For Quick Alerts
ALLOW NOTIFICATIONS  
For Daily Alerts

  ಸಿಂಹ ರಾಶಿಯ ಜೂನ್ ತಿಂಗಳ ರಾಶಿ ಭವಿಷ್ಯ

  |

  ನಿಮ್ಮ ಜೀವನದ ಬಹುತೇಕ ಎಲ್ಲಾ ವಿಚಾರಗಳಲ್ಲೂ ಮುಂಚಿತವಾಗಿಯೇ ಸುಧಾರಣೆಯನ್ನು ಕಾಣುವಿರಿ. ಹಾಗಾಗಿ ಸಿಂಹ ರಾಶಿಯವರಿಗೆ ಜೂನ್ ತಿಂಗಳು ಅತ್ಯುತ್ತಮವಾದ ತಿಂಗಳಾಗಲಿದೆ ಎಂದು ಊಹಿಸಲಾಗಿದೆ. ನಿಮ್ಮ ಸಂವಹನ ಕೌಶಲ್ಯವು ನಿಮಗೆ ಉತ್ತಮ ಬದಲಾವಣೆ ಹಾಗೂ ಸುಧಾರಣೆಯನ್ನು ತಂದುಕೊಡುತ್ತದೆ. ನಿಮ್ಮ ಹೆಚ್ಚಿನ ಸಮಯವನ್ನು ಸಂವಹನದಲ್ಲಿ ಕಳೆಯಲಿದ್ದೀರಿ. ನೀವು ಮಾಡುವ ಕೆಲಸದಲ್ಲಿ ಆತ್ಮವಿಶ್ವಾಸ ಹಾಗೂ ವಿಶ್ವಾಸವನ್ನು ಗಳಿಸಿಕೊಳ್ಳುವುದರ ಅಗತ್ಯವಿರುತ್ತದೆ.

  ಈ ತಿಂಗಳು ನಿಮಗೆ ಉತ್ತಮ ಸಂಗಾತಿಯನ್ನು ಆಕರ್ಷಿಸಲು ಸಹಾಯ ಮಾಡುವುದು. ನಿಮ್ಮ ರಾಶಿಚಕ್ರದ ಮನೆಯಲ್ಲಿರುವ ಸೂರ್ಯನು ನಿಮಗೆ ಧನಾತ್ಮಕ ಶಕ್ತಿಯನ್ನು ಆಶೀರ್ವದಿಸುತ್ತಾನೆ. ಅಲ್ಲದೆ ಅಗತ್ಯವಾದ ಸ್ಥಳಗಳಲ್ಲಿ ಧನಾತ್ಮಕ ಬದಲಾವಣೆಯನ್ನು ತರಲು ಸಹಾಯ ಮಾಡುವುದು. ನಿಮ್ಮ ಸಾಮಾನ್ಯ ಕೆಲಸದಿಂದ ಹೊರತುಪಡಿಸಿ. ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ನೀವು ಯೋಜಿಸುತ್ತೀರಿ. ಇದು ನವೀಕರಿಸಿದ ಶಕ್ತಿಯೊಂದಿಗೆ ನಿಮ್ಮನ್ನು ಚೈತನ್ಯಗೊಳಿಸುತ್ತದೆ. 

  Leo Monthly Horoscope

  ನಿಮ್ಮ ಹೆಚ್ಚಿನ ಪ್ರಯತ್ನಗಳನ್ನು ಮೆಚ್ಚಲಾಗುತ್ತದೆ. ಕುಟುಂಬದ ವಿಷಯಗಳನ್ನು ನೀವು ನಿರೀಕ್ಷಿಸಬಹುದು. ಇದರಿಂದ ನಿಮ್ಮ ಕೆಲಸದ ಮೇಲೆ ನಕಾರಾತ್ಮಕ ಪರಿಣಾಮವನ್ನು ಎದುರಿಸ ಬೇಕಾಗುವುದು. ಹಾಗಾಗಿ ಆದಷ್ಟು ಕಾಳಜಿಯಿಂದ ಇರಬೇಕಾಗುವುದು. ಇತರರ ಮೇಲೆ ಅಹಂಕಾರವನ್ನು ತೋರಿಸದಿರಿ. ನಿರುತ್ಸಾಹದ ಸಮಯದಲ್ಲಿ ಉದ್ಭವಿಸುವ ಸ್ಪರ್ಧಾತ್ಮಕ ಸ್ವಭಾವವನ್ನು ಬಿಡಬೇಡಿ. ಉತ್ತಮ ದೇಹ ದಂಡನೆಯಿಂದ ಆರೋಗ್ಯವು ಸುಧಾರಣೆ ಕಾಣುವುದು. ನಿಮ್ಮ ಪ್ರೀತಿಯ ಜೀವನ, ಆರೋಗ್ಯ ಸ್ಥಿತಿ, ವೃತ್ತಿ ಜೀವನ ಹಾಗೂ ಹಣಕಾಸಿನ ಸ್ಥಿತಿಯ ಕುರಿತು ಇನ್ನಷ್ಟು ತಿಳಿಯಲು ಈ ಮುಂದಿರುವ ವಿವರಣೆಯನ್ನು ಅರಿಯಿರಿ....

  ಆರೋಗ್ಯ ಸ್ಥಿತಿ

  ಈ ತಿಂಗಳು ನೀವು ಆರೋಗ್ಯ ಸಮಸ್ಯೆಗಳಿಂದಾಗಿ ಒಂದಿಷ್ಟು ವೈದ್ಯಕೀಯ ಖರ್ಚುಗಳನ್ನು ಮಾಡುವಿರಿ. ಇದಕ್ಕೆ ಮೂಲ ಕಾರಣವು ಮಾನಸಿಕ ಹಾಗೂ ದೈಹಿಕ ಒತ್ತಡ ಎನ್ನಲಾಗುತ್ತದೆ. ನಿಮ್ಮ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಕಾಯ್ದುಕೊಳ್ಳಲು ಸಾಕಷ್ಟು ವ್ಯಾಯಾಮ ಹಾಗೂ ಉತ್ತಮ ದಿನಚರಿಯನ್ನು ಅನುಸರಿಸಬೇಕು. ಸದೃಢ ದೇಹಕ್ಕಾಗಿ ಒಂದಿಷ್ಟು ಹಣವನ್ನು ವ್ಯಯ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುವುದು. ಮಿದುಳು ಉತ್ತಮ ಕಾರ್ಯ ನಿರ್ವಹಿಸಲು ಸಾಕಷ್ಟು ಮಾನಸಿಕ ಕೆಲಸಗಳನ್ನು ನಿರ್ವಹಿಸಿ.

  ಮನೆಯಿಂದಾಚೆ ಸಿಗುವ ಆಹಾರ ಪದಾರ್ಥಗಳನ್ನು ಸೇವಿಸದಿದ್ದರೆ ಉತ್ತಮ. ಅಲ್ಲದೆ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಇರಬಹುದು. ದೇಹದ ತೂಕದ ಬಗ್ಗೆಯೂ ಸಾಕಷ್ಟು ಕಾಳಜಿ ವಹಿಸುವುದು ಸೂಕ್ತ. ಆಹಾರದಿಂದ ಅಲರ್ಜಿ ಉಂಟಾಗುವ ಸಾಧ್ಯತೆಗಳು ಇವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ತಿಂಗಳು ಮಾನಸಿಕ ಒತ್ತಡ ಅಥವಾ ಅಸ್ವಸ್ಥತೆಗೆ ಒಳಗಾಗುವ ಸಾಧ್ಯತೆಗಳಿವೆ. ಹಾಗಾಗಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ಸೂಕ್ತ ತಪಾಸಣೆ ಹಾಗೂ ಆರೈಕೆಗೆ ಒಳಗಾಗುವುದನ್ನು ಮರೆಯದಿರಿ.

  Leo Monthly Horoscope

  ವೃತ್ತಿ ಜೀವನ

  ವೃತ್ತಿ ಕ್ಷೇತ್ರದಲ್ಲಿ ನೀವು ನಿಮ್ಮ ಮೇಲಾಧಿಕಾರಿಗಳನ್ನು ಆಕರ್ಷಿಸಲು ಬಹಳ ಸುಲಭವಾಗುತ್ತದೆ. ಅವರು ನಿಮ್ಮ ಮೇಲೆ ಸಾಕಷ್ಟು ಗಮನ ನೀಡಬಹುದು. ನಿಮ್ಮ ಏಳಿಗೆಯನ್ನು ಕಂಡು ಸಹೋದ್ಯೋಗಿಗಳು ಅಸೂಯೆ ಪಡುವ ಸಾಧ್ಯತೆಗಳಿವೆ. ಹಾಗಾಗಿ ನೀವು ನಿಮ್ಮ ಅಧಿಕಾರಿಗಳಿಂದ ಹಿಡಿದು ಎಲ್ಲರೊಂದಿಗೂ ಉತ್ತಮ ಸಂಬಂಧದಿಂದ ಇರಲು ಪ್ರಯತ್ನಿಸಬೇಕು. ಅಸಂಪ್ರದಾಯಿಕ ರೀತಿಯಲ್ಲಿ ಕೆಲಸ ಮಾಡುವಂತೆ ಕೆಲವು ಪ್ರಚೋದನೆಗಳು ನಿಮಗೆ ಉಂಟಾಗಬಹುದು. ಆದರೆ ಆ ಮಾರ್ಗಗಳನ್ನು ಅನುಸರಿಸದೆ ಇರುವುದು ಸೂಕ್ತ ಎನ್ನುವುದನ್ನು ತಿಳಿಯಬೇಕು. ನಿಮ್ಮ ಹೃದಯದ ಮಾತನ್ನು ಕೇಳಿ ಯೋಚನೆ ಹಾಗೂ ಯೋಜನೆಯನ್ನು ಕೈಗೊಳ್ಳಿ.

  ಆರ್ಥಿಕ ಸ್ಥಿತಿ

  ನಿಮ್ಮ ಹಣಕಾಸಿನ ಸ್ಥಿತಿ ಈ ತಿಂಗಳು ಉತ್ತಮವಾಗಿರಲಿದೆ. ನಿಮ್ಮ ತೀಕ್ಷ್ಣವಾದ ಬುದ್ಧಿ ಮತ್ತು ನಿಮ್ಮ ಹಿಂದಿನ ತಪ್ಪುಗಳಿಂದ ಕಲಿಯುವ ಸಾಮಥ್ರ್ಯ ನಿಮ್ಮಲಿದೆ. ದೀರ್ಘಕಾಲದ ಯೋಜನೆಯಲ್ಲಿ ಹೂಡಿಕೆ ಮಾಡಲು ಇದು ನಿಮಗೆ ಸೂಕ್ತ ಸಮಯ. ನೀವು ಸಾಕಷ್ಟು ಎಚ್ಚರಿಕೆಯನ್ನು ವಹಿಸದಿದ್ದರೆ ನಿಮ್ಮ ಬಿಡುವಿನ ಚಟುವಟಿಕೆಗಳು ಮತ್ತು ಹವ್ಯಾಸಗಳ ಮೇಲೆ ಖರ್ಚುಮಾಡುವುದು ಸಮೃದ್ಧವಾಗಿರುತ್ತದೆ. ಇದು ನಿಮ್ಮ ಹಣಕಾಸಿನ ಸ್ಥಿತಿಯ ಮೇಲೆ ಒತ್ತಡವನ್ನು ಉಂಟುಮಾಡುವುದು. ಆರೋಗ್ಯದ ಕುರಿತಾಗಿಯೂ ಸಾಕಷ್ಟು ಹಣ ವ್ಯಯಿಸಬೇಕಾಗುವುದು.

  ಗ್ರಹಗತಿಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ಆದರೆ ನೀವು ಹಣವನ್ನು ಗಳಿಸುವ ನಿಟ್ಟಿನಲ್ಲಿ ಹಣಕಾಸಿನ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿ ಕೊಳ್ಳಬಾರದು. ನೀವು ನಿಮ್ಮ ಮನೆಯನ್ನು ನವೀಕರಿಸುವ ಯೋಜನೆಯನ್ನು ಕುಟುಂಬದ ಸದಸ್ಯರ ಬೇಡಿಕೆಗೆ ಅನುಸಾರವಾಗಿ ಅನುಸರಿಸಬೇಕು. ದೀರ್ಘ ಪ್ರವಾಸ ಕೈಗೊಳ್ಳುವುದರ ಮೂಲಕ ನಿಮ್ಮ ಸಂಬಂಧವನ್ನು ಬಲಪಡಿಸಿಕೊಳ್ಳಬಹುದು. ಆದರೆ ಹಣದ ಖರ್ಚುಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗುವುದು ಎಂದು ಸೂಚಿಸಲಾಗುತ್ತದೆ.

  ಪ್ರೀತಿಯ ಜೀವನ

  ಸಂಗಾತಿಯನ್ನು ಹುಡುಕಲು ಸಾಕಷ್ಟು ಸಾಮಾಜಿಕ ಸಂಪರ್ಕ ಹಾಗೂ ಸಂವಹನವನ್ನು ಪಡೆದುಕೊಳ್ಳುವಿರಿ. ಈಗಾಗಲೇ ಸಂಬಂಧದಲ್ಲಿ ಇರುವವರಿಗೆ ಪ್ರೀತಿಯು ಉತ್ತೇಜನಗೊಳ್ಳುವುದು. ನೀವು ನಿಮ್ಮ ಸಂಗಾತಿಯೊಂದಿಗೆ ನಿಷ್ಠಾವಂತರಾಗಿರಲು ಖಚಿತಪಡಿಸಿಕೊಳ್ಳಿ. ಮೂರನೆ ವ್ಯಕ್ತಿಯ ಹಸ್ತಕ್ಷೇಪವು ತಪ್ಪು ಗ್ರಹಿಕೆಯನ್ನು ಉಂಟುಮಾಡಬಹುದು. ಈ ಸಮಯದಲ್ಲಿ ನಿಮ್ಮ ಪಾಲುದಾರರನ್ನು ನೀವು ರಕ್ಷಿಸಲು ಕಷ್ಟವಾಗಬಹುದು. ವಿವಾಹಿತರು ತಮ್ಮ ಪಾಲುದಾರರೊಂದಿಗೆ ವಿನೋದದ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಸರಿಯಾದ ಸಮಯ ಎಂದು ಹೇಳಲಾಗುತ್ತದೆ. ಶೀಘ್ರದಲ್ಲಿಯೇ ನೀವು ನಿಮ್ಮ ಪಾಲುದಾರರಿಂದ ಉತ್ತಮ ಸುದ್ದಿಯನ್ನು ಪಡೆಯುವ ಸಾಧ್ಯತೆಗಳಿವೆ.

  ಅದೃಷ್ಟದ ಬಣ್ಣಗಳು ಮತ್ತು ಸಂಖ್ಯೆಗಳು

  ಜೂನ್ ತಿಂಗಳ ಅದೃಷ್ಟದ ಬಣ್ಣಗಳು ಹಸಿರು ಮತ್ತು ನೀಲಿ

  ಅದೃಷ್ಟದ ಸಂಖ್ಯೆಗಳು 2 ಮತ್ತು 6

  English summary

  Leo Monthly Horoscope For June 2018

  This Month is predicted to be a great month for you as there is improvement foreseen in almost all the aspects of your life. Your communication skills will grow stronger day by day, enabling you to turn things in your favour most of the time. Make sure to exude total grace and confidence in anything you do. This will also help attract a good mate for you this month. The Sun in your zodiac house will bless you with abundant positive energy and will help compel you to make positive changes wherever necessary. You will plan to indulge in many extracurricular activities apart from your usual work, which will fill you up with renewed energy.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more