Latest Updates
-
ಮಕ್ಕಳಿಗಾಗಿ ದಾಂಪತ್ಯ ಉಳಿಸಿಕೊಳ್ಳಬೇಕೇ? ಜೀನತ್ ಅಮಾನ್ ಅವರ ವೈರಲ್ ಸಲಹೆ ಮತ್ತು ಪೋಷಕರಿಗೆ ಮಹತ್ವದ ಪಾಠ -
ಇಂದು ಬೆಂಗಳೂರಿನಲ್ಲಿ ಪವರ್ ಕಟ್: ವೈಟ್ಫೀಲ್ಡ್, ಪೀಣ್ಯ, ಮಲ್ಲೇಶ್ವರಂ ಸೇರಿ ಪ್ರಮುಖ ಏರಿಯಾಗಳ ಪಟ್ಟಿ ಇಲ್ಲಿದೆ -
ಇನ್ಮುಂದೆ ಬಿಸ್ಕತ್ತು, ಕೂಲ್ ಡ್ರಿಂಕ್ಸ್ ಮೇಲೆ ಕೆಂಪು ಎಚ್ಚರಿಕೆ ಲೇಬಲ್: FSSAI ಹೊಸ ನಿಯಮವೇನು? -
ಮುಂಬೈ ಲೋಕಲ್ ರೈಲು ಪ್ರಯಾಣಿಕರೇ ಗಮನಿಸಿ: ಇಂದು ಮೆಗಾ ಬ್ಲಾಕ್, ಯಾವ ಮಾರ್ಗದಲ್ಲಿ ಸಂಚಾರ ಸ್ಥಗಿತ? -
ರಾಷ್ಟ್ರೀಯ ಪೋಷಕಾಂಶ ವಾರ: ಕನ್ನಡಿಗರ ಆರೋಗ್ಯಕ್ಕಾಗಿ 7 ದಿನಗಳ ಸಿಂಪಲ್ ಡಯಟ್ ಮತ್ತು ವ್ಯಾಯಾಮ ಪ್ಲಾನ್! -
ಕ್ರಿಕೆಟ್ ಮ್ಯಾಚ್ ನೋಡುವಾಗ ಮನೆಯಲ್ಲಿ ಜಗಳ ಬೇಡ: ದಂಪತಿಗಳು ಇಂದೇ ಮಾಡಿಕೊಳ್ಳಿ ಈ 'ಮ್ಯಾಚ್ ಡೇ ಒಪ್ಪಂದ'! -
ಮಳೆಗಾಲದಲ್ಲಿ ಬಟ್ಟೆ ಒಣಗುತ್ತಿಲ್ಲವೇ? ಅಪಾರ್ಟ್ಮೆಂಟ್ನಲ್ಲಿ ಬೂಷ್ಟು ತಡೆಯಲು ಇಲ್ಲಿದೆ 15 ನಿಮಿಷದ ಸಿಂಪಲ್ ಟಿಪ್ಸ್! -
ಓಣಂ ಸದ್ಯದ ರುಚಿ ಸವಿಯುತ್ತಲೇ ಆರೋಗ್ಯ ಕಾಪಾಡಿಕೊಳ್ಳಿ: ಮಧುಮೇಹಿಗಳಿಗೆ ಇಲ್ಲಿದೆ ಸ್ಮಾರ್ಟ್ ಟಿಪ್ಸ್ -
ಓಣಂ ಮುಗಿದ್ರೂ ಕಮ್ಮಿ ಆಗಿಲ್ಲ ಸದ್ಯದ ಕ್ರೇಜ್! ಬೆಂಗಳೂರು, ಮುಂಬೈನಲ್ಲಿ ವೀಕೆಂಡ್ನಲ್ಲಿ ಎಲ್ಲಿ ಸಿಗುತ್ತೆ ರುಚಿಕರ ಊಟ? -
ರಾಷ್ಟ್ರೀಯ ಕ್ರೀಡಾದಿನ: ಜಿಮ್ ಇಲ್ಲದೆ ಮನೆಯಲ್ಲೇ ಫಿಟ್ ಆಗಲು ಈ 30 ನಿಮಿಷದ ವರ್ಕೌಟ್ ಟ್ರೈ ಮಾಡಿ!
ರಕ್ಷಾ ಬಂಧನ ಆಚರಣೆಯ ಪ್ರಾಮುಖ್ಯತೆ ಏಕೆ ವಿಶಿಷ್ಟವಾಗಿದೆ?
ಒಡಹುಟ್ಟಿದವರ ನಡುವೆ ಆಚರಿಸಲ್ಪಡುವ ಈ ರಕ್ಷಾ ಬಂಧನ ಹಬ್ಬ ಕೇವಲ ಒಡಹುಟ್ಟಿದವರಿಗೆ ಮಾತ್ರವಲ್ಲದೆ ಎಲ್ಲಾ ಬಗೆಯ ಸಹೋದರ -ಸಹೋದರಿ ಸಂಬಂಧಗಳನ್ನು ಬಾಂಧವ್ಯವನ್ನು ಗಟ್ಟಿಗೊಳಿಸುವಂತಹ ದಿನ. ಸಹೋದರನಿಗೆ ರಾಖಿಯನ್ನು ಕಟ್ಟಿ ಅವರಿಂದ ಉಡುಗೊರೆಯನ್ನು ಪ್ರತಿಯಾಗಿ ಪಡೆಯುವ ಈ ದಿನಕ್ಕಾಗಿ ವರ್ಷಪೂರ್ತಿ ಸಹೋದರಿಯರು ಎದುರು ನೋಡುತ್ತಿರುತ್ತಾರೆ. ರಕ್ಷಾ ಬಂಧನದ ಸಂಸ್ಕೃತದ ಅರ್ಥ "ರಕ್ಷಣೆಯ ಗಂಟು" ಎಂಬುದು.
ಶಾಸ್ತ್ರೋಕ್ತವಾಗಿ ಸಹೋದರರು ಮತ್ತು ಅವರ ಸಹೋದರಿಯರ ನಡುವಿನ ಪ್ರೀತಿಯ ಬಂಧವನ್ನು ಆಚರಿಸುವ ಒಂದು ಪುರಾತನ ಹಿಂದೂ ಹಬ್ಬವಾಗಿದೆ. ಸಹೋದರಿ ತನ್ನ ಪ್ರೀತಿ ಮತ್ತು ತನ್ನ ಸಹೋದರನ ಒಳಿತನ್ನು ಬಯಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ರಾಖಿ ಸಮಾರಂಭವನ್ನು ಆಚರಿಸುತ್ತಾಳೆ. ಇದಕ್ಕೆ ಪ್ರತಿಯಾಗಿ, ಸಹೋದರನು ತನ್ನ ಸಹೋದರಿಯನ್ನು ರಕ್ಷಿಸುವ ಮತ್ತು ಎಲ್ಲಾ ಸಂದರ್ಭಗಳಲ್ಲಿ ಆಕೆಯ ಆರೈಕೆಯನ್ನು ಮಾಡುವ ಶಾಸ್ತ್ರೋಕ್ತ ಶಪಥ ಮಾಡುತ್ತಾನೆ. ಕೌಟುಂಬಿಕವೆಂದು ದೃಢೀಕರಿಸಲಾಗುವ ಹಲವಾರು ಸಮಾರಂಭಗಳಲ್ಲಿ ಇದು ಕೂಡ ಒಂದಾಗಿದೆ.
ರಕ್ಷಾ ಬಂಧನ ಹಬ್ಬದ ಕೆಲವು ದಿನಗಳ ಮೊದಲು, ಮಹಿಳೆಯರು ರಾಖಿಗಳನ್ನು ಖರೀದಿಸಲು ಆರಂಭಿಸುತ್ತಾರೆ. ಕೆಲವು ಸಹೋದರಿಯರು ತಾವೇ ಸ್ವತಃ ರಾಖಿಯನ್ನು ತಯಾರಿಸಿದರೆ ಇತರರು ಮಾರುಕಟ್ಟೆಯಿಂದ ಖರೀದಿಸುತ್ತಾರೆ. ಅದೇನೇ ಇದ್ದರೂ ರಾಖಿಯನ್ನು ಸಹೋದರರಿಗೆ ಕಟ್ಟುವುದೇ ಈ ದಿನದ ವಿಶೇಷ. ರಾಖಿ ಕಟ್ಟುವ ಸಂದರ್ಭದಲ್ಲಿ ಅನುಸರಿಸಬೇಕಾದ ಕೆಲವು ಇತರ ಆಚರಣೆಗಳೂ ಇವೆ. ಅವುಗಳು ಯಾವುದೆಂದು ನೋಡೋಣ.

ಮುಂಜಾನೆಯ ಜಳಕ
ಸಹೋದರ-ಸಹೋದರಿಯರು ರಕ್ಷಾ ಬಂಧನದ ದಿನದಂದು ಮುಂಜಾನೆಯೇ ಎದ್ದು ಸ್ನಾನ ಮಾಡಬೇಕು.

ಉಪವಾಸ
ಸಹೋದರನಿಗೆ ರಾಖಿಯನ್ನು ಕಟ್ಟುವವರೆಗೂ ಸಹೋದರಿ ಆಹಾರವನ್ನು ಸೇವಿಸದೇ ಇರುವುದು ವಾಡಿಕೆ.

ರಾಖಿ ತಾಲಿ
ಈ ತಾಲಿ ಎಲ್ಲಾ ಅಗತ್ಯ ವಸ್ತುಗಳಿಂದ ಅಲಂಕೃತವಾಗಿರಬೇಕು. ಈ ತಾಲಿಯಲ್ಲಿ ರಾಖಿ, ದೀಪ, ಸಿಹಿ ತಿನಿಸು, ತಿಲಕ/ಕುಂಕುಮ ಮತ್ತು ಅಕ್ಕಿ/ಅಕ್ಷತೆಯನ್ನು ಹೊಂದಿರಬೇಕು.

ರಾಖಿ ಕಟ್ಟುವುದು
ಮೊದಲಿಗೆ ಸಹೋದರಿ, ಸಹೋದರನ ಹಣೆಗೆ ತಿಲಕವನ್ನು ಇಟ್ಟು ನೆತ್ತಿಯ ಮೇಲೆ ಅಕ್ಕಿ/ಅಕ್ಷತೆಯನ್ನು ಹಾಕಬೇಕು. ನಂತರ ಆರತಿ ಬೆಳಗಬೇಕು. ನಂತರ ಸಹೋದರನಿಗೆ ರಾಖಿಯನ್ನು ಕಟ್ಟಿ ಸಿಹಿಯನ್ನು ತಿನ್ನಿಸಬೇಕು.

ಉಡುಗೊರೆ
ಸಹೋದರನು ರಾಖಿ ಕಟ್ಟಿಸಿಕೊಂಡ ಮೇಲೆ ಸಹೋದರಿಗೆ ಉಡುಗೊರೆಯನ್ನು ನೀಡಬೇಕು. ಜೊತೆಗೆ ಸಹೋದರಿಯನ್ನು ಜೀವನದ ಯಾವುದೇ ಸಮಯದಲ್ಲಿ ಕಾಪಾಡುತ್ತೇನೆ ಎಂದು ವಚನ ನೀಡಬೇಕು.

ಭೂರಿ ಭೋಜನ
ಈ ಎಲ್ಲಾ ವಿಧಿ ವಿಧಾನಗಳ ನಂತರ ಸಹೋದರಿ ಆಹಾರವನ್ನು ಸೇವಿಸಬಹುದು. ನಂತರ ಸಹೋದರಿ ತನ್ನ ಸಹೋದರನಿಗೆ ಇಷ್ಟವಾದ ಅಡುಗೆಯನ್ನು ಮಾಡಿ ರಸ ಭೋಜನವನ್ನು ಉಣಬಡಿಸಬೇಕು.



Click it and Unblock the Notifications