ಈ ದೇಶಗಳಲ್ಲಿ ಕುಡಿದು ಮಜಾ ಮಾಡಿದರೆ, ಶಿಕ್ಷೆ ಹೇಗಿರುತ್ತೆ ಗೊತ್ತೇ?

By: Hemanth
Subscribe to Boldsky

ಮದ್ಯಪಾನ ಮಾಡಬಾರದು, ಅದರಿಂದ ತುಂಬಾ ಹಾನಿಯಿದೆ ಎಂದು ತಿಳಿದಿದ್ದರೂ ಕುಡಿತವನ್ನು ಬಿಡಲು ಯಾರೂ ತಯಾರಿರುವುದಿಲ್ಲ. ಭಾರತದಲ್ಲಿ ಹಲವಾರು ರಾಜ್ಯದಲ್ಲಿ ಮದ್ಯ ನಿಷೇಧವನ್ನು ಕೈಗೊಳ್ಳಲಾಗಿದೆ. ಇದರಿಂದ ಕುಡಿತದ ಚಟಕ್ಕೆ ಬೀಳುವ ಯುವಜನರ ಸಂಖ್ಯೆ ಕಡಿಮೆಯಾಗಲಿ ಎನ್ನುವುದೇ ಉದ್ದೇಶವಾಗಿದೆ.  ಪುರುಷರೇ ವಯಸ್ಸು ಮೂವತ್ತಾಯಿತೇ?, ಮದ್ಯಪಾನ ಬಿಟ್ಟು ಬಿಡಿ!

ಆದರೆ ವಿದೇಶಗಳಲ್ಲಿ ಕೂಡ ಮದ್ಯಪಾನ ಮಾರಾಟದಿಂದ ಹಿಡಿದು ಕುಡಿಯುವ ತನಕ ಹಲವಾರು ರೀತಿಯ ನಿರ್ಬಂಧಗಳು ಇವೆ. ಮೋಜಿಗಾಗಿ ಕುಡಿಯುವುದು ತಪ್ಪಲ್ಲವೆಂದು ಹೇಳಬಹುದಾದರೂ ಇದರಿಂದ ಹಲವಾರು ಅಪಾಯಗಳು ಇದ್ದೇ ಇದೆ. ಇದಕ್ಕಾಗಿಯೇ ಕೆಲವೊಂದು ಕಾನೂನುಗಳನ್ನು ಮದ್ಯಪ್ರಿಯರಿಗಾಗಿ ಮಾಡಲಾಗಿದೆ. ಇದು ಯಾವುದೆಂದು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. 

ಎಲ್ ಸಾಲ್ವಡಾರ್‌ನಲ್ಲಿ ಗುಂಡಿಕ್ಕಿ ಕೊಲ್ಲುತ್ತಾರೆ!

ಎಲ್ ಸಾಲ್ವಡಾರ್‌ನಲ್ಲಿ ಗುಂಡಿಕ್ಕಿ ಕೊಲ್ಲುತ್ತಾರೆ!

ಕುಡಿದು ವಾಹನ ಚಾಲನೆ ಮಾಡುವುದು ಭಾರತದಲ್ಲಿ ಸಾಮಾನ್ಯವಾಗಿದೆ. ಆದರೆ ಎಲ್ ಸಾಲ್ವಡಾರ್‌ನಲ್ಲಿ ಕುಡಿದು ವಾಹನ ಚಲಾಯಿಸಿದರೆ ಅವರನ್ನು ಗುಂಡಿಕ್ಕಿ ಕೊಲ್ಲಲಾಗುತ್ತದೆ. ಮೊದಲ ಸಲ ಮಾಡಿದ ತಪ್ಪಿಗೂ ಇದೇ ಶಿಕ್ಷೆ ನೀಡಲಾಗುತ್ತದೆ.

ಫ್ರಾನ್ಸ್‌ನ ಕಾನೂನು

ಫ್ರಾನ್ಸ್‌ನ ಕಾನೂನು

ಸಾಮಾನ್ಯವಾಗಿ ಮದ್ಯಪಾನ ಮಾಡಿರುವುದನ್ನು ಉಸಿರಿನ ಮೂಲಕ ಕಂಡುಹಿಡಿಯುವ ಸಾಧನವು ಪೊಲೀಸ್ ಅಥವಾ ಇದಕ್ಕೆ ಮೊದಲು ಕುಡಿದು ವಾಹನ ಚಲಾಯಿಸುತ್ತಿರುವ ವೇಳೆ ಸಿಕ್ಕಿಬಿದ್ದು ಎಚ್ಚರಿಕೆ ಪಡೆದವರಲ್ಲಿ ಇರಬಹುದು. ಆದರೆ ಫ್ರಾನ್ಸ್‌ನಲ್ಲಿ ಮದ್ಯಪಾನಿಗಳ ಬಳಿ ಇದು ಇರಲೇಬೇಕು.

ಇಂಗ್ಲೆಂಡ್‌ನ ಕಾನೂನು

ಇಂಗ್ಲೆಂಡ್‌ನ ಕಾನೂನು

ಒಂದು ಮಿತಿಯ ಬಳಿಕ ಕ್ಲಬ್ ಅಥವಾ ಪಬ್‌ನಲ್ಲಿ ಮದ್ಯಪಾನ ಮಾಡುವುದು ಕಾನೂನು ಬಾಹಿರ. ಇದು ಸ್ವಲ್ಪ ವಿಚಿತ್ರವಾದರೂ ಇಂಗ್ಲೆಂಡ್ ನಲ್ಲಿರುವ ಕಾನೂನು.

ಭಾರತದ ಕಾನೂನು

ಭಾರತದ ಕಾನೂನು

ಭಾರತದಲ್ಲಿ ಮದ್ಯಪಾನದ ಬಗ್ಗೆ ಕಾನೂನುಗಳು ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯದ್ದಾಗಿದೆ. ಅಪ್ರಾಪ್ತ ವಯಸ್ಸಿನವರು ಮದ್ಯ ಖರೀದಿಸಬೇಕಾದರೆ ಅವರು ತಮ್ಮ ವಯಸ್ಸಿನ ಬಗ್ಗೆ ದೃಢೀಕರಣವನ್ನು ನೀಡಬೇಕು. ಭಾರತದಲ್ಲಿ 18ರ ಬಳಿಕ ಕಾನೂನು ಬದ್ಧವಾಗಿ ಮದ್ಯಪಾನ ಮಾಡಬಹುದು.

ಸ್ಕಾಟ್ ಲೆಂಡ್ ಕಾನೂನು

ಸ್ಕಾಟ್ ಲೆಂಡ್ ಕಾನೂನು

ಕುಡಿದು ರಸ್ತೆಯಲ್ಲಿ ಹೋಗುವಾಗ ಯಾವುದೇ ಹಸು ಸಿಕ್ಕಿದರೆ ಅದನ್ನು ಮುಂದಕ್ಕೆ ದೂಡಿದರೆ ಆಗ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಇದು ಸ್ಕಾಟ್ ಲೆಂಡ್ ನಲ್ಲಿರುವ ವಿಚಿತ್ರ ಕಾನೂನು.

ಕೆನಡಾದ ಕಾನೂನು

ಕೆನಡಾದ ಕಾನೂನು

ಗ್ರಾಹಕನು ವಿಶೇಷವಾಗಿ ಹೇಳುವ ಮೊದಲು ಬಾರ್ ಟೆಂಡರ್( ಪಾನಗೃಹದ ಪರಿಚಾರಕ) ಮದ್ಯಕ್ಕೆ ಏನನ್ನೂ ಮಿಶ್ರಣ ಮಾಡುವಂತಿಲ್ಲ. ಹೀಗೆ ಮಾಡಿದರೆ ಅದು ಕಾನೂನು ಬಾಹಿರ. ಇದು ಬಾರ್ ಟೆಂಡರ್ ಗಳ ಕ್ರಿಯಾತ್ಮಕತೆಗೆ ನಿರ್ಬಂಧ ಹೇರಿದಂತೆ.

ನೈಜೀರಿಯಾದ ಕಾನೂನು

ನೈಜೀರಿಯಾದ ಕಾನೂನು

ಹೆಚ್ಚು ಬಿಯರ್ ಸೇವನೆ ಮಾಡುವಂತಹ ಆಫ್ರಿಕಾದ ರಾಷ್ಟ್ರಗಳಲ್ಲಿ ನೈಜೀರಿಯಾವು ಮೊದಲನೇ ಸ್ಥಾನದಲ್ಲಿದೆ. ಆದರೆ ನೈಜೀರಿಯಾದಲ್ಲಿ ಬಿಯರ್ ರಫ್ತು ಮಾಡುವುದು ಕಾನೂನು ಬಾಹಿರ!

ಆಸ್ಟ್ರೇಲಿಯಾದ ಕಾನೂನು

ಆಸ್ಟ್ರೇಲಿಯಾದ ಕಾನೂನು

ಮಧ್ಯರಾತ್ರಿ ಬಳಿಕ ಮದ್ಯಪಾನ ಸರಬರಾಜು ಮಾಡುವುದು ಕಾನೂನು ಬಾಹಿರ. ಮಧ್ಯರಾತ್ರಿ ಬಳಿಕ ಗ್ಲಾಸ್ ನಲ್ಲಿ ಮದ್ಯ ಸರಬರಾಜು ಮಾಡುವುದು ಅಥವಾ ಒಂದೇ ಗ್ಲಾಸ್ ನಲ್ಲಿ ನಾಲ್ಕು ಡ್ರಿಂಕ್ಸ್ ಕೊಡುವುದು ಅಥವಾ ಬೆಳಿಗ್ಗೆ ಮೂರು ಗಂಟೆ ಬಳಿಕ ವ್ಯಕ್ತಿಯೊಬ್ಬನಿಗೆ ಎರಡು ಡ್ರಿಂಕ್ಸ್ ಕೊಡುವುದು ಕಾನೂನು ಬಾಹಿರ.

ಜರ್ಮನಿಯ ಕಾನೂನು

ಜರ್ಮನಿಯ ಕಾನೂನು

ಕುಡಿದು ಬೈಕ್ ಚಲಾಯಿಸುವಂತಹ ವ್ಯಕ್ತಿಗಳು ಕಂಡು ಬಂದರೆ ಅವರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಒಂದು ವೇಳೆ ಕುಡಿದು ಬೈಕ್ ಚಲಾಯಿಸುವುದು ಕಂಡುಬಂದರೆ ಅಂತಹ ವ್ಯಕ್ತಿಗಳನ್ನು ಮನಶಾಸ್ತ್ರಜ್ಞರ ಬಳಿಗೆ ಕಳುಹಿಸಲಾಗುತ್ತದೆ.

ಥಾಯ್ಲೆಂಡ್‌ನ ಕಾನೂನು

ಥಾಯ್ಲೆಂಡ್‌ನ ಕಾನೂನು

ಇದು ವಿಶ್ವದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಆದರೆ ಇಲ್ಲಿನ ಮದ್ಯದ ಕಾನೂನು ತುಂಬಾ ವಿಚಿತ್ರವಾಗಿದೆ. ಅಲ್ಲಿ ಮಧ್ಯಾಹ್ನ 2ರಿಂದ 5 ಗಂಟೆ ತನಕ ಮತ್ತು ಮಧ್ಯರಾತ್ರಿಯಿಂದ ಬೆಳಿಗ್ಗೆ 11 ಗಂಟೆ ತನಕ ಮದ್ಯ ಖರೀದಿಸುವಂತಿಲ್ಲ.

English summary

Weirdest Drinking Laws Around The World

Learning about different drinking rules around the world is important and this article is all about that! Learning about different drinking rules around the world is important and this article is all about that!
Subscribe Newsletter