ದೇಶದ ರಕ್ಷಣೆಗಾಗಿ ಪ್ರೇತವಾಗಿ ಕಾಯುತ್ತಿರುವ ಹುತಾತ್ಮ ಯೋಧನ ಕಥೆ!

By: Divya
Subscribe to Boldsky

ಕೆಲವೊಮ್ಮೆ ವಿಚಿತ್ರ ವಿಷಯಗಳು ನಮ್ಮನ್ನು ಕಾಡುತ್ತವೆ. ಇವು ನಿಜನಾ? ಸುಳ್ಳಾ? ಎನ್ನುವ ಗೊಂದಲ ಹುಟ್ಟಿಕೊಳ್ಳುತ್ತವೆ. ಕೆಲವರು ಅದು ನಿಜ ಎಂದು ಹೇಳಿದರೆ ಇನ್ನು ಕೆಲವರು ಅವೆಲ್ಲಾ ಸುಳ್ಳು ಎನ್ನುವ ತರ್ಕವನ್ನು ಮುಂದಿಡುತ್ತಾರೆ.  ಕುತೂಹಲ ಕೆರಳಿಸುವ ಕಾರ್ಗಿಲ್ ಕದನದ ರೋಚಕ ಕ್ಷಣಗಳು!

ಇಂತಹ ಆಶ್ಚರ್ಯ ಹಾಗೂ ಕುತೂಹಲ ಕೆರಳಿಸುವ ವಿಷಯ ಎಂದರೆ ಯೋಧನೊಬ್ಬನ ಆತ್ಮ ಪ್ರೇತಾತ್ಮವಾಗಿ ಓಡಾಡುತ್ತಿರುವುದು!... ಅಚ್ಚರಿಯಾಗುತ್ತಿದೆ ಅಲ್ಲವೇ? ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ....  

ವೀರ ಯೋಧ ಬಾಬಾ ಹರಭಜನ್ ಸಿಂಗ್

ವೀರ ಯೋಧ ಬಾಬಾ ಹರಭಜನ್ ಸಿಂಗ್

ಭಾರತದ ರಕ್ಷಣೆಯ ಪಣತೊಟ್ಟು ಗಡಿಕಾದಿರುವ ಯೋಧ ಬಾಬಾ ಹರಭಜನ್ ಸಿಂಗ್. ಇವರು 1986ರಲ್ಲೇ ಮೃತಪಟ್ಟಿದ್ದರು. ಇದೀಗ ಗಡಿಕಾಯುತ್ತಿರುವ ತಮ್ಮ ಸಹೋದರರ ರಕ್ಷಣೆಗೆ ನಿಂತಿದ್ದಾರೆ ಎನ್ನುವ ವಿಷಯ ಎಲ್ಲೆಡೆ ಹರಡಿಕೊಂಡಿದೆ.

ವೀರ ಯೋಧ ಬಾಬಾ ಹರಭಜನ್ ಸಿಂಗ್

ವೀರ ಯೋಧ ಬಾಬಾ ಹರಭಜನ್ ಸಿಂಗ್

ದೇಶದ ರಕ್ಷಣೆಗಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟ ಇವರ ಊರು ಪಂಜಾಬ್‍ನ ಒಂದು ಹಳ್ಳಿ. 1941ರಲ್ಲಿ ಜನಿಸಿದ ಇವರು 1956ರಲ್ಲಿ ದೇಶದ ಭಾರತೀಯ ಸೈನ್ಯಕ್ಕೆ ಸೇರಿಕೊಂಡರು. ರಜಪೂತರ ದಳದೊಂದಿಗೆ ಸೇವೆಸಲ್ಲಿಸಲು ನೇಮಕಗೊಂಡರು. 1965ರಲ್ಲಿ ಅವರಿಗೆ ಒಂದು ಕಮಿಷನ್ ನೀಡಲಾಗಿತ್ತು.

ಹಿಮದಲ್ಲಿ ಜಾರಿಬಿದ್ದು ವೀರ ಮರಣ ಹೊಂದಿದ್ದರು

ಹಿಮದಲ್ಲಿ ಜಾರಿಬಿದ್ದು ವೀರ ಮರಣ ಹೊಂದಿದ್ದರು

1967ರಲ್ಲಿ ನಾಥೂ-ಲಾ ಪಾಸ್ ಸಮೀಪದಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ಹಿಮದಲ್ಲಿ ಜಾರಿಬಿದ್ದು, ಮುಳುಗಿ ಹೋಗಿದ್ದರು. ನಂತರ ಮೂರುದಿನಗಳ ಹುಡುಕಾಟದಿಂದ ಮೃತ ದೇಹವನ್ನು ಹೊರತಂದಿದ್ದರು. ಅದಾದ ಬಳಿಕ ಮೂರು ದಿನದ ಬಳಿಕ ಗೌರವದಿಂದ ಸಮಾಧಿ ಮಾಡಲಾಯಿತು.

ತನಗೊಂದು ಗುಡಿಬೇಕು!

ತನಗೊಂದು ಗುಡಿಬೇಕು!

ಹೀಗೆ ಸ್ವಲ್ಪ ದಿನಗಳು ಕಳೆದ ಮೇಲೆ, ತನ್ನ ಸ್ನೇಹಿತರ ಕನಸಿನಲ್ಲಿ ಬಂದ ಯೋಧ ತನಗೊಂದು ಗುಡಿಯೊಂದನ್ನು ನಿರ್ಮಿಸುವಂತೆ ಕೇಳಿಕೊಳ್ಳುತ್ತಿದ್ದ. ಹಾಗಾಗಿಯೇ ಯೋಧನಿಗೆ ಒಂದು ಗುಡಿಯನ್ನು ನಿರ್ಮಿಸಲಾಯಿತು.

ಯೋಧನ ಆತ್ಮ ಪ್ರೇತಾತ್ಮವಾಗಿ ಎಲ್ಲರನ್ನೂ ರಕ್ಷಿಸುತ್ತಿದೆ!

ಯೋಧನ ಆತ್ಮ ಪ್ರೇತಾತ್ಮವಾಗಿ ಎಲ್ಲರನ್ನೂ ರಕ್ಷಿಸುತ್ತಿದೆ!

ಅಂದು ಈ ಹಿನ್ನೆಲೆಯನ್ನು ಹೊಂದಿರುವ ಯೋಧ ಇಂದಿಗೂ ಪ್ರೇತಾತ್ಮವಾಗಿ ಎಲ್ಲರನ್ನೂ ರಕ್ಷಿಸುತ್ತಿದೆ ಎಂದು ನಂಬುತ್ತಿದ್ದಾರೆ ಸ್ಥಳೀಯರು ಹಾಗೂ ಯೋಧರು. ಈ ಆತ್ಮ ಗಡಿಯಲ್ಲಿ ನಡೆಯುವ ಆಕ್ರಮಣಕಾರಿ ಕ್ರಮದ ಬಗ್ಗೆ ಮೂರು ದಿನದ ಮುಂಚಿತವಾಗಿಯೇ ಯೋಧರಿಗೆ ಎಚ್ಚರಿಸುತ್ತದೆಯಂತೆ.

ರಾತ್ರಿ ಶಿಬಿರದಲ್ಲಿ ನಿದ್ರಿಸುವ ಸೈನಿಕರಿಗೆ ಎಚ್ಚರಿಸಿ, ರಕ್ಷಣೆ ನೀಡುತ್ತದೆ...

ರಾತ್ರಿ ಶಿಬಿರದಲ್ಲಿ ನಿದ್ರಿಸುವ ಸೈನಿಕರಿಗೆ ಎಚ್ಚರಿಸಿ, ರಕ್ಷಣೆ ನೀಡುತ್ತದೆ...

ಹಾಗಾಗಿಯೇ ಚೀನಿಯರು ಸಹ ಸಿಂಗ್‍ರ ದೇವಾಲಯವನ್ನು ಗೌರವಿಸುತ್ತಾರೆ. ಈ ದೇಗುಲಕ್ಕೆ ಬರಿಗಾಲಿನಲ್ಲಿ ರಕ್ಷಣೆ ನೀಡುತ್ತಾರೆ, ಉಳಿದ ಯೋಧರು ಗೌರವಿಸುತ್ತಾರೆ. ಇದು ರಾತ್ರಿ ಶಿಬಿರದಲ್ಲಿ ನಿದ್ರಿಸುವ ಸೈನಿಕರಿಗೆ ಎಚ್ಚರಿಸಿ, ರಕ್ಷಣೆ ನೀಡುತ್ತದೆ ಎನ್ನಲಾಗುತ್ತದೆ.

ಪ್ರತಿವರ್ಷ ಸೆಪ್ಟಂಬರ್11 ರಂದು....

ಪ್ರತಿವರ್ಷ ಸೆಪ್ಟಂಬರ್11 ರಂದು....

ಪ್ರತಿವರ್ಷ ಸೆಪ್ಟಂಬರ್11 ರಂದು ಇವರ ವಸ್ತುಗಳನ್ನು ಸಹವರ್ತಿ ಸೈನಿಕರೊಂದಿಗೆ ಮೂಲ ಮನೆಯ ಬಾಗಿಲಿಗೆ ಮುಟ್ಟಿಸಲಾಗುತ್ತದೆ. ಗೌರವಾನ್ವಿತ ಕ್ಯಾಪ್ಟನ್ ಆಗಿ ನಿವೃತ್ತಗೊಂಡಿದ್ದ ಇವರು ಇಂದಿಗೂ ದೇಶ ಪ್ರೇಮವನ್ನು ಇಟ್ಟುಕೊಂಡಿದ್ದಾರೆ.

ಇಂದಿಗೂ ಆತನನ್ನು ಬಾಬಾ ಎಂದು ಉಲ್ಲೇಖಿಸುತ್ತಾರೆ

ಇಂದಿಗೂ ಆತನನ್ನು ಬಾಬಾ ಎಂದು ಉಲ್ಲೇಖಿಸುತ್ತಾರೆ

ಸಿಂಗ್ ಪವಿತ್ರ ಸಂತನಾಗಿ ಹಾಗೂ ಸೈನಿಕನಾಗಿ ಕಾಣಿಸಿಕೊಳ್ಳುತ್ತಾನೆ. ಸೈನಿಕರು ಆತನನ್ನು ಬಾಬಾ ಎಂದು ಉಲ್ಲೇಖಿಸುತ್ತಾರೆ ಎನ್ನುವ ಸುದ್ದಿ ಇದೆ.

English summary

Story of the ghost of an indian army soldier who-still protects india

Believe it or not, military mythology is a thing. Maybe when it comes to serving your nation, the soldiers never actually die. This is the story of Baba Harbhajan Singh, an Indian Army soldier, who died in 1986 but his ghost is believed to still be protecting his brothers-in-arms at the border.
Subscribe Newsletter