For Quick Alerts
ALLOW NOTIFICATIONS  
For Daily Alerts

ಮೆದುಳು ಸದಾ ಚುರುಕಾಗಿರಲು, ಒಂದಿಷ್ಟು ಸರಳ ಟ್ರಿಕ್ಸ್

ಈ ಲೇಖನದಲ್ಲಿ ನಿಮ್ಮ ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಕೆಲವೊಂದು ತಂತ್ರಗಳನ್ನು ತಿಳಿಸಿಕೊಡಲಿದ್ದೇವೆ. ಈ ತಂತ್ರಗಳನ್ನು ಪ್ರತಿದಿನ ಚೆನ್ನಾಗಿ ಪಾಲಿಸಿದರೆ ನಿಮ್ಮ ಮೆದುಳಿನ ಶಕ್ತಿಯು ಹೆಚ್ಚುವುದರಲ್ಲಿ ಅನುಮಾನವೇ ಇಲ್ಲ...

By Manu
|

ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯಗಳು ಎರಡೂ ಒಂದಕ್ಕೊಂದು ಪೂರಕವಾಗಿವೆ. ಆದರೆ ವೈದ್ಯವಿಜ್ಞಾನ ಮೆದುಳಿನ ಬಗ್ಗೆ ತಿಳಿದಿರುವ ಮಾಹಿತಿ ದೇಹದ ಇತರ ಭಾಗಗಳಿಗೆ ಹೋಲಿಸಿದರೆ ಅತ್ಯಲ್ಪ. ಏಕೆಂದರೆ ಮೆದುಳಿನ ಕಾರ್ಯವೈಖರಿ ಮತ್ತು ಜೀವಕೋಶಗಳ ಅಂಶಗಳು ತೀರಾ ಸಂಕೀರ್ಣ ಮತ್ತು ಜಟಿಲವಾಗಿವೆ. ಮೆದುಳು ಒಂದು ಸೂಪರ್ ಕಂಪ್ಯೂಟರಿಗಿಂತ ಪ್ರಭಾವಶಾಲಿ. ನೀವು ಎಡ ಮೆದುಳಿನವರೇ ಅಥವಾ ಬಲ ಮೆದುಳಿನವರೇ?

ಇದರಲ್ಲಿ ನಾವು ಹುಡುಕಿದಷ್ಟು ಮತ್ತು ಬಳಸಿಕೊಂಡಷ್ಟು ಹಲವಾರು ಹೊಸತನಗಳು ಕಾಣಿಸುತ್ತವೆ. ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ಹಲವಾರು ತಂತ್ರಗಳು ಇವೆ. ಇವು ನಮ್ಮ ಪ್ರಸಕ್ತ ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸಿ, ಮತ್ತಷ್ಟು ಸಾಮರ್ಥ್ಯವನ್ನು ಒದಗಿಸುತ್ತವೆ. ಸೋಜಿಗವೆನಿಸುವ ಮೆದುಳಿನ ಕುರಿತ ಇಂಟರೆಸ್ಟಿಂಗ್ ಸಂಗತಿ

ಒಂದು ಮಾತು ನೆನಪಿಡಿ ಮೆದುಳು ಒಂದು ಸ್ನಾಯು, ಅದಕ್ಕೆ ಎಷ್ಟು ತಾಲೀಮು ನೀಡುತ್ತಿರೋ ಅಷ್ಟು ಶಕ್ತಿಶಾಲಿಯಾಗುತ್ತದೆ. ಅಧ್ಯಯನಕಾರರು ಮೆದುಳಿನ ಕಾರ್ಯಕ್ಷಮತೆಯನ್ನು ಕೇವಲ ಬುದ್ಧಿವಂತಿಕೆಯಿಂದ ಮಾತ್ರ ಅಳೆಯಲಾಗುವುದಿಲ್ಲ ಎಂದು ಹೇಳುತ್ತಾರೆ. ಏಕೆಂದರೆ ಮೆದುಳಿಗೆ ಹಲವಾರು ಆಯಾಮಗಳು ಇರುತ್ತವೆ. ಮಕ್ಕಳ ಮೆದುಳಿಗೆ ಬೇಕು ಈ ಏಳು ಬಗೆಯ ಆಹಾರಗಳು

ಬನ್ನಿ ಈ ಲೇಖನದಲ್ಲಿ ನಿಮ್ಮ ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಕೆಲವೊಂದು ತಂತ್ರಗಳನ್ನು ತಿಳಿಸಿಕೊಡಲಿದ್ದೇವೆ. ಈ ತಂತ್ರಗಳನ್ನು ಪ್ರತಿದಿನ ಚೆನ್ನಾಗಿ ಪಾಲಿಸಿದರೆ ನಿಮ್ಮ ಮೆದುಳಿನ ಶಕ್ತಿಯು ಹೆಚ್ಚುವುದರಲ್ಲಿ ಅನುಮಾನವೇ ಇಲ್ಲ. ಬನ್ನಿ ಆ ತಂತ್ರಗಳು ಯಾವುವು ಎಂದು ನಾವು ತಿಳಿದುಕೊಂಡು ಬರೋಣ. ಈ ತಂತ್ರಗಳನ್ನು ಪಾಲಿಸುವುದು ಕಷ್ಟವೇನಲ್ಲ ಎಂದು ನಿಮಗೂ ಸಹ ಮನದಟ್ಟಾಗುತ್ತದೆ...


ಸಿಂಪಲ್ ಟ್ರಿಕ್ಸ್ ಅನುಸರಿಸುವುದು.....

ಸಿಂಪಲ್ ಟ್ರಿಕ್ಸ್ ಅನುಸರಿಸುವುದು.....

ಫೋನ್ ಸಂಖ್ಯೆಗಳನ್ನು ಮತ್ತು ಇನ್ನಿತರ ಮುಖ್ಯ ಕೆಲಸಗಳನ್ನು ನೆನಪಿಟ್ಟುಕೊಳ್ಳಲು ಪ್ರಯತ್ನಿಸಿ. ಇದರಿಂದ ನಿಮ್ಮ ನೆನಪಿನ ಶಕ್ತಿ ಸುಧಾರಿಸುತ್ತದೆ. ಇದು ನಿಮ್ಮ ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಇರುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ.

ಕ್ಯಾಲ್ಕ್ಯುಲೇಟರ್ ಬಳಸಬೇಡಿ

ಕ್ಯಾಲ್ಕ್ಯುಲೇಟರ್ ಬಳಸಬೇಡಿ

ಲೆಕ್ಕ ಮಾಡಲು ಟೆನ್ಶನ್ ಯಾಕೆ? ಶಾಲಾದಿನಗಳನ್ನು ಮರೆತು ಹೋದಿರಾ? ಸಣ್ಣ ಸಣ್ಣ ಲೆಕ್ಕಾಚಾರಕ್ಕು ಕ್ಯಾಲ್ಕ್ಯುಲೇಟರ್ ಬಳಸಬೇಡಿ. ಕೈಯಲ್ಲಿಯೇ ಮಾಡಿ, ಮೆದುಳು ನಿಮಗೆ ಸಹಾಯ ಮಾಡುತ್ತದೆ.

ಕ್ಯಾಲ್ಕ್ಯುಲೇಟರ್ ಬಳಸಬೇಡಿ

ಕ್ಯಾಲ್ಕ್ಯುಲೇಟರ್ ಬಳಸಬೇಡಿ

ಇದರಿಂದ ನಿಮ್ಮ ಮೆದುಳಿನ ಕಾರ್ಯಕ್ಷಮತೆ ಇನ್ನೂ ಹೆಚ್ಚಾಗುತ್ತದೆ. ಈ ಎಲ್ಲಾ ತಂತ್ರಗಳನ್ನು ಪಾಲಿಸಿ ನೋಡಿ ಕೆಲವೇ ದಿನಗಳಲ್ಲಿ ನಿಮ್ಮ ಬುದ್ಧಿವಂತಿಕೆಗೆ ನೀವೇ ತಲೆದೂಗುತ್ತೀರಿ.

ವ್ಯಾಯಾಮ

ವ್ಯಾಯಾಮ

ಸಂಶೋಧನೆಯ ಫಲಿತಾಂಶದ ಪ್ರಕಾರ ಕ್ರಮವಾದ ವ್ಯಾಯಾಮವು ಮೆದುಳಿನ ಗುಣಮಟ್ಟವನ್ನು ಸಕಾರಾತ್ಮಕವಾಗಿ ಹೆಚ್ಚಿಸುತ್ತದೆ. ಮೆದುಳು ತನ್ನ ವಿಭಜಿತ ಮಾದರಿಯಿಂದ ಅಕ್ಕಪಕ್ಕದ ವಾತಾವರಣವನ್ನು ಆಲೋಚಿಸುವ ಗುಣವನ್ನು ಹೊಂದಿದೆ. ಉದಾಹರಣೆಗೆ ಚೆಸ್ ಆಟಗಾರನು ಗೆಲ್ಲಬೇಕಾದರೆ ಚೆಸ್ ಆಡುವಾಗ ಆಟದ ಎಲ್ಲಾ ವಸ್ತುಗಳನ್ನು, ಆಟಿಕೆ ಮತ್ತು ಆಟದ ವಿನ್ಯಾಸವನ್ನು ಅರಿಯಬೇಕಾಗುತ್ತದೆ.

ಪ್ರತಿನಿತ್ಯ ಎಂಟು ಗಂಟೆಯ ಕಾಲ ನಿದ್ರೆ

ಪ್ರತಿನಿತ್ಯ ಎಂಟು ಗಂಟೆಯ ಕಾಲ ನಿದ್ರೆ

ಪ್ರತಿನಿತ್ಯ ನಿಮ್ಮ ಮೆದುಳಿಗೆ ಸುಮಾರು ಎಂಟು ಗಂಟೆಗಳ ಕಾಲ ವಿಶ್ರಾಂತಿಯನ್ನು ನೀಡಬೇಕು. ಇದರಿಂದ ಮೆದುಳು ಪುನರುಜ್ಜೀನಗೊಳ್ಳುವುದು. ಪ್ರತಿದಿನವೂ ಎಂಟು ಗಂಟೆಗಳ ಕಾಲ ನಿದ್ರೆ ಮಾಡುವುದರಿಂದ ಮೆದುಳು ಹಾನಿಯಾಗಿರುವ ಕೋಶ ಮತ್ತು ಅಂಗಾಂಶಗಳನ್ನು ಸರಿಪಡಿಸುವುದು. ಇದರಿಂದ ಮೆದುಳಿನ ಸಂಪೂರ್ಣ ಪ್ರದರ್ಶನವು ಉತ್ತಮವಾಗುತ್ತದೆ.

ವಿಷಯಗಳನ್ನು ಬರೆದಿಟ್ಟುಕೊಳ್ಳಿ

ವಿಷಯಗಳನ್ನು ಬರೆದಿಟ್ಟುಕೊಳ್ಳಿ

ಒಂದು ವೇಳೆ ವಿಷಯವೊಂದನ್ನು ಕುರಿತು ನಾಳೆ ಸಭೆಯಲ್ಲಿ ಭಾಷಣ ಅಥವಾ ಕಛೇರಿಯ ಇತರರಿಗೆ ವಿಷಯವನ್ನು ತಿಳಿಸಬೇಕಾಗಿದ್ದಲ್ಲಿ, ಅಥವಾ ಪರೀಕ್ಷೆಯನ್ನು ಎದುರಿಸಬೇಕಾಗಿದ್ದಲ್ಲಿ ಎಲ್ಲಾ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಆ ವಿಷಯಗಳ ಬಗ್ಗೆ ಕ್ಷಿಪ್ರವಾದ ಮಾಹಿತಿಗಳನ್ನು ಅಥವಾ ನಿಮಗೆ ಕಂಡಾಕ್ಷಣ ಅರ್ಥವಾಗುವಂತೆ ನೀವೇ ನಿರೂಪಿಸಿಕೊಂಡ ವಿಷಯಗಳನ್ನು ರಾತ್ರಿಯೇ ಚಿಕ್ಕ ಹಾಳೆಯಲ್ಲಿ ಬರೆದಿಡಿ.

ವಿಷಯಗಳನ್ನು ಬರೆದಿಟ್ಟುಕೊಳ್ಳಿ

ವಿಷಯಗಳನ್ನು ಬರೆದಿಟ್ಟುಕೊಳ್ಳಿ

ಮರುದಿನ ಈ ವಿಷಯಗಳ ಬಗ್ಗೆ ನೋಡುತ್ತಿದ್ದಂತೆಯೇ ಮೆದುಳಿನಲ್ಲಿ ಆ ವಿಷಯದ ಪೂರ್ಣ ವಿವರ ಥಟ್ಟನೇ ನೆನಪಾಗಿಬಿಡುತ್ತದೆ. ಒಂದು ಸಂಶೋಧನೆಯಲ್ಲಿ ನೆನಪಿಡಬೇಕಾದುದನ್ನು ಬರೆದು ನೆನಪಿಟ್ಟುಕೊಂಡರೆ ಮರುದಿನ ಕೇವಲ ಬರೆದಿಟ್ಟ ವಿಷಯದ ಮೇಲೆ ಸುಮ್ಮನೇ ಕಣ್ಣಾಡಿಸಿದರೂ ಎಲ್ಲವೂ ನೆನಪಾಗಿಬಿಡುತ್ತದೆ ಎಂದು ಕಂಡುಕೊಳ್ಳಲಾಗಿದೆ. ಈ ಮಾಹಿತಿ ಹೆಚ್ಚೂಕಡಿಮೆ ಶಾಶ್ವತವಾಗಿ ನಿಮ್ಮ ಜ್ಞಾನಭಂಡಾರದಲ್ಲಿರುತ್ತದೆ.

English summary

Smart Ways to Increase Your Brain Power

A research has revealed that mind power cannot be measured just like intelligence. This is because it has infinite dimensions. Some people have a great mental ability, but they may lack in a few other abilities. By constantly practicing a few techniques you can increase your mind power.
X
Desktop Bottom Promotion