For Quick Alerts
ALLOW NOTIFICATIONS  
For Daily Alerts

  ರಕ್ಷಾ ಬಂಧನ ವಿಶೇಷ- ಮುದ ನೀಡುವ ಬಗೆಬಗೆಯ ರಾಖಿಗಳು

  By Jaya subramanya
  |

  ಮನೆಯಲ್ಲಿರುವ ಸದಸ್ಯರೆಲ್ಲರಿಗಿಂತಲೂ ಒಡಹುಟ್ಟಿದವರಲ್ಲಿ ನಾವು ಹೆಚ್ಚು ಆಪ್ತತೆಯನ್ನು ಹೊಂದಿರುತ್ತೇವೆ. ಅವರೊಂದಿಗೆ ನಾವೆಷ್ಟೇ ಕಿತ್ತಾಡಿದರೂ, ತಿಂಗಳಾನುಗಟ್ಟಲೆ ಮಾತು ಬಿಟ್ಟಿದ್ದರೂ ಸಹೋದರ ಸಹೋದರಿ ಸಂಬಂಧ ಮಾತ್ರ ನಿತ್ಯ ನೂತನವಾಗಿರುತ್ತದೆ.

  ಅಣ್ಣ ತಂಗಿ, ಅಕ್ಕ ತಂಗಿ, ಅಕ್ಕ ತಮ್ಮ ಹೀಗೆ ಸಹೋದರತೆಯ ಬಾಂಧವ್ಯದ ಬೆಸುಗೆ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಾ ಹೋಗುತ್ತದೆಯೇ ವಿನಃ ಅಲ್ಲಿ ಟೊಳ್ಳುತನ ಇರುವುದಿಲ್ಲ. ಸಹೋದರನಿಗಾಗಿ ರಾಖಿ ತಯಾರಿಸಲು ಸರಳ ಉಪಾಯಗಳು

  ಸಹೋದರತೆಯ ಸಂಕೇತವನ್ನು ಬಂಧಿಸುವ ರಕ್ಷಾ ಬಂಧನ ಅಣ್ಣನಿಗೆ ತಂಗಿಯ ಪ್ರೀತಿಯ ರಕ್ಷೆಯಾಗಿದೆ. ಅಣ್ಣನ ಸುಖ ಸಂತೋಷ, ಆರೋಗ್ಯ ಆಯಸ್ಸುಗಾಗಿ ತಂಗಿ ಭಗವಂತನಲ್ಲಿ ಪ್ರಾರ್ಥಿಸಿಕೊಂಡು ಅಣ್ಣನಿಗೆ ರಾಖಿಯನ್ನು ಕಟ್ಟುತ್ತಾಳೆ. ನೀವು ಕಟ್ಟುವ ರಾಖಿ ಎಷ್ಟು ಬೆಲೆಯದ್ದು ಎಂಬುದು ಮುಖ್ಯವಾಗಿರದೇ ನೀವು ಅಣ್ಣನ ಮೇಲೆ ಇಟ್ಟಿರುವ ಪ್ರೀತಿ ಅಭಿಮಾನ ಬೆಲೆ ಕಟ್ಟಲಾಗದೇ ಇರುವಂತಹದ್ದಾಗಿರುತ್ತದೆ.

  ರಾಖಿ ಹಬ್ಬಕ್ಕೆ ನಿಮ್ಮ ಅಣ್ಣನಿಗೆ ಕಟ್ಟಲು ರಾಖಿ ಖರೀದಿಯನ್ನು ತಂಗಿಯಂದಿರುವ ಜೋರಾಗಿಯೇ ಮಾಡುತ್ತಿರುತ್ತಾರೆ. ಅಲ್ಲವೇ. ಹಾಗಿದ್ದರೆ ಇಂದಿನ ಲೇಖನದಲ್ಲಿ ನಿಮಗೆ ಸಹಕಾರಿಯಾಗಲೆಂದೇ ತರೇಹವಾರಿ ರಾಖಿಗಳನ್ನು ನಿಮ್ಮೆದುರಿಗೆ ತರುತ್ತಿದ್ದೇವೆ. ಇಂತಹದ್ದನ್ನೇ ಆರಿಸಿ ನಿಮ್ಮ ಅಣ್ಣನೊಂದಿಗೆ ಸಂಭ್ರಮದ ರಾಖಿ ಹಬ್ಬವನ್ನು ಆಚರಿಸಿ ರಕ್ಷಾ ಬಂಧನ ಆಚರಣೆಯ ಪ್ರಾಮುಖ್ಯತೆ ಏಕೆ ವಿಶಿಷ್ಟವಾಗಿದೆ?

  ಹೂವಿನ ರಾಖಿ

  ಹೂವಿನ ರಾಖಿ

  ಬಹು ದೀರ್ಘ ಕಾಲದಿಂದಲೂ ಇಂತಹ ರಾಖಿ ಹೆಚ್ಚು ಜನಪ್ರಿಯತೆಯಲ್ಲಿದೆ. ಗುಲಾಬಿ ಮತ್ತು ಮಲ್ಲಿಗೆಯನ್ನು ಬಳಸಿಕೊಂಡು ಈ ರಾಖಿಯನ್ನು ರಚಿಸಲಾಗುತ್ತದೆ. ಇದು ಸುಗಂಧವನ್ನು ಒಳಗೊಂಡಿರುತ್ತದೆ. ಹೂವು ಬಾಡಿದಂತೆ ರಾಖಿಯ ಸೊಬಗೂ ಮಾಸುತ್ತದೆ.

  ಬಣ್ಣದ ರಾಖಿ

  ಬಣ್ಣದ ರಾಖಿ

  ಬಣ್ಣದ ದಾರವನ್ನು ಬಳಸಿಕೊಂಡು ಈ ರಾಖಿಯನ್ನು ತಯಾರಿಸಲಾಗುತ್ತದೆ. ನಿಮ್ಮ ಪುಟ್ಟ ತಮ್ಮನಿಗೆ ಟಾಮ್ ಮತ್ತು ಜೆರ್ರಿ ಉಳ್ಳ ರಾಖಿಯನ್ನು ಕಟ್ಟಿ ಅವರನ್ನು ಸಂತಸಪಡಿಸಬಹುದಾಗಿದೆ. ಜೂಟ್‌ನಿಂದ ಕೂಡ ಬಣ್ಣದ ರಾಖಿಯನ್ನು ತಯಾರಿಸುತ್ತಾರೆ.

  ಶ್ರೀಗಂಧದ ರಾಖಿ

  ಶ್ರೀಗಂಧದ ರಾಖಿ

  ನಿಮ್ಮ ಸಹೋದರ ಕ್ರಿಯಾತ್ಮಕತೆ ಮತ್ತು ಹೆಚ್ಚು ಚುರುಕಿನವರಾಗಿದ್ದಲ್ಲಿ, ಅವರನ್ನು ಈ ರಾಖಿ ಸಂತಸಗೊಳಿಸುವುದು ಖಂಡಿತ. ಶ್ರೀಗಂಧದ ರಾಖಿ ಬೇರೆ ಬೇರೆ ವಿನ್ಯಾಸಗಳಲ್ಲಿ ಬರುತ್ತದೆ ಮತ್ತು ನೋಡಲೂ ಅಂದವಾಗಿರುತ್ತದೆ.

  ರುದ್ರಾಕ್ಷ ರಾಖಿ

  ರುದ್ರಾಕ್ಷ ರಾಖಿ

  ಹಿಂದೂ ಧರ್ಮದಲ್ಲಿ ರುದ್ರಾಕ್ಷಿಗೆ ಪವಿತ್ರ ಮತ್ತು ಪೂಜನೀಯ ಸ್ಥಾನವಿದೆ. ನಿಮ್ಮ ಸಹೋದರನಿಗೆ ಈ ಬಗೆಯ ರಾಖಿಯನ್ನು ನೀಡುವುದು ಅವರನ್ನು ಸಂತಸ ಮತ್ತು ಶಾಂತಿಯುತರನ್ನಾಗಿಸುತ್ತದೆ. ಭಗವಂತನ ಆಶೀರ್ವಾದ ಅವರ ಮೇಲೆ ಸದಾ ಇರುತ್ತದೆ ಕೂಡ. ನಿಮಗೆ ಈ ಬಗೆಯ ಬಣ್ಣದ ರುದ್ರಾಕ್ಷಿ ರಾಖಿಗಳು ಮಾರುಕಟ್ಟೆಯಲ್ಲಿ ದೊರಕುತ್ತವೆ.

  ಮುತ್ತಿನ ರಾಖಿ

  ಮುತ್ತಿನ ರಾಖಿ

  ಇದು ಕೊಂಚ ದುಬಾರಿಯಾಗಿರುತ್ತವೆ ಏಕೆಂದರೆ ಇದನ್ನು ಮುತ್ತಿನಿಂದ ತಯಾರಿಸಲಾಗಿರುತ್ತದೆ. ಮುತ್ತಿಗಿಂತಲೂ ಹೆಚ್ಚು ಅತ್ಯಮೂಲ್ಯ ಎಂದೆನಿಸಿರುವ ನಿಮ್ಮ ಸಹೋದರನಿಗೆ ಈ ರಾಖಿಯನ್ನು ಕಟ್ಟಿ. ಇದು ನಿಜಕ್ಕೂ ಅತ್ಯದ್ಭುತ ಮತ್ತು ಸುಂದರವಾಗಿರುತ್ತದೆ.

  ಮೌಲಿ ರಾಖಿ

  ಮೌಲಿ ರಾಖಿ

  ಹಿಂದೂ ಧರ್ಮದಲ್ಲಿ ಮೌಲಿಯನ್ನು ಪವಿತ್ರ ಎಂಬುದಾಗಿ ಪರಿಗಣಿಸುತ್ತಾರೆ. ನಿಮ್ಮ ಸಹೋದರನ ಮುಂಗೈಗೆ ಕಟ್ಟಲು ಈ ಬಗೆಯ ರಾಖಿಯ ಖರೀದಿಯನ್ನು ನಿಮಗೆ ಮಾಡಬಹುದಾಗಿದೆ. ಇದು ಹೆಚ್ಚು ದುಬಾರಿಯಾಗಿರದೇ ನಿಮ್ಮ ಬೆಲೆ ಕಟ್ಟಲಾಗದ ಸಹೋದರ ಪ್ರೀತಿಯ ದ್ಯೋತಕವಾಗಿರುತ್ತದೆ.

  ಸ್ವಸ್ತಿಕಾ ರಾಖಿ

  ಸ್ವಸ್ತಿಕಾ ರಾಖಿ

  ನಿಮ್ಮ ಸಹೋದರನಿಗಾಗಿ ಬೇರೆ ಬೇರೆ ವಿಧದ ರಾಖಿಯ ಬಗ್ಗೆ ಮಾತನಾಡುವಾಗ, ಇದನ್ನು ನಿರ್ಲಕ್ಷಿಸುವ ಮಾತೇ ಇಲ್ಲ ಬಿಡಿ. ಹಿಂದೂ ಧರ್ಮದ ಎಲ್ಲಾ ಧಾರ್ಮಿಕ ಕ್ರಿಯೆಗಳಲ್ಲಿ ಸ್ವಸ್ತಿಕಾದ ಬಳಕೆಯಾಗುತ್ತಿದ್ದು ಹೆಚ್ಚು ಪವಿತ್ರವಾದುದಾಗಿದೆ. ಸಹೋದರನಿಗೆ ಈ ರಾಖಿಯನ್ನು ಕಟ್ಟಿ ಅವರ ಆರೋಗ್ಯ ಮತ್ತು ಆಯಸ್ಸುಗಾಗಿ ಪ್ರಾರ್ಥಿಸಿ.

  ಮ್ಯೂಸಿಕಲ್ ರಾಖಿ

  ಮ್ಯೂಸಿಕಲ್ ರಾಖಿ

  ನಿಜಕ್ಕೂ ಇದು ಮೋಜಿನದ್ದಾಗಿದೆ. ಈ ರಾಖಿಯನ್ನು ನೀವು ಸ್ಪರ್ಶಿಸಿದಾಗ ಇದು ಸುಮಧುರ ಗೀತೆಯನ್ನು ನುಡಿಸುತ್ತದೆ. ವಿಶೇಷ ಸಂದರ್ಭದಲ್ಲಿ ಮ್ಯೂಸಿಕಲ್ ರಾಖಿಯನ್ನು ನಿಮ್ಮ ಸಹೋದರನಿಗೆ ಕಟ್ಟಿ ಅವರನ್ನು ಖುಷಿಪಡಿಸಬಹುದಾಗಿದೆ.

   

  English summary

  Different Varieties Rakhi For Your Brother

  You can fight with him, quarrel with him, but, on the auspicious occasion of Rakhi Purnima, you will definitely pray for the well-being and prosperity of your brother and tie a Rakhi on his wrist.As a brother, you also promise to your dearest sister to be on her side always. The brother-sister relationship is really special. An elder brother or sister often plays the role of a parent; they can be your best friend, guide and obviously, partners in crime. Occasions like Rakhi make this bond stronger.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more