For Quick Alerts
ALLOW NOTIFICATIONS  
For Daily Alerts

ಪುರುಷರೇ ವಯಸ್ಸು ಮೂವತ್ತಾಯಿತೇ?, ಮದ್ಯಪಾನ ಬಿಟ್ಟು ಬಿಡಿ!

By manu
|

ಇಂದು ಟೀವಿಯಲ್ಲಿ ಬರುವ ಎಲ್ಲಾ ಕಾರ್ಯಕ್ರಮ ಮತ್ತು ಚಲನಚಿತ್ರಗಳಲ್ಲಿ ಮದ್ಯಪಾನದ ಪರಿಣಾಮಗಳನ್ನು ವಿವರಿಸಿ ಇದರಿಂದ ದೂರವಿರಲು ಮನವಿ ಮಾಡಿಕೊಳ್ಳಲಾಗುತ್ತಿದೆ. ಆದರೆ ನೋಡುವವರು ನಿಜವಾಗಿಯೂ ಇದಕ್ಕೆ ಒಲವು ತೋರುತ್ತಿದ್ದಾರೆಯೇ? ಒಳ್ಳೆಯ ಪ್ರಶ್ನೆ. ಏಕೆಂದರೆ ಒಮ್ಮೆ ಧೂಮಪಾನ ಮದ್ಯಪಾನಗಳಂತಹ ಚಟಗಳು ಅಭ್ಯಾಸವಾಗಿಬಿಟ್ಟರೆ ಜೀವಮಾನವಿಡೀ ಹೋಗದಿರುವುದನ್ನು ಪ್ರತಿ ಊರಿನಲ್ಲಿಯೂ ನೋಡಬಹುದು.

ಅದರಲ್ಲೂ ಮದ್ಯಪಾನಿಗಳು ಮದ್ಯದ ಗುಣಗಾನವನ್ನೇ ಮಾಡುತ್ತಾ ಇತರರನ್ನೂ ಇದರ ತೆಕ್ಕೆಯೊಳಕ್ಕೆಳೆಯಲು ಯತ್ನಿಸುತ್ತಾರೆ. ಆದರೆ ಇಪ್ಪತ್ತರ ಹರೆಯದಲ್ಲಿ ಮದ್ಯಪಾನ ಆರೋಗ್ಯದ ಮೇಲೆ ಮಾಡುವ ಪರಿಣಾಮಗಳ ಗಂಭೀರತೆ ತಕ್ಷಣಕ್ಕೆ ಅರಿವಾಗದಿದ್ದರೂ ಮೂವತ್ತರ ಬಳಿಕ ನಿಧಾನವಾಗಿ ಇದರ ಪ್ರಭಾವ ಅರಿವಾಗುತ್ತಾ ಹೋಗುತ್ತದೆ. ನಂತರ ದಿನೇ ದಿನೇ ದೇಹದ ಕೆಲವು ಅಂಗಗಳು, ವಿಶೇಷವಾಗಿ ಯಕೃತ್ ತಮ್ಮ ಕ್ಷಮತೆಯನ್ನು ಕಳೆದುಕೊಳ್ಳುತ್ತಾ ಬರುತ್ತವೆ. ಮದ್ಯವನ್ನು ಅಪರೂಪಕ್ಕೆ ಕುಡಿದರೂ ಅಪಾಯವಿದೆಯೇ?

ಹಿತೈಷಿಗಳು ನೀಡುವ ಹಿತಮಾತುಗಳಿಗೆ ಕಿವಿಗೊಡದ ಮದ್ಯಪಾನಿಗಳಿಗೆ ಜ್ಞಾನೋದಯವಾಗುವುದು ಅವರ ಶರೀರದ ಯಾವುದಾದರೊಂದು ಅಂಗ ಸ್ತಬ್ದವಾಗಿ ಇನ್ನೊಂದು ತೊಟ್ಟು ಕುಡಿದರೂ ಲೋಕದಿಂದಲೇ ಮೇಲೆ ಹೋಗುತ್ತೀರಿ ಎಂದು ವೈದ್ಯರಿಂದ ಎಚ್ಚರಿಕೆ ಬಂದಾಗಲೇ! ಆದರೆ ಇದಕ್ಕೂ ಮೊದಲು ದೇಹ ಮೂವತ್ತರಿಂದ ಐವತ್ತರಲ್ಲಿದ್ದಾಗ ಈ ಸ್ಥಿತಿಯ ಮುನ್ಸೂಚನೆಯನ್ನು ನೀಡುತ್ತಲೇ ಇರುತ್ತದೆ. ದೈಹಿಕವಾಗಿ ನಿಃಶಕ್ತರಾಗುವುದು ಇದರಲ್ಲಿ ಪ್ರಮುಖವಾದುದು. ಒಂದು ವೇಳೆ ವೈದ್ಯರು ನೀಡುವ ಸೂಚನೆಯನ್ನು ಪಾಲಿಸಿ ಆಗಲೇ ಬಿಟ್ಟುಬಿಟ್ಟಿದ್ದರೆ ಈ ಪರಿಸ್ಥಿತಿಗೆ ಒಳಗಾಗುವ ಸಾಧ್ಯತೆ ಇರುತ್ತಿರಲಿಲ್ಲ. ಸ್ಲೋ ಪಾಯಿಸನ್ ಮದ್ಯದ ಬಗ್ಗೆ ನೀವು ತಿಳಿದಿರದ ಸತ್ಯಾಸತ್ಯತೆ

ಅಲ್ಪಪ್ರಮಾಣದಲ್ಲಿ ಸೇವಿಸುವ ಮದ್ಯ ಆರೋಗ್ಯಕರ ಎಂಬ ಮಾಹಿತಿಯನ್ನು ವೈದ್ಯರು ಒಪ್ಪುತ್ತಾರಾದರೂ ಇದು ಮುಂದಿನ ವ್ಯಸನಕ್ಕೆ ಕಿಡಿಯಂತೆ ಕೆಲಸ ಮಾಡುವುದರಿಂದ ಪ್ರಾರಂಭಿಸದಿರುವುದೇ ಲೇಸು ಎಂದು ಹಲವು ಮನಃಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ಒಂದು ವೇಳೆ ಪ್ರಾರಂಭಿಸಿದರೂ ಮೂವತ್ತು ದಾಟುವ ಮುನ್ನವೇ ಬಿಟ್ಟುಬಿಡಿ ಎಂದು ಸಲಹೆ ನೀಡುತ್ತಾರೆ. ಇದಕ್ಕೇನು ಕಾರಣ ಗೊತ್ತೇ? ಕೆಳಗಿನ ಸ್ಲೈಡ್ ಶೋ ಇದನ್ನು ವಿವರಿಸಲಿದೆ..

ಲೈಂಗಿಕ ಶಕ್ತಿಯನ್ನು ಕುಂಠಿಸುತ್ತದೆ

ಲೈಂಗಿಕ ಶಕ್ತಿಯನ್ನು ಕುಂಠಿಸುತ್ತದೆ

ಮೂವತ್ತರ ಬಳಿಕ ಪುರುಷರು ಸೇವಿಸುವ ಮದ್ಯ ಯಕೃತ್ ಮಾತ್ರವಲ್ಲದೇ ಲೈಂಗಿಕ ಚಟುವಟಿಕೆಯ ಮೇಲೂ ಪ್ರಭಾವ ಬೀರುತ್ತದೆ. ಇದರಲ್ಲಿ ಅತ್ಯಂತ ಪ್ರಮುಖವಾದುದು ಉದ್ರೇಕತೆಯಲ್ಲಿ ಕೊರತೆ. ಮುಂದೆ ಓದಿ

ಲೈಂಗಿಕ ಶಕ್ತಿಯನ್ನು ಕುಂಠಿಸುತ್ತದೆ

ಲೈಂಗಿಕ ಶಕ್ತಿಯನ್ನು ಕುಂಠಿಸುತ್ತದೆ

ಆದ್ದರಿಂದ ಸೂಕ್ತಕಾಲದಲ್ಲಿ ಮದ್ಯವನ್ನು ಬಿಟ್ಟು ಉತ್ತಮ ಆರೋಗ್ಯ ಪಡೆದವರು ತಮ್ಮ ಲೈಂಗಿಕ ಶಕ್ತಿಯನ್ನೂ ಮರುಪಡೆದಿರುವುದು ಸಂಶೋಧನೆಗಳ ಮೂಲಕ ಸಾಬೀತಾಗಿದೆ.

ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ವಿಫಲತೆ

ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ವಿಫಲತೆ

ಯಾವುದೇ ಸಂದರ್ಭದಲ್ಲಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ಮೆದುಳಿನ ಎಚ್ಚರಾವಸ್ಥೆ ಅಗತ್ಯವಾಗಿದೆ. ಮದ್ಯಪಾನ ಮೆದುಳಿಗೆ ಹೋಗುವ ರಕ್ತದಲ್ಲಿ ಏರುಪೇರಾಗಿಸಿ ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಕ್ಷಮತೆಯನ್ನು ಬದಲಿಸುವುದರಿಂದ ತಪ್ಪು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚು. ಮುಂದೆ ಓದಿ

ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ವಿಫಲತೆ

ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ವಿಫಲತೆ

ಇದೇ ಕಾರಣಕ್ಕೆ ಮದ್ಯಪಾನ ಮಾಡಿ ವಾಹನ ಚಲಾಯಿಸುವುದನ್ನು ಎಲ್ಲಾ ದೇಶಗಳು ನಿಷೇಧಿಸಿವೆ. ಆದರೆ ಮದ್ಯವನ್ನು ಸಂಪೂರ್ಣವಾಗಿ ಬಿಟ್ಟವರು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥರಿರುವುದನ್ನು ಸಂಶೋಧನೆಗಳ ಮೂಕ ಕಂಡುಕೊಳ್ಳಲಾಗಿದೆ.

ವಾರಾಂತ್ಯ ಹೆಚ್ಚು ಫಲಪ್ರದವಾಗಿರುತ್ತದೆ

ವಾರಾಂತ್ಯ ಹೆಚ್ಚು ಫಲಪ್ರದವಾಗಿರುತ್ತದೆ

ವಾರಾಂತ್ಯ ಬಂದ ಕೂಡಲೇ ಮದ್ಯಪಾನಿಗಳ ದಿನಚರಿ ಬದಲಾಗುತ್ತದೆ. ಪಾರ್ಟಿ, ಮದ್ಯ, ಕುಣಿತಗಳು ಸಂಜೆಯನ್ನು ರಂಗೇರಿಸಿದರೂ ದೇಹವನ್ನು ಶಿಥಿಲಗೊಳಿಸುತ್ತವೆ.

ವಾರಾಂತ್ಯ ಹೆಚ್ಚು ಫಲಪ್ರದವಾಗಿರುತ್ತದೆ

ವಾರಾಂತ್ಯ ಹೆಚ್ಚು ಫಲಪ್ರದವಾಗಿರುತ್ತದೆ

ಒಂದು ವೇಳೆ ಮಿಥ್ಯಾಗುಂಗಿನಿಂದ ಹೊರಬಂದರೆ ನಿಮ್ಮ ವಾರಾಂತ್ಯದ ದಿನಚರಿ ಉತ್ತಮ ಕಾರ್ಯದಲ್ಲಿ ಬದಲಾಗಬಲ್ಲದು.

ಆತ್ಮವಿಶ್ವಾಸ ಹೆಚ್ಚುತ್ತದೆ

ಆತ್ಮವಿಶ್ವಾಸ ಹೆಚ್ಚುತ್ತದೆ

ಮದ್ಯಪಾನಿಗಳು ಸಾಮಾನ್ಯವಾಗಿ ಒಂದು ಶರಣಾಗತ ಭಾವದಲ್ಲಿರುತ್ತಾರೆ. ಈ ಸ್ಥಿತಿಯಲ್ಲಿ ಅವರು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿರುವುದಿಲ್ಲ.

ಆತ್ಮವಿಶ್ವಾಸ ಹೆಚ್ಚುತ್ತದೆ

ಆತ್ಮವಿಶ್ವಾಸ ಹೆಚ್ಚುತ್ತದೆ

ಮದ್ಯಪಾನದಿಂದ ಹೊರಬಂದ ವ್ಯಕ್ತಿಗಳು ಯಾವುದೇ ಸಂದರ್ಭವನ್ನು ಎದುರಿಸಲು ಹೆಚ್ಚು ಕ್ಷಮತೆಯುಳ್ಳವರಾಗಿರುತ್ತಾರೆ ಹಾಗೂ ಸದಾ ಉಲ್ಲಸಿತ ಮತ್ತು ಸಂತೋಷದಿಂದಿರುತ್ತಾರೆ.

ತೂಕ ಹೆಚ್ಚಿಸುತ್ತದೆ

ತೂಕ ಹೆಚ್ಚಿಸುತ್ತದೆ

ಮದ್ಯಪಾನದಿಂದ ದೇಹಕ್ಕೆ ಯಾವುದೇ ಶಕ್ತಿ ಅಥವಾ ಕ್ಯಾಲೋರಿಗಳು ಸಿಗುವುದಿಲ್ಲ. ಬದಲಿಗೆ ರಕ್ತವನ್ನು ಸೇರಿ ಇನ್ನಷ್ಟು ಹಸಿವೆ ಹೆಚ್ಚಿಸುತ್ತವೆ.

ತೂಕ ಹೆಚ್ಚಿಸುತ್ತದೆ

ತೂಕ ಹೆಚ್ಚಿಸುತ್ತದೆ

ಪರಿಣಾಮವಾಗಿ ಹೆಚ್ಚು ಅಥವಾ ಅನಾರೋಗ್ಯಕರ ಆಹಾರ ಸೇವಿಸುವ ಮೂಲಕ ಸ್ಥೂಲಕಾಯ ವೃದ್ಧಿಸುತ್ತದೆ. ಮೂವತ್ತರ ಬಳಿಕ ಈ ಸಾಧ್ಯತೆ ಹೆಚ್ಚುತ್ತಾ ಹೋಗುತ್ತದೆ.

ರೋಗಗಳಿಂದ ದೂರವಿರುತ್ತೀರಿ

ರೋಗಗಳಿಂದ ದೂರವಿರುತ್ತೀರಿ

ಮದ್ಯಪಾನದಿಂದ ಅತಿ ಹೆಚ್ಚಾಗಿ ಹಾಳಾಗುವ ಅಂಗವೆಂದರೆ ಯಕೃತ್ (ಲಿವರ್). ಇದರೊಂದಿಗೆ ಬೇರೆ ಅಂಗಗಳೂ ಘಾಸಿಗೊಳ್ಳುತ್ತವೆ. ಮದ್ಯಪಾನದಿಂದ ಹೊರಬಂದರೆ ಘಾಸಿಗೊಂಡಿದ್ದ ಇತರ ಅಂಗಗಳು ಪೂರ್ವಸ್ಥಿತಿಗೆ ಬಾರದಿದ್ದರೂ ಯಕೃತ್ ಮರುಹುಟ್ಟು ಪಡೆಯುವ ಸಾಧ್ಯತೆ ಇದೆ.

ರೋಗಗಳಿಂದ ದೂರವಿರುತ್ತೀರಿ

ರೋಗಗಳಿಂದ ದೂರವಿರುತ್ತೀರಿ

ಆದ್ದರಿಂದ ಮೂವತ್ತಕ್ಕೂ ಮುನ್ನವೇ ಮದ್ಯಪಾನಕ್ಕೆ ಗುಡ್ ಬೈ ಹೇಳಿದವರ ಎಲ್ಲಾ ಅಂಗಗಳು ಸುಸ್ಥಿತಿಯಲ್ಲಿರುವ ಸಾಧ್ಯತೆ ಹೆಚ್ಚುತ್ತದೆ.

ನಿದ್ದೆಯ ಪರಿ ಬದಲಾಗುತ್ತದೆ

ನಿದ್ದೆಯ ಪರಿ ಬದಲಾಗುತ್ತದೆ

ಆರೋಗ್ಯಕರ ಜೀವನಕ್ಕೆ ಸರಿಯಾದ ಸಮಯಕ್ಕೆ ನಿದ್ದೆ ಬರುವುದೂ ಅಗತ್ಯ. ಮದ್ಯಪಾನಿಗಳಲ್ಲಿ ನಿದ್ದೆ ತನ್ನ ಸಮಯವನ್ನು ಬದಲಿಸಿರುವುದನ್ನು ಕಾಣಬಹುದು.

ನಿದ್ದೆಯ ಪರಿ ಬದಲಾಗುತ್ತದೆ

ನಿದ್ದೆಯ ಪರಿ ಬದಲಾಗುತ್ತದೆ

ಎಚ್ಚರಿರುವ ಸಮಯದಲ್ಲಿ ಎಚ್ಚರಿರಲಾರದೇ, ಮಲಗುವ ಸಮಯದಲ್ಲಿ ಮಲಗಲಾರದೇ ಒದ್ದಾಡುವುದನ್ನು ತಪ್ಪಿಸಲು ಮೂವತ್ತಕ್ಕೂ ಮುನ್ನವೇ ಬಿಟ್ಟು ಬಿಡಿ.

ಮನೋಭಾವ ಉಲ್ಲಸಿತಗೊಳ್ಳುತ್ತದೆ

ಮನೋಭಾವ ಉಲ್ಲಸಿತಗೊಳ್ಳುತ್ತದೆ

ಸಾಮಾನ್ಯವಾಗಿ ಮದ್ಯಪಾನಿಗಳು ನಿರಾಶಾವಾದಿಗಳಾಗಿರುತ್ತಾರೆ. ಇನ್ನೊಂದರ್ಥದಲ್ಲಿ ಜೀವನದ ನಿರಾಶೆಗಳಿಗೆ ಉತ್ತರವೆಂಬಂತೆ ಮದ್ಯಪಾನವನ್ನು ಪ್ರಚಾರ ಮಾಡಲಾಗುತ್ತದೆ. ಇದರಿಂದ ಜೀವನದ ಚಿಕ್ಕ ಪುಟ್ಟ ನಿರಾಶೆಗಳೂ ಭಾರೀ ಪ್ರಮಾದದಂತೆ ಕಂಡುಬರುತ್ತದೆ.

ಮನೋಭಾವ ಉಲ್ಲಸಿತಗೊಳ್ಳುತ್ತದೆ

ಮನೋಭಾವ ಉಲ್ಲಸಿತಗೊಳ್ಳುತ್ತದೆ

ಅದೇ ಮದ್ಯಪಾನ ಬಿಟ್ಟಿದ್ದರೆ ಜೀವನದ ನಿರಾಶೆಗಳು ಇದರ ವಿರುದ್ಧ ಹೋರಾಡಲು, ಇನ್ನಷ್ಟು ಶಕ್ತಿವಂತರಾಗಲು ನೆರವಾಗುತ್ತವೆ. ಪರಿಣಾಮವಾಗಿ ಇಡಿಯ ದಿನ ಉಲ್ಲಸಿತರಾಗಿರಲು ಸಾಧ್ಯವಾಗುತ್ತದೆ.

English summary

Why Men Should Quit Alcohol After 30

Quitting alcohol could be the best decision in your life especially if you are a man who just crossed 30 years of age. Though the withdrawal effects of quitting alcohol could be severe during the first few days. The benefits would keep you happy for a lifetime.Though most of us know that moderate consumption of wine is good for health, it is better to stay away from such habits as we can never stay in limits once we get used to alcohol.
X
Desktop Bottom Promotion