ಜಾತಕದಲ್ಲಿ ಕಾಡುವ ಕುಜ ದೋಷ! ಹೀಗೂ ಸಮಸ್ಯೆ ಬರಬಹುದು!

By: manu
Subscribe to Boldsky

ಹಿಂದೂ ಧರ್ಮದಲ್ಲಿ ಜ್ಯೋತಿಷ್ಯ ಶಾಸ್ತ್ರವನ್ನು ಹಿಂದಿನಿಂದಲೂ ನೆಚ್ಚಿಕೊಂಡು ಬರಲಾಗಿದೆ. ಅದರಲ್ಲೂ ಮದುವೆ ಸಂದರ್ಭದಲ್ಲಿ ಹುಡುಗ ಹಾಗೂ ಹುಡುಗಿಯ ಜಾತಕ ನೋಡುವಂತಹ ಕ್ರಮವು ಆಧುನಿಕ ಯುಗದಲ್ಲೂ ನಡೆಯುತ್ತಾ ಇದೆ. ಯಾಕೆಂದರೆ ಜಾತಕವು ಕೂಡಿ ಬಂದರೆ ವೈವಾಹಿಕ ಜೀವನವು ಸುಗಮವಾಗಿರಲಿದೆ ಎನ್ನುವುದು ಹಿರಿಯರ ನಂಬಿಕೆ.

ಆದರೆ ಜಾತಕದಲ್ಲಿ ಕೆಲವೊಂದು ದೋಷಗಳು ಇದ್ದರೆ ಮದುವೆಯಾಗಲು ಹಿಂಜರಿಯುತ್ತಾರೆ. ಅದರಲ್ಲೂ ಮಂಗಳಿಕ ದೋಷ ಪ್ರಮುಖವಾಗಿರುವಂತದ್ದು. ಸಂಸ್ಕೃತದಲ್ಲಿ ಮಂಗಳ ಗ್ರಹಕ್ಕೆ ಮಂಗಳವೆಂದು ಕರೆಯಲಾಗುತ್ತದೆ. ಜಾತಕದಲ್ಲಿ ಮಂಗಳವು 1, 2, 4, 7, 8 ಮತ್ತು 12ನೇ ಮನೆಯಲ್ಲಿದ್ದಾಗ ಇದನ್ನು ಮಂಗಳ ದೋಷವೆಂದು ಕರೆಯಲಾಗುವುದು ಮತ್ತು ಜನರು ಇದನ್ನು ಮಂಗಳಿಕ ಎಂದು ಕರೆಯುತ್ತಾರೆ. 

ಕುಜ ದೋಷ ನಿವಾರಣೆಗೆ ಅತ್ಯಗತ್ಯ ಪರಿಹಾರಕ್ರಮಗಳು

ಈ ದೋಷವು ಯಾರಿಗೂ ಬರಬಹುದು. ಗೌರವ, ಅಹಂ, ಸ್ವಾಭಿಮಾನ ಮತ್ತು ಶಕ್ತಿಯ ಸಂಕೇತವೇ ಮಂಗಳ. ಆದರೆ ಮಂಗಳ ದೋಷದಲ್ಲಿ ಸಂಬಂಧವು ದುರ್ಬಲವಾಗುವ ಸಾಧ್ಯತೆಗಳು ಹೆಚ್ಚಿರುವುದು. ಇದನ್ನು ಸರಿಯಾಗಿ ಬಳಸಿಕೊಂಡರೆ ಮಂಗಳ ದೋಷವು ಶಕ್ತಿಯನ್ನು ನೀಡುವುದು. ಜಾತಕದಲ್ಲಿ ಮಂಗಳ ದೋಷವಿದ್ದರೆ ಅದರಿಂದ ವೈವಾಹಿಕ ಜೀವನ, ಮಾನಸಿಕ ಆರೋಗ್ಯ ಮತ್ತು ಹಣಕಾಸಿನ ಮೇಲೆ ಪರಿಣಾಮ ಉಂಟಾಗಬಹುದು.

ಮಂಗಳಿಕ ಅಥವಾ ಕುಜ ದೋಷವಿರುವವರು ಮಂಗಳವಾರ ಹುಟ್ಟಿದ್ದರೆ ಕೆಟ್ಟ ಪರಿಣಾಮವಾಗದು. ವೈವಾಹಿಕ ಜೀವನದಲ್ಲಿ ಮಂಗಳಿಕ ದೋಷ ನಿವಾರಣೆ ಮಾಡಲು ಮಂಗಳಿಕ ದೋಷವಿರುವ ವಧು ಹಾಗೂ ವರ ಮದುವೆಯಾಗಬೇಕು. ಇದರಿಂದ ಪರಿಣಾಮ ಶೂನ್ಯವಾಗುವುದು....

ಮಂಗಳ ದೋಷದ ಪರಿಣಾಮ

ಮಂಗಳ ದೋಷದ ಪರಿಣಾಮ

ಜನ್ಮ ಜಾತಕದಲ್ಲಿ ಮಂಗಳಗ್ರಹ ಯಾವ ಮನೆಯಲ್ಲಿದೆ ಎಂದು ಅರ್ಥಮಾಡಿಕೊಂಡರೆ ಮಂಗಳ ದೋಷದ ಪರಿಣಾಮವು ತಿಳಿದುಬರುವುದು. 12ರಲ್ಲಿ ಆರು ಮನೆಗಳಲ್ಲಿ ಮಂಗಳವಿದ್ದರೆ ಆಗ ಅದು ಮಂಗಳನ ಕೆಟ್ಟ ಪ್ರಭಾವವೆಂದು ಭಾವಿಸಲಾಗುತ್ತದೆ.

ಒಂದನೇ ಮನೆಯಲ್ಲಿ ಮಂಗಳ ಗ್ರಹವಿದ್ದರೆ

ಒಂದನೇ ಮನೆಯಲ್ಲಿ ಮಂಗಳ ಗ್ರಹವಿದ್ದರೆ

ಜಾತಕದಲ್ಲಿ ಒಂದನೇ ಮನೆಯಲ್ಲಿ ಮಂಗಳ ಗ್ರಹವಿರುವವರು ತುಂಬಾ ಕ್ಷೋಬೆಗೊಳಗಾದವರು, ಆಕ್ರಮಣಕಾರಿಗಳು ಮತ್ತು ಅಸಭ್ಯರಾಗಿರುವರು. ಜೀವನದಲ್ಲಿ ಸಂತೋಷ ಕಳೆದುಕೊಳ್ಳುವುದು 1ನೇ ಮನೆಯಲ್ಲಿ ಮಂಗಳವಿರುವ 4ನೇ ಅಂಶದ ಲಕ್ಷಣ. ಇದರ 7ನೇ ಅಂಶವೆಂದರೆ ಚಿಂತೆ ಹಾಗೂ ತೊಂದರೆಯುಂಟು ಮಾಡಿ ಪತಿ ಮತ್ತು ಪತ್ನಿ ಮಧ್ಯೆ ಭಿನ್ನಾಭಿಪ್ರಾಯ ಉಂಟು ಮಾಡಬಹುದು. 8ನೇ ಅಂಶವೆಂದರೆ ನಿಮ್ಮ ಸುಖ ಜೀವನದ ಮೇಲೆ ಅಪಾಯದ ಸಂಭವವಿದೆ ಎನ್ನುವ ಸೂಚನೆ.

2ನೇ ಮನೆಯಲ್ಲಿ ಮಂಗಳನ ದೋಷ

2ನೇ ಮನೆಯಲ್ಲಿ ಮಂಗಳನ ದೋಷ

ಎರಡನೇ ಮನೆಯು ಸಂಪತ್ತು ಮತ್ತು ಕುಟುಂಬದ ಮನೆಯಾಗಿದೆ. ಮಂಗಳವು ಈ ಗ್ರಹದಲ್ಲಿ ಇದ್ದರೆ ಅದರಿಂದ ಆ ವ್ಯಕ್ತಿಯ ಕುಟುಂಬದೊಂದಿಗೆ ಸಂಬಂಧದ ಮೇಲೆ ಪರಿಣಾಮ ಬೀರುವುದು. ಇದು ಸಂಗಾತಿಗಳನ್ನು ಬೇರ್ಪಡಿಸಬಹುದು ಅಥವಾ ಪದೇ ಪದೇ ಜಗಳ ಮತ್ತು ಆತಂಕ ಉಂಟು ಮಾಡಬಹುದು. 2ನೇ ಮನೆಯಲ್ಲಿರುವ ಮಂಗಳನು ವ್ಯಕ್ತಿಯ ಕುಂಡಲಿಯಲ್ಲಿ 5, 8 ಮತ್ತು 9ನೇ ಮನೆಯ ಮೇಲೂ ಪ್ರಭಾವ ಬೀರಬಹುದು. ಮಂಗಳಿಕ ಹೊಂದಿರುವ ವ್ಯಕ್ತಿಯ ಮಕ್ಕಳ ಮೇಲೂ ಇದರ ಪರಿಣಾಮವಾಗಬಹುದು.

4ನೇ ಮನೆಯಲ್ಲಿ ಮಂಗಳ

4ನೇ ಮನೆಯಲ್ಲಿ ಮಂಗಳ

ಮಂಗಳವು ನಾಲ್ಕನೇ ಮನೆಯಲ್ಲಿದ್ದರೆ ಅದರ ಅಂಶವು ಕುಂಡಲಿಯ 7, 10 ಮತ್ತು 11ನೇ ಮನೆಯಲ್ಲಿರುವುದು. ಮಂಗಳವು ನಾಲ್ಕನೇ ಮನೆಯಲ್ಲಿ ಇದ್ದರೆ ಅದರಿಂದ ಸ್ಥಿರ ಸಂಪತ್ತು ಮತ್ತು ಸಮೃದ್ಧಿ ಸಿಗುವುದು. ಆದರೆ ವೈವಾಹಿಕ ಜೀವನದಲ್ಲಿ ತೊಂದರೆ ಕಾಣಿಸುವುದು. ಕುಂಡಲಿಯ ವ್ಯಕ್ತಿಯು ಹೊಂದಾಣಿಕೆ ಮಾಡಿಕೊಳ್ಳದೆ ಇರುವುದರಿಂದ ಹೀಗೆ ಆಗುವುದು. ಆದರೆ ಇದರಿಂದ ಸಂಬಂಧಿಗಳಿಗೆ ಯಾವುದೇ ಅಪಾಯವಿಲ್ಲ.

7ನೇ ಮನೆಯಲ್ಲಿ ಮಂಗಳ ದೋಷ

7ನೇ ಮನೆಯಲ್ಲಿ ಮಂಗಳ ದೋಷ

ಇದು ಮದುವೆ ಮತ್ತು ಜತೆಗಾರಿಕೆಯ ಮನೆಯಾಗಿದೆ. 7ನೇ ಮನೆಯಲ್ಲಿ ಮಂಗಳ ದೋಷವಿದ್ದರೆ ಅದರಿಂದ ಮದುವೆಗೆ ಹಾನಿಯಾಗಬಹುದು. ಈ ದೋಷವಿರುವವರು ಅನಾರೋಗ್ಯ ಹೊಂದಿರುವ ಪತ್ನಿಯನ್ನು ಪಡೆಯಬಹುದು ಅಥವಾ ಮಹಿಳೆಯರಿಗೆ ತುಂಬಾ ಕೋಪಿಷ್ಠ ಪತಿ ಸಿಗಬಹುದು.

8ನೇ ಮನೆಯಲ್ಲಿ ಮಂಗಳ ದೋಷ

8ನೇ ಮನೆಯಲ್ಲಿ ಮಂಗಳ ದೋಷ

ಇದು ಜೀವನದಲ್ಲಿ ಸುಖದುಃಖ ಮತ್ತು ಪರಿಸ್ಥಿತಿಯ ಸಂಕೇತ. ಈ ಮನೆಯಲ್ಲಿ ಮಂಗಳ ದೋಷವಿದ್ದರೆ ಅದು ತುಂಬಾ ಕೆಟ್ಟದು. ಇದು ವೈವಾಹಿಕ ಜೀವನದಲ್ಲಿ ಖಿನ್ನತೆ ಉಂಟು ಮಾಡಬಹುದು. ಆರ್ಥಿಕ ಪರಿಸ್ಥಿತಿ, ಸಂಗಾತಿಯ ಅನಾರೋಗ್ಯ ಮತ್ತು ಇತರ ಕೆಲವೊಂದು ಕಾರಣಗಳಿಂದ ಖಿನ್ನತೆ ಉಂಟಾಗಬಹುದು.

English summary

Effects Of Manglik Dosha On Marriage

Manglik Dosha is a common dosh found in a Kundali, considered astrologically bad. Mars is called Mangal in sanskrit and an astrological situation is formed when mangal in the 1st, 2nd, 4th, 7th, 8th and 12th house of a persons horoscope. This is called Mangal Dosha and people who have this are called Manglik.
Subscribe Newsletter