For Quick Alerts
ALLOW NOTIFICATIONS  
For Daily Alerts

ಈ ಹಳ್ಳಿಯ ಭಾಷೆ ನಾವ್ಯಾರು ಮಾತನಾಡುವಂತಿಲ್ಲ- ಪೊಲೀಸರು ಇಲ್ಲಿಗೆ ಬರುವಂತಿಲ್ಲ!

By Hemanth
|

ಹಿಮಾಚಲ ಪ್ರದೇಶದಲ್ಲಿರುವ ಪುರಾತನ ಹಳ್ಳಿಯಲ್ಲಿ ಒಂದಾಗಿರುವ ಮಲಾನದ ಬಗ್ಗೆ ಹೊರಜಗತ್ತಿಗೆ ಹೆಚ್ಚು ತಿಳಿದಿಲ್ಲ. ಯಾಕೆಂದರೆ ಈ ಹಳ್ಳಿಯೇ ಹಾಗೆ. ಹಳ್ಳಿಯಲ್ಲಿ ಹಲವಾರು ರೀತಿಯ ರಹಸ್ಯಗಳು ಹುದುಗಿವೆ. ಇಲ್ಲಿ ಬೆಳೆಯುವಂತಹ ಚರಸ್ ಮಾತ್ರ ವಿಶ್ವದೆಲ್ಲೆಡೆ ಪ್ರಸಿದ್ಧಿ.

ಮಲಾನ ಹಳ್ಳಿಯಲ್ಲಿ ತನ್ನದೇ ಆಗಿರುವಂತಹ ಜೀವನಶೈಲಿಯಿದೆ ಮತ್ತು ಇಲ್ಲಿನ ಜನರು ತುಂಬಾ ಶಿಸ್ತುಬದ್ಧವಾಗಿ ಸಂಪ್ರದಾಯಗಳನ್ನು ಪಾಲಿಸಿಕೊಂಡು ಹೋಗುವರು. ಹೊರಜಗತ್ತಿಗೆ ತಿಳಿಯದೇ ಇರುವ ಮಲಾನ ಗ್ರಾಮದ ಹತ್ತು ರಹಸ್ಯಗಳ ಬಗ್ಗೆ ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ಓದಿಕೊಳ್ಳಿ...

ಮಲಾನ ಕ್ರೀಮ್-ವಿಶ್ವದ ಅತ್ಯುತ್ತಮ ಮರಿಜುನಾ ಬೆಳೆ

ಮಲಾನ ಕ್ರೀಮ್-ವಿಶ್ವದ ಅತ್ಯುತ್ತಮ ಮರಿಜುನಾ ಬೆಳೆ

ಮಲಾನವು ಇಲ್ಲಿ ಬೆಳೆಸಲಾಗುವ ಚರಸ್ ಗೆ ತುಂಬಾ ಪ್ರಸಿದ್ಧಿ ಪಡೆದುಕೊಂಡಿದ್ದು, ಇದಕ್ಕಾಗಿ ವಿಶ್ವದ ಮೂಲೆ ಮೂಲೆಗಳಿಗೆ ಜನರು ಇಲ್ಲಿಗೆ ಆಗಮಿಸುವರು. ಇಲ್ಲಿ ಒಳ್ಳೆಯ ಗುಣಮಟ್ಟದ ಹಶಿಶ್ ಇದೆ. ಮಲಾನ ಕ್ರೀಮ್ ಗೆ 1994 ಮತ್ತು 1996ರಲ್ಲಿ ಟೈಮ್ಸ್ ಮ್ಯಾಗಜಿನ್ ನ ಕ್ಯಾನ್ನಬಿಸ್ ಕಪ್ ನಲ್ಲಿ ಉತ್ತಮ ಹಶಿಶ್ ಪ್ರಶಸ್ತಿಯು ಸಿಕ್ಕಿದೆ.

ವಿಶ್ವದ ಅತೀ ಪುರಾತನ ಪ್ರಜಾತಂತ್ರ

ವಿಶ್ವದ ಅತೀ ಪುರಾತನ ಪ್ರಜಾತಂತ್ರ

ಈ ಗ್ರಾಮದಲ್ಲಿ ಶತಮಾನಗಳಿಂದಲೂ ಪ್ರಜಾತಂತ್ರ ವ್ಯವಸ್ಥೆಯಿದ್ದು, ಇದು ವಿಶ್ವದ ಅತೀ ಪುರಾತನ ಪ್ರಜಾತಂತ್ರವೆಂದು ಜನರು ಭಾವಿಸಿದ್ದಾರೆ. ಸಂಪೂರ್ಣ ಗ್ರಾಮದ ಆಡಳಿತವನ್ನು ಎಂಟು ಸದಸ್ಯರ ಸಮಿತಿಯ ನೋಡಿಕೊಳ್ಳುತ್ತದೆ. ಇವರು ಶಕ್ತಿಶಾಲಿ ದೇವರು ಜಂಬ್ಲು ದೇವತಾದ ಪ್ರತಿನಿಧಿಗಳು ಎಂದು ಜನರು ಭಾವಿಸಿದ್ದಾರೆ. ಯಾವುದೇ ಸಮಸ್ಯೆಯಲ್ಲೂ ಈ ಎಂಟು ಮಂದಿಯ ನಿರ್ಧಾರವು ಅಂತಿಮ ಮತ್ತು ಹೊರಗಿನವರು ಮಧ್ಯ ಪ್ರವೇಶಿಸುವಂತಿಲ್ಲ. ಮಲಾನವನ್ನು ಹಿಮಾಲಯದ ಅಥೆನ್ಸ್ ಎಂದು ಕರೆಯಲಾಗುತ್ತದೆ.

ಕನಶಿ-ಪವಿತ್ರ ಭಾಷೆ ಮತ್ತು ಹೊರಗಿನವರಿಗೆ ಮಾತನಾಡಲಿಕ್ಕಿಲ್ಲ!

ಕನಶಿ-ಪವಿತ್ರ ಭಾಷೆ ಮತ್ತು ಹೊರಗಿನವರಿಗೆ ಮಾತನಾಡಲಿಕ್ಕಿಲ್ಲ!

ಪರಶುರಾಮನ ತಂದೆ ಋಷಿ ಜಮದಗ್ನಿಯು ಘೋರ ತಪಸ್ಸನ್ನು ಮಾಡಿ, ರಾಕ್ಷಸರಿಂದ ಈ ಗ್ರಾಮವನ್ನು ಬಿಡುಗಡೆಗೊಳಿಸಿದರು. ರಾಕ್ಷಸರ ಕೊನೆಯಾಸೆ ಎಂದರೆ ತಮ್ಮ ಭಾಷೆಯನ್ನು ಇಲ್ಲಿರುವವರು ಮಾತನಾಡಬೇಕೆಂದು ಆಗಿತ್ತು. ಇದು ಈಗಲೂ ಮುಂದುವರಿದಿದೆ. ಕನಶಿ ಈ ಗ್ರಾಮದ ಒಂದು ರಹಸ್ಯ ಮತ್ತು ಹೊರಗಿನವರು ಸಂಪರ್ಕಕ್ಕೆ ಇದನ್ನು ಬಳಸಲು ಅನುಮತಿಯಿಲ್ಲ.

ಪೊಲೀಸರು ಇಲ್ಲಿಗೆ ಬರುವಂತಿಲ್ಲ!

ಪೊಲೀಸರು ಇಲ್ಲಿಗೆ ಬರುವಂತಿಲ್ಲ!

ಸಮಿತಿಯ ಮೂಲಕವೇ ಗ್ರಾಮಸ್ಥರು ತಮ್ಮ ವಿವಾದಗಳನ್ನು ನಿವಾರಿಸಿಕೊಳ್ಳುವರು. ಈ ಗ್ರಾಮಕ್ಕೆ ಪೊಲೀಸರು ಬರುವಂತಿಲ್ಲ. ಭೂಮಿಗೆ ಸಂಬಂಧಿಸಿದ ಕೆಲವು ವಿಚಾರಗಳನ್ನು ಬಗೆಹರಿಸುವಂತೆ ಇತ್ತೀಚೆಗೆ ಕೆಲವು ಜನರು ಕುಲ್ಲು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಕುರಿಮರಿಗಳಿಗೆ ವಿಷವುಣಿಸಿ ವಿವಾದ ಬಗೆಹರಿಸುವುದು

ಕುರಿಮರಿಗಳಿಗೆ ವಿಷವುಣಿಸಿ ವಿವಾದ ಬಗೆಹರಿಸುವುದು

ಕುರಿಮರಿಗಳಿಗೆ ವಿಷವುಣಿಸುವ ಮೂಲಕ ಯಾವುದೇ ವಿವಾದ ಬಗೆಹರಿಸಿಕೊಳ್ಳುವರು. ಮೊದಲು ಸತ್ತ ಕುರಿಮರಿಯ ತಂಡವು ವಿವಾದದಲ್ಲಿ ಸೋತಂತೆ.

ಅಸ್ಪೃಶ್ಯತೆ ಈಗಲೂ ಜೀವಂತ!

ಅಸ್ಪೃಶ್ಯತೆ ಈಗಲೂ ಜೀವಂತ!

ಮಲಾನಿಗಳಲ್ಲದೆ ಇರುವವರನ್ನು ಈ ಗ್ರಾಮದವರು ಕೆಳ ಮಟ್ಟದವರು ಮತ್ತು ಅಸ್ಪೃಶ್ಯರು ಎಂದು ತಿಳಿದಿರುವರು. ಮಲಾನಗೆ ಭೇಟಿ ನೀಡುವ ಪ್ರವಾಸಿಗಳು ಕೆಲವೊಂದು ನಿಯಮಗಳನ್ನು ಪಾಲಿಸಲೇಬೇಕು. ಇಲ್ಲಿ ಅವರು ಕೆಲವೊಂದು ಗೋಡೆ, ಮನೆಗಳು ಅಥವಾ ಜನರನ್ನು ಮುಟ್ಟುವಂತಿಲ್ಲ. ಹೀಗೆ ಮುಟ್ಟಿದರೆ ಅದಕ್ಕೆ ಪ್ರವಾಸಿಗಳು ದಂಡ ತೆರಬೇಕು. ಇದರಿಂದ ಕುರಿಯನ್ನು ಖರೀದಿಸಿ, ಬಲಿ ನೀಡಿ ಅಶುದ್ಧವಾಗಿರುವ ಜಾಗವನ್ನು ಶುದ್ಧೀಕರಿಸಲಾಗುವುದು.

ಎರಡು ಮಹಡಿ ಮನೆಗಳು

ಎರಡು ಮಹಡಿ ಮನೆಗಳು

ಮಲಾನದಲ್ಲಿ ಪ್ರತಿಯೊಂದು ಮನೆಗಳು ಎರಡು ಮಹಡಿಯದ್ದಾಗಿದೆ. ಪ್ರತಿಯೊಂದು ಮಹಡಿಗೂ ವಿಶೇಷ ಹೆಸರು ಮತ್ತು ಉದ್ದೇಶವಿದೆ. ನೆಲಮಹಡಿಯಲ್ಲಿ ಜಾನುವಾರು ಕೊಟ್ಟಿಗೆಯಿದೆ ಮತ್ತು ಇಲ್ಲಿ ಕಟ್ಟಿಗೆ ಹಾಗೂ ಕುರಿ ಮತ್ತು ಆಡುಗಳಿಗೆ ಆಹಾರವನ್ನು ಶೇಖರಿಸಿ ಇಡಲಾಗುವುದು. ಮೊದಲ ಮಹಡಿಯಲ್ಲಿ ಆಹಾರಧಾನ್ಯ, ಮರ, ನೇಯ್ಗೆಯ ಉಣ್ಣೆಯ ಬಟ್ಟೆಯನ್ನು ಶೇಖರಿಸಿ ಇಡಲಾಗುವುದು. ಮೇಲಿನ ಮಹಡಿಯಲ್ಲಿ ಜನರು ವಾಸ ಮಾಡುವರು.

ಪರಿಸರ ಪರಂಪರೆ ರಕ್ಷಣೆ

ಪರಿಸರ ಪರಂಪರೆ ರಕ್ಷಣೆ

ಗ್ರಾಮದಲ್ಲಿರುವ ನಿಯಮದ ಪ್ರಕಾರ ಮರಗಳಿಗೆ ಮೊಳೆ ಬಡಿಯುವುದು ಮತ್ತು ಕಾಡಿಗೆ ಬೆಂಕಿ ಹಚ್ಚುವುದು ನಿಷಿದ್ಧ. ಒಣಗಿದ ಕಟ್ಟಿಗೆಯನ್ನು ಮಾತ್ರ ಅರಣ್ಯದಿಂದ ತರಬಹುದಾಗಿದೆ. ಗ್ರಾಮದ ಸಮಿತಿಯ ಅನುಮತಿ ಇಲ್ಲದೆ ಬೇಟೆಯಾಡುವಂತಿಲ್ಲ.

ವಿಚ್ಛೇದನ ವಿರಳವೇನಲ್ಲ

ವಿಚ್ಛೇದನ ವಿರಳವೇನಲ್ಲ

ಈ ಗ್ರಾಮದಲ್ಲಿ ಯಾವುದೇ ಪುರೋಹಿತರು ಮತ್ತು ಶಾಸ್ತ್ರಗಳು ಇಲ್ಲದೆ ಮದುವೆ ನಡೆಯುವುದು. ಸ್ಥಳೀಯರು ಇದನ್ನು ರಾಕ್ಷಸಿ ಮದುವೆ ಎಂದು ಕರೆಯುವರು. ವರ ಮನೆಗೆ ವಧು ಹೋಗುವಳು. ವಿಚ್ಛೇದನವಾದರೆ ಮಹಿಳೆಗೆ ಪ್ರತ್ಯೇಕ ಮನೆ ಹಾಗೂ ಆಹಾರದ ವ್ಯವಸ್ಥೆ ಪುರುಷರು ಮಾಡಬೇಕು. ವಿಚ್ಛೇದಿತ ಮಹಿಳೆಯರು ಮತ್ತು ವಿಧವೆಯರು ಮರುಮದುವೆಯಾಗಬಹುದು. ಬಹುಪತ್ನಿತ್ವ ಇಲ್ಲಿ ನಿಷಿದ್ಧ.

ಅಲೆಕ್ಸಾಂಡರ್ ಸೇನೆಯ ಗ್ರೀಕ್ ವಂಶಸ್ಥರು

ಅಲೆಕ್ಸಾಂಡರ್ ಸೇನೆಯ ಗ್ರೀಕ್ ವಂಶಸ್ಥರು

ಈ ಸಮುದಾಯದ ಬಗ್ಗೆ ಹಲವಾರು ಪುರಾಣಗಳು ಇವೆ. ಇದರಲ್ಲಿ ಒಂದರ ಪ್ರಕಾರ ಗ್ರೀಕ್ ನ ಅಲೆಕ್ಸಾಂಡರ್ ನ ಸೇನೆಯವರು ಇವರ ವಂಶಸ್ಥರು ಎನ್ನಲಾಗುತ್ತಿದೆ. ಅಲೆಕ್ಸಾಂಡರ್ ದೇಶ ತೊರೆದ ಬಳಿಕ ಕೆಲವು ಸೈನಿಕರು ಈ ಅಜ್ಞಾತ ಜಾಗದಲ್ಲಿ ನಿರಾಶ್ರಿತರಾಗಿ ಉಳಿದರು ಮತ್ತು ಅವರು ಇಲ್ಲಿಯೇ ಖಾಯಂ ಆಗಿ ಉಳಿದುಕೊಂಡರು ಎನ್ನಲಾಗುತ್ತದೆ.

English summary

The Untold Story Of Malana – A mystic village known for its charas!

Malana, an ancient Indian village in Himachal Pradesh, is isolated from the rest of the world. Rest of world only cares for Malana because it grows the best charas in the world. Malana has its own lifestyle and social structure and people strictly follow their customs. Here are the (best) secrets of Malana that are not known to the outsiders.
X
Desktop Bottom Promotion