Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಕನ್ನಡಿಯನ್ನು ಒಡೆದರೆ ಏಳು ವರ್ಷಗಳ ದುರಾದೃಷ್ಟವಂತೆ ಹೌದೇ?
ಕನ್ನಡಿಯನ್ನು ಒಡೆಯುವುದರಿಂದ ಏಳು ವರ್ಷಗಳ ದುರಾದೃಷ್ಟ ಕಾಡುತ್ತದೆ ಎಂದು ನಂಬಲಾಗುತ್ತದೆ. ದುರಾದೃಷ್ಟಕ್ಕೂ ಕನ್ನಡಿ ಒಡೆಯುವುದಕ್ಕೂ ಏನು ಸಂಬಂಧ?
ಅಪಶಕುನಗಳ ಬಗ್ಗೆ ಭಾರತದಲ್ಲಿದ್ದಷ್ಟು ನಂಬಿಕೆಗೆಳು ಪ್ರಾಯಶಃ ಬೇರೆಲ್ಲೂ ಇರಲಾರದು. ಉದಾಹರಣೆಗೆ ಕನ್ನಡಿಯನ್ನು ಒಡೆಯುವುದರಿಂದ ಏಳು ವರ್ಷಗಳ ದುರಾದೃಷ್ಟ ಕಾಡುತ್ತದೆ ಎಂದು ನಂಬಲಾಗುತ್ತದೆ. ದುರಾದೃಷ್ಟಕ್ಕೂ ಕನ್ನಡಿ ಒಡೆಯುವುದಕ್ಕೂ ಏನು ಸಂಬಂಧ? ಇದಕ್ಕೆ ಕಾರಣಗಳನ್ನು ಇಂದಿನ ಲೇಖನದಲ್ಲಿ ನೋಡೋಣ. ಮೂಢನಂಬಿಕೆಗಳನ್ನೆಲ್ಲಾ ನಂಬಬೇಡಿ ಪ್ಲೀಸ್, ಅದೆಲ್ಲಾ ಭ್ರಮೆ ಅಷ್ಟೇ!
ಪುರಾತನ ಹೇಳಿಕೆಗಳ ಪ್ರಕಾರ ದುರ್ವಿಧಿ ಏಳು ವರ್ಷ ಕಾಡುತ್ತದೆ ಹಾಗೂ ಇದಕ್ಕೆ ಸೂಕ್ತ ಪ್ರತಿರೋಧವನ್ನು ಒಡ್ಡದೇ ಇದ್ದರೆ ಇದು ಏಳು ವರ್ಷಗಳವರೆಗೆ ದುರ್ವಿಧಿಯನ್ನು ಅನುಭವಿಸಬೇಕಾಗಿ ಬರಬಹುದು. ಅಷ್ಟಕ್ಕೂ ಕನ್ನಡಿ ಒಡೆಯುವುದರಿಂದ ದುರ್ವಿಧಿ ಎದುರಾಗುವ ಕಾರಣಗಳೇನು? ನೋಡೋಣ...

ಈ ನಂಬಿಕೆಯನ್ನು ಪ್ರಾರಂಭಿಸಿದವರು ರೋಮನ್ನರು
ಈ ಬಗ್ಗೆ ವಿವರಗಳನ್ನು ಕೆದಕುತ್ತಾ ಹೋದರೆ ಕನ್ನಡಿಯ ಆವಿಷ್ಕಾರ ಮಾಡಿದ ರೋಮನ್ನರೇ ಈ ನಂಬಿಕೆಯನ್ನು ಹುಟ್ಟುಹಾಕಿದರು ಎಂದು ತಿಳಿದುಬರುತ್ತದೆ.

ಇತರ ನಂಬಿಕೆಗಳ ಪ್ರಕಾರ....
ರೋಮನ್ನರು, ಗ್ರೀಕರು, ಚೀನೀಯರು, ಆಫ್ರಿಕನ್ನರು ಮತ್ತು ಭಾರತೀಯರು ತಮ್ಮ ತಮ್ಮ ಸಂಪ್ರದಾಯದಲ್ಲಿ ಒಡೆದ ಕನ್ನಡಿ ಉಪಯೋಗಿಸುವಾತನ ಆತ್ಮವನ್ನು ಸ್ವಾಧೀನಗೊಳಿಸುವ ಶಕ್ತಿ ಹೊಂದಿರುತ್ತದೆ ಎಂದು ನಂಬಿಕೊಂಡು ಬಂದಿದ್ದಾರೆ.

ಒಂದು ವೇಳೆ ಪ್ರತಿಬಿಂಬ ವಿರೂಪಗೊಂಡಿದ್ದರೆ
ಒಂದು ವೇಳೆ ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬ ಯಾವುದೇ ರೀತಿಯಲ್ಲಿ ವಿರೂಪಗೊಂಡಿದ್ದರೆ ಇದರ ಅರ್ಥ ಆ ವ್ಯಕ್ತಿಯ ಆತ್ಮ ಭ್ರಷ್ಟವಾಗಿದೆ ಎಂದು ತಿಳಿಯಲಾಗುತ್ತದೆ.

ಒಂದು ವೇಳೆ ಪ್ರತಿಬಿಂಬ ವಿರೂಪಗೊಂಡಿದ್ದರೆ
ಈ ವ್ಯಕ್ತಿ ಕನ್ನಡಿಯನ್ನು ಒಡೆದರೆ ಈತನ ಭ್ರಷ್ಟ ಆತ್ಮದ ಒಂದು ಭಾಗ ಈ ಕನ್ನಡಿಯಲ್ಲಿ ಬಂಧಿತವಾಗುತ್ತದೆ ಎಂದು ನಂಬಲಾಗಿದೆ.

ಈ ತೊಂದರೆಯ ನಿವಾರಣೆಗೆ ಏನು ಮಾಡಬೇಕು?
ಒಡೆದ ಕನ್ನಡಿ ಒಡೆದ ಆತ್ಮದ ಪ್ರತೀಕವಾಗಿರುವ ಕಾರಣ ಒಡೆದ ಕನ್ನಡಿಯ ತುಣುಕುಗಳನ್ನು ಯಾರಿಗೂ ಹಾನಿಯಾಗದ ಸ್ಥಳದಲ್ಲಿ ವಿಸರ್ಜಿಸುವುದೇ ಉತ್ತಮ. ವಿದೇಶದಲ್ಲೂ ಸದ್ದುಮಾಡುತ್ತಿದೆ, ಮೂಢನಂಬಿಕೆಗಳೆಂಬ ಪೆಡಂಭೂತ!



Click it and Unblock the Notifications
