For Quick Alerts
ALLOW NOTIFICATIONS  
For Daily Alerts

ಅಚ್ಚರಿ ಲೋಕ: ಏನಿದು ತೇಲಾಡುವ ಕಿಡ್ನಿ ಸಮಸ್ಯೆ?

By Hemanth
|

ಅತಿ ವಿಚಿತ್ರವಾಗಿರುವಂತಹ ಕೆಲವೊಂದು ವೈದ್ಯಕೀಯ ಪರಿಸ್ಥಿತಿಗಳು ಮನುಷ್ಯರಲ್ಲಿ ಕಂಡುಬರುವುದು. ಅಪರೂಪದಲ್ಲಿ ಅಪರೂಪವಾಗಿರುವಂತಹ ಪರಿಸ್ಥಿತಿಗಳು ವೈದ್ಯರಿಗೆ ಕೆಲವೊಮ್ಮೆ ಅಚ್ಚರಿ ಮೂಡಿಸುವುದು. ಇಂತಹದರಲ್ಲಿ ಪ್ರಮುಖವಾಗಿ ತೇಲಾಡುವ ಕಿಡ್ನಿ. ಇದನ್ನು ಕೇಳಿ ನೀವು ಮೂಗಿನ ಮೇಲೆ ಬೆರಳಿಡಬಹುದು. ಆದರೆ ಹದಿಹರೆಯದ ಮಹಿಳೆಯೊಬ್ಬರಲ್ಲಿ ಇಂತಹ ಪರಿಸ್ಥಿತಿ ಕಂಡುಬಂದಿದೆ. ಆಕೆಯು ನಿಂತಾಗ ಮೂತ್ರಪಿಂಡದ ಕುಳಿಯಲ್ಲಿ ಕಿಡ್ನಿಯು ಕಂಡುಬಂದಿದೆ.

ಮಿಚಿಗಾನ್ ನಗರದಲ್ಲಿನ ಮಹಿಳೆಯಲ್ಲಿ ಕಂಡುಬಂದಿರುವಂತಹ ಈ ವಿಚಿತ್ರ ರೋಗದ ಬಗ್ಗೆ ತಿಳಿದು ವೈದ್ಯಲೋಕ ಕೂಡ ಅಚ್ಚರಿಪಟ್ಟಿದೆ. ಮಹಿಳೆಯು ಎದ್ದು ನಿಂತಾಗ ಆಕೆಗೆ ತುಂಬಾ ನೋವು ಕಾಣಿಸಿಕೊಳ್ಳುತ್ತಿತ್ತು. ಎದ್ದು ನಿಂತಾಗ ತನ್ನ ದೇಹದ ಒಳಗಡೆ ಚೆಂಡು ಸುತ್ತಾಡಿದಂತೆ ಆಗುತ್ತಿರುತ್ತದೆ ಎಂದು ಆಕೆ ವೈದ್ಯರಿಗೆ ಹೇಳಿದ್ದಾಳೆ. ಪರೀಕ್ಷೆ ನಡೆಸಿದಂತಹ ವೈದ್ಯರಿಗೆ ಮಹಿಳೆಯ ಬಲದ ಕಿಡ್ನಿಯು ತೇಲಾಡುವುದು ಎಂದು ತಿಳಿದುಬಂದತು.

kidney

28ರ ಹರೆಯದ ಮಹಿಳೆಯರ ಈ ಅಪರೂಪದ ಪರಿಸ್ಥಿತಿ ಬಗ್ಗೆ ವೈದ್ಯರು ಕೂಡ ಮಾಹಿತಿ ನೀಡಿದ್ದಾರೆ. ಕಳೆದ ಆರು ವರ್ಷಗಳಿಂದ ಮಹಿಳೆಯು ನಿಂತಾಗ ಹೊಟ್ಟೆಯ ಬಲಭಾಗ ಮತ್ತು ಬಲದ ಭಾಗದಲ್ಲಿ ತುಂಬಾ ನೋವಿಗೆ ಒಳಗಾಗುತ್ತಿದ್ದಳು. ನಿಂತುಕೊಂಡಾಗ ಈ ನೋವು ತೀವ್ರವಾಗಿರುತ್ತಿತ್ತು ಎಂದು ಆಕೆ ಹೇಳಿದ್ದಾಳೆ. ಗರ್ಭಿಣಿಯಾಗಿದ್ದಾಗ ಇದು ಕಡಿಮೆಯಿತ್ತು ಎಂದು ಆಕೆ ವೈದ್ಯರಿಗೆ ತಿಳಿಸಿದ್ದಾಳೆ.

ಮೊದಲ ಸಲ ಮಹಿಳೆಯನ್ನು ಪರೀಕ್ಷಿಸಿದ ವೈದ್ಯರಿಗೆ ಯಾವುದೇ ರೀತಿಯ ಸಮಸ್ಯೆ ಕಂಡುಬರಲಿಲ್ಲ. ಸ್ಕ್ಯಾನಿಂಗ್ ನಲ್ಲಿ ಎಲ್ಲವೂ ಸಾಮಾನ್ಯವಾಗಿತ್ತು. ಎರಡು ಬದಿಯಲ್ಲಿ ಆಕೆಯು ಕಿಡ್ನಿಗಳು ಸರಿಯಾದ ಜಾಗದಲ್ಲಿದ್ದವು. ಆದರೆ ನಿಂತುಕೊಂಡಾಗ ಸ್ಕ್ಯಾನ್ ಮಾಡಿದಾಗ ಮಹಿಳೆಯ ಕಿಡ್ನಿಯು ತೇಲಾಡುತ್ತಿರುವುದು ಕಂಡುಬಂದಿದೆ. ಈ ವೈದ್ಯಕೀಯ ಸ್ಥಿತಿಗೆ ತೇಲುವ ಅಥವಾ ಸುತ್ತಾಡುವ ಕಿಡ್ನಿ' ಎಂದು ವೈದ್ಯಕೀಯವಾಗಿ ನೆಫ್ರೋಪ್ಟೋಸಿಸ್ ಎಂದು ಕರೆಯಲಾಗುತ್ತದೆ. ಈ ಪರಿಸ್ಥಿತಿಯಲ್ಲಿ ವ್ಯಕ್ತಿಯೊಬ್ಬ ನಿಂತಾಗ ಕಿಡ್ನಿಯು ಮೂತ್ರಪಿಂಡದ ಕುಳಿಯೊಳಗೆ ಬೀಳುವುದು.

ದೇಹದ ಕೊಬ್ಬಿನಿಂದಾಗಿ ತೇಲಾಡುವ ಕಿಡ್ನಿ ಸಮಸ್ಯೆಯು ಬರುವುದು ಎಂದು ವೈದ್ಯರು ಹೇಳುತ್ತಾರೆ. ಕಿಡ್ನಿಯ ಸುತ್ತಲು ಅದಕ್ಕೆ ಬೆಂಬಲವಾಗಿ ಬೇಕಾದಷ್ಟು ಕೊಬ್ಬು ಇದೆ. ಆದರೆ ಆ ಮಟ್ಟದಲ್ಲಿ ಕೊಬ್ಬು ಇಲ್ಲದೆ ಇದ್ದಾಗ ಎದ್ದುನಿಂತಾಗ ಕಿಡ್ನಿಯು ಮೂತ್ರಪಿಂಡದ ಕುಳಿಗೆ ಬೀಳುವುದು. ತುಂಬಾ ಸಪೂರ ಇರುವಂತಹ ಜನರಲ್ಲಿ ಈ ಸಮಸ್ಯೆಯು ಕಂಡುಬರುವುದು.

ಮಹಿಳೆಯ ಬಲದ ಕಿಡ್ನಿಯು 2 ಇಂಚಿನಷ್ಟು ಕೆಳಗೆ ಬಿದ್ದಿದೆ. ಸರಿಸುಮಾರು 6 ಸೆಂಟಿಮೀಟರ್ ನಷ್ಟು. ಆಕೆ ಮಲಗಿದ್ದಾಗ ಇದ್ದ ಪರಿಸ್ಥಿತಿ ಮತ್ತು ನಿಂತಾಗ ಕಿಡ್ನಿಯ ಸ್ಥಾನ ನೋಡಲಾಗಿದೆ. ಇದರಿಂದಾಗಿ ಆಕೆಗೆ ತುಂಬಾ ನೋವು ಕಾಣಿಸಿಕೊಳ್ಳುತ್ತಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಈ ಪರಿಸ್ಥಿತಿ ನಿವಾರಣೆ ಮಾಡಲು ಮತ್ತು ನೋವು ಕಡಿಮೆ ಮಾಡುವ ಸಲುವಾಗಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದರು. ಇದನ್ನು ನೆಫ್ರಾಪಕ್ಸಿ ಎಂದು ಕರೆಯಲಾಗುತ್ತದೆ. ಹೊಟ್ಟೆಯ ಭಾಗದಲ್ಲಿ ಸಣ್ಣ ಛೇದನ ಮಾಡಿದ ಬಳಿಕ ಕಿಡ್ನಿಯ ಹೊರಭಾಗದಲ್ಲಿರುವಂತಹ ಕ್ಯಾಪ್ಸೂಲ್ ಗೆ ಹೊಲಿಗೆ ಹಾಕಿದ್ದಾರೆ. ಇದನ್ನು ಮತ್ತೆ ದೇಹದ ಹಿಂದಿನ ಭಾಗಕ್ಕೆ ಕಟ್ಟಲಾಗಿದೆ. ಇದರಿಂದ ಕಿಡ್ನಿಯು ಸ್ವಸ್ಥಾನದಲ್ಲಿರುವುದು ಮತ್ತು ಎಲ್ಲಿಯೂ ಅಲ್ಲಡಾದು.

ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಮಹಿಳೆಯಲ್ಲಿ ಯಾವುದೇ ರೀತಿಯ ನೋವು ಕಂಡುಬಂದಿಲ್ಲವೆಂದು ವರದಿಗಳು ಹೇಳಿವೆ. ಈಗ ಆಕೆಯ ಆರೋಗ್ಯ ಚೆನ್ನಾಗಿದೆ. ಇಂತಹ ವಿಚಿತ್ರ ಹಾಗೂ ಜೀವನದ ಕಠಿಣ ಸ್ಥಿತಿ ಬಗ್ಗೆ ಓದಲು ಮನಸ್ಸಿದೆಯಾ? ಇದಕ್ಕಾಗಿ ಈ ವಿಭಾಗದಲ್ಲಿ ಯಾವಾಗಲೂ ಲೇಖನಗಳನ್ನು ಹುಡುಕುತ್ತಿರಿ.

English summary

woman-whose-kidney-was-floating-every-time-she-stood

This is the case of a young woman who suffered from a rare condition of a floating kidney. The detailing of the case will leave you baffled when you realise that her kidney indeed floated inside her body! Check out the details of this rare and bizarre condition of the unnamed woman whose kidney fell down to her pelvis every time she stood. Read on to know more about the interesting case... This is the case for a young woman whose name is not being revealed for privacy reasons.
X
Desktop Bottom Promotion