Just In
- 2 hrs ago
ದಿನ ಭವಿಷ್ಯ: ಭಾನುವಾರದ ರಾಶಿಫಲ ಹೇಗಿದೆ ನೋಡಿ
- 11 hrs ago
ಮಾರ್ಚ್ ತಿಂಗಳಲ್ಲಿ ಹುಟ್ಟಿದವರು ಈ ವ್ಯಕ್ತಿತ್ವ ಹೊಂದಿರುತ್ತಾರೆ!!
- 13 hrs ago
ಮಾರ್ಚ್ 2021ರಲ್ಲಿ ಬರುವ ಹಬ್ಬಗಳು ಹಾಗೂ ವ್ರತಗಳು: ಈ ತಿಂಗಳಿನಲ್ಲಿ 11 ದಿನಗಳು ತುಂಬಾನೇ ವಿಶೇಷ
- 13 hrs ago
ಹಿರಿಯರೇ, ಸಣ್ಣ ವ್ಯಾಯಾಮವನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿಕೊಂಡರೆ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ?
Don't Miss
- Sports
ಐಎಸ್ಎಲ್: ಕೊನೆಯಲ್ಲಿ ಗೌರವದೊಂದಿಗೆ ನಿರ್ಗಮಿಸಿದ ಒಡಿಶಾ
- Automobiles
ಬಿಡುಗಡೆಯಾಗಲಿರುವ ಓಲಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?
- News
ಕಣಿವೆ ರಾಜ್ಯದಲ್ಲಿ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ನಿಲ್ಲಿಸುವುದಿಲ್ಲ: ಭಾರತೀಯ ಸೇನೆ
- Movies
ಕಾಮಾಟಿಪುರದ ನಿಜ ಕತೆಗೆ ಅಜಯ್ ದೇವಗನ್ ಎಂಟ್ರಿ
- Finance
ಮತ್ತಷ್ಟು ಇಳಿಕೆಗೊಂಡ ಚಿನ್ನದ ಬೆಲೆ: ಫೆಬ್ರವರಿ 27ರ ಬೆಲೆ ಹೀಗಿದೆ
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸುಗ್ಗಿ ಹಬ್ಬ 'ಮಕರ ಸಂಕ್ರಾಂತಿಯ' ಇಂಟರೆಸ್ಟಿಂಗ್ ಸಂಗತಿ
ಮಕರ ಸಂಕ್ರಾಂತಿ ಎಂದಾಕ್ಷಣ ನೆನಪಿಗೆ ಬರುವುದು ಎಳ್ಳು-ಬೆಲ್ಲ, ಗಸಗಸೆ ಪಾಯಸ, ಗಾಳಿಪಟ, ಎಳ್ಳಿನ ಕಂಬರ್ ಕಟ್ಟು (ಅಥವಾ ಚಿಕ್ಕಿ), ಸಿಹಿಯಾದ ಪೊಂಗಲ್ ಇತ್ಯಾದಿ. ಪಕ್ಕದ ಮನೆಯವರ ಗಾಳಿಪಟವನ್ನು ತಮ್ಮ ದಾರ(ಮಾಂಝಾ)ದಿಂದ ತುಂಡರಿಸಲು ಹವಣಿಸುವ ಯುವಕರು, ಎಲ್ಲೆಲ್ಲೂ ಎಳ್ಳು ಬೆಲ್ಲದ ಸಮಾರಾಧನೆಯಿಂದ ಅಂಗಡಿಗಳಲ್ಲಿ ಖಾಲಿಯಾದ ಎಳ್ಳಿನ ದಾಸ್ತಾನು. ಒಂದು ವೇಳೆ ಮಕರ ಸಂಕ್ರಾಂತಿ ಎಂದರೆ ಇಷ್ಟೇ ಎಂದು ತಿಳಿದಿದ್ದವರಿಗೆ ಕೆಳಗೆ ನೀಡಿದ ಮಾಹಿತಿ ಅಚ್ಚರಿಯ ಕಡಲಲ್ಲಿ ಮುಳುಗಿಸಲಿದೆ. ಆರೋಗ್ಯ ಹೆಚ್ಚಿಸುವ ಸಂಕ್ರಾಂತಿ ಹಬ್ಬದ ಆಹಾರ
ಮಕರ ಸಂಕ್ರಾಂತಿ ಪ್ರತಿವರ್ಷ ಜನವರಿ ಹದಿನಾಲ್ಕರಂದೇ ಆಚರಿಸಲಾಗುತ್ತಿದ್ದು ಸರಿಸುಮಾರಾಗಿ ದಿನಾಂಕ ಬದಲಾಗದ ಹಬ್ಬಗಳಲ್ಲಿ ಒಂದಾಗಿದೆ. ಭಾರತದೆಲ್ಲೆಡೆ ಮತ್ತು ನೇಪಾಳಗಳಲ್ಲಿಯೂ ಮಕರ ಸಂಕ್ರಾಂತಿಯನ್ನು ಸಂಭ್ರಮ ಹರ್ಷೋಲ್ಲಾಸದಿಂದ ಆಚರಿಸಲಾಗುತ್ತದೆ. ಹೆಚ್ಚಿನ ಹಿಂದೂಹಬ್ಬಗಳು ಚಂದ್ರನ ಚಲನೆಯನ್ನು ಆಧರಿಸಿದ್ದರೆ (ಹುಣ್ಣಿಮೆ,ಅಮಾವಾಸ್ಯೆ) ಸಂಕ್ರಾಂತಿ ಮಾತ್ರ ಸೂರ್ಯನ ಚಲನೆಯನ್ನು ಆಧರಿಸಿದ್ದು ಸಾಮಾನ್ಯವಾಗಿ ಜನವರಿ 14ರಂದು ಆಚರಿಸಲಾಗುತ್ತದೆ, ಈ ವರ್ಷ 2019 ರಲ್ಲಿ ಮಕರ ಸಂಕ್ರಾಂತಿಯು ಜ.14 ರಂದು ಆರಂಭವಾಗಿ ಜ.15ರ ತನಕ ಇರುವುದು ಎಂದು ಹಿಂದೂ ಪಂಚಾಂಗವು ಹೇಳುತ್ತದೆ. ಪುಣ್ಯ ಕಾಲ ಮುಹೂರ್ತ: ಬೆಳಗ್ಗೆ 7.20ರಿಂದ ಮಧ್ಯಾಹ್ನ 12.40(ಜ.15) ಅವಧಿ: 5 ಗಂಟೆ 19 ನಿಮಿಷ ಸಂಕ್ರಾಂತಿ ಸಮಯ: ಜ.14ರ ರಾತ್ರಿ 8.05ರಿಂದ ಮಹಾಪುಣ್ಯ ಕಾಲ ಮುಹೂರ್ತ: ಬೆಳಗ್ಗೆ 7.20ರಿಂದ ರಾತ್ರಿ 9.07(ಜ.15) ಅವಧಿ: 1 ಗಂಟೆ 46 ನಿಮಿಷ
ಸೂರ್ಯನ ಚಲನೆಯಲ್ಲಿಯೂ ಆಗುವ ಅತ್ಯಲ್ಪ ವ್ಯತ್ಯಾಸ ವರ್ಷಗಳ ಲೆಕ್ಕದಲ್ಲಿ ಪರಿಗಣಿಸಿದಾಗ ಕೊಂಚ ಮುಂದೆ ಹೋಗಬಹುದು. ಇನ್ನು ಮೂವತ್ತೈದು ವರ್ಷಗಳ ನಂತರ, ಅಂದರೆ 2050ರಲ್ಲಿ ಇದು ಜನವರಿ ಹದಿನೈದಕ್ಕೆ ಬರಲಿದೆ. ಅಪರೂಪಕ್ಕೆ ಹದಿನಾರೂ ಆಗಬಹುದು. ಚಕಿತರಾದಿರೇ? ಇನ್ನಷ್ಟು ಚಕಿತಗೊಳಿಸುವ ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:

ಈ ಹಬ್ಬಕ್ಕೆ ಮಕರ ಸಂಕ್ರಾಂತಿ ಎಂಬ ಹೆಸರೇಕೆ ಬಂದಿದೆ?
ಖಗೋಳ ವಿಜ್ಞಾನದ ಪ್ರಕಾರ ಸೂರ್ಯನ ಚಲನೆಯನ್ನು ಆಧರಿಸಿ (ಅಂದರೆ ಭೂಮಿ ಸೂರ್ಯನಿಗೆ ಒಂದು ಸುತ್ತು ಬರುವ ಸಮಯವನ್ನು ಪರಿಗಣಿಸಿ) ಒಂದು ವರ್ಷದ ಲೆಕ್ಕ ಹಾಕಲಾಗುತ್ತದೆ. ಪ್ರತಿ ತಿಂಗಳೂ ದಿಗಂತದಲ್ಲಿ ಕಾಣುವ ನಕ್ಷತ್ರಗಳನ್ನು ಆಧರಿಸಿ ರಾಶಿಗಳನ್ನಾಗಿ, ಅದೇ ಪ್ರಕಾರ ಹನ್ನೆರಡು ತಿಂಗಳುಗಳಾಗಿ ವಿಂಗಡಿಸಲಾಗಿದೆ. ಈ ದಿನದಂದು ಸೂರ್ಯನು ಮಕರ ರಾಶಿಗೆ ಚಲಿಸುತ್ತಾನೆ.

ಈ ಹಬ್ಬಕ್ಕೆ ಮಕರ ಸಂಕ್ರಾಂತಿ ಎಂಬ ಹೆಸರೇಕೆ ಬಂದಿದೆ?
ಅಂದರೆ ಇದುವರೆಗೆ ಸೂರ್ಯ ಹುಟ್ಟುವ ದಿಕ್ಕು ದಿನೇ ದಿನೇ ದಕ್ಷಿಣದತ್ತ ಚಲಿಸುತ್ತಿದ್ದು ಈ ದಿನ ಸರಿಯಾಗಿ ಪೂರ್ವದಿಕ್ಕಿಗಿರುತ್ತದೆ. ಮರುದಿನದಿಂದ ಮತ್ತೆ ಉತ್ತರದತ್ತ ಹಿಂದಿರುಗುತ್ತಾನೆ. winter solstice ಎಂದು ಕರೆಯಲ್ಪಡುವ ಈ ದಿನ ವಾಸ್ತವವಾಗಿ ಡಿಸೆಂಬರ್ 22ಕ್ಕೆ ಆಗುತ್ತದೆ. ಆದರೆ ಸುಗ್ಗಿಯನ್ನು ಆಚರಿಸಲೆಂದು ಸಾಂಪ್ರಾದಾಯಿಕವಾಗಿ ಜನವರಿ ಹದಿನಾಲ್ಕನೆಯ ದಿನವನ್ನು ನಮ್ಮ ಪೂರ್ವಜರು ಆರಿಸಿಕೊಂಡಿದ್ದಾರೆ.

ಈ ದಿನದಲ್ಲಿ ಹಗಲು ಮತ್ತು ರಾತ್ರಿಯ ಅವಧಿ ಸಮನಾಗಿರುತ್ತದೆ
ವರ್ಷದಲ್ಲಿ ಎರಡು ದಿನಗಳ ಅವಧಿ ಕರಾರುವಕ್ಕಾಗಿ ಸಮನಾಗಿರುತ್ತದೆ. ಇದನ್ನು equinox ಅಥವಾ ವಿಷುವತ್ಸಂಕ್ರಾಂತಿ ಎಂದು ಕರೆಯುವ ಈ ದಿನಗಳ ಬಳಿಕ ದಿನ ಮತ್ತು ರಾತ್ರಿಯ ಅವಧಿಗಳು ಹೆಚ್ಚು ಕಡಿಮೆಯಾಗುತ್ತಾ ಹೋಗುತ್ತವೆ.

ಈ ದಿನದಲ್ಲಿ ಹಗಲು ಮತ್ತು ರಾತ್ರಿಯ ಅವಧಿ ಸಮನಾಗಿರುತ್ತದೆ
ಇಂದಿನ ದಿನ ಚಳಿಗಾಲ ಮುಗಿದು ಬಿಸಿಯ ದಿನಗಳು ಮುಂದೆ ಬರಲಿವೆ ಎಂಬುದರ ಸೂಚನೆಯೂ ಆಗಿದೆ. ಇಂದಿನಿಂದ ಮುಂದಿನ ವಿಷುವತ್ಸಂಕ್ರಾಂತಿಯ ದಿನದವರೆಗೆ (ಜೂನ್ ೨೧) ಹಗಲು ದೀರ್ಘ ಹಾಗೂ ರಾತ್ರಿ ಚಿಕ್ಕದಾಗಿರುತ್ತದೆ.

ಒಂದೇ ಹಬ್ಬ, ಹಲವಾರು ಹೆಸರುಗಳು
ಸಾಮಾನ್ಯವಾಗಿ ಮಕರ ಸಂಕ್ರಾಂತಿ ಎಂದೇ ಇಡಿಯ ಭಾರತದಲ್ಲಿ ಆಚರಿಸಲ್ಪಡುತ್ತಿದ್ದರೂ ಸುಗ್ಗಿಯ ಸಂದರ್ಭವನ್ನು ಅನುಸರಿಸಿ ವಿವಿಧ ಪ್ರಾಂತಗಳಲ್ಲಿ ವಿವಿಧ ಹೆಸರುಗಳಿಂದ ಇದನ್ನು ಕರೆಯಲಾಗುತ್ತದೆ. ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ತಮಿಳುನಾಡಿನಲ್ಲಿ ಪೊಂಗಲ್ ಎಂದೂ ಉತ್ತರ ಭಾರತದಲ್ಲಿ ಲೋಹ್ರಿ ಎಂದೂ ಕರೆಯಲಾಗುತ್ತದೆ.

ಒಂದೇ ಹಬ್ಬ, ಹಲವಾರು ಹೆಸರುಗಳು
ಉತ್ತರಾಯಣ, ಮಾಘಿ, ಖಿಚಡಿ ಎಂದೂ ಈ ಹಬ್ಬಕ್ಕೆ ಹೆಸರುಗಳಿವೆ. ಅಚ್ಚರಿಯ ವಿಷಯವೆಂದರೆ ಈ ಹಬ್ಬಕ್ಕೆ ವಿಶೇಷವಾಗಿ ತಯಾರಿಸುವ ಕಾರಣದಿಂದ ವಿಶೇಷ ತಿಂಡಿಗಳಿಗೆ ಈ ಹಬ್ಬದ್ದೇ ಹೆಸರಿದೆ. ಪೊಂಗಲ್ ಮತ್ತು ಖಿಚಡಿ ಈ ಹೆಸರುಗಳು.

ಸಿಹಿ ತಿಂದು ಸಿಹಿಮಾತನಾಡಲು ಕಲಿಸುವ ಹಬ್ಬ
ಈ ಹಬ್ಬದ ವಿಶೇಷವೆಂದರೆ ಎಳ್ಳು-ಬೆಲ್ಲ. ಹೆಸರಿಗೆ ಎಳ್ಳು ಮತ್ತು ಬೆಲ್ಲ ಮಾತ್ರವಿದ್ದರೂ ಇದರೊಂದಿಗೆ ಕಲ್ಲುಸಕ್ಕೆರೆ, ಬೆಲ್ಲ, ಒಣಕೊಬ್ಬರಿಯ ತುರಿ, ಹುರಿಗಡಲೆ, ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಮೊದಲಾದವುಗಳನ್ನು ಸೇರಿಸಿ ಎಳ್ಳು ಬೆಲ್ಲ ತಯಾರಿಸಲಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಇದನ್ನು ನೆನೆಸಿ ಚಿಕ್ಕ ಚಿಕ್ಕ ಉಂಡೆ ಅಥವಾ ಅಚ್ಚು ಮಾಡಿ ಚೌಕಾಕಾರದಲ್ಲಿ ಕತ್ತರಿಸಿ ಚಿಕ್ಕಿಗಳ ರೂಪದಲ್ಲಿ ನೀಡಲಾಗುತ್ತದೆ.

ಸಿಹಿ ತಿಂದು ಸಿಹಿಮಾತನಾಡಲು ಕಲಿಸುವ ಹಬ್ಬ
ಜೊತೆಗೇ "ಎಳ್ಳು ಬೆಲ್ಲ ಸೇವಿಸಿ, ಸಿಹಿಯಾದ ಮಾತನ್ನಾಡಿ" ಎಂಬ ವಾಕ್ಯದೊಂದಿಗೆ ಒಬ್ಬರಿಗೊಬ್ಬರು ಶುಭ ಹಾರೈಸುತ್ತಾರೆ. ಸಮಾಜದ ಎಲ್ಲಾ ವರ್ಗಗಳ, ಎಲ್ಲಾ ಸಮುದಾಯಗಳ ಜನರೊಂದಿಗೆ ಎಳ್ಳು ಬೆಲ್ಲ ಹಂಚಿಕೊಳ್ಳುವ ಮೂಲಕ ಸೌಹಾರ್ದತೆಯನ್ನು ಮೆರೆಯುವ ಭಾರತೀಯ ಈ ಸಂಸ್ಕೃತಿ ಹೆಮ್ಮೆಯ ಸಂಕೇತವಾಗಿದೆ. ಶುಭ ವಿನಿಮಯದೊಂದಿಗೇ ದ್ವೇಷ ದಳ್ಳುರಿಯನ್ನು ನಿವಾರಿಸಿ ಶಾಂತಿಯುತ ಬಾಳ್ವೆಗೆ ಈ ಹಬ್ಬ ನಾಂದಿ ಹಾಡುತ್ತದೆ.

ಮಕರ ಸಂಕ್ರಾಂತಿಯಲ್ಲಿ ಗಾಳಿಪಟಕ್ಕೇನು ಕೆಲಸ?
ಹಬ್ಬದ ಆಚರಣೆಗೂ ಗಾಳಿಪಟಕ್ಕೂ ಎನು ಸಂಬಂಧ? ಹೆಚ್ಚಿನವರಿಗೆ ಇದರ ಬಗ್ಗೆ ಸರಿಯಾದ ಮಾಹಿತಿ ಇರಲಾರದು. ಬಹಳ ಹಿಂದಿನ ಕಾಲದಲ್ಲಿ ಬೆಳಗ್ಗಿನ ಸಮಯದಲ್ಲಿ ಸೂರ್ಯನ ಕಿರಣಗಳು ಇನ್ನೂ ಎಳೆಯದಾಗಿದ್ದು ಕಣ್ಣಿಗೆ ಪ್ರಖರವಾಗಿರದಿದ್ದಾಗ ಗಾಳಿಪಟವನ್ನು ಹಾರಿಸಲಾಗುತ್ತಿತ್ತು. ಈ ಕಿರಣಗಳು ಅತ್ಯಂತ ಆರೋಗ್ಯಕರವಾಗಿದ್ದು ದೇಹದಲ್ಲಿ ಅತಿ ಹೆಚ್ಚಿನ ವಿಟಮಿನ್ ಡಿ ಉತ್ಪಾದನೆಗೆ ನೆರವಾಗುತ್ತವೆ. ಅಲ್ಲದೇ ಚಳಿಗಾಲದಲ್ಲಿ ಒಣಹವೆ ಮತ್ತು ಇತರ ಕಾರಣಗಳಿಂದ ಸೋಂಕು ಹರಡುವ ಸಾಧ್ಯತೆಯೂ ಹೆಚ್ಚು.

ಮಕರ ಸಂಕ್ರಾಂತಿಯಲ್ಲಿ ಗಾಳಿಪಟಕ್ಕೇನು ಕೆಲಸ?
ಇದರಿಂದ ಪಾರಾಗಲು ಮತ್ತು ಸೂರ್ಯನ ಬೆಳಕನ್ನು ಹೆಚ್ಚಿನ ಪ್ರಮಾಣದಲ್ಲಿ ಹೀರಿ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಗಾಳಿಪಟವನ್ನು ಬೆಳ್ಳಂಬೆಳಿಗ್ಗೆ ಹಾರಿಸುವುದನ್ನು ನಮ್ಮ ಪೂರ್ವಜರು ಒಂದು ಸಂಪ್ರದಾಯದಂತೆ ನಡೆಸಿಕೊಂಡು ಬಂದರು. ಸೂರ್ಯಾನ ಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ದೇಹದಿಂದ ಕೆಟ್ಟ ಕೀಟಾಣುಗಳು ಅಥವಾ ಬ್ಯಾಕ್ಟೀರಿಯಾಗಳು ಸತ್ತು ಹೋಗುತ್ತವೆ ಎಂದು ನಂಬಿದ್ದರು.

ಮಕರ ಸಂಕ್ರಾಂತಿಯಲ್ಲಿ ಗಾಳಿಪಟಕ್ಕೇನು ಕೆಲಸ?
ಇದೇ ಕಾರಣಕ್ಕೆ ಗಾಳಿಪಟವನ್ನು ನೆಪವಾಗಿಸಿ ಎಲ್ಲರೂ ಸೂರ್ಯನ ಬೆಳಕಿಗೆ ಒಡ್ಡುವಂತೆ ಇಡಿಯ ಸಮುದಾಯವನ್ನು ಪ್ರೇರೇಪಿಸುತ್ತಿದ್ದರು. ತರುವಾಯ ಇದೊಂದು ಹಬ್ಬದ ಸಂಪ್ರದಾಯವಾಗಿ ಮಾರ್ಪಟ್ಟು ಇಂದು ಬೆಳಗ್ಗಿನ ಜಾವ ಬಿಟ್ಟು ಉಳಿದ ಸಮಯದಲ್ಲಿ ಗಾಳಿಪಟ ಹಾರಿಸಲಾಗುತ್ತಿದೆ.

ಮೇಳಗಳ ಪ್ರಾರಂಭ
ಮಕರ ಸಂಕ್ರಾಂತಿ ಕೇವಲ ಸೂರ್ಯನ ಉದಯದ ದಿಕ್ಕನ್ನು ಬದಲಿಸುವುದು ಮಾತ್ರವಲ್ಲ, ಹಲವು ಮಹಾಮೇಳಗಳಿಗೂ ಪ್ರಾರಂಭ ನೀಡುತ್ತದೆ. ಉತ್ತರ ಪ್ರದೇಶದ ಕುಂಭ ಮೇಳ ವಿಶ್ವಪ್ರಸಿದ್ಧವಾಗಿದ್ದು ಈ ದಿನದಂದೇ ಪ್ರಾರಂಭ ಪಡೆಯುತ್ತದೆ. ತದ್ವಿರುದ್ಧವಾಗಿ ದಕ್ಷಿಣ ಭಾರತದ ಕೇರಳದ ಶಬರಿಮಲೆಯ ಮೇಳ ಈ ದಿನದಂದು ಕೊನೆಗೊಳ್ಳುತ್ತದೆ.

ಮೇಳಗಳ ಪ್ರಾರಂಭ
ಅಲ್ಲದೇ ದೇಶದ ಇತರ ಭಾಗಗಳಲ್ಲಿ ಆಯಾ ಪ್ರದೇಶದಲ್ಲಿ ಹಾದು ಹೋಗುವ ಪವಿತ್ರ ನದಿಗಳಲ್ಲಿ ಮುಳುಗು ಹಾಕಿ ಪ್ರಾರ್ಥಿಸಿ ಪಾಪಗಳಿಂದ ಮುಕ್ತಿ ಪಡೆಯಲಾಗುತ್ತದೆ. ಇನ್ನೊಂದು ಅಚ್ಚರಿಯ ವಿಷಯವೆಂದರೆ ಈ ದಿನ ದೇಹತ್ಯಾಗ ಮಾಡಿದವರು ಪುನರ್ಜನ್ಮ ಪಡೆಯದೇ ನೇರವಾಗಿ ಸ್ವರ್ಗಕ್ಕೆ ತೆರಳುತ್ತಾರೆ ಎಂದೂ ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ.