For Quick Alerts
ALLOW NOTIFICATIONS  
For Daily Alerts

ತರಬೇತುಗೊಂಡ ಸೇನೆಯ ನಾಯಿಗಳನ್ನು ನಿವೃತ್ತಿ ಹೊಂದಿದ ಬಳಿಕ ಯಾಕೆ ಕೊಲ್ಲುತ್ತಾರೆ?

By Deepu
|

ವಿಶ್ವದ ಪ್ರತಿಯೊಂದು ದೇಶದ ಸೇನೆ ಹಾಗೂ ಪೊಲೀಸ್ ವಿಭಾಗದಲ್ಲಿ ಶ್ವಾನದಳವೆನ್ನುವುದು ಇದ್ದೇ ಇರುತ್ತದೆ. ಶ್ವಾನಗಳು ತುಂಬಾ ಚುರುಕು ಮತ್ತು ಅವುಗಳು ಪ್ರತಿಯೊಂದನ್ನು ಬೇಗನೆ ಗ್ರಹಿಸುವ ಕಾರಣದಿಂದಾಗಿ ಸೇನೆಗೆ ಸೇರಿಸಲಾಗುತ್ತದೆ. ಇವುಗಳಿಗೆ ಸೇನೆಗೆ ಬೇಕಾಗುವಂತಹ ತರಬೇತಿ ನೀಡಿ, ವಿರೋಧಿ ಸೇನೆಯ ಚಲನವಲನಗಳ ಪತ್ತೆಗೆ ಬೇಕಾಗುವಂತೆ ಸಿದ್ಧಗೊಳಿಸಲಾಗುವುದು.

ಶ್ವಾನಗಳಿಗೆ ಎಷ್ಟರ ಮಟ್ಟಿಗೆ ಮಿಲಿಟರಿ ತರಬೇತಿ ನೀಡಲಾಗುತ್ತದೆ ಎಂದರೆ ಕೆಲವೊಂದು ಸಂದರ್ಭದಲ್ಲಿ ಎದುರಾಳಿ ಸೇನೆಯನ್ನು ನೋಡಿದರೂ ಅವುಗಳು ಬೊಗಳುವುದಿಲ್ಲ. ಬೇರೆ ರೀತಿಯ ಸನ್ನೆ ಮೂಲಕ ಇದನ್ನು ತಿಳಿಸುವುದು. ತಮ್ಮ ತರಬೇತುದಾರರು ನೀಡುವ ಕೈ ಸನ್ನೆ ಮತ್ತು ಬಾಯಿಯ ಮಾತುಗಳನ್ನು ಅವುಗಳನ್ನು ನಿಖರವಾಗಿ ಪಾಲಿಸುವುದು. ಬಾಂಬ್ ನ್ನು ಮೂಸಿ ತೆಗೆಯುವುದು ಮತ್ತು ಕಳ್ಳರನ್ನು ಪತ್ತೆ ಹಚ್ಚಲು ಇವುಗಳನ್ನು ತರಬೇತುಗೊಳಿಸಲಾಗಿರುವುದು. ಸೈನಿಕರಂತೆ ಯುದ್ಧ ಭೂಮಿಯಲ್ಲಿ ಈ ನಾಯಿಗಳು ಕೂಡ ಪ್ರಮುಖ ಪಾತ್ರ ವಹಿಸುವುದು.

ಆದರೆ ಸೇನೆಯಿಂದ ನಿವೃತ್ತಿ ಪಡೆದ ಬಳಿಕ ಈ ನಾಯಿಗಳು ಏನಾಗುವುದು? ಯುದ್ಧಭೂಮಿ ಮೇಲೆ ನೂರಾರು ಯೋಧರ ಪ್ರಾಣ ಕಾಪಾಡಿರುವ ನಾಯಿಗಳ ಪಾಡೇನು? ನಾಯಿಗಳು ಎಂಟು ಅಥವಾ 9ನೇ ವರ್ಷಕ್ಕೆ ಕಾಲಿಟ್ಟಾಗ ತಮ್ಮ ಸೇವೆಯ ಅವಧಿ ಪೂರ್ತಿಗೊಳಿಸುವುದು. ಅನಾರೋಗ್ಯದ ಕಾರಣದಿಂದಾಗಿ ಕೆಲವು ಶ್ವಾನಗಳಿಗೆ ದಯಾಮರಣ ನೀಡಿದರೆ, ಇನ್ನು ಕೆಲವು ಮನೆಗಳಲ್ಲಿ ಇರುವುದು. ಆದರೆ ಇದೆಲ್ಲವೂ ರಾಷ್ಟ್ರದಿಂದ ರಾಷ್ಟ್ರಕ್ಕೆ ಭಿನ್ನವಾಗಿರುವುದು. ವಿಶ್ವದ ಅಗ್ರ ನಾಲ್ಕು ಮಿಲಿಟರಿ ದೇಶಗಳು ಶ್ವಾನಗಳನ್ನು ನಿವೃತ್ತಿ ಬಳಿಕ ಹೇಗೆ ನಡೆಸಿಕೊಳ್ಳುತ್ತವೆ ಎಂದು ನೋಡುವ....

ಅಮೆರಿಕಾ

ಅಮೆರಿಕಾ

ಅಮೆರಿಕಾದಲ್ಲಿ ಪ್ರತೀ ವರ್ಷ ಸುಮಾರು 300 ವಯಸ್ಸಾದ ಶ್ವಾನಗಳು ನಿವೃತ್ತಿ ಪಡೆಯುತ್ತವೆ. ಇವುಗಳನ್ನು ದತ್ತು ನೀಡಲಾಗುತ್ತದೆ ಮತ್ತು ಶೇ.90ರಷ್ಟು ನಾಯಿಗಳನ್ನು ಅದರ ತರಬೇತುದಾರರೇ ದತ್ತು ಪಡೆಯುವರು. ಉಳಿದವುಗಳನ್ನು ನಾಗರಿಕರು ಪಡೆಯುವರು. ಈ ನಾಯಿಗಳಿಗೆ ವಯಸ್ಸಾಗಿರುವ ಕಾರಣದಿಂದಾಗಿ ಇವುಗಳಿಗೆ ವೈದ್ಯಕೀಯ ನೆರವು ಬೇಕಾಗುತ್ತದೆ ಮತ್ತು ತಮ್ಮ ತರಬೇತುದಾರರ ಜತೆಗಿನ ಇವುಗಳ ಭಾಂದವ್ಯ ಅಮೋಘವಾದದ್ದು.

ಭಾರತ

ಭಾರತ

ಲ್ಯಾಬ್ರಡೋರ್ಸ್ ಮತ್ತು ಜರ್ಮನ್ ಶೆಪರ್ಡ್ ನಾಯಿಗಳು ಭಾರತದ ಸೇನೆಯಲ್ಲಿ ನಿವೃತ್ತಿ ಹೊಂದಿದ ಬಳಿಕ ಅವುಗಳಿಗೆ ದಯಾಮರಣ ನೀಡಲಾಗುತ್ತದೆ. ಇವುಗಳು ಸೇವೆಯಿಂದ ನಿವೃತ್ತಿ ಪಡೆದ ಬಳಿಕ ಇವುಗಳನ್ನು ಸಾಕುವುದು ತುಂಬಾ ವೆಚ್ಚದಾಯಕ ಹಾಗೂ ಕೆಲವೊಂದು ಸೂಕ್ಷ್ಮ ಪ್ರದೇಶಗಳ ಬಗ್ಗೆ ಮಾಹಿತಿ ಹೊಂದಿರುವ ಕಾರಣ ನಾಗರಿಕರಿಗೆ ನೀಡಿ ಅಪಾಯ ತಂದುಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಸೇನೆಯ ವಾದ. ಭಾರತೀಯ ಸೇನೆಯು ನಾಯಿಗಳಿಗೆ ದಯಾಮರಣ ನೀಡುತ್ತಿರುವುದನ್ನು ಪ್ರಾಣಿ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಆದರೆ ಈ ನಾಯಿಗಳು ನಮ್ಮ ಸೇನೆಯ ಪ್ರತಿಯೊಂದು ಗುಪ್ತ ಸ್ಥಳಗಳ ಮಾಹಿತಿಗಳು, ರಹಸ್ಯವಾಗಿರುವ ಸಂಗತಿಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಅಡಗಿಸಿಟ್ಟಿರುವ ಜಾಗಗಳ ಬಗ್ಗೆ ಇವುಗಳಿಗೆ ಸರಿಯಾಗಿ ತಿಳಿದಿರುತ್ತದೆ. ಇದೇ ಕಾರಣಕ್ಕೆ ಒಂದು ವೇಳೆ ದೇಶದ್ರೋಹಿಗಳು ತಮ್ಮ ಲಾಭಕ್ಕಾಗಿ ಈ ನಾಯಿಗಳನ್ನು ಬಳಸುವ ಸಂಭವ ಜಾಸ್ತಿ ಇರುವ ಕಾರಣ ಇವುಗಳನ್ನು ಕೊಲ್ಲಲಾಗುತ್ತದೆಯಂತೆ!

ರಷ್ಯಾ

ರಷ್ಯಾ

ಸ್ಫೋಟಕಗಳನ್ನು ಪತ್ತೆ ಹಚ್ಚಲು ಹಾಗೂ ಗಸ್ತು ತಂಡದೊಂದಿಗೆ ಹೋಗಲು ಶ್ವಾನಗಳನ್ನು ಬಳಸಲಾಗುವುದು. ನಿವೃತ್ತಿ ಬಳಿಕ ಇಲ್ಲಿನ ಶ್ವಾನಗಳನ್ನು ಹೆಚ್ಚಾಗಿ ಸೇನೆಯಲ್ಲಿದ್ದ ಸೈನಿಕರೇ ದತ್ತು ಸ್ವೀಕರಿಸುವರು. ಇವುಗಳಿಗೆ ಉಳಿದಿರುವ ವರ್ಷಗಳಲ್ಲಿ ಹೆಚ್ಚಿನ ಆರೈಕೆ ಕೂಡ ನೀಡಲಾಗುತ್ತದೆ. ಇದರಿಂದ ನಾಯಿ ಹಾಗೂ ತರಬೇತುದಾರ ಮಧ್ಯೆ ಭಾಂದವ್ಯ ಬಲಗೊಳ್ಳುವುದು.

ಇಂಗ್ಲೆಂಡ್

ಇಂಗ್ಲೆಂಡ್

ಭಾರತದಂತೆ ಇಂಗ್ಲೆಂಡ್ ನಲ್ಲೂ ಸೇನೆಯಿಂದ ನಿವೃತ್ತಿ ಹೊಂದಿದ ನಾಯಿಗಳಿಗೆ ದಯಾಮರಣ ನೀಡಲಾಗುತ್ತದೆ. ಇದು ಇಲ್ಲಿನ ಪ್ರಾಣಿದಯಾ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ವೈದ್ಯಕೀಯ ಹಾಗೂ ನಡವಳಿಕೆಯಿಂದಾಗಿ ಹೀಗೆ ಮಾಡಲಾಗುತ್ತದೆ ಎಂದು ರಕ್ಷಣಾ ಸಚಿವಾಲಯವು ಸ್ಪಷ್ಟಪಡಿಸಿದೆ. ಆದರೆ ಸಂಘಟನೆ ಕಾರ್ಯಕರ್ತರು ಮಾತ್ರ ನಾಯಿಗಳಿಗೆ ಮನೆಗಳನ್ನು ಹುಡುಕುತ್ತಾ ಇದ್ದಾರೆ. ಆದರೆ ಮನೆಗಳಿಗೆ ಸಂಬಂಧಪಟ್ಟಂತೆ ಯುದ್ಧ ನಾಯಿಗಳನ್ನು ಇಟ್ಟುಕೊಳ್ಳಲು ಯಾವಾಗಲೂ ಸಾಧ್ಯವಾಗಲ್ಲ.

English summary

why Indian Army Kill Trained Army Dogs After Service?

Dogs serving in the armed forces around the world do more than just play catch and wag their tails. While undergoing extensive military training, the dogs are coached in commands that require them to hold their barks in situations of combat, lest they reveal their position to the enemy. They are taught to respond to military-specific hand gestures and verbal orders by their handlers
X
Desktop Bottom Promotion