For Quick Alerts
ALLOW NOTIFICATIONS  
For Daily Alerts

ವಿಶ್ವದೆಲ್ಲೆಡೆ ಜನಪ್ರಿಯವಾಗಿರುವ ವಿವಿಧ ಬಗೆಯ ಕಾಫಿಗಳು!

By Hemanth P
|

ಕೆಲವರಿಗೆ ಕಾಫಿ ಕುಡಿಯದಿದ್ದರೆ ದಿನದ ಆರಂಭ ಮಾಡಲು ಸಾಧ್ಯವೇ ಆಗುವುದಿಲ್ಲ. ಒತ್ತಡ ಅಥವಾ ತುಂಬಾ ಆಯಾಸವಾಗಿದ್ದರೆ ಒಂದು ಕಪ್ ಕಾಫಿ ಕುಡಿದರೆ ಎಲ್ಲವೂ ಮಾಯವಾಗುತ್ತದೆ. ಮೂಡ್ ಬದಲಾಯಿಸಲು ಕಾಫಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಶಕ್ತಿ ಹೆಚ್ಚಿಸುವ ಪಾನೀಯ ಕೂಡ.

ಕಾಫಿಯ ಮೂಲದ ಬಗ್ಗೆ ಮಾತನಾಡುವುದಾದರೆ ಕಾಫಿ ಗಿಡದಿಂದ ಬರುವ ಗುಲಾಬಿ ಕೆಂಪು ಬಣ್ಣದ ಕಾಯಿಯಿಂದ ಕಾಫಿ ತಯಾರಾಗುತ್ತದೆ. ವಿವಿಧ ಪ್ರದೇಶ ಮತ್ತು ಭಿನ್ನ ಬೇಸಾಯ ಪದ್ಧತಿಗೆ ಅನುಗುಣವಾಗಿ ಕಾಫಿ ಕಾಯಿಯ ಬಣ್ಣ ಕೂಡ ಬದಲಾಗುತ್ತದೆ.

ಆದರೆ ಪ್ರತೀ ಕಾಯಿಯಿಂದಲೂ ಒಂದೇ ರೀತಿಯ ಕಾಫಿ ತಯಾರಾಗುತ್ತದೆ. ಅದಕ್ಕೆ ಸೇರಿಸುವ ಕೆಲವು ಪದಾರ್ಥಗಳಿಂದಾಗಿ ಅದರ ರುಚಿಯಲ್ಲಿ ವ್ಯತ್ಯಯವಾಗಬಹುದು. ಕೆಲವೊಂದು ವಸ್ತುಗಳನ್ನು ಕಾಫಿ ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸಲು ಬಳಸಲಾಗುತ್ತದೆ.

ಬ್ಲ್ಯಾಕ್ ಕಾಫಿ VS ಸಾಮಾನ್ಯ ಕಾಫಿ ಇದರಲ್ಲಿ ಯಾವುದು ಆರೋಗ್ಯಕಾರಿ?

ವಿಶ್ವದೆಲ್ಲೆಡೆ ಸಿಗುವ ಅತ್ಯಂತ ಜನಪ್ರಿಯ ಕಾಫಿಯನ್ನು ಕೆಳಗೆ ನೀಡಲಾಗಿದೆ.

ಎಸ್ಪ್ರೆಸೊ

ಎಸ್ಪ್ರೆಸೊ

ಹೆಚ್ಚು ಒತ್ತಡದ ಉಗಿಯಲ್ಲಿ ಕಾಫಿ ಬೀಜ ಹಾಕಿ ಮಾಡಿದ ಕಪ್ಪು ಕಾಫಿ. ಇದು ತುಂಬಾ ಮೂಲ ರೂಪ ಮತ್ತು ಜನಪ್ರಿಯ ಕಾಫಿ. ಎಸ್ಪ್ರೆಸೊದಲ್ಲಿ ಕೇವಲ ನೀರು ಮತ್ತು ಸಕ್ಕರೆ ಮಾತ್ರ ಒಳಗೊಂಡಿರುತ್ತದೆ. ಸ್ಟ್ರಾಂಗ್ ಎಸ್ಪ್ರೆಸೊ ಕಾಫಿಯಲ್ಲಿ ಕಡಿಮೆ ನೀರಿರುತ್ತದೆ ಮತ್ತು ಸಕ್ಕರೆ ಇರುವುದಿಲ್ಲ. ಈ ಕಾಫಿ ಅತ್ಯಂತ ಇಷ್ಟದ ವಿಧ.

ಎಸ್ಪ್ರೆಸೊ ಮಚ್ಚೈಟೊ

ಎಸ್ಪ್ರೆಸೊ ಮಚ್ಚೈಟೊ

ಎಸ್ಪ್ರೆಸೊಗೆ ಸ್ವಲ್ಪ ಕುದಿಸಿದ ಹಾಲು ಹಾಕಿ. ಇದರಿಂದ ಜನಪ್ರಿಯ ಎಸ್ಪ್ರೆಸೊ ಮಚ್ಚೈಟೊ ಕಾಫಿಯನ್ನು ಪಡೆಯಬಹುದು. ಮಚ್ಚೈಟೊ ಸ್ವಲ್ಪ ವಿಶೇಷವೆನಿಸಿದ ವಿಧ, ಇದರಲ್ಲಿ ಕಾಫಿಯನ್ನು ಸ್ವಲ್ಪ ಮಾರ್ಪಡಿಸಲಾಗಿದೆ. ಸ್ಟ್ರಾಂಗ್ ಕಾಫಿ ಬಯಸದವರಿಗೆ ಇದು ಒಳ್ಳೆಯ ವಿಧದ ಕಾಫಿ.

ಕ್ಯಾಪುಚಿನೋ

ಕ್ಯಾಪುಚಿನೋ

ಅತ್ಯಂತ ಜನಪ್ರಿಯ ಮತ್ತು ಸಾಮಾನ್ಯವಾಗಿ ವಿಶ್ವದೆಲ್ಲೆಡೆಯಲ್ಲಿ ಸಿಗುವ ಸಾಮಾನ್ಯ ಕಾಫಿಯಾಗಿದೆ. ಈ ವಿಧದ ಕಾಫಿ ಎಲ್ಲಾ ಕಾಫಿ ಶಾಪ್ ಗಳಲ್ಲಿ ಲಭ್ಯವಿದೆ. ಎಸ್ಪ್ರೆಸೊ, ಹಾಲು ಮತ್ತು ಹಾಲಿನ ನೊರೆ ಬಳಸಿ ಇದನ್ನು ತಯಾರಿಸಲಾಗುತ್ತದೆ. ಇದನ್ನು ಚಾಕಲೇಟ್ ಸಿರಪ್ ಅಥವಾ ಕಾಫಿ ಹುಡಿ ಹಾಕಿ ಅಲಂಕರಿಸಲಾಗುತ್ತದೆ.

ಕೆಫೆ ಲ್ಯಾಟೆ

ಕೆಫೆ ಲ್ಯಾಟೆ

ಎಸ್ಪ್ರೆಸೊದ ಪ್ರಮಾಣಕ್ಕಿಂತ ಮೂರು ಪಟ್ಟು ಹೆಚ್ಚಿನ ಹಾಲು ಹಾಕಿ ಈ ರೀತಿಯ ಕಾಫಿ ತಯಾರಿಸಬಹುದು. ಇದರಲ್ಲಿ ಹಾಲು ಹೆಚ್ಚಿರುತ್ತದೆ ಮತ್ತು ಸಮ ಪ್ರಮಾಣದ ಸಕ್ಕರೆ ಹಾಕಿದರೆ ಅದನ್ನು ಕುಕೀಸ್ ಮತ್ತು ಪ್ಯಾಸ್ತ್ರಿಯೊಂದಿಗೆ ಸೇವಿಸಲು ಒಳ್ಳೆಯದು.

ಮೊಚಾ ಚಿನೊ

ಮೊಚಾ ಚಿನೊ

ಕ್ಯಾಪುಚಿನೋಗೆ ಗಣನೀಯ ಪ್ರಮಾಣದಲ್ಲಿ ಕೊಕೊ ಹುಡಿ ಬೆರೆಸುವ ಮೂಲಕ ಈ ರೀತಿಯ ಕಾಫಿ ತಯಾರಿಸಲಾಗುತ್ತದೆ. ಕೊಕೊ ಸಿರಪ್ ಅಥವಾ ಪೌಡರ್ ಕಾಫಿಗೆ ಚಾಕಲೇಟ್ ಸುವಾಸನೆ ನೀಡುತ್ತದೆ. ಇದನ್ನು ಅಲಂಕರಿಸಲು ಹಾಲಿನ ಕೆನೆ ಬಳಸಲಾಗುತ್ತದೆ.

ಅಮೆರಿಕಾ ನೊ

ಅಮೆರಿಕಾ ನೊ

ಎಸ್ಪ್ರೆಸೊ ಕಾಫಿಗೆ ಅರ್ಧ ಕಪ್ ಬಿಸಿ ನೀರು, ಸ್ವಲ್ಪ ಹಾಲು ಮತ್ತು ಸಕ್ಕರೆ ಸೇರಿಸಿದರೆ ತಯಾರಾಗುವ ಕಾಫಿ ಇದು. ಅಮೆರಿಕದವರು ಎಸ್ಪ್ರೆಸೊವನ್ನು ತೆಳುವಾಗಿಸುವ ಕಾರಣ ಇದಕ್ಕೆ ಅಮೆರಿಕಾ ನೊ ಎಂದು ಹೆಸರಿಡಲಾಗಿದೆ. ಇದು ಜಗತ್ತಿನಾದ್ಯಂತ ಸಿಗುವ ಜನಪ್ರಿಯ ಕಾಫಿ.

ಐರಿಷ್ ಕಾಫಿ

ಐರಿಷ್ ಕಾಫಿ

ಪ್ರತಿಯೊಂದು ಕಾಫಿ ಶಾಪ್ ಗಳಲ್ಲಿ ಸಿಗುವ ಅತ್ಯಂತ ಜನಪ್ರಿಯ ಕಾಫಿಯಲ್ಲಿ ಇದು ಕೂಡ ಒಂದು. ಪರಿಪೂರ್ಣ ಮಿಶ್ರಣದ ವಿಸ್ಕಿ, ಎಸ್ಪ್ರೆಸೊ ಮತ್ತು ಸಕ್ಕರೆ ಸೇರಿಸಿದರೆ ಐರಿಷ್ ಕಾಫಿ ರೆಡಿ.

ಭಾರತದ ಫಿಲ್ಟರ್ ಕಾಫಿ

ಭಾರತದ ಫಿಲ್ಟರ್ ಕಾಫಿ

ದಕ್ಷಿಣ ಭಾರತದಲ್ಲಿ ಮಾಡಲ್ಪಡುವಂತಹ ಸಾಂಪ್ರದಾಯಿಕ ಭಾರತದ ಫಿಲ್ಟರ್ ಕಾಫಿಯೂ ಇಂದು ವಿಶ್ವದೆಲ್ಲೆಡೆ ಜನಪ್ರಿಯ. ಒಣಗಿದ ಬೀಜದ ಹುಡಿಯನ್ನು ನೀರು ಮತ್ತು ಹಾಲಿನೊಂದಿಗೆ ಸೇರಿಸಿದಾಗ ಅದು ಪುನರ್ಜಲೀಕರಿಸಲ್ಪಡುತ್ತದೆ. ಇದು ಇತರ ಕಾಫಿಗಳಿಗಿಂತ ಹೆಚ್ಚು ಸಿಹಿ.

ಟರ್ಕಿಸ್ ಕಾಫಿ

ಟರ್ಕಿಸ್ ಕಾಫಿ

ಟರ್ಕಿಸ್ ಬೀಜಗಳನ್ನು ಒಣಗಿಸಿ ಅದನ್ನು ಸರಿಯಾಗಿ ಹುಡಿ ಮಾಡಲಾಗುತ್ತದೆ. ಈ ಹುಡಿಯನ್ನು ಬಿಸಿ ನೀರಿನಲ್ಲಿ ಹಾಕಿ ಕರಗಲು ಬಿಡಲಾಗುತ್ತದೆ. ಕರಗಿದ ಕಾಫಿ ಹುಡಿಯನ್ನು ನೀರಿನಲ್ಲಿ ಕುದಿಯಲು ಬಿಡಲಾಗುತ್ತದೆ. ಇದರಲ್ಲಿ ಕಾಫಿ ರುಚಿಯು ಅಧಿಕವಾಗುತ್ತದೆ ಮತ್ತು ಅದು ಸಂಪೂರ್ಣವಾಗಿ ನೀರಿನಲ್ಲಿ ಬೆರೆತಿರುತ್ತದೆ. ಇದಕ್ಕೆ ಅಗತ್ಯವಿದ್ದಷ್ಟು ಸಕ್ಕರೆ ಹಾಕಿ ಸೇವಿಸಬಹುದು. ಪರಿಪೂರ್ಣ ಟರ್ಕಿಸ್ ಕಾಫಿಯೆಂದರೆ ಅದರ ನೊರೆಯ ಪದರವು ದಪ್ಪ ಮತ್ತು ಕೆನೆಯಿಂದ ಕೂಡಿರುತ್ತದೆ.

ವೈಟ್ ಕಾಫಿ

ವೈಟ್ ಕಾಫಿ

ಇದು ಮಲೇಶಿಯಾ ಮೂಲದ ಜನಪ್ರಿಯ ಕಾಫಿ. ಫಾಮ್ ಎಣ್ಣೆಯಲ್ಲಿ ಸುಟ್ಟು ತಯಾರಿಸಿದ ಕಾಫಿ ಬೀಜಗಳಿಂದ ಇದನ್ನು ತಯಾರಿಸಲಾಗುತ್ತದೆ. ಈ ರೀತಿಯ ಕಾಫಿ ಸುವಾಸನೆಗೆ ಮಂದಗೊಳಿಸಿದ ಹಾಲು ಮತ್ತು ಸಕ್ಕರೆ ಸೇರಿಸಲಾಗುತ್ತದೆ.

English summary

Different types of coffee popular worldwide

Coffee types differ according to the ingredients used in them in different variations. These ingredients are used to enhance the coffee flavor and aroma. Some of the most famous coffee types worldwide are listed below:
X
Desktop Bottom Promotion