ರಾಶಿಚಕ್ರಕ್ಕೆ ಅನುಗುಣವಾಗಿ ನಿಮ್ಮಲ್ಲಿರುವ ಭಯಾನಕ ವಿಷಯಗಳು ಗೊತ್ತಾ?

Posted By: Deepu
Subscribe to Boldsky

ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಆಸೆ-ಆಕಾಂಕ್ಷೆಗಳು ಇರುತ್ತವೆ. ಅಂತೆಯೇ ವಿವಿಧ ಮನೋ ಕಾಮನೆಗಳು ಪ್ರಚೋದಿಸುತ್ತಲಿರುತ್ತವೆ. ಅದರ ಅನುಸಾರವಾಗಿ ವ್ಯಕ್ತಿ ಅದು ಅದು ಅಗತ್ಯವಾದುದ್ದೇ ಅಥವಾ ಇಲ್ಲವೇ ಎನ್ನುವುದನ್ನು ಮನಗಂಡು, ಬಳಿಕ ನಿರ್ಧಾರವನ್ನು ಕೈಗೊಳ್ಳುತ್ತಾನೆ. ಆ ನಿರ್ಧಾರವು ಹೇಗಿರುತ್ತದೆ ಎನ್ನುವುದರ ಆಧಾರದ ಮೇಲೆ ವ್ಯಕ್ತಿಯ ವರ್ತನೆ ಹಾಗೂ ವ್ಯಕ್ತಿತ್ವ ನಿರ್ಧಾರವಾಗುತ್ತದೆ ಎನ್ನಬಹುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ಮಾನಸಿಕ ಚಿಂತನೆಗಳು ಹಾಗೂ ವರ್ತನೆಗಳಲ್ಲೆಲ್ಲವೂ ಆತನ ಕುಂಡಲಿ ಹಾಗೂ ಗ್ರಹಗತಿಗಳ ಆಧಾರದ ಮೇಲೆಯೇ ನಿರ್ಧಾರವಾಗುತ್ತದೆ ಎಂದು ಹೇಳಲಾಗುವುದು. ಅಂತೆಯೇ ಪ್ರತಿಯೊಬ್ಬರಲ್ಲೂ ಅವರ ರಾಶಿಚಕ್ರದ ಹಿನ್ನೆಲೆಯಲ್ಲಿ ಭಯಾನಕ ಗುಣಗಳು ಅಥವಾ ವಿಷಯಗಳು ಇರುತ್ತವೆ ಎಂದು ಹೇಳಲಾಗುವುದು. ಹಾಗಾದರೆ ಆ ಭಯಾನಕ ವಿಚಾರಗಳು ಏನು ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎಂದುಕೊಂಡಿದ್ದರೆ ಮುಂದಿರುವ ವಿವರಣೆಯನ್ನು ಪರಿಶೀಲಿಸಿ....

ಮೇಷ

ಮೇಷ

ಈ ರಾಶಿಚಕ್ರದವರು ಆಗಾಗ ಸಾವಿನ ವಿಚಾರದ ಬಗ್ಗೆ ಹೆಚ್ಚು ಯೋಚಿಸುತ್ತಿರುತ್ತಾರೆ. ಅದು ಯಾವುದೇ ಬಗೆಯ ಸಾವಿನ ವಿಚಾರವಾಗಿರಬಹುದು. ಅವರದ್ದೇ ಸಾವಿನ ಬಗ್ಗೆ ಅಥವಾ ಅವರ ಪ್ರೀತಿಪಾತ್ರರ ಸಾವಿನ ಬಗ್ಗೆಯೇ ಆಗಿರಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ವೃಷಭ

ವೃಷಭ

ಇವರು ಸಂಬಂಧಗಳ ಬಗ್ಗೆ ಹೆಚ್ಚು ಕಾಳಜಿ ಹಾಗೂ ಕುತೂಹಲವನ್ನು ಹೊಂದಿರುತ್ತಾರೆ. ಹಿಂದಿನ ಸಂಬಂಧಗಳ ಬಗ್ಗೆ ಹೆಚ್ಚು ಚಿಂತನೆ ನಡೆಸುತ್ತಿರುತ್ತಾರೆ. ಜೊತೆಗೆ ಸಾಮಾಜಿಕ ಕ್ಷೇತ್ರ ಹಾಗೂ ಮಾಧ್ಯಮಗಳಲ್ಲಿ ಯಾವ ಪ್ರಭಾವ ಬೀರಿದೆ ಎನ್ನುವುದರ ಬಗ್ಗೆ ಯೋಚಿಸುತ್ತಾರೆ.

ಮಿಥುನ

ಮಿಥುನ

ಈ ರಾಶಿಯವರು ಹುಟ್ಟು ಸುಳ್ಳುಗಾರರು ಎನ್ನಬಹುದು. ಇವರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಕೆಲಸ ಮಾಡಲು ಬಯಸುತ್ತಾರೆ. ಇವರು ಕೆಲವು ಸನ್ನಿವೇಶಗಳಿಗೆ ತಮ್ಮದೇ ಆದ ಕಥೆಯನ್ನು ಕಟ್ಟುತ್ತಾರೆ. ಜೊತೆಗೆ ತಮ್ಮ ವಾಸ್ತವದ ಜೀವನದ ಸ್ಥಿತಿಯನ್ನು ಎಲ್ಲರಲ್ಲೂ ಹೇಳಿಕೊಳ್ಳುತ್ತಾ ಬರುತ್ತಾರೆ.

ಕರ್ಕ

ಕರ್ಕ

ಇವರು ಎಲ್ಲಾ ಎಂತಹದ್ದೇ ವಿಷಯಕ್ಕೆ ಆಗಿರಬಹುದು ಅಥವಾ ಕೆಲವು ವ್ಯಕ್ತಿಗಳ ಬಗ್ಗೆ ಸದಾ ಬೆನ್ನತ್ತಿ ಹೋಗುತ್ತಾರೆ. ಕೆಲವೊಮ್ಮೆ ಅದೇ ಅವರಿಗೊಂದು ಗೀಳಾಗುವ ಸಾಧ್ಯತೆಗಳಿರುತ್ತವೆ. ಇವರ ಈ ವರ್ತನೆಯು ಅವರ ಪ್ರೀತಿ ಪಾತ್ರರಿಗೆ ಉಸಿರುಗಟ್ಟಿಸುವಂತೆ ಮಾಡುವ ಸಾಧ್ಯತೆಗಳೂ ಇರುತ್ತವೆ. ಅಲ್ಲದೆ ಅವರ ಸಂಬಂಧ ಹಾನಿಗೊಳಗಾಗುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗುವುದು.

ಸಿಂಹ

ಸಿಂಹ

ಈ ರಾಶಿಯವರು ಯಾರನ್ನಾದರೂ ಇಷ್ಟಪಟ್ಟರೆ ಅಥವಾ ಯಾವುದಾದರೂ ವಸ್ತುವನ್ನು ಬಯಸಿದರೆ ಅದನ್ನು ಪಡೆಯಲು ಏನು ಬೇಕಾದರೂ ಮಾಡಲು ಸಿದ್ಧವಾಗುತ್ತಾರೆ. ಸ್ವಯಂ ಗೀಳನ್ನು ಹೊಂದಿರುವ ಇವರು ತಮ್ಮ ಆಧ್ಯತೆಗಳನ್ನು ಸ್ಥಾಪಿಸಲು ಮೊದಲು ಪ್ರಯತ್ನಿಸುತ್ತಾರೆ. ಯಾರೂ ಇವರಿಗಿಂತ ಹೆಚ್ಚು ಉತ್ತಮರಾಗಿರಲು ಸಾಧ್ಯವಿಲ್ಲ ಎನ್ನುವುದನ್ನು ತೋರಿಸಲು ಮುಂದಾಗುತ್ತಾರೆ.

ಕನ್ಯಾ

ಕನ್ಯಾ

ಈ ರಾಶಿಯವರು ತಮ್ಮದೇ ಆದ ರಹಸ್ಯವನ್ನು ಒಳಗೊಂಡಿರುತ್ತಾರೆ. ತಮ್ಮ ಲೈಂಗಿಕತೆಯನ್ನು ವ್ಯಕ್ತಪಡಿಸಲು ದೂರ ಸರಿಯುತ್ತಾರೆ. ಆದರೆ ಅದೇ ಸಮಯದಲ್ಲಿ ತಮ್ಮ ಲೈಂಗಿಕತೆಯ ಬಗ್ಗೆ ಅನ್ವೇಷಿಸಲು ಕನಸು ಕಾಣುತ್ತಾರೆ. ಈ ವಿಷಯಗಳನ್ನು ಚರ್ಚಿಸಲು ಮುಜುಗರಕ್ಕೆ ಒಳಗಾಗುತ್ತಾರೆ. ಹಾಗಾಗಿ ಪುನಃ ಅದನ್ನು ಮರೆಮಾಚುತ್ತಾರೆ.

ತುಲಾ

ತುಲಾ

ಇವರೊಬ್ಬ ಕುತೂಹಲಕಾರಿ ವ್ಯಕ್ತಿಗಳು ಎಂದು ಹೇಳಬಹುದು. ಇವರು ಸದಾ ತಮ್ಮ ಸುತ್ತಲು ಏನು ನಡೆಯುತ್ತಿದೆ ಎನ್ನುವುದರ ಬಗ್ಗೆ ಹೆಚ್ಚು ಕುತೂಹಲವನ್ನು ಹೊಂದಿರುತ್ತಾರೆ. ಇವರು ಈ ರೀತಿಯ ಆಸಕ್ತಿಯನ್ನು ಹೊಂದಿದ್ದಾರೆ ಎನ್ನುವುದನ್ನು ಯಾರಿಗೂ ತಿಳಿಯದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಾರೆ.

ವೃಶ್ಚಿಕ

ವೃಶ್ಚಿಕ

ಇವರು ಯಾರನ್ನಾದರೂ ಕೊಲೆ ಮಾಡುವ ಕನಸನ್ನು ಕಾಣುತ್ತಿರುತ್ತಾರೆ. ಇವರು ಕೊಲೆ ಮಾಡುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳುತ್ತಿರುತ್ತಾರೆ. ಈ ಒಂದು ವಿಚಾರ ಇವರಿಗೆ ಯಾವುದೇ ದೊಡ್ಡ ವಿಷಯವಾಗಿರುವುದಿಲ್ಲ.

ಧನು

ಧನು

ಈ ರಾಶಿಯವರು ಭಾವನೆಗಳಿಂದ ಪ್ರತ್ಯೇಕವಾಗಿರುವ ವ್ಯಕ್ತಿಗಳು ಎಂದು ಹೇಳಬಹುದು. ಇವರು ಯಾವುದೇ ಸಂತೋಷ ಅಥವಾ ದುಃಖದ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಎಂತಹ ಸಮಾಚಾರ ಸಮಭವಿಸಿದರೂ ಅಷಾಗಿ ಪ್ರತಿಕ್ರಿಯಿಸುವುದಿಲ್ಲ. ಹಾಗಾಗಿ ಬಹಳ ತಂಪಾದ ವ್ಯಕ್ತಿತ್ವ ಹೊಂದಿದವರಂತೆ ಇರುತ್ತಾರೆ.

ಮಕರ

ಮಕರ

ಇವರು ತಮ್ಮ ಪ್ರೀತಿಪಾತ್ರರನ್ನು ಅತಿರೇಕವಾಗಿ ಪ್ರೀತಿಸುತ್ತಾರೆ. ಹಾಗೊಮ್ಮೆ ಏನಾದರೂ ಅವಘಡವಾದರೆ ಅವರನ್ನು ಹತ್ಯೆ ಮಾಡುವುದಕ್ಕೂ ಹಿಂಜರಿಯುವುದಿಲ್ಲ. ಇವರು ಸದಾ ತಮ್ಮ ಪ್ರೀತಿ ಪಾತ್ರರ ಜೊತೆ ಹೇಗೆ ಹೋರಾಡಬೇಕು? ಹೇಗೆ ಬದುಕಬೇಕು? ಎನ್ನುವುದರ ಬಗ್ಗೆಯೇ ಹೆಚ್ಚು ಚಿಂತಿಸುತ್ತಾರೆ.

ಕುಂಭ

ಕುಂಭ

ಇವರು ತಮ್ಮ ಪ್ರೀತಿ ಪಾತ್ರರ ಅಂತ್ಯ ಕ್ರಿಯೆಯ ಸಂದರ್ಭದಲ್ಲಿ ಹೇಗಿರಬೇಕು ಎನ್ನುವುದರ ಬಗ್ಗೆ ಹೆಚ್ಚು ಯೋಚಿಸುತ್ತಿರುತ್ತಾರೆ. ತಾಯಿಯ ಸಾವಿನ ನಂತರ ಏನು ಹೇಳಿದ್ದೇವೆ ಎನ್ನುವುದರ ಬಗ್ಗೆ ಆಗಾಗ ಆಶ್ಚರ್ಯ ವ್ಯಕ್ತಪಡಿಸುತ್ತಿರುತ್ತಾರೆ. ಈ ರೀತಿಯ ಚಿಂತನೆಗಳ ಬಗ್ಗೆ ಹೆಚ್ಚು ಚಿಂತನೆ ನಡೆಸುತ್ತಿರುತ್ತಾರೆ.

ಮೀನ

ಮೀನ

ಇವರು ಇಡೀ ಪ್ರಪಂಚವನ್ನೇ ವಶಪಡಿಸಿಕೊಳ್ಳುವಷ್ಟು ಕನಸ್ಸನ್ನು ಕಾಣುವ ವ್ಯಕ್ತಿಗಳಾಗಿರುತ್ತಾರೆ. ಯಾವುದೇ ನಿರ್ಣಾಯಕ ಪರಿಸ್ಥಿತಿಯಲ್ಲೂ ತಮ್ಮದೇ ಆದ ವರ್ತನೆಯನ್ನು ತೋರುತ್ತಾರೆ. ಇವರು ಪ್ರಪಂಚದಲ್ಲಿ ತಾವೇ ವೀರರು ಎನ್ನುವ ರೀತಿಯಲ್ಲಿ ವರ್ತಿಸುತ್ತಾರೆ.

English summary

the Most Scary Things About Your Zodiac Signs

If you think that you are the only person who gets freaky thoughts at any given point of time, then fret not! According to astrology, each zodiac sign has its own share of creepy behavioural traits and thoughts. These thoughts seem to be weird; however, you are not alone on this one, as we are providing a list of creepy thoughts that each person would get based on the zodiac.