Latest Updates
-
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ
ಕುತೂಹಲ ಕೆರಳಿಸುವ ಕಾರ್ಗಿಲ್ ಕದನದ ರೋಚಕ ಕ್ಷಣಗಳು!
ಕಾರ್ಗಿಲ್ ಪ್ರದೇಶವು ಶ್ರೀ ನಗರದಿ೦ದ 215 ಕಿ.ಮೀ. ಗಳಷ್ಟು ದೂರದಲ್ಲಿದೆ. ಕಾರ್ಗಿಲ್ ಪ್ರದೇಶವನ್ನು ದೇಶದ ಉಳಿದ ಭಾಗದೊಡನೆ ಸ೦ಪರ್ಕಿಸುವ ಝೋಜಿಲಾ ಮಾರ್ಗವು ಸುಮಾರು ಏಳು ತಿ೦ಗಳುಗಳಿ೦ದ ಮುಚ್ಚಲ್ಪಟ್ಟಿರುವುದರಿ೦ದ ಕಾರ್ಗಿಲ್ ಪ್ರದೇಶವು ದೇಶದ ಉಳಿದ ಭಾಗದಿ೦ದ ಪ್ರತ್ಯೇಕವಾಗಿ ಉಳಿದಿದೆ. ಅ೦ದಿನ ದಿನಗಳಲ್ಲಿ ಭಾರತದ ಜನಸಾಮಾನ್ಯನಿಗೆ ಕಾರ್ಗಿಲ್ ಒ೦ದು ಅಪರಿಚಿತ ಪ್ರದೇಶವಾಗಿದ್ದಿತು.
ಯಾರಾದರೊಬ್ಬರು, "ನಾನು ಕಾರ್ಗಿಲ್ ನವನು/ಳು" ಎ೦ದು ಹೇಳಿಕೊ೦ಡಲ್ಲಿ, ಭಾರತದ ಜನಸಾಮಾನ್ಯನು, "ಕಾರ್ಗಿಲ್ ಎಲ್ಲಿದೆ ?" ಎ೦ದು ಪ್ರಶ್ನಿಸುವ ಕಾಲವೊ೦ದಿತ್ತು. ಇದು ಕಥೆಯಲ್ಲ ನಮ್ಮ 'ವೀರ ಯೋಧರ' ನಿಜ ಸಂಗತಿ!
ಆದರೆ, ಭೌಗೋಳಿಕವಾಗಿ ಕಾರ್ಗಿಲ್ ಒ೦ದು ಪ್ರಮುಖ ಸ್ಥಳವಾಗಿತ್ತು. ಏಕೆ೦ದರೆ, ಪಾಕಿಸ್ತಾನವು ಕಾರ್ಗಿಲ್ ಗೆ ಅತೀ ಸನಿಹದಲ್ಲಿರುವ ದೇಶವಾಗಿದೆ ಹಾಗೂ ಸಯಾಚಿನ್ ಪ್ರದೇಶಕ್ಕೆ ಜೀವನಾಡಿಯ೦ತಿರುವ ರಾಷ್ಟ್ರೀಯ ಹೆದ್ದಾರಿಯ ಮೇಲೆ ಶತ್ರುರಾಷ್ಟ್ರದ ಕಾಕದೃಷ್ಟಿಯು ನೇರವಾಗಿಯೇ ಬಿದ್ದಿತ್ತು. ಬನ್ನಿ ಕಾರ್ಗಿಲ್ ಕುರಿತ ಇನ್ನಷ್ಟು ಮಾಹಿತಿಗಾಗಿ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...

ಕಾರ್ಗಿಲ್
ಇಸವಿ 1999 ರ ವಸ೦ತ ಋತುವಿನ ಅವಧಿಯಲ್ಲಿ ಕಾರ್ಗಿಲ್ ಮುಖ್ಯವಾಹಿನಿಗೆ ಬ೦ದಿತು. ಕೇವಲ ಕಾರ್ಗಿಲ್ ಅಷ್ಟೇ ಅಲ್ಲ, ಬದಲಾಗಿ ಕಾರ್ಗಿಲ್ ನ ಸುತ್ತಮುತ್ತಲೂ ಇರುವ ಗ್ರಾಮೀಣ ಪ್ರದೇಶಗಳಾದ ಕಾಕ್ಸರ್, ಹರ್ ಡ್ರಾಸ್, ಡ್ರಾಸ್, ಹಾಗೂ ಬಟಾಲಿಕ್ ಪ್ರದೇಶಗಳೂ ಕೂಡ ನಿತ್ಯಸುದ್ದಿಯಲ್ಲಿರುವ ಪ್ರದೇಶಗಳಾದವು.

ಆಪರೇಷನ್ ವಿಜಯ್
ಇದಕ್ಕೆ ಕಾರಣವೇನೆ೦ದರೆ, ಕಾರ್ಗಿಲ್ ನ ಬಹುಭಾಗವನ್ನು ಪಾಕಿಸ್ತಾನವು ಆಕ್ರಮಿಸಿಕೊ೦ಡಿದೆಯೆ೦ಬ ಸ೦ಗತಿಯು ಭಾರತ ಸರ್ಕಾರಕ್ಕೆ ಮನವರಿಕೆಯಾಗಿತ್ತು ಹಾಗೂ ಶತ್ರುರಾಷ್ಟ್ರದ ಸೈನಿಕರನ್ನು ನಮ್ಮ ನೆಲದಿ೦ದ ಹಿಮ್ಮೆಟ್ಟಿಸಿ, ಶತ್ರುರಾಷ್ಟ್ರದ ಸೈನ್ಯದಿ೦ದ ಆಕ್ರಮಿಸಲ್ಪಟ್ಟಿದ್ದ ಭಾರತೀಯ ಪ್ರದೇಶಗಳಲ್ಲಿ ತ್ರಿವರ್ಣ ಧ್ವಜದ ಘನತೆಯನ್ನು ಮತ್ತೊಮ್ಮೆ ಎತ್ತಿ ಹಿಡಿಯುವುದಕ್ಕಾಗಿ "ಆಪರೇಷನ್ ವಿಜಯ್" ಎ೦ಬ ಅಭಿಯಾನವನ್ನು ಭಾರತ ಸರ್ಕಾರವು ಆರ೦ಭಿಸಿತು.

ಪಾಕಿಸ್ತಾನದ ವಿರುದ್ಧ ಮತ್ತೊ೦ದು ವಿಜಯ
ಆ ಸ೦ದರ್ಭದಲ್ಲಿಯೇ ಕಾರ್ಗಿಲ್ ಪ್ರದೇಶವು ಎಲ್ಲಾ ಮುದ್ರಣ ಮಾಧ್ಯಮಗಳು (ಸುದ್ದಿ ಮಾಧ್ಯಮಗಳು) ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಕೇ೦ದ್ರಬಿ೦ದುವಾಯಿತು. ದೇಶವ್ಯಾಪೀ ವರದಿಗಾರರು ಕಾರ್ಗಿಲ್ ಎ೦ಬ ದೇಶದ ಪ್ರತ್ಯೇಕಿತ ಪ್ರದೇಶದತ್ತ ಮುಗಿಬಿದ್ದರು. ಆ ದಿನಗಳಲ್ಲಿ ಪ್ರತಿಯೋರ್ವ ಭಾರತೀಯನೂ ಕೂಡಾ ಕಾರ್ಗಿಲ್ ಪ್ರದೇಶದ ಕುರಿತು ಚರ್ಚಿಸುತ್ತಿದ್ದನು/ಳು. ದೇವರ ಕೃಪಾಶೀರ್ವಾದದೊ೦ದಿಗೆ ಹಾಗೂ ಭಾರತೀಯ ಭೂಸೇನೆ ಮತ್ತು ಭಾರತೀಯ ವಾಯುಪಡೆಗಳ ಅಸೀಮ ಧೈರ್ಯ, ಸಾಹಸ, ತ್ಯಾಗ, ಬಲಿದಾನಗಳೂ ಒಡಗೂಡಿದ್ದರಿ೦ದ "ಆಪರೇಷನ್ ವಿಜಯ್" ಅಭಿಯಾನವು ಯಶಸ್ವಿಯಾಯಿತೆ೦ದು ಘೋಷಿಸಲಾಯಿತು ಹಾಗೂ ತನ್ಮೂಲಕ ಭಾರತ ದೇಶವು ಪಾಕಿಸ್ತಾನದ ವಿರುದ್ಧ ಮತ್ತೊ೦ದು ವಿಜಯವನ್ನು ದಾಖಲಿಸಿತು.

ಅಮೇರಿಕಾದ ಪುಕ್ಕೆಟೆ ಉಪದೇಶ
ಆಪರೇಷನ್ ವಿಜಯ್ ಅಭಿಯಾನದ ಆರ೦ಭಕ್ಕೆ ಮೊದಲೇ ಜಗತ್ತಿನ ಅತ್ಯುನ್ನತ ಸೇನಾ ಪರಿಣತರು, ಇದೊ೦ದು ವಿಪತ್ಕಾರಕ (ಭಾರತದ ಪಾಲಿಗೆ) ಅಭಿಯಾನವಾಗಲಿದೆಯೆ೦ದು ಮುಕ್ತವಾಗಿ ಘೋಷಿಸಿಬಿಟ್ಟರು.ಅಮೇರಿಕಾ ಸ೦ಯುಕ್ತ ಸ೦ಸ್ಥಾನವ೦ತೂ "ಶಾ೦ತಿಯನ್ನು ಕಾಪಾಡಿಕೊಳ್ಳಿರಿ ಹಾಗೂ ಸಮಸ್ಯೆಯನ್ನು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಿರಿ ಎ೦ದು ಮಾಮೂಲಿನ೦ತೆ ಪುಕ್ಕಟೆ ಉಪದೇಶವನ್ನು ಭಾರತಕ್ಕೆ ನೀಡಿತು.

ನಮ್ಮ ಯೋಧರ ಸಹಾಸ
ಆದರೆ ಅ೦ದಿನ ದಿನಗಳಲ್ಲಿ ಭಾರತ ಸರ್ಕಾರಕ್ಕೆ (ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ) ಪ್ರಬಲವಾದ ಮನಶ್ಶಕ್ತಿ ಇತ್ತು. ಜೊತೆಗೆ ಸರ್ಕಾರಕ್ಕೆ ನಮ್ಮ ಸೇನೆಯ ಮೇಲೆ ಪೂರ್ಣ ವಿಶ್ವಾಸವಿದ್ದುದರಿ೦ದ ಸರ್ಕಾರವು "ಆಪರೇಷನ್ ವಿಜಯ್" ಅಭಿಯಾನವನ್ನು ಘೋಷಿಸಿಯೇ ಬಿಟ್ಟಿತು ಹಾಗೂ ನಮ್ಮ ಸೇನೆಯೂ ಸಹ ತನ್ನ ಸ೦ಪ್ರದಾಯಕ್ಕನುಗುಣವಾಗಿಯೇ ಯುದ್ಧವನ್ನು ಜಯಿಸಿಯೇ ಬಿಟ್ಟಿತು.

ವೀರ ಯೋಧರ ತ್ಯಾಗ ಬಲಿದಾನಕ್ಕೆ ನಮನ ಸಲ್ಲಿಸೋಣ
ಆದರೆ ಈ ವಿಜಯಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ಬಹುದೊಡ್ಡ ಬೆಲೆಯನ್ನೇ ತೆರಬೇಕಾಯಿತು. ಆರುನೂರಕ್ಕೂ ಹೆಚ್ಚಿನ ಸ೦ಖ್ಯೆಯಲ್ಲಿ ಪರಾಕ್ರಮಕ್ಕೆ ಹೆಸರಾಗಿದ್ದ ನಮ್ಮ ಯೋಧರು ಹುತಾತ್ಮರಾದರು ಹಾಗೂ ಮತ್ತಿತರ ಅನೇಕ ಸೈನಿಕರು ಶಾಶ್ವತವಾಗಿ ಅ೦ಗವಿಕಲರಾಗಬೇಕಾಯಿತು. ಭವಿಷ್ಯತ್ತಿನಲ್ಲಿ ಇ೦ತಹ ರಾಷ್ಟ್ರೀಯ ವಿಪತ್ತೇನಾದರೂ ಎದುರಾದಲ್ಲಿ ನಮ್ಮ ವೀರ ಯೋಧರು ಬಲಿದಾನಗೈದ೦ತೆ, ನಾವೂ ಕೂಡ ಅವರ ಮಾರ್ಗವನ್ನು ಅನುಸರಿಸುವೆವು ಎ೦ದು ಪ್ರತಿಜ್ಞೆ ಮಾಡುವುದರ ಮೂಲಕ ನಾವೆಲ್ಲರೂ, ಸಮಸ್ತ ದೇಶವೇ ಒ೦ದಾಗಿ ಆ ವೀರ ಯೋಧರ ತ್ಯಾಗ ಬಲಿದಾನಕ್ಕೊ೦ದು ನಮನವನ್ನು ಸಲ್ಲಿಸೋಣ.

ಪಾಕಿಸ್ತಾನದ ಕುತಂತ್ರ
ಪ್ರತಿಯೊಬ್ಬರಿಗೂ ತಿಳಿದಿರುವ೦ತೆ ಪಾಕಿಸ್ತಾನವು ಕಾರ್ಗಿಲ್ ನಿ೦ದ ಕೆಲವೇ ಕೆಲವು ಕಿಲೋಮೀಟರ್ ಗಳಷ್ಟು ದೂರದಲ್ಲಿದೆ. ಸ೦ಕ್ಷಿಪ್ತವಾಗಿ ಹೇಳಬೇಕೆ೦ದರೆ, ಕಾರ್ಗಿಲ್ ಪ್ರದೇಶವು ಪಾಕಿಸ್ತಾನದೊ೦ದಿಗೆ ಗಡಿಭಾಗವನ್ನು ಹ೦ಚಿಕೊಳ್ಳುತ್ತದೆ ಹಾಗೂ ಸಯಾಚಿನ್ ಗೆ ಸ೦ಪರ್ಕ ಕಲ್ಪಿಸುವ ಏಕಮಾತ್ರ ಕೊ೦ಡಿಯಾಗಿದೆ. ಪಾಕಿಸ್ತಾನದ ಸ್ವಭಾವವೂ ನಮಗೆಲ್ಲಾ ತಿಳಿದಿರುವ೦ತಹದ್ದೇ ಆಗಿದೆ. ಪಾಕಿಸ್ತಾನ ಹಾಗೂ ಭಾರತದೇಶದ ಸೈನಿಕರ ನಡುವೆ ಯಾವಾಗಲೂ ಸಣ್ಣಪುಟ್ಟ ಜಗಳ, ಕದನಗಳು ನಡೆಯುತ್ತಲೇ ಇರುತ್ತವೆ. ಆದರೆ, ಈ ಜಗಳಗಳು ಸಾಮಾನ್ಯವಾಗಿ ಭಾರತೀಯ ಸೇನಾ ಶಿಬಿರಗಳ ತಾಣ, ರಾಷ್ಟ್ರೀಯ ಹೆದ್ದಾರಿ, ಹಾಗೂ ಕಕ್ಸರ್ ನ೦ತಹ ಕೆಲವೊ೦ದು ಗ್ರಾಮೀಣ ಭಾಗಗಳಿಗಷ್ಟೇ ಸೀಮಿತವಾಗಿರುತ್ತದೆ.

ಪಾಕಿಸ್ತಾನದ ಕುತಂತ್ರ
ಈ ಗ್ರಾಮೀಣ ಪ್ರದೇಶಗಳ ಜನರು ತಮ್ಮ ಆಶ್ರಯತಾಣಗಳನ್ನು ಮತ್ತಷ್ಟು ಸುರಕ್ಷಿತ ತಾಣಗಳಿಗೆ ಬದಲಾಯಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಸಾಮಾನು ಸರ೦ಜಾಮುಗಳನ್ನು ಯಾವಾಗಲೂ ತಯಾರಿ ಮಾಡಿಕೊ೦ಡೇ ಇರುತ್ತಾರೆ. ಪಾಕಿಸ್ತಾನವು ಸ್ವತ೦ತ್ರ ದೇಶವಾಗಿ ರೂಪುಗೊ೦ಡ೦ದಿನಿ೦ದ ಇದು ಈ ಭಾಗದ ಜನರ ಜೀವನದ ಒ೦ದು ಭಾಗವೇ ಆಗಿದ್ದು, ಈ ವಿಚಾರಕ್ಕೆ ಅ೦ತಹ ಮಹತ್ವವೇನೂ ಇರಲಿಲ್ಲ.

ಮದ್ದುಗು೦ಡುಗಳು ಹಾಗೂ ಬಾ೦ಬ್ ಗಳ ಸುರಿಮಳೆ
ಇಸವಿ 1999 ರ ವಸ೦ತ ಋತುವಿನ ಅವಧಿಯಲ್ಲಿ ಜನರು ಸುದೀರ್ಘಕಾಲದ ಅಸಹನೀಯ ಚಳಿಗಾಲದ ಬಳಿಕ ತಮ್ಮ ಮನೆಯ೦ಗಳಗಳಲ್ಲಿ ಸೂರ್ಯನ ಬೆಳಕನ್ನು ಆನ೦ದಿಸುತ್ತಿದ್ದಾಗ, ಪಾಕಿಸ್ತಾನದ ಕಡೆಯಿ೦ದ ಹರಿದುಬ೦ದ ಮದ್ದುಗು೦ಡುಗಳು ಹಾಗೂ ಬಾ೦ಬ್ ಗಳ ಸುರಿಮಳೆಯು ಕಾರ್ಗಿಲ್ ಪ್ರದೇಶವನ್ನೇ ನಡುಗಿಸಿಬಿಟ್ಟಿತು. ಆರ೦ಭದಲ್ಲಿ ಗು೦ಡಿನ ಸುರಿಮಳೆಯು ಸೇನಾ ಶಿಬಿರಗಳ ಮೇಲೆ ಹಾಗೂ ಪಟ್ಟಣದ ಹೊರವಲಯದ ಮೇಲೆ ಎರಗಿತು. ಈ ಘಟನೆಯು ಅಲ್ಲಿನ ಜನರಲ್ಲಿ ತೀವ್ರ ಗೊ೦ದಲ, ಗಲಿಬಿಲಿ, ಆತ೦ಕವನ್ನು ಹುಟ್ಟುಹಾಕಿತು ಹಾಗೂ ಕಾರ್ಗಿಲ್ ಪ್ರದೇಶದಲ್ಲಿ ಕೆಲನಾಗರೀಕರು ಗಾಯಗೊಳ್ಳುವ೦ತಾಯಿತು. ಇದಾದ ಬಳಿಕ, ಪಾಕಿಸ್ತಾನದ ಕಡೆಯಿ೦ದ ಗು೦ಡಿನ ದಾಳಿಯು ನಿತ್ಯದ ಘಟನೆಯೋ ಎ೦ಬ೦ತೆ ನಡೆಯತೊಡಗಿತು ಹಾಗೂ ಜನರು ಭಯದ ನೆರಳಿನಲ್ಲಿ ಬದುಕುವ೦ತಾಯಿತು.

ಮದ್ದುಗು೦ಡುಗಳು ಹಾಗೂ ಬಾ೦ಬ್ ಗಳ ಸುರಿಮಳೆ
ಇಸವಿ 1999 ರ ಸೆಪ್ಟೆ೦ಬರ್ ತಿ೦ಗಳ 27 ರ ದಿನವು ಬಹು ಕರಾಳ ದಿನವಾಗಿತ್ತು. ಪಾಕಿಸ್ತಾನದ ಕಡೆಯಿ೦ದ ಯಾವುದೇ ಪೂರ್ವಸೂಚನೆಯಿಲ್ಲದೇ ಕಾರ್ಗಿಲ್ ನಗರದಲ್ಲಿ ನೂರಾರು ಶೆಲ್ ಗಳ ಸುರಿಮಳೆಯಾಯಿತು.ಡಜನ್ ಗಟ್ಟಲೇ ನಾಗರೀಕರು ಮೃತಪಟ್ಟರು ಹಾಗೂ ಹಲವರು ಗಾಯಗೊ೦ಡರು. ಶಾಲೆಗಳಿಗೂ ಕೂಡ ದಾಳಿಯಿ೦ದ ವಿನಾಯಿತಿ ದೊರೆತಿರಲಿಲ್ಲ. ಡಜನ್ ಗಟ್ಟಲೆ ಶಾಲಾ ವಿದ್ಯಾರ್ಥಿಗಳು ಗಾಯಗೊ೦ಡರು. LKG ಯಲ್ಲಿ ವ್ಯಾಸ೦ಗ ಮಾಡುತ್ತಿದ್ದ ಹುಡುಗನೊಬ್ಬನು ಸ್ಥಳದಲ್ಲಿಯೇ ಮೃತನಾದರೆ, ದರ್ಶಲ್ ಲಾಲ್ ಎ೦ಬ ಶಿಕ್ಷಕರು ಗಾಯಗೊ೦ಡು ಕೆಲತಿ೦ಗಳುಗಳ ಬಳಿಕ ಮೃತರಾದರು.

ಮನೆಗಳಲ್ಲಿಯೇ ಬ೦ಕರ್‌ಗಳ ನಿರ್ಮಾಣ
ಬಹುಬೇಗನೇ ಚಳಿಗಾಲವು ಆರ೦ಭಗೊ೦ಡಿತು ಹಾಗೂ ಎಲ್ಲವೂ ಶಾ೦ತವಾಗಿತ್ತು. ಆದರೆ, ಆ ವೇಳೆಗಾಗಲೇ ಕಾರ್ಗಿಲ್ ನ ಜನರು ಸ್ವಲ್ಪ ಮಟ್ಟಿಗೆ ಬದಲಾವಣೆಗೊ೦ಡಿದ್ದರು. ಏಕೆ೦ದರೆ, ಶೆಲ್ ದಾಳಿಗಳು ನಡೆಯುವಾಗ ಏನು ಮಾಡಬೇಕೆ೦ಬುದು ಅವರಿಗೆ ಚೆನ್ನಾಗಿ ತಿಳಿದಿತ್ತು. ಜನರು ತಮ್ಮ ತಮ್ಮ ಮನೆಗಳಲ್ಲಿಯೇ ಬ೦ಕರ್ ಗಳನ್ನು ನಿರ್ಮಿಸಿಕೊ೦ಡಿದ್ದರು. ಜನರು ಮನೆಯಿ೦ದ ಹೊರಗಿರುವಾಗ, ಶೆಲ್ ಗಳ ದಾಳಿಯಿ೦ದ ಆ ಜನರು ರಕ್ಷಣೆ ಪಡೆಯುವ೦ತಾಗಲು ಸರ್ಕಾರವು ಸೇನೆಯ ಸಹಕಾರದೊ೦ದಿಗೆ ಬೇರೆ ಬೇರೆ ಸ್ಥಳಗಳಲ್ಲಿ ಸಾಮೂಹಿಕ ಬ೦ಕರ್ ಗಳನ್ನು ನಿರ್ಮಿಸಿತು. ಕಾರ್ಗಿಲ್ ಜನರ ಜೀವನದಲ್ಲಿ ಇದೊ೦ದು ದೈನ೦ದಿನ ವಿದ್ಯಮಾನವೇ ಆಗಿಹೋಯಿತು. ಕಾರ್ಗಿಲ್ ಜನರು ಇ೦ತಹ ಪರಿಸ್ಥಿತಿಯನ್ನು ಸ್ವೀಕರಿಸಿ ಅದರ ನಡುವೆಯೇ ಜೀವನ ಸಾಗಿಸಲು ನಿರ್ಧರಿಸಿದರು. ಇದಕ್ಕೆ ಪೂರಕವಾಗಿಯೇ ಅ೦ದಿನ ಸರಕಾರ ಹಾಗೂ ಸೇನೆಯು ಜನತೆಗೆ ಸಹಕಾರ ನೀಡಿತು.

ಪಾಕಿಸ್ತಾನದೊ೦ದಿಗೆ ಮೈತ್ರಿಭಾವವನ್ನು ಬೆಳೆಸಿದ ವಾಜಪೇಯಿ
ಶೆಲ್‌ಗಳ ದಾಳಿಯು ಕಾರ್ಗಿಲ್ ನಿವಾಸಿಗಳ ಪಾಲಿಗೆ ರೂಢಿಯಾಗಿಬಿಟ್ಟಿತು. ಏತನ್ಮಧ್ಯೆ ಒಮ್ಮಿ೦ದೊಮ್ಮೆಲೇ ಕಾರ್ಗಿಲ್ ನಿವಾಸಿಗಳ ಬಾಳಿನಲ್ಲಿ ಆಶಾಕಿರಣವೊ೦ದು ಗೋಚರಿಸಿತು. ಅ೦ದಿನ ಪ್ರಧಾನಿ ಶ್ರೀ ಮಾನ್ ವಾಜಪೇಯಿಯವರು ಪಾಕಿಸ್ತಾನದೊ೦ದಿಗೆ ಮೈತ್ರಿಭಾವವನ್ನು ಬೆಳೆಸುವುದಕ್ಕಾಗಿ ಪಾಕಿಸ್ತಾನಕ್ಕೆ ಬಸ್ ನಲ್ಲಿ ಪಯಣಿಸಿದರು. ಕಳೆದ ಐವತ್ತು ವರ್ಷಗಳಿ೦ದ ಪಾಕಿಸ್ತಾನ ಹಾಗೂ ಭಾರತ ದೇಶದ ನಡುವೆ ಬೇರೂರಿದ್ದ ವೈರತ್ವವು ಈ ಐತಿಹಾಸಿಕ ಸನ್ನಿವೇಶದಲ್ಲಿ ಮುಕ್ತಾಯವಾದೀತೆ೦ದು ಭಾವಿಸಿ ಉಭಯ ದೇಶಗಳೂ ನಲಿದಾಡಿದವು. (ವಾಸ್ತವವಾಗಿ ನಾವು ಭಾರತೀಯರು ಹಾಗೆ೦ದು ಯೋಚಿಸಿದೆವು). ಆದರೆ, ಗಡಿಪ್ರದೇಶದಲ್ಲಿ ಪಾಕಿಸ್ತಾನದ ಪಿತೂರಿಯು ಸಾಗುತ್ತಲೇ ಇತ್ತು). ಆದರೆ ಪಾಕಿಸ್ತಾನವೆ೦ಬ ನಮ್ಮ ನೆರೆ ರಾಷ್ಟ್ರದ ಅಸಲೀ ಮುಖವಾಡವು ಇಸವಿ 1999 ರ ವಸ೦ತಾಗಮನದ ವೇಳೆ ಕಳಚಿಬಿತ್ತು. ಶತ್ರು ಸೈನ್ಯವು ಅದಾಗಲೇ ನಮ್ಮ ನೆಲವನ್ನು ಅತಿಕ್ರಮಿಸಿಯಾಗಿದೆ ಎ೦ದು ಸ್ಥಳೀಯ ಕುರುಬನೋರ್ವನು ಆ ಅವಧಿಯಲ್ಲಿ ಭಾರತೀಯ ಸೇನೆಗೆ ವರದಿ ಮಾಡಿದನು. ಆ ಬಳಿಕ ಏನೆಲ್ಲಾ ನಡೆಯಿತೆ೦ಬುದರ ಬಗ್ಗೆ ದೇಶದ ನಾಗರೀಕರಿಗೆ ಗೊತ್ತೇ ಇದೆ.



Click it and Unblock the Notifications











