For Quick Alerts
ALLOW NOTIFICATIONS  
For Daily Alerts

ರಾಶಿಚಕ್ರಕ್ಕೆ ಅನುಗುಣವಾಗಿ ಮದುವೆಯಾಗಲು ಸರಿಯಾದ ವಯಸ್ಸು ಯಾವುದು?

By Hemanth
|

ಜೀವನದಲ್ಲಿ ಮದುವೆಯಾಗುವ ನಿರ್ಧಾರ ತುಂಬಾ ಮಹತ್ವದ್ದಾಗಿರುವುದು. ಇದು ನಿಮ್ಮ ಮುಂದಿನ ಸಂಪೂರ್ಣ ಜೀವನದ ಮೇಲೆ ಪರಿಣಾಮ ಬೀರುವುದು. ಇದಕ್ಕಾಗಿ ನೀವು ಜೀವನದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡರೆ ಆಗ ಎಲ್ಲವೂ ಸುಸೂತ್ರವಾಗಿ ಸಾಗುವುದು. ಆದರೆ ಮದುವೆಯಾಗಲು ಸರಿಯಾದ ವಯಸ್ಸು ಯಾವುದು ಎಂದು ಕೆಲವರು ಕೇಳುವರು.

right age to get married according to zodiac sign in kannada

ಆದರೆ ನಿಮ್ಮ ರಾಶಿಯನುಗುಣವಾಗಿ ಎಲ್ಲವೂ ನಡೆಯುತ್ತ ಸಾಗುವುದು ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಹೌದು, ನಿಮ್ಮ ರಾಶಿಗೆ ಅನುಗುಣವಾಗಿಯೇ ಪ್ರತಿಯೊಂದು ನಡೆಯುವುದು. ಅದು ನಿಮ್ಮ ಮದುವೆ ಕೂಡ. ನಿಮ್ಮ ರಾಶಿಗೆ ಅನುಗುಣವಾಗಿ ಮದುವೆಯಾಗಲು ಸರಿಯಾದ ವಯಸ್ಸು ಯಾವುದು ಎಂದು ಈ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ತಿಳಿಯಲು ನೀವು ತಯಾರಾಗಿರಿ.

ಮೇಷ

ಮೇಷ

ಮೇಷ ರಾಶಿಯವರು ಬಲವಾದ ಮನಸ್ಥಿತಿ ಮತ್ತು ಎಲ್ಲದರಲ್ಲೂ ಮುನ್ನುಗ್ಗುವ ಗುಣ ಹೊಂದಿರುವರು. ಇವರು ಯಾವಾಗಲೂ ಪರಿಸ್ಥಿತಿ ಬೆನ್ನತ್ತಿ ಹೋಗುವರು ಮತ್ತು ಸಹಜವಾಗಿರುವರು. ಸುಲಭವಾಗಿ ಕಾಯುತ್ತಾ ಇರುವುದು ಇವರಿಗೆ ಸಾಧ್ಯವಾಗದು ಮತ್ತು ಬೇಗನೆ ಕೆಲಸ ಮುಗಿಸಿಬಿಡಬೇಕು. ಆದರೆ ಇದರಲ್ಲಿ ನೀವು ಕಳೆದುಹೋಗಲ್ಲ. ಪ್ರೀತಿ ಮೇಲಿನ ವ್ಯಾಮೋಹವನ್ನು ನೀವು ತಪ್ಪಾಗಿ ಅರ್ಥೈಸಿಕೊಂಡಿರಬಹುದು. ನೀವು ನಿಧಾನವಾಗಿ 20 ದಾಟಿದ ಬಳಿಕ ಮದುವೆ ಬಂಧನದಲ್ಲಿ ಸಿಲುಕಿಕೊಳ್ಳಿ.

ವೃಷಭ

ವೃಷಭ

ನೀವು ಮೇಷ ರಾಶಿಗಿಂತಲೂ ತುಂಬಾ ಸರಳವಾಗಿರುವವರು. ನಿಮಗೆ ಜೀವನ ಹಾಗೂ ಸಂಬಂಧದಲ್ಲಿ ಸ್ಥಿರತೆ ಹಾಗೂ ಭದ್ರತೆ ಬೇಕು. ಇದೆಲ್ಲವನ್ನೂ ನೀಡುವ ತನಕ ನೀವು ಅದಕ್ಕಾಗಿ ಕಾಯುತ್ತಲೇ ಇರುತ್ತೀರಿ. ನೀವು ತುಂಬಾ ಹದಿಹರೆಯದಲ್ಲೇ ಮದುವೆಯಾದರೆ ನಿಮಗೆ ಪಶ್ಚಾತ್ತಾಪವಾಗದು. ಇದು ವ್ಯಕ್ತಿಯಾಗಿ ಬೆಳೆಯಲು ನಿಮಗೆ ನೆರವಾಗುವುದು. ನಿಮ್ಮ ವ್ಯಕ್ತಿತ್ವವು ತುಂಬಾ ಶಾಂತ ಮತ್ತುಸ್ಥಿರವಾಗಿರುವ ಕಾರಣ ನಿಮ್ಮ ವೈವಾಹಿಕ ಜೀವನವು ತುಂಬಾ ದೀರ್ಘ ಕಾಲ ಬಾಳಲಿದೆ. ಬದಲಾವಣೆಯನ್ನು ಸ್ವೀಕರಿಸುವುದು ಕೆಲವು ಸಲ ನಿಮಗೆ ತುಂಬಾ ನೆರವಾಗಲಿದೆ.

ಮಿಥುನ

ಮಿಥುನ

ಅವಳಿ ಚಿಹ್ನೆಗಳಿಂದಾಗಿ ನಿಮಗೆ ಬದ್ಧತೆಯ ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಾಗುವುದು. ನೀವು ಯಾವಾಗಲೂ ಎರಡು ನಿರ್ದೇಶನದಲ್ಲಿ ಹೋಗುತ್ತಲಿರುತ್ತೀರಿ. ನೀವು ಪ್ರೀತಿಯ ಸಂಬಂಧ ಹಾಗೂ ನಿಮ್ಮನ್ನು ಪ್ರೀತಿಸುತ್ತೀರಿ. ಸಂಬಂಧವು ಎಷ್ಟು ಖುಷಿ ನೀಡುತ್ತದೆ ಎಂದು ನಿಮಗೆ ತಿಳಿದಿದೆ. ಇದರಿಂದ ನೀವು ಸಂಬಂಧ ಮತ್ತು ಬಹುಪತ್ನಿತ್ವ ಆಯ್ಕೆ ಮಾಡುವಿರಿ. ನೀವು ಜೀವನದಲ್ಲಿ ಸ್ವಲ್ಪ ವಿಳಂಬವಾಗಿ ಮದುವೆಯಾಗಬೇಕು. 30ರ ಆಸುಪಾಸಿನಲ್ಲಿ. ಇದರಿಂದ ನಿಮಗೆ ಪ್ರೌಢತೆಯಿಂದ ನೆಲೆಯೂರಲು ಸಾಧ್ಯವಾಗುವುದು.

ಕರ್ಕಾಟಕ

ಕರ್ಕಾಟಕ

ನಿಮಗೆ ಮದುವೆ ಮತ್ತು ಕುಟುಂಬದ ವಿಚಾರಗಳು ತುಂಬಾ ಇಷ್ಟ. ಆದರೂ ನೀವು ಭದ್ರತೆ ಬಯಸುತ್ತೀರಿ. ನೀವು ಯಾರನ್ನೋ ಭೇಟಿಯಾಗಿ, ಅವರನ್ನು ಪ್ರೀತಿಸಲು ಆರಂಭಿಸಿ, ಭದ್ರತೆಯ ಭಾವನೆಯು ಬರಬಹುದು ಮತ್ತು ಮದುವೆಯಾಗಬಹುದು. ಕುಟುಂಬದ ನಿರ್ವಹಣೆ ಮತ್ತು ಅವರ ಕಾಳಜಿ ವಹಿಸುವುದು ನಿಮಗೆ ಇಷ್ಟ. ಇದರಿಂದ ನೀವು ತುಂಬಾ ಸಂತೋಷಪಡುತ್ತೀರಿ. ನೀವು ಹದಿಹರೆಯದಲ್ಲಿ ಮದುವೆಯಾಗಲು ಭೀತಿ ಪಡಬೇಕಾಗಿಲ್ಲ.

ಸಿಂಹ

ಸಿಂಹ

ನೀವು ಉನ್ನತ ಗುಣಮಟ್ಟ ಹೊಂದಿರುವ ಕಾರಣದಿಂದ ನಿಮ್ಮನ್ನು ರಾಣಿಯಂತೆ ಉಪಚರಿಸಬೇಕಾಗುತ್ತದೆ. ಅದಾಗ್ಯೂ ನೀವು ಏಕಪತ್ನಿ ಮತ್ತು ದೀರ್ಘಕಾಲದ ಸಂಬಂಧದಲ್ಲಿ ಒಳಗೊಳ್ಳುವಿರಿ. ನೀವು ಏಕಾಂಗಿಯಾಗಿಯೂ ಇರಬಲ್ಲೀರಿ. ನಿಮಗೆ ಎಲ್ಲವೂ ನೀಡುವಂತಹ ಸಂಗಾತಿ ಸಿಗುವ ತನಕ ನೀವು ಸಂಬಂಧ ಬೆಳೆಸಲ್ಲ. ಸರಿಯಾದ ವ್ಯಕ್ತಿಯ ಹುಡುಕಲು ಸಮಯಬೇಕಾಗುವುದು. ನಿಮ್ಮ ವ್ಯಕ್ತಿತ್ವವು ಸ್ವಲ್ಪ ಇದಕ್ಕೆ ಅಡ್ಡಿಯಾಗುವ ಕಾರಣದಿಂದ ನೀವು ಕಾಯಬೇಕು. ನೀವು ಜೀವನದ ಉಳಿದ ಭಾಗವನ್ನು ಯಾರೊಂದಿಗೆ ಕಳೆಯಲು ಇಷ್ಟಪಡುತ್ತೀರಿ ಎನ್ನುವ ಬಗ್ಗೆ ನೀವು ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು.

ಕನ್ಯಾ

ಕನ್ಯಾ

ನೀವು ಸ್ಪಷ್ಟ ಗುರಿ ಹೊಂದಿರುವವರು ಮತ್ತು ನಿಮ್ಮ ಕೆಲಸದ ನೀತಿ ಬಲವಾಗಿದೆ. ಇದು ನಿಮ್ಮ ವೃತ್ತಿ ಮಾತ್ರವಲ್ಲದೆ, ಸಂಬಂಧದ ಮೇಲೂ ಅನ್ವಯವಾಗುವುದು. ಗುರಿ ತಲುಪುವುದು ಹೇಗೆ ಎಂದು ನಿಮಗೆ ತಿಳಿದಿದೆ ಮತ್ತು ಇದರಿಂದ ಹದಿಹರೆಯದಲ್ಲಿ ಮದುವೆಯಾದರೆ ನಿಮಗೆ ಹೊಂದಿಕೆಯಾಗುವುದು. ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಸಂಬಂಧ ಬೆಳೆಸಬೇಕು ಎಂದು ನಿಮಗೆ ತಿಳಿದಿದೆ. ಕೆಲವೊಂದು ಸಲ ನೀವು ವೃತ್ತಿ ಕಡೆ ಗಮನಹರಿಸಿದರೆ, ಮದುವೆಯು ವಿಳಂಬವಾಗಬಹುದು. ಆದರೆ ಇದರಿಂದ ಯಾವುದೇ ಚಿಂತೆಯಿಲ್ಲ.

ತುಲಾ

ತುಲಾ

ನಿಮ್ಮ ರಾಶಿಚಿಹ್ನೆಯು ಮದುವೆಯನ್ನು ಪ್ರತಿನಿಧಿಸುವುದು. ಇದನ್ನು ನೀವು ಇಷ್ಟಪಡುವಿರಿ ಮತ್ತು ಇದರಿಂದಾಗಿ ಹದಿಹರೆಯದಲ್ಲೇ ನೀವು ಮದುವೆಯಾಗುವಿರಿ. ಬದ್ಧತೆಗೆ ಒಳಪಡುವ ಮೊದಲು ನಿಮಗೆ ಚಿಂತಿಸಲು ಹೆಚ್ಚು ಸಮಯವು ಸಿಗದು. ಇದರಿಂದ ಹದಿಹರೆಯದಲ್ಲಿ ಮದುವೆಯಾಗುವುದು ನಿಮಗೆ ಒಳ್ಳೆಯದಲ್ಲ, ಯಾಕೆಂದರೆ ಇದು ವಿಚ್ಛೇದನದಲ್ಲಿ ಕೊನೆಯಾಗಬಹುದು. ಇದರಿಂದ ನೀವು ತಾಳ್ಮೆಯಿಂದ ಇರಿ. ನಿಮಗೆ ಸರಿಯಾದ ಸಮಯದಲ್ಲಿ ಹುಡುಗ ಸಿಗುವನು.

ವೃಶ್ಚಿಕ

ವೃಶ್ಚಿಕ

ನೀವು ಭಾವೋದ್ರೀಕ್ತ, ತೀವ್ರ ಮತ್ತು ಸ್ವಾಮ್ಯಸೂಚಕವಾಗಿರುವಿರಿ. ನೀವು ಎರಡು ವಿಪರೀತಗಳ ಮಧ್ಯೆ ಸಿಲುಕಿರುವಿರಿ. ಒಂದು ತುಂಬಾ ತೀವ್ರವಾಗಿ ಸಂಗಾತಿ ಜತೆಗೆ ಸಂಪರ್ಕದಲ್ಲಿರಬಹುದು ಅಥವಾ ಹಿಂದಿನಂತೆ ಬಿಟ್ಟುಬಿಡಬಹುದು. ನಿಮ್ಮಲ್ಲಿರುವ ಅಸುರಕ್ಷತೆ ಭಾವನೆ, ನಂಬಿಕೆ ಮತ್ತು ಪರಿತ್ಯಾಗ ಗುಣದಿಂದ ಹೀಗೆ ಆಗುವುದು. ಅಸುರಕ್ಷತೆ ಬಗ್ಗೆ ನೀವು ಗಮನಹರಿಸಿದರೆ ಯಾವುದೇ ವಯಸ್ಸಿನಲ್ಲೂ ನೀವು ಆರೋಗ್ಯಕರ ಹಾಗೂ ಸಂತೋಷದ ಮದುವೆಯಾಗಬಹುದು.

ಧನು

ಧನು

ನಿಮಗೆ ಸ್ವತಂತ್ರ ಇಷ್ಟ ಮತ್ತು ವಿಶ್ವದಲ್ಲಿ ನಿಜವಾಗಿಯೂ ಏನಾದರೂ ಬದಲಾವಣೆ ತರಬೇಕೆಂದು ಬಯಸುವಿರಿ. ಇದರಿಂದಾಗಿ ನೀವು ಕೌಟುಂಬಿಕ ಜಂಜಾಟದಲ್ಲಿ ಸಿಲುಕಲು ಬಯಸಲ್ಲ. ನಿಮಗೆ ಸ್ವತಂತ್ರ ನೀಡುವ ವ್ಯಕ್ತಿಯು ಸಿಗುವ ತನಕ ನೀವು ಮದುವೆಯಾಗುವುದು ಕಡಿಮೆ. ನಿಮ್ಮ ಕನಸುಗಳಲ್ಲಿ ಭಾಗಿಯಾಗಿ, ನಿಮ್ಮೊಂದಿಗೆ ಬದಲಾವಣೆಗೆ ಜತೆ ನೀಡುವವರು ನಿಮಗೆ ಬೇಕು. ಇದರಿಂದ ನಿಮ್ಮ ಗುರಿ ಸಾಧಿಸಿದ ಬಳಿಕ ವಿಳಂಬವಾಗಿ ಮದುವೆಯಾಗಿ.

ಮಕರ

ಮಕರ

ನಿಮಗೆ ವೃತ್ತಿಯೆಂದರೆ ತುಂಬಾ ಇಷ್ಟ. ಆದರೆ ಜವಾಬ್ದಾರಿಯಿಂದ ದೂರ ಹೋಗಲ್ಲ. ಇದನ್ನು ನೀವು ಸ್ವಾಗತಿಸಿ, ಅಪ್ಪಿಕೊಳ್ಳುವಿರಿ. ಮದುವೆಯಂಬ ಕಲ್ಪನೆಯು ನಿಮ್ಮನ್ನು ಬೆದರಿಸಲ್ಲ. ಇದು ನಿಮ್ಮ ಗುರಿ ಸಾಧನೆ ಮತ್ತು ಜೀವನದ ಹೆಜ್ಜೆಯಾಗಲಿದೆ. ನೀವು 20ರ ಹರೆಯದಲ್ಲೇ ಮದುವೆಯಾಗಬಹುದು. ಇದರಿಂದ ನೀವು ತುಂಬಾ ಸಂತೋಷವಾಗಿಯೂ ಇರಬಹುದು. ಯಾಕೆಂದರೆ ನಿಮ್ಮದು ದೀರ್ಘ ಸಂಬಂಧ. ನೀವು ಪ್ರಾಮಾಣಿಕ ಹಾಗೂ ಬದ್ಧತೆಯಿಂದ ಇರುವಿರಿ.

ಕುಂಭ

ಕುಂಭ

ಧನು ರಾಶಿಯವರಂತೆ ನಿಮಗೆ ಸ್ವತಂತ್ರವೆಂದರೆ ಇಷ್ಟ. ತುಂಬಾ ದೀರ್ಘಕಾಲದ ತನಕ ನೀವು ಇದಕ್ಕೆ ಅಂಟಿಕೊಂಡಿರುವಿರಿ. ಇದರಿಂದಾಗಿ ನೀವು ಮದುವೆಯಿಂದ ದೂರ ಓಡಿ, ಆದಷ್ಟು ಅದನ್ನು ಮುಂದೂಡುತ್ತಾ ಇರುತ್ತೀರಿ. ನಿಮ್ಮನ್ನು ಅರ್ಥ ಮಾಡಿಕೊಂಡು, ನಿಮಗೆ ಸ್ವತಂತ್ರ ನೀಡುವಂತಹ ಸಂಗಾತಿಯು ಸಿಕ್ಕಿದರೆ ಆಗ ನೀವು ಮದುವೆಯಾಗಲು ಮುಂದಾಗುವಿರಿ. ಮದುವೆ ನಿಮಗೆ ಯಾವುದೇ ವಯಸ್ಸಿನಲ್ಲೂ ಆಗಬಹುದು.

ಮೀನ

ಮೀನ

ನೀವು ಕನಸುಗಾರರು ಮತ್ತು ನೀವು ತುಂಬಾ ಆಳವಾದ, ಕಲ್ಪನಾತ್ಪಕ ಜಗತ್ತಿನಲ್ಲಿ ಕಳೆದುಹೋಗಿರುತ್ತೀರಿ. ಇದರಿಂದ ಹೊರಬರುವ ತನಕ ತಾಳ್ಮೆಯಿಂದ ಕಾಯುವಂತೆ ವ್ಯಕ್ತಿಯು ನಿಮಗೆ ಬೇಕು. ಇದರಿಂದಾಗಿ ನೀವು ಬೇಗನೆ ಮದುವೆಯಾಗಲ್ಲ. ನಿಮಗೆ ಜೀವನಪೂರ್ತಿ ಸಂಗಾತಿಯ ಜತೆಯಿರಬೇಕೆಂದು ಬಯಸುವಿರಿ. ಹದಿಹರೆಯದ ಸಂಗಾತಿಗಳು ನೀವು ತುಂಬಾ ಬೇಸರಗೊಂಡಿದ್ದೀರಿ ಎಂದು ಭಾವಿಸಬಹುದು. ಆದರೆ ನೀವು ದಿನದಲ್ಲೂ ಕನಸು ಕಾಣುತ್ತಲಿರುತ್ತೀರಿ.

English summary

This Is The 'Right Age' For You To Marry As Per Your Sun Sign!

The decision to get married is an important one. You want to make sure you're doing the right thing - not just for you, but also your family members as well as the person you plan on marrying. While finding the right life partner is probably the essential task in your decision to get married, the age at which you get married is as important. Of course, if you haven't found the right life partner yet, no period is the right age. However, if you have, your zodiac sign can help you figure out the right age to get married.
Story first published: Friday, July 6, 2018, 18:09 [IST]
X
Desktop Bottom Promotion