗಳೊಂದಿಗೆ ಅದೃಷ್ಟವು ಕೂಡಿರುತ್ತದೆ. ಈಗಾಗಲೇ ನೀವು ನಿಮ್ಮ ಭವಿಷ್ಯದ ಬಗ್ಗೆ ಅಥವಾ ಈ ವರ್ಷದ ಕೆಲಸ ಕಾರ್ಯಗಳಲ್ಲಿ ಸೂಕ್ತವಾದ ನಿಯಮ, ಯೋಜನೆ ಅಥವಾ ಗುರಿಯನ್ನು ಹೊಂದಿದ್ದೀರಿ ಎಂದಾದರೆ ಅವೆಲ್ಲವೂ ಸುಲಲಿತವಾಗಿ ನೆರವೇರುವುದು. ಅದಕ್ಕಾಗಿ ಅಧಿಕ ಚಿಂತನೆಯನ್ನು ಕೈಗೊಳ್ಳುವ ಅಗತ್ಯವಿಲ್ಲ. ಎಲ್ಲಾ ಕೆಲಸ ಕಾರ್ಯಗಳಲ್ಲೂ ಕ್ರಮಬದ್ಧತೆಯಿಂದ ಮುಂದುವರಿಯುವುದು ಸೂಕ್ತ. ನೀವು ನಿಮ್ಮ ಹೃದಯದ ಮಾತು ಹಾಗೂ ಅಗತ್ಯತೆಗಳನ್ನು ಅನುಸರಿಸಿ ನಡೆದರೆ ವರ್ಷವು ನಿಮ್ಮ ದಾರಿಯಲ್ಲಿಯೇ ಇರುತ್ತವೆ ಎನ್ನುವುದನ್ನು ನೆನಪಿಡಬೇಕು.

ಫೆಬ್ರುವರಿ

ಫೆಬ್ರುವರಿ

ಕಳೆದ ಎರಡು ತಿಂಗಳುಗಳಿಂದ ನೀವು ಪಡೆದುಕೊಳ್ಳಬೇಕು ಅಥವಾ ಸಾಧಿಸಬೇಕು ಎನ್ನುವ ಯಾವುದೇ ಯೋಜನೆಯನ್ನು ಹೊಂದಿದ್ದರೂ ಸಹ ಅವುಗಳೆಲ್ಲವೂ 2019ರ ವರ್ಷದಲ್ಲಿ ಪೂರ್ಣಗೊಳ್ಳುವುದು. ಅದರಿಂದ ಒಂದಿಷ್ಟು ಸಂತೋಷ ಹಾಗೂ ಸಮಾಧಾನವು ನಿಮಗೆ ಲಭಿಸುವುದು ಎಂದು ಹೇಳಲಾಗುವುದು. ನಿಮ್ಮ ಆಪ್ತರು ಹಾಗೂ ಸ್ನೇಹಿತರು ನಿಮ್ಮ ಉದಾರವಾದ ಗುಣವನ್ನು ಮೆಚ್ಚುವರು. ಅಲ್ಲದೆ ನಿಮ್ಮ ಬಗ್ಗೆ ಒಂದು ಬಗೆಯ ಸಂತುಷ್ಟ ಭಾವನೆಯನ್ನು ಹೊಂದುವರು ಎನ್ನುವುದನ್ನು ನೀವು ಸಹ ಗಮನಿಸಬಹುದು. 2019ರ ವರ್ಷ ನಿಮಗೆ ಅತ್ಯುತ್ತಮವಾದ ಸಮಯ ಅಥವಾ ಅದೃಷ್ಟದಿಂದ ಆರಂಭವಾಗುವುದು ಎನ್ನುವುದನ್ನು ಜ್ಯೋತಿಷ್ಯ ತಜ್ಞರು ಬಹಿರಂಗಪಡಿಸುತ್ತಾರೆ. ಕೆಲಸ ಕಾರ್ಯಗಳಲ್ಲಿ ಅಥವಾ ಯಾವುದೇ ವಿಷಯಗಳ ಕುರಿತು ಮಾತುಕತೆ ನಡೆಸುವಾಗ ಮುಖಾಮುಖಿಯಾಗಿ ಸಂವಹನ ನಡೆಸುವಿರಿ. ನಿಮ್ಮ ಸುತ್ತಲಿರುವ ಜನರು ನಿಮ್ಮನ್ನು ಸರಿಯಾಗಿ ಅರ್ಥಮಾಡಿಕೊಳ್ಳುವರು. ಅಲ್ಲದೆ ನೀವು ಹೇಳುವ ಅನೇಖ ನಿರ್ಧಾರಗಳಿಗೆ ಸಮ್ಮತಿಯನ್ನು ಸೂಚಿಸುವರು. ಈ ವರ್ಷ ನೀವು ನಿಮ್ಮ ಸ್ನೇಹಿತರು, ಕುಟುಂಬದವರು ಹಾಗೂ ಆಪ್ತರ ನಡುವೆ ಪ್ರಭಾವಶಾಲಿ ವ್ಯಕ್ತಿಯಂತೆ ಕಾಣುವಿರಿ. ನಿಮ್ಮ ಎಲ್ಲಾ ಆಲೋಚನೆಗಳನ್ನು ಸೂಕ್ತ ರೀತಿಯಲ್ಲಿ ಇರಿಸಿಕೊಳ್ಳಬೇಕು. ಜೊತೆಗೆ ನಿಮ್ಮ ಕನಸುಗಳೆಲ್ಲವೂ ವಾಸ್ತವಿಕ ರೂಪಕ್ಕೆ ಬರುವಂತೆ ಮಾಡಬೇಕು ಎಂದು ಸಲಹೆ ನೀಡಲಾಗುವುದು.

ಮಾರ್ಚ್

ಮಾರ್ಚ್

ಮಾರ್ಚ್ ತಿಂಗಳಲ್ಲಿ ಜನಿಸಿದವರಿಗೆ 2019ರ ವರ್ಷವು ಸಮೃದ್ಧತೆಯಿಂದ ಕೂಡಿರುತ್ತದೆ ಎಂದು ಹೇಳಲಾಗುವುದು. ಎಲ್ಲಾ ವಿಷಯದಲ್ಲೂ ಫಲಿತಾಂಶ ಹಾಗೂ ನಿರ್ಣಯಗಳು ನಿಮ್ಮ ಪರವಾಗಿ ಇರುತ್ತವೆ. ವರ್ಷದುದ್ದಕ್ಕೂ ಜೀವನದಲ್ಲಿ ಸಾಮರಸ್ಯವನ್ನು ಕಾಣುವಿರಿ. ಇವು ನಿಮ್ಮ ದೈನಂದಿನ ಜೀವನದ ಉತ್ಸಾಹ ಹಾಗೂ ಸಂತೋಷವನ್ನು ಕಲ್ಪಿಸಿಕೊಡುವುದು. ಈ ವರ್ಷ ನೀವು ಬಯಸಿದ ಎಲ್ಲಾ ವಿಷಯಗಳು ಸುಲಲಿತವಾಗಿ ನೆರವೇರುವುದು. ಇದಲ್ಲದೆ ನಿಮ್ಮ ಜೀವನದಲ್ಲಿ ಕೆಲವು ಪ್ರಮುಖ ಘಟನೆಗಳು ಸಂಭವಿಸುತ್ತವೆ. ಅವುಗಳನ್ನು ನೀವು ನೋಡುವಿರಿ. ನಿಮ್ಮ ಗುರಿ ಮತ್ತು ಉದ್ದೇಶಗಳ ವಿಷಯದಲ್ಲಿ ಹೆಚ್ಚಿನ ಗಮನ ನೀಡಬೇಕು ಎಂದು ಜ್ಯೋತಿಷ್ಯ ತಜ್ಞರು ಸಲಹೆ ನೀಡುತ್ತಾರೆ. ಒಟ್ಟಾರೆಯಾಗಿ ಹೊಸ ಅನ್ವೇಷಣೆಗಳಿಗೆ ಈ ವರ್ಷವು ಅಪಾರವಾದ ಅವಕಾಶಗಳನ್ನು ಒದಗಿಸಿ ಕೊಡುತ್ತವೆ. ಅಲ್ಲದೆ ಅವು ನಿಮ್ಮ ಮುಂದಿನ ಹಂತದ ಯಶಸ್ಸಿಗೂ ಕಾರಣವಾಗುವುದು.

Most Read: ಒಟ್ಟು 12 ರಾಶಿಚಕ್ರದವರಲ್ಲಿ ಐದು ರಾಶಿಯವರ ವರ್ತನೆಯು ತುಂಬಾ ಕ್ರೂರವಾಗಿರುತ್ತದೆಯಂತೆ!

ಏಪ್ರಿಲ್

ಏಪ್ರಿಲ್

ಈ ತಿಂಗಳಲ್ಲಿ ಜನಿಸಿದವರಿಗೆ 2019ರ ವರ್ಷದಲ್ಲಿ ಪ್ರೀತಿಯ ಗಾಳಿಯು ತಂಗಾಳಿಯನ್ನು ನೀಡುವುದು. ಪ್ರೀತಿಯ ವಿಷಯವು ಸದಾ ನಿಮ್ಮ ಪರವಾಗಿಯೇ ನಿಂತಿರುತ್ತವೆ ಎಂದು ಹೇಳಲಾಗುವುದು. ನೀವು ಎಲ್ಲಿಯವರೆಗೆ ನಿರ್ದಿಷ್ಟವಾದ ನಿರೀಕ್ಷೆಯನ್ನು ಹಾಗೂ ಭಾವನೆಯನ್ನು ಹೊಂದಿರುತ್ತೀರಿ ಅಲ್ಲಿಯವರೆಗೂ ಸಕಾರಾತ್ಮಕ ಬದಲಾವಣೆಗಳು ಅಥವಾ ವಾತಾವರಣವು ನಿಮ್ಮ ಪರವಾಗಿಯೇ ನಿಂತಿರುತ್ತದೆ. ನಿಮ್ಮ ಪ್ರೇರಣೆಯು ವರ್ಷದುದ್ದಕ್ಕೂ ಹೆಚ್ಚಾಗಿಯೇ ಇರುತ್ತದೆ. ತಾರ್ಕಿಕ ನಿರ್ಧಾರವನ್ನು ಕೈಗೊಳ್ಳುವುದರ ಬಗ್ಗೆ ನೀವು ನಿಮ್ಮ ಸಮಯವನ್ನು ಹೂಡಿಕೆ ಮಾಡಬೇಕಾಗುವುದು. ಇದರಿಂದ ನೀವು ನಿಮಗೆ ಉಂಟಾಗುವ ತೊಂದರೆ ಮತ್ತು ತಾರ್ಕಿಕ ನಿರ್ಧಾರಗಳನ್ನು ಕೈಗೊಳ್ಳುವುದರ ಬಗ್ಗೆ ಸಮಯವನ್ನು ಹೂಡಿಕೆ ಮಾಡಬೇಕಾಗುವುದು. ಇದರಿಂದ ನಿಮಗೆ ಉಂಟಾಗುವ ಅಡೆತಡೆಗಳನ್ನು ಅಥವಾ ತೊಂದರೆಗಳನ್ನು ಎದುರಿಸಲು ಸಹಾಯವಾಗುವುದು. ಕೆಲವೊಮ್ಮೆ ಉಂಟಾಗಲಿರುವ ವಿಪತ್ತನ್ನು ಸಹ ತಡೆಯಬಹುದು ಎಂದು ಹೇಳಲಾಗುವುದು.

ಮೇ

ಮೇ

ಮೇ ತಿಂಗಳಲ್ಲಿ ಜನಿಸಿದವರಿಗೆ 2019ರ ವರ್ಷವು ಮಹತ್ವವಾದ ಬದಲಾವಣೆಯನ್ನು ತಂದುಕೊಡುತ್ತದೆ. ಅದು ಮೇಲ್ನೋಟಕ್ಕೆ ನಿಮ್ಮ ಗಮನಕ್ಕೆ ಬರುವುದಿಲ್ಲ. ನೀವು ಅದನ್ನು ಅಷ್ಟಾಗಿ ಪರಿಶೀಲನೆ ಮಾಡುವುದಿಲ್ಲ ಎಂದು ಹೇಳಲಾಗುವುದು. ಆದರೆ ಅದೇ ವಿಷಯಗಳು ಅಧಿಕ ಸಮಯದ ನಂತರ ನಿಮ್ಮ ಪರವಾಗಿ ಕೆಲಸ ಮಾಡುತ್ತದೆ ಎನ್ನುವುದನ್ನು ನೀವು ಕಂಡುಕೊಳ್ಳುವಿರಿ. ಪ್ರತಿಭಾವಂತರಾದ ನೀವು ನಿಮ್ಮ ಜೀವನದ ಎಲ್ಲಾ ಕ್ಷೇತ್ರದಲ್ಲೂ ಯಶಸ್ಸನ್ನು ಕಂಡುಕೊಳ್ಳುವಿರಿ. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ನೀವು ದೊಡ್ಡ ಕನಸನ್ನು ಕಾಣಲು ಧೈರ್ಯವನ್ನು ಪಡೆದುಕೊಳ್ಳುವಿರಿ. ನಿಮಗೆ ಸಿಗುವ ಪ್ರತಿಯೊಂದು ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಲಾಗುವುದು. ಆಗಲೇ ನೀವು ಯಶಸ್ಸನ್ನು ಪಡೆದುಕೊಳ್ಳುವಿರಿ.

ಜೂನ್

ಜೂನ್

ಜೂನ್ ತಿಂಗಳಲ್ಲಿ ಜನಿಸಿದ ವ್ಯಕ್ತಿಗಳಿಗೆ 2019ರ ವರ್ಷವು ಉತ್ತಮ ಅವಕಾಶಗಳನ್ನು ಒದಗಿಸಿ ಕೊಡುವುದು. ನಿಮ್ಮ ಅಗತ್ಯತೆಗಳಿಗೆ ಅನುಗುಣವಾಗಿ ಅವಕಾಶಗಳ ಎಲ್ಲಾ ಬಾಗಿಲುಗಳು ತೆರೆದುಕೊಳ್ಳುತ್ತವೆ. ಅದೃಷ್ಟದ ಎಲ್ಲಾ ಬಾಗಿಲು ತೆರೆದುಕೊಳ್ಳುವುದರಿಂದ ನೀವು ಜೀವನದಲ್ಲಿ ಸಾಕಷ್ಟು ನೆಮ್ಮದಿ ಹಾಗೂ ಶಾಂತಿಯನ್ನು ಕಂಡುಕೊಳ್ಳುವಿರಿ. ಇದರಿಂದಾಗಿ ನೀವು ಜೀವನದಲ್ಲಿ ಸಾಕಷ್ಟು ಉಲ್ಲಾಸವನ್ನು ಕಾಣುವಿರಿ. ಕೆಲವು ಸಂದರ್ಭದಲ್ಲಿ ನೀವು ಸಾಕಷ್ಟು ಹೋರಾಟವನ್ನು ಎದುರಿಸಬೇಕಾದ ಪರಿಸ್ಥಿತಿಯನ್ನು ಎದುರುನೋಡಬೇಕಾಗುವುದು. ಆದರೆ ಫಲಿತಾಂಶವು ಉತ್ತಮ ರೀತಿಯಲ್ಲಿ ನಿಮ್ಮ ಪರವಾಗಿ ನಿಲ್ಲುವುದು. ಹಾಗಾಗಿ ನಿಮ್ಮ ಜೀವನದಲ್ಲಿ ನೀವು ಕೈಗೊಳ್ಳುವ ಯೋಜನೆಗಳ ಬಗ್ಗೆ ಉತ್ತಮ ನಿರ್ಣಯವನ್ನು ಕೈಗೊಳ್ಳಬೇಕಾಗುವುದು. ವರ್ಷ ಪೂರ್ತಿ ಆಶಾವಾದಿಯಾಗಿ ಇರಬೇಕು. ಇದರಿಂದ ನೀವು ಕಠಿಣ ಸಮಯವನ್ನು ಎದುರಿಸಲು ಸಹ ಸಹಾಯವಾಗುವುದು.

ಜುಲೈ

ಜುಲೈ

ಜುಲೈ ತಿಂಗಳಲ್ಲಿ ಜನಿಸಿದ ವ್ಯಕ್ತಿಗಳು ಸಹ 2019ರಲ್ಲಿ ಯಶಸ್ವೀ ವ್ಯಕ್ತಿಗಳಾಗಿರುತ್ತಾರೆ. ನಿಮ್ಮ ಪ್ರಾಮಾಣಿಕವಾದ ಸ್ವಭಾವದಿಂದಲೇ ನೀವು ಏಳಿಗೆಯನ್ನು ಕಂಡುಕೊಳ್ಳುವಿರಿ. ಈ ವರ್ಷ ನೀವು ಪ್ರಾಥಮಿಕ ಹಂತದಲ್ಲೂ ಸಾಕಷ್ಟು ತಾಳ್ಮೆಯಿಂದ ಇರುವುದು ಒಳ್ಳೆಯದು. ಇದರಿಂದ ಉತ್ತಮ ನಿರ್ಧಾರ ಕೈಗೊಳ್ಳಲು ನಿಮಗೆ ಸಹಾಯವಾಗುವುದು. ನಿಮ್ಮ ಗುಪ್ತವಾದ ಆಸೆಗಳನ್ನು ವಾಸ್ತವಿಕವಾಗಿ ತಿರುಗಿಸಿಕೊಳ್ಳುವ ಸಮಯವೂ ಹೌದು. ನಿಮ್ಮ ಆತಂಕ, ಅಭದ್ರತೆ, ಅನುಮಾನಾಸ್ಪದವಾದ ವ್ಯಕ್ತಿತ್ವಕ್ಕೆ ವಿದಾಯ ಹೇಳಬೇಕಾದ ಸಮಯ ಇದು. ನಿಮ್ಮ ಸುತ್ತಲು ನಡೆಯುವ ಅನೇಕ ವಿದ್ಯಮಾನಗಳಿಂದ ನೀವು ನಿಮ್ಮ ಕಣ್ಣುಗಳನ್ನು ತೆರೆದುಕೊಳ್ಳುವಿರಿ. ಅಲ್ಲದೆ ಧೈರ್ಯಶಾಲಿಗಳು ಎಂದು ತಿಳಿದುಕೊಳ್ಳಲು ಮುಂದಿನ ಹಂತಕ್ಕೆ ಹೋಗುವಿರಿ. ನೀವು ಆದಷ್ಟು ಧೈರ್ಯದಿಂದ ಇದ್ದರೆ ಒಳ್ಳೆಯ ಸಮಯ ಮತ್ತು ಅವಕಾಶಗಳು ನಿಮ್ಮ ಪರವಾಗಿ ಇರುತ್ತವೆ.

Most Read: 2019ರಲ್ಲಿ ಎಲ್ಲಾ 12 ರಾಶಿ ಚಕ್ರಗಳ ಮದುವೆ ಭವಿಷ್ಯವು ಹೇಗಿರಲಿದೆ?

ಆಗಸ್ಟ್

ಆಗಸ್ಟ್

ಆಗಸ್ಟ್ ತಿಂಗಳಲ್ಲಿ ಜನಿಸಿದವರಿಗೆ 2019ರ ವರ್ಷವು ಹೊಸ ಭಾಗವನ್ನು ಅಥವಾ ಹೊಸತನವನ್ನು ಕಾಣುವ ವರ್ಷವಾಗಿರುತ್ತದೆ. ನಿಮ್ಮ ಜೀವನದ ಬಗ್ಗೆ ನ್ಯಾಯಯುತವಾದ ಮೌಲ್ಯಮಾಪನ ಮಾಡಲು ಸಮಯವನ್ನು ಹುಡುಕುವ ವರ್ಷ ಇದಾಗಿರುತ್ತದೆ. ನೀವು ನಿಮ್ಮ ಗುರಿ ಮತ್ತು ಕನಸುಗಳ ಬಗ್ಗೆ ಗಂಭೀರವಾಗಿ ಯೋಚಿಸಲು ಪ್ರಾರಂಭಿಸುವಿರಿ. ನಿಮ್ಮ ಪ್ರಮುಖ ಕನಸುಗಳ ಬಗ್ಗೆ ಗಂಭೀರವಾದ ಯೋಚನೆಯನ್ನು ಕೈಗೊಳ್ಳುವಿರಿ. ವರ್ಷ ಪೂರ್ತಿ ನೀವು ವಾಸ್ತವಿಕ ಚಿಂತನೆಗಳಿಗೆ ಹೆಚ್ಚಿನ ಆದ್ಯತೆ ನೀಡುವಿರಿ. ಅಲ್ಲದೆ ಅದರ ಬಗ್ಗೆಯೇ ಸಾಕಷ್ಟು ಗಂಭೀರ ಚಿಂತನೆಗಳನ್ನು ನಡೆಸುವಿರಿ. ನಿಮ್ಮ ದಾರಿಯಲ್ಲಿ ನೀವು ಹೊಸ ಸವಾಲುಗಳನ್ನು ಎದುರಿಸಲು ಸಿದ್ಧರಾಗುವಿರಿ. ಅಲ್ಲದೆ ಯಾವುದೇ ತೊಂದರೆಗಳಿಲ್ಲದೆ ಅದನ್ನು ಎದುರಿಸುವಿರಿ ಎಂದು ಜ್ಯೋತಿಷ್ಯ ತಜ್ಞರು ಬಹಿರಂಗಪಡಿಸುತ್ತಾರೆ.

ಸಪ್ಟೆಂಬರ್

ಸಪ್ಟೆಂಬರ್

ನಿಮ್ಮ ನಿರೀಕ್ಷೆಯಲ್ಲಿರುವ ಚಿಂತನೆಗಳಿಗೆ ಹಾಗೂ ಸಂಬಂಧಗಳ ಬಗ್ಗೆ ಉತ್ತಮ ಬಂಧವನ್ನು ಬೆಸೆಯುವ ವರ್ಷವಾಗಲಿದೆ. ಹೊಸ ಬಂಧವು ನಿಮಗೆ ಉತ್ತಮ ಆಶೀರ್ವಾದವನ್ನು ಕಲ್ಪಿಸುವುದು. ವರ್ಷದ ಮೊದಲ ಕೆಲವು ತಿಂಗಳಲ್ಲಿ ನೀವು ಕಡಿಮೆ ಪ್ರಮಾಣದಲ್ಲಿ ಅದೃಷ್ಟವನ್ನು ಪಡೆದುಕೊಳ್ಳುವಿರಿ. ಕೆಲವೊಂದು ವಿಷಯವು ನಿಮ್ಮ ಪರವಾಗಿ ಇಲ್ಲದೆ ಹೋಗಬಹುದು. ಇನ್ನೂ ಕೆಲವೊಂದು ನಿಮ್ಮ ಕಾಲ್ಪನಿಕ ವಿಷಯವಾಗಿರಬಹುದು. ನೀವು ನಿಮ್ಮ ಹೃದಯ ಮತ್ತು ಕನಸುಗಳಿಗೆ ಅನುಸಾರವಾಗಿ ನಿಮ್ಮ ಮನಸ್ಸನ್ನು ಸಕಾರಾತ್ಮಕ ವಿಷಯಗಳ ಕಡೆಗೆ ತಿರುಗಿಸಬೇಕು. ಭವಿಷ್ಯದ ಯೋಜನೆಗಳ ಕಡೆಗೆ ಹೆಚ್ಚಿನ ಗಮನ ಹಾಗೂ ಪ್ರಯತ್ನವನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಲಾಗುವುದು.

ಅಕ್ಟೋಬರ್

ಅಕ್ಟೋಬರ್

2019 ರ ವರ್ಷವು ನಿಮಗೆ ಹೊಸ ಸಂಬಂಧಗಳ ತಾಜಾ ಗಾಳಿಯನ್ನು ತಂದುಕೊಡುವುದು. ನೀವು ಬಲು ಸುಲಭವಾಗಿ ಜನರನ್ನು ನಂಬುವಿರಿ. ಆದರೆ ನಿಮ್ಮ ಹೃದಯದ ವಿಷಯಗಳಲ್ಲಿ ಸಾಕಷ್ಟು ಚಿಂತನೆ ನಡೆಸುವಿರಿ. ಈ ಕುರಿತು ಅಧಿಕ ಚಿಂತನೆಯ ಅಗತ್ಯ ಇರುವುದಿಲ್ಲ ಎಂದು ಹೇಳಲಾಗುವುದು. ನಿಮ್ಮ ಜೀವನದಲ್ಲಿ ಬರುವ ವ್ಯಕ್ತಿಯು ನಿಮ್ಮ ಮುಂದಿನ ಜೀವನದಲ್ಲಿ ಉತ್ತಮ ಅನುಭವ ಹಾಗೂ ಸಹಕಾರವನ್ನು ನೀಡುವರು. ನೀವು ಸಾಕಷ್ಟು ಉತ್ತಮ ಅನುಭವಗಳನ್ನು ಪಡೆದುಕೊಳ್ಳುವಿರಿ. ನೀವು ನಿಮ್ಮ ಗಮನವನ್ನು ದೀರ್ಘಾವಧಿಯ ಯೋಜನೆಯ ಬಗ್ಗೆ ಕೇಂದ್ರೀಕರಿಸಿ. ಇದರಿಂದ ಸಾಕಷ್ಟು ಮಾನಸಿಕ ಶಾಂತಿಯನ್ನು ಕಂಡುಕೊಳ್ಳುವಿರಿ. ಆಧ್ಯಾತ್ಮಿಕ ಹಾದಿಯಲ್ಲಿ ಸಾಗಲು ನಿಮ್ಮ ಮಾನಸಿಕ ಸ್ಥಿತಿಯು ಸಿದ್ಧವಾಗುವುದು. ಅಲ್ಲದೆ ಆ ಕುರಿತು ಹೆಚ್ಚಿನ ಆಸಕ್ತಿಯನ್ನು ಪಡೆದುಕೊಳ್ಳುವಿರಿ. ಈ ವರ್ಷದಲ್ಲಿ ಸಾಕಷ್ಟು ವಿಷಯಗಳು ನಿಮ್ಮ ಪರವಾಗಿಯೇ ಇರುತ್ತದೆ ಎಂದು ಹೇಳಲಾಗುವುದು.

Most Read: 2019ರಲ್ಲಿ ಮೂರು ರಾಶಿಯವರು ವೃತ್ತಿ ಜೀವನದಲ್ಲಿ ಸ್ಟಾರ್ ರೀತಿಯಲ್ಲಿ ಯಶಸ್ಸನ್ನು ಕಾಣುವರು

ನವೆಂಬರ್

ನವೆಂಬರ್

ಈ ಮಾಸದಲ್ಲಿ ಜನಿಸಿದ ವ್ಯಕ್ತಿಗಳಿಗೆ 2019ರ ವರ್ಷವು ಸಂತೋಷದಿಂದಲೇ ಪೂರ್ಣಗೊಳ್ಳುತ್ತದೆ. ವೃತ್ತಿ ಜೀವನದಲ್ಲಿ ಮತ್ತು ಇತರ ಪ್ರಾಪಂಚಿಕ ವಿಷಯಗಳಲ್ಲಿ ಸಾಕಷ್ಟು ಕಠಿಣ ಸಮಯವನ್ನು ಅನುಭವಿಸಬೇಕಾಗುವುದು. ಯಾವುದೇ ವಿಷಯದ ಬಗ್ಗೆ ಪ್ರತಿಫಲವನ್ನು ಪಡೆದುಕೊಳ್ಳುವುದರ ಕುರಿತು ಸಾಕಷ್ಟು ಪ್ರಯತ್ನವನ್ನು ಕೈಗೊಳ್ಳಬೇಕು. ಇದರಿಂದ ಉತ್ತಮ ಯಶಸ್ಸನ್ನು ನೀವು ಪಡೆದುಕೊಳ್ಳುವಿರಿ. ಮಹತ್ವಾಕಾಂಕ್ಷೆಯನ್ನು ಹೊಂದುವಂತಹ ಸ್ವಭಾವವನ್ನು ನೀವು ಬೆಳೆಸಿಕೊಳ್ಳಬೇಕು ಎಂದು ಜ್ಯೋತಿಷ್ಯ ತಜ್ಞರು ಸಲಹೆ ನೀಡುತ್ತಾರೆ. ನೀವು ಹಳೆಯ ಮತ್ತು ಹೊರಹೊಮ್ಮಿದ ಕಲ್ಪನೆಗಳು ಮತ್ತು ಸಂಬಂಧಗಳು ದೂರ ಸರಿಯುವ ಸಾಧ್ಯತೆಗಳು ಇರುತ್ತವೆ ಎಂದು ಹೇಳಲಾಗುವುದು.

ಡಿಸೆಂಬರ್

ಡಿಸೆಂಬರ್

ಈ ತಿಂಗಳಲ್ಲಿ ಜನಿಸಿದ ವ್ಯಕ್ತಿಗಳಿಗೆ 2019ರ ವರ್ಷವು ಉತ್ತಮ ಸಂಪರ್ಕವನ್ನು ಕಲ್ಪಿಸುವುದು. ಅಲ್ಲದೆ ವರ್ಷ ಪೂರ್ತಿ ಪ್ರೀತಿಯ ವಿಷಯದಲ್ಲಿ ಸಾಕಷ್ಟು ವಿಮರ್ಶೆಯನ್ನು ಕೈಗೊಳ್ಳುವರು. ನಿಮ್ಮ ಸುತ್ತಲಲ್ಲಿ ಇರುವ ಜನರು ನಿಮ್ಮೊಂದಿಗೆ ಸಂಪರ್ಕವನ್ನು ಹೊಂದಲು ಬಯಸುತ್ತಾರೆ. ನೀವು ಸಾಕಷ್ಟು ಮನವಿ ಮತ್ತು ಆಕರ್ಷಣೆಯನ್ನು ಪಡೆದುಕೊಳ್ಳುವಿರಿ. ಪ್ರೀತಿಯ ವಿಷಯದಲ್ಲಿ ಸಾಕಷ್ಟು ಕಷ್ಟವನ್ನು ಅನುಭವಿಸಬೇಕಾಗುವುದು. ನೀವು ಜನರ ಹೃದಯದಲ್ಲಿ ಉಂಟಾಗುವ ಗೊಂದಲವನ್ನು ತಪ್ಪಿಸಬೇಕಾಗುವುದು. ನಿಮ್ಮ ಸಮಯವನ್ನು ಹೆಚ್ಚು ವಿಶ್ರಾಂತಿಗಾಗಿ ಖರ್ಚುಮಾಡಬೇಕಾಗುವುದು. ನಿಮ್ಮ ಬಿಡುವಿನ ಸಮಯವನ್ನು ಸ್ನೇಹಿತರೊಂದಿಗೆ, ಪ್ರೀತಿ ಪಾತ್ರರೊಂದಿಗೆ ಹಾಗೂ ಆಪ್ತರೊಂದಿಗೆ ಕಳೆಯಲು ಪ್ರಯತ್ನಿಸಿ. ಇದರಿಂದ ನಿನಗೆ ಸಾಕಷ್ಟು ನೆಮ್ಮದಿ ಹಾಗೂ ಸಂತೋಷವು ದೊರೆಯುವುದು.

English summary

Your Birth Month Reveals Your Fortune For 2019

As per the astrological predictions, the birth month of an individual reveals a lot about their fortune, and here we bring in the details of what your entire 2019 year will be as per your birth month. Check out the yearly predictions based on your birth month. These predictions reveal the details of all the 12 months.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more