For Quick Alerts
ALLOW NOTIFICATIONS  
For Daily Alerts

ರಿಯಲ್ ಲೈಫ್ ಸ್ಟೋರಿ: ಪ್ರೇತಭಾದೆ ಇರುವಂತಹ ಗೊಂಬೆಗಳು!!

|

ನೀವು ಸಿನಿಮಾ ಪ್ರಿಯರಾಗಿದ್ದರೆ, ಭೂತಪ್ರೇತದ ಸಿನಿಮಾಗಳನ್ನು ಇಷ್ಟಪಡುವವರಾಗಿದ್ದರೆ ಆಗ ನೀವು ಕೆಲವೊಂದರಲ್ಲಿ ಗೊಂಬೆಗಳಿಗೆ ಪ್ರೇತಭಾದೆ ಇರುವುದನ್ನು ಕಂಡಿರಬಹುದು. ಇದು ನೋಡಲು ತುಂಬಾ ಭೀತಿ ಮೂಡಿಸುವಂತಿರುತ್ತದೆ. ಆದರೆ ಇದು ಕೇವಲ ಸಿನಿಮಾಗಳಲ್ಲಿ ಮಾತ್ರವೇ ಅಥವಾ ನಿಜಜೀವನದಲ್ಲೂ ಇಂತಹ ಪ್ರೇತಭಾದಿತ ಗೊಂಬೆಗಳು ಇವೆಯಾ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹುದು.

ಬೋಲ್ಡ್ ಸ್ಕೈ ನಿಮಗಾಗಿ ಇಂತಹ ನಿಜವಾದ ಕಥೆಗಳ ಬಗ್ಗೆ ತಿಳಿಸಿಕೊಡಲಿದೆ. ವಿವಿಧ ವರದಿಗಳ ಪ್ರಕಾರ ಈ ಕಥೆಗಳು ನಿಜವೆಂದು ನಂಬಲಾಗಿದೆ. ಪ್ರತಿಯೊಂದು ಪ್ರೇತಭಾದಿತ ಗೊಂಬೆಯ ಹಿಂದೆ ತನ್ನದೇ ಆಗಿರುವ ಕಥೆಗಳು ಇವೆ. ಈ ಲೇಖನ ಓದಿಕೊಂಡು ಮುಂದೆ ಓದುತ್ತಾ ಸಾಗಿ ಮತ್ತು ಈ ಭೀತಿ ಮೂಡಿಸುವಂತಹ ಗೊಂಬೆಗಳ ಬಗ್ಗೆ ತಿಳಿಸಿ.

 ಹರೊಲ್ಡ್

ಹರೊಲ್ಡ್

ಗೊಂಬೆಯ ಉಪಸ್ಥಿತಿಯು ಪ್ರೇತರೂಪ ಪಡೆದುಕೊಂಡ ಬಳಿಕ ಅದರ ಮಾಲಿಕರು ಅದನ್ನು ಆನ್ ಲೈನ್ ಸೈಟ್ ನಲ್ಲಿ ಮಾರಾಟ ಮಾಡಿದರು. ಮಾಲಕನು ತನ್ನ ಬೆಕ್ಕನ್ನು ಕಳೆದುಕೊಂಡು ಮತ್ತು ಆತ ಮತ್ತು ಆತನ ಪ್ರಿಯತಮೆಯು ದೀರ್ಘಕಾಲದಿಂದ ಮೈಗ್ರೇನ್ ಸಮಸ್ಯೆಯಿಂದ ಬಳಲಾರಂಭಿಸಿದರು. ಮನೆಯ ಕೆಳಮಹಡಿಯಲ್ಲಿ ಗೊಂಬೆಯನ್ನು ಇಟ್ಟಾಗ ಅದು ಮಗುವಿನಂತೆ ನಗುವುದು ಮತ್ತು ಅಳುವುದು ಕಂಡುಬಂದಿದೆ ಎಂದು ಮಾಲಕ ತಿಳಿಸಿದ್ದಾನೆ. ಗೊಂಬೆಯು ಉಸಿರಾಡುವುದು ಕೂಡ ಕಂಡುಬಂದಿದೆ ಎಂದು ಮಾಲಕರು ತಿಳಿಸಿದ್ದಾರೆ.

ಒಕಿಕು

ಒಕಿಕು

ಯುವಕನೊಬ್ಬ ತನ್ನ ಪುಟ್ಟ ತಂಗಿಗೆ ಈ ಗೊಂಬೆಯನ್ನು ಖರೀದಿ ಮಾಡಿಕೊಂಡು ಬಂದಿದ್ದ. ಈ ಗೊಂಬೆಯಿಂದ ಆತನ ತಂಗಿಯು ತುಂಬಾ ಖುಷಿಪಟ್ಟುಕೊಂಡಿದ್ದಳು. ಆದರೆ ಆಕೆ ಅಕಾಲಿಕವಾಗಿ ಸಾವನ್ನಪ್ಪಿದಳು. ಗೊಂಬೆಯ ಕೂದಲು ತುಂಬಾ ಉದ್ದವಾಗಿ ಬೆಳೆಯುವುದನ್ನು ಕುಟುಂಬದವರು ಗಮನಿಸಲು ಆರಂಭಿಸಿದರು. ಪ್ರತೀ ವರ್ಷ ಕೂದಲು ಮೊಣಕಾಲಿನ ತನಕ ಬೆಳೆಯುತ್ತಲಿತ್ತು ಮತ್ತುಇದರ ಬಳಿಕ ಅವರು ಕೂದಲು ಕತ್ತರಿಸುತ್ತಿದ್ದರು.

ರೋಬರ್ಟ್

ರೋಬರ್ಟ್

ಫ್ಲೋರಿಡಾದ ಫೋರ್ಟ್ ಈಸ್ಟ್ ಮಾರ್ಟೆಲೊ ಮ್ಯೂಸಿಯಂನಲ್ಲಿ ಈ ಗೊಂಬೆಯು ತುಂಬಾ ಆರಾಮವಾಗಿ ಕುಳಿತುಕೊಂಡಿದೆ. ತುಂಬಾ ವಿಚಿತ್ರ ವಿಷಯವೆಂದರೆ ಗೊಂಬೆಯು ಕೋಣೆಯೊಳಗೆ ಹೋಗುತ್ತದೆ ಮತ್ತು ತನ್ನ ತೆವಳುವ ಕಣ್ಣುಗಳಿಂದ ನಿಮ್ಮನ್ನು ನೋಡುತ್ತದೆ. ಪ್ರವಾಸಿಗರು ಈ ಗೊಂಬೆಯ ಫೋಟೊ ತೆಗೆಯಲು ಪ್ರಯತ್ನಿಸಿದಾಗ ಮತ್ತು ಕ್ಯಾಮರಾ ಕ್ಲಿಕ್ ಮಾಡಿದಾಗ ಇದು ಭೀತಿ ಉಂಟು ಮಾಡುತ್ತದೆ. ಇಲೆಕ್ಟ್ರಾನಿಕ್ ಸಾಧನಗಳು ಅದರ ಸುತ್ತಲು ತಿರುಗುತ್ತಲಿರುವುದು.

ಪೆಗ್ಗಿ

ಪೆಗ್ಗಿ

ವರದಿಯ ಪ್ರಕಾರ ಮ್ಯೂಸಿಯಂಗೆ ಭೇಟಿ ನೀಡಿದ ಶೇ.80ರಷ್ಟು ಜನರು ಮತ್ತು ಈ ಗೊಂಬೆ ನೋಡಿದ ಜನರಿಗೆ ತುಂಬಾ ಕೊಳಕಾಗಿರುವ ಪ್ರತಿಕ್ರಿಯೆಯು ವ್ಯಕ್ತವಾಗಿದೆ. ಇವರೆಲ್ಲರಿಗೆ ತಲೆನೋವಿನಿಂದ ಪೂರ್ಣ ಪ್ರಮಾಣದ ಉನ್ಮಾದವು ಕಾಣಿಸಿಕೊಂಡಿದೆ. ಗೊಂಬೆಯು ಕುಟುಂಬದವರಿಗೆ ದುಸ್ವಪ್ನವಾಗಿ ಕಾಡುತ್ತಲಿತ್ತು ಮತ್ತು ಇದರಿಂದಾಗಿ ಅವರು ಮನೆಗೆ ಧರ್ಮಗುರುಗಳನ್ನು ಕರೆದುಕೊಂಡು ಬಂದು ಆಶೀರ್ವದಿಸಲು ಹೇಳಿದರು. ಆದರೆ ಪರಿಸ್ಥಿತಿಯು ಮತ್ತಷ್ಟು ಕೆಟ್ಟಿತು.

ಮಂಡಿ

ಮಂಡಿ

ಕೆನಡಾದ ಬ್ರಿಟಿಷ್ ಕೊಂಬಿಯಾದಲ್ಲಿರುವ ಕ್ವಿಸ್ನೆಲ್ ಮತ್ತು ಡಿಸ್ಟ್ರಿಕ್ ಮ್ಯೂಸಿಯಂನಲ್ಲಿ ಈ ಪ್ರೇತಭಾದೆಯ ಗೊಂಬೆಯಿದೆ. ಈ ಗೊಂಬೆಯನ್ನು ನಿರಂತರವಾಗಿ ನೋಡುತ್ತಲಿದ್ದರೆ ಆಗ ಅವರಲ್ಲಿ ಅಸ್ವಸ್ಥತೆಯು ಕಾಣಿಸಿಕೊಳ್ಳುವುದು. ಮಗು ಅಳುತ್ತಿರುವಂತೆ ಸದ್ದು ಮಾಡುವ ಈ ಗೊಂಬೆಯನ್ನು ಅದರ ಮಾಲಕರು ಮ್ಯೂಸಿಯಂಗೆ ನೀಡಿದರು. ಗೊಂಬೆಯು ಕಿಟಕಿಗಳನ್ನು ತೆರೆಯುತ್ತದೆ ಮತ್ತು ಇದರಿಂದಾಗಿ ತಣ್ಣಗಿನ ಗಾಳಿಯು ಒಳಗೆ ನುಸುಳಿ ಬರುವುದು. ಇದು ತುಂಬಾ ವಿಚಿತ್ರವಾಗಿದೆ.

ಅನ್ನಾಬೆಲ್ಲೆ

ಅನ್ನಾಬೆಲ್ಲೆ

ಈ ಗೊಂಬೆಯು ತನ್ನ ಮಾಲಕನಿಗೆ ಕೈಬರಹದಲ್ಲಿ ಬರೆದ ಸಂದೇಶಗಳನ್ನು ಇಡುತ್ತಲಿತ್ತು. ಅನ್ನಾಬೆಲ್ಲೆ ಎನ್ನುವುದು ತುಂಟ ಚೇತನದ ಹೆಸರಾಗಿದ್ದು, ಇದು ಗೊಂಬೆಯಲ್ಲಿ ಪ್ರೇತದ ರೂಪದಲ್ಲಿ ಕಂಡುಬಂದಿದೆ. ಇಂತಹ ಇನ್ನಷ್ಟು ಕಥೆಗಳಿಗಾಗಿ ನೀವು ಇದೇ ವಿಭಾಗದಲ್ಲಿ ಯಾವಾಗಲೂ ನೋಡುತ್ತಲಿರಿ.

English summary

Annabelle: Terrifying True Facts About It

There are several stories of haunting dolls from across the world that people still believe in. These stories of the haunting dolls are based on the real life experiences and will scare people when they learn about it. Each story of the haunted doll is a true or a real story as it can instantly scare people.
Story first published: Tuesday, September 4, 2018, 10:55 [IST]
X
Desktop Bottom Promotion