ನಮ್ಮ ರಾಜಕಾರಣಿಗಳ ವೈರಲ್ ಆದ ಫೋಟೋಗಳಿವು! ಇದೆಲ್ಲಾ ನಿಜವೇ?

By: Deepu
Subscribe to Boldsky

ಯಾವಾಗ ವ್ಯಕ್ತಿಯೊಬ್ಬರು ಪ್ರಸಿದ್ಧರಾಗುತ್ತಾರೋ ಅಂದಿನಿಂದ ಅವರ ಮಾತು, ಕೃತಿಗಳೆಲ್ಲಾ ಸಾರ್ವಜನಿಕವಾಗುತ್ತವೆ. ಒಂದು ವೇಳೆ ನಮಗೆ ಇಲ್ಲ ಅನ್ನಿಸಿದರೂ ಮಾಧ್ಯಮಗಳು ಮಾತ್ರ ಬಿಡುವುದಿಲ್ಲ. ಇವರ ಪ್ರತಿ ನಡೆಯನ್ನೂ ಕ್ಯಾಮೆರಾಮನ್‌ಗಳು ತದೇಕಚಿತ್ತದಿಂದ ಹಿಂಬಾಲಿಸುತ್ತಾ ಯಾವುದಾದರೊಂದು ಚಿಕ್ಕ ತಪ್ಪು ಅಥವಾ ಅನೂಚಾನವಾದ ನಡವಳಿಕೆಗಾಗಿ ಕಾಯುತ್ತಾ ಇರುತ್ತಾರೆ. 

ಯಾವಾಗ ಮೈಮರೆತ ಘಳಿಗೆಯಲ್ಲಿ ಏನಾದರೊಂದು ತಪ್ಪಾಯಿತೋ, ಆ ಕ್ಯಾಮೆರಾದಲ್ಲಿ ಸೆರೆಹಿಡಿದ ದೃಶ್ಯ ತಕ್ಷಣವೇ ಎಲ್ಲಡೆ ಬಿತ್ತರಗೊಂಡು ಕ್ಯಾಮರಾಮನ್‌ನ ಗಳಿಕೆಯನ್ನು ಹೆಚ್ಚಿಸುತ್ತದೆ, ಅಂತೆಯೇ ಆ ಪ್ರಸಿದ್ಧ ವ್ಯಕ್ತಿಯ ಮಾನವನ್ನೂ ಕಳೆಯುತ್ತದೆ. ನಟಿ ರಾಧಿಕಾ ಅವರ ಫ್ಯಾಮಿಲಿ ಫೋಟೋ ನೋಡಿದಿರಾ?

ಈ ಪ್ರಕ್ರಿಯೆಯನ್ನು ತಪ್ಪು ಎಂದು ಸರಾಸಾಗಟಾಗಿ ನಿರಾಕರಿಸುವಂತಿಲ್ಲ. ಏಕೆಂದರೆ ಈ ಕ್ರಿಯೆಯ ಮೂಲಕವೇ ನಮ್ಮ ಕೆಲವಾರು ರಾಜಕಾರಣಿಗಳ ಕುಕೃತ್ಯಗಳು ಬಯಲಾಗಿವೆ. ಇತರರಿಗೆ ಎಚ್ಚರಿಕೆಯ ಗಂಟೆಯೂ ಆಗಿವೆ. ನಮ್ಮ ಕೆಲವು ಚತುರ ಕ್ಯಾಮೆರಾಮನ್‌ಗಳು ಕ್ಲಿಕ್ಕಿಸಿದ ಕೆಲವು ಚಿತ್ರಗಳನ್ನು ಇಂದು ಸಂಗ್ರಹಿಸಲಾಗಿದ್ದು ಕೆಲವು ನಿಮ್ಮ ಮೊಗದಲ್ಲಿ ನಗು ಮೂಡಿಸಿದರೆ ಕೆಲವು ಹಲ್ಲು ಕಡಿಯುವಂತೆ ಮಾಡಬಹುದು...

ಸದನದ ಸಮಯದ ಸವಿನಿದ್ದೆ

ಸದನದ ಸಮಯದ ಸವಿನಿದ್ದೆ

ಆರರಲ್ಲಿ ಕಲಿತದ್ದು ಅರವತ್ತರಲ್ಲೂ ಮರೆಯಲು ಸಾಧ್ಯವಿಲ್ಲವಂತೆ. ಈ ಚಿತ್ರಗಳನ್ನು ನೋಡಿದರೆ ಈ ವ್ಯಕ್ತಿಗಳು ಶಾಲೆಯಲ್ಲಿಯೂ ಪಾಠದ ಸಮಯದಲ್ಲಿ ನಿದ್ದೆ ಹೋಗಿದ್ದರೆಂದು ಅನ್ನಿಸುತ್ತಿದೆ!

ತನ್ನ ಅತ್ಯುತ್ತಮವಾದುದನ್ನು ಪ್ರಕಟಿಸುತ್ತಿರುವ ರಾಹುಲ್

ತನ್ನ ಅತ್ಯುತ್ತಮವಾದುದನ್ನು ಪ್ರಕಟಿಸುತ್ತಿರುವ ರಾಹುಲ್

ತನ್ನ ಋಣಾತ್ಮಕ ನಡವಳಿಕೆಗೆ ಖ್ಯಾತಿ ಪಡೆದಿರುವ ರಾಹುಲ್ ಗಾಂಧಿ ಪಾರ್ಲಿಮೆಂಟಿನಲ್ಲಿಯೂ ತೂಕಡಿಸುತ್ತಿರುವುದನ್ನು ಈ ಚತುರ ಕ್ಯಾಮೆರಾ ಮನ್ ಸೆರೆಹಿಡಿದಿದ್ದಾರೆ. ಹಿಂದಿನ ದಿನ ತನ್ನ ನೆಚ್ಚಿನ ಮಕ್ಕಳ ಕಾರ್ಟೂನ್ ಚಾನೆಲ್ 'ಪೋಗೋ' ಹೆಚ್ಚು ನೋಡಿದ್ದುದು ಇದಕ್ಕೆ ಕಾರಣವಿರಬಹುದೇ?

ಖಾಲಿ ಬಕೆಟ್ ಭಂಗಿ

ಖಾಲಿ ಬಕೆಟ್ ಭಂಗಿ

ರಾಹುಲ್ ಗಾಂಧಿ ಖಾಲಿ ಬಕೆಟ್ಟೊಂದನ್ನು ಹಿಡಿದಿರುವ ಈ ಚಿತ್ರ ಇಂದು ವೈರಲ್ ಆಗಿದೆ. ಅಷ್ಟಕ್ಕೂ, ಇವರು ಚಿತ್ರಕ್ಕೆ ಪೋಸ್ ನೀಡಲೆಂದು ಮಾತ್ರ ಖಾಲಿ ಬಕೆಟ್ ಎತ್ತಿದ್ದರು ಆದರೆ ಕ್ಯಾಮೆರಾಮನ್ ಚಾಣಾಕ್ಷತನದ ಪರಿಣಾಮ ಬೇರೆಯೇ ರೂಪ ತಾಳಿದೆ.

ಈ ಚಿತ್ರ ಏನು ಪ್ರಕಟಿಸುತ್ತಿದೆ?

ಈ ಚಿತ್ರ ಏನು ಪ್ರಕಟಿಸುತ್ತಿದೆ?

ಸಾಮಾನ್ಯವಾಗಿ ಖ್ಯಾತ ಕಲಾವಿದರ ಕಲಾಚಿತ್ರ ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಆದರೆ ಈ ಚಿತ್ರ ಆ ಕಲಾಕೃತಿಗಳ ಸಾಲಿನಲ್ಲಿ ಬರುವುದಿಲ್ಲ. ಆದರೂ ಈ ಚಿತ್ರ ಏನು ಹೇಳುತ್ತಿದೆ ಎಂದು ಜನಸಾಮಾನ್ಯರಿಗೆ ಅರ್ಥವಾಗದೇ ತಲೆ ತುರಿಸಿಕೊಳ್ಳುತ್ತಿದ್ದಾರೆ.

ಜನಸಾಮಾನ್ಯರ ಪ್ರೀತಿಗೆ ಇಂತಹ ಪ್ರತಿಕ್ರಿಯೆಯೇ?

ಜನಸಾಮಾನ್ಯರ ಪ್ರೀತಿಗೆ ಇಂತಹ ಪ್ರತಿಕ್ರಿಯೆಯೇ?

ನಮ್ಮ ರಾಜಕಾರಣಿಗಳು ಸಂದರ್ಭಕ್ಕೆ ಸರಿಯಾಗಿ ಪ್ರತಿಕ್ರಿಯೆ ನೀಡುವಲ್ಲಿ ಸಿದ್ಧಹಸ್ತರು. ಜನಸೇವೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಇವರಿಗೆ ಜನತೆ ತನ್ನ ಪಾಲಿನ ಪ್ರೀತಿಯನ್ನು ಪ್ರಕಟಿಸಲು ಮುಂದಾದಾಗ ಮಾತ್ರ ಇವರು ತೋರುವ ಪ್ರತಿಕ್ರಿಯೆ ಬೇರೆಯೇ ತೆರನಾಗಿರುವುದನ್ನು ಈ ಚಿತ್ರ ಸ್ಪಷ್ಟವಾಗಿ ಬಿಂಬಿಸುತ್ತಿದೆ.

ಈಕೆ ಯಾವುದರಿಂದ ದೂರ ಹೋಗುತ್ತಿದ್ದಾರೆ?

ಈಕೆ ಯಾವುದರಿಂದ ದೂರ ಹೋಗುತ್ತಿದ್ದಾರೆ?

ಶೀಲಾ ದೀಕ್ಷಿತ್ ರವರು ಈ ಚಿತ್ರದಲ್ಲಿ ಯಾವುದರಿಂದಲೋ ದೂರ ಓಡುತ್ತಿರುವುದನ್ನು ಗಮನಿಸಬಹುದು. ಆ ಸಂದರ್ಭ ಯಾವುದು? ಸಾಮಾನ್ಯವಾಗಿ ಈ ಸಂದರ್ಭದಲ್ಲಿ ಎಲ್ಲಾ ರಾಜಕಾರಣಿಗಳು ಮಾಡುವುದೇ ಇದನ್ನು!

ಈ ಚಿತ್ರ ಮಾಧ್ಯಮದಲ್ಲಿ ಸಂಚಲನೆಯನ್ನೇ ಉಂಟುಮಾಡಿತ್ತು

ಈ ಚಿತ್ರ ಮಾಧ್ಯಮದಲ್ಲಿ ಸಂಚಲನೆಯನ್ನೇ ಉಂಟುಮಾಡಿತ್ತು

ಸೋನಿಯಾ ಗಾಂಧಿಯವರು ಪೂರ್ವಪ್ರಧಾನಿ ಮನಮೋಹನ್ ಸಿಂಗ್ ರವರ ಕಿವಿಯಲ್ಲಿ ಏನನ್ನೋ ಹೇಳುತ್ತಿರುವಾಗ ತೆಗೆದ ಚಿತ್ರವಾದರೂ ಕ್ಯಾಮೆರಾಮನ್ ತೆಗೆದ ವಿಶಿಷ್ಟ ಕೋನ ಈ ಚಿತ್ರಕ್ಕೆ ಬೇರೆಯೇ ಶೀರ್ಷಿಕೆ ಒದಗಿಸುತ್ತಿದೆ.

ರಾಜಕಾರಣಿಗಳು ತಬ್ಬಿಕೊಳ್ಳುವುದು ಹೇಗೆ ಗೊತ್ತೇ?

ರಾಜಕಾರಣಿಗಳು ತಬ್ಬಿಕೊಳ್ಳುವುದು ಹೇಗೆ ಗೊತ್ತೇ?

ಸುಷ್ಮಾ ಸ್ವರಾಜ್ ರವರು ತಮ್ಮ ಆಪ್ತರನ್ನು ಆಲಂಗಿಸಿಕೊಳ್ಳುವ ಮೂಲಕ ಭಾರತೀಯತೆಯನ್ನು ಮೆರೆದರೂ ಕ್ಯಾಮೆರಾಮನ್ ಭಿನ್ನ ಕೋನದಲ್ಲಿ ತೆಗೆದ ಈ ಚಿತ್ರ ಬೇರೆಯೇ ಭಾವನೆಯನ್ನು ಮೂಡಿಸುತ್ತಿದೆ.

ಮಂಗ ಮಾಡುವುದು ಅಮರ್ ಸಿಂಗ್‌ರಿಗೂ ಗೊತ್ತು!

ಮಂಗ ಮಾಡುವುದು ಅಮರ್ ಸಿಂಗ್‌ರಿಗೂ ಗೊತ್ತು!

ಯಾರನ್ನಾದರೂ ಚುಡಾಯಿಸಲು ನಾಲಿಗೆ ಹೊರಹಾಕುವುದು ಮಕ್ಕಳಿಗೆ ಇಷ್ಟವಾದ ಕ್ರಿಯೆ. ಅಷ್ಟಕ್ಕೂ ಅಮರ್ ಸಿಂಗ್ ರವರೂ ಅಣಕಿಸಿದ್ದರೆ ಅದಕ್ಕೆ ಅವರ ಬಾಲ್ಯವೇ ಕಾರಣವೆನ್ನೋಣ.

ಪಾಪ ಕೇಕ್ ಮಾಡುವವನಿಗೆ ವಯಸ್ಸು ಹೇಳದಿದ್ದರೆ ಅವನದ್ದೇನು ತಪ್ಪು?

ಪಾಪ ಕೇಕ್ ಮಾಡುವವನಿಗೆ ವಯಸ್ಸು ಹೇಳದಿದ್ದರೆ ಅವನದ್ದೇನು ತಪ್ಪು?

ಕೇಕ್ ಮಾಡುವವನಿಗೆ ವಯಸ್ಸೆಷ್ಟೆಂದು ಸರಿಯಾಗಿ ಹೇಳಿದ್ದಿದ್ದರೆ ಶೀಲಾ ದೀಕ್ಷಿತ್ ರವರಿಗೆ ಎದುರಾಗಿದ್ದ ಈ ಸಂಗ್ದಿಗ್ಧವನ್ನು ತಪ್ಪಿಸಬಹುದಿತ್ತು.

ಬ್ರೇಕ್ ಟೈಮ್

ಬ್ರೇಕ್ ಟೈಮ್

ನಮ್ಮ ರಾಜಕಾರಣಿಗಳು ಇವೆರಡಕ್ಕೆ ಹೆಚ್ಚು ಪ್ರಸಿದ್ಧರಾಗಿದ್ದಾರೆ:1) ನಿದ್ದೆ, 2) ತಿನ್ನುವುದು

ಕೇಜ್ರಿವಾಲ್‌ರಿಗೆ ಈ ಕ್ರಿಯೆ ಇಷ್ಟ ಎನಿಸುತ್ತದೆ

ಕೇಜ್ರಿವಾಲ್‌ರಿಗೆ ಈ ಕ್ರಿಯೆ ಇಷ್ಟ ಎನಿಸುತ್ತದೆ

ಸಾಮಾನ್ಯವಾಗಿ ದೇಹದ ಕೆಲವು ಭಾಗದಲ್ಲಿ ನವೆಯಾದರೆ ತುರಿಸಿಕೊಳ್ಳುವುದು ಮುಜುಗರವೆನಿಸುತ್ತದೆ. ಆದರೆ ಕೇಜ್ರಿವಾಲ್‌ರಿಗೆ ತಮ್ಮ ನವೆ ಶಮನಗೊಳಿಸಿಕೊಳ್ಳುವುದು ತುಂಬಾ ಇಷ್ಟವಾಗುತ್ತಿರುವಂತೆ ಅನ್ನಿಸುತ್ತಿದೆ.

 

English summary

Awkward Acts Of Politicians Caught On Camera!

Amidst all these, there are those images of these politicians that steal away the limelight. These pictures of politicians being clicked at the right and awkward moments can lighten up any serious atmosphere. Check out some of the most hilarious and funny pictures of politicians caught in bizarre positions!
Subscribe Newsletter