For Quick Alerts
ALLOW NOTIFICATIONS  
For Daily Alerts

ವರಮಹಾಲಕ್ಷ್ಮಿ ವ್ರತ: ದೇವಿಯ ಸಿದ್ಧಿಗಾಗಿ ಮಾಡಬೇಕಾದ, ಮಾಡಬಾರದ ಕೆಲಸಗಳು ಇಲ್ಲಿವೆ

|

ಶ್ರಾವಣ ಮಾಸದ ಅತೀ ಪ್ರಮುಖ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ವ್ರತವೂ ಒಂದು. ವಿವಾಹಿತ ಮಹಿಳೆಯರು ತಮ್ಮ ಕುಟುಂಬಕ್ಕೆ ಒಳಿತಾಗಲಿ, ತಮ್ಮ ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ ಸಮೃದ್ಧತೆಯಿಂದ ಕೂಡಿರಲಿ ಎಂದು ಬೇಡಿಕೊಳ್ಳುವ ಹಬ್ಬವಾಗಿದೆ. ಶ್ರಾವಣ ಮಾಸದ ಮೂರನೇ ಶುಕ್ರವಾರ ಆಚರಣೆ ಮಾಡುವ ಈ ವರಮಹಾಲಕ್ಷ್ಮಿ ವ್ರತ ಈ ವರ್ಷವೂ ಆಗಸ್ಟ್ 20ರಂದು ಇದೆ. ಈ ವ್ರತದ ದಿನ ಕಷ್ಟಗಳನ್ನು ದೂರಮಾಡಲು ವರಮಹಾಲಕ್ಷ್ಮಿ ದೇವಿಯನ್ನು ತೃಪ್ತಿಪಡಿಸಲು ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ವರಮಹಾಲಕ್ಷ್ಮಿ ವ್ರತದ ದಿನ ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಕುರಿತು ಈ ಕೆಳಗೆ ನೀಡಲಾಗಿದೆ:

ಉಪವಾಸ:

ಉಪವಾಸ:

ವರಲಕ್ಷ್ಮಿ ದೇವಿ, ಸಂಪತ್ತು, ಸಮೃದ್ಧಿ ನೀಡುವ ತಾಯಿ. ಶ್ರಾವಣ ಮಾಸದ ಶುಕ್ರವಾರದಂದು ಈ ಹಬ್ಬ ಆಚರಿಸುವುದು ಸಂಪ್ರದಾಯವಾಗಿದೆ. ಈ ಹಿನ್ನಲೆಯಲ್ಲಿ ಮಹಿಳೆಯರು ತಮ್ಮ ಮನೆಗೆ ಶುಭಾವಾಗಲೆಂದು ಪ್ರತಿಜ್ಞೆ ಮಾಡಿ, ಉಪವಾಸ ಕೈಗೊಳ್ಳಬೇಕು. ಇದಕ್ಕಾಗಿ ಬೆಳಿಗ್ಗೆ ಸ್ನಾನ ಮಾಡಿ, ಮಡಿಯುಟ್ಟು, ಜಾ ಕೊಠಡಿಯನ್ನು ಸ್ವಚ್ಛಗೊಳಿಸಿ, ದೇವಿಗೆ ಪೂಜೆ ಮಾಡಿ, ದಿನವಿಡೀ ಉಪವಾಸ ಕೂರಬೇಕು. ಈ ದಿನ ಮಾಡಿದ ಉಪವಾಸದಿಂದ ನಿಮ್ಮ ಇಷ್ಟಾರ್ಥಗಳೆಲ್ಲವೂ ಈಡೇರಿಕೆಯಾಗುತ್ತದೆ ಎಂಬ ನಂಬಿಕೆಯಿದೆ, ಆದರೆ ಬಹಳ ಶ್ರದ್ಧೆಯಿಂದ ಮಾಡಿದರೆ ಮಾತ್ರ.

ತಾಯಿಯ ಅಲಂಕಾರ:

ತಾಯಿಯ ಅಲಂಕಾರ:

ವ್ರತಕ್ಕೆ ಕೂರುವ ಮೊದಲು ವರಲಕ್ಷ್ಮಿ ದೇವಿಯ ಮೂರ್ತಿಯನ್ನು ಅಲಂಕರಿಸಬೇಕು. ತದ ನಂತರ ಕಲಶವನ್ನು ಸ್ಥಾಪಿಸಬೇಕು. ಮೊದಲು ವಿಘ್ನವಿನಾಶಕ ಗಣೇಶನ ಪೂಜೆ ಮಾಡಬೇಕು, ತದನಂತರ ಕಳಶ ಪೂಜೆ ಮತ್ತು ಕಂಕಣ ಪೂಜೆಯನ್ನು ಮಾಡಬೇಕು. ಅದರ ನಂತರ ಅಷ್ಟೋತ್ತರ ಶತನಾಮಾವಳಿ ಓದಿ, ವರಲಕ್ಷ್ಮಿ ವ್ರತದ ಕಥೆ ಹೇಳಲು ಆರಂಭಿಸಬೇಕು.

ದೇವಿಯ ಪೂಜೆ:

ದೇವಿಯ ಪೂಜೆ:

ವರಲಕ್ಷ್ಮಿ ದೇವಿಯ ಕಥೆ ಮುಗಿದ ನಂತರ ಪೂಜೆ ಆರಂಭಿಸಬೇಕು. ಎಲ್ಲಾ ಅಷ್ಟಲಕ್ಷ್ಮಿಯನ್ನು ನೆನೆದು, ಅವರೆಲ್ಲರೂ ವರಲಕ್ಷ್ಮಿ ದೇವಿಯ ರೂಪವೆಂದು ಭಾವಿಸಿ, ಪೂಜಿಸಬೇಕು. ಮಹಿಳೆಯರು ಶ್ರದ್ಧೆ, ಭಕ್ತಿಯಿಂದ ಈ ರೀತಿ ಪೂಜಿಸುವುದರಿಂದ ತಮ್ಮ ಇಡೀ ಕುಟುಂಬಕ್ಕೆ ಆರೋಗ್ಯ, ಶಾಂತಿ, ಪ್ರೀತಿ, ಶಿಕ್ಷಣ, ಸಂಪತ್ತು, ಕೀರ್ತಿ, ಸಂತೋಷ ಇತ್ಯಾದಿ ಪ್ರಾಪ್ತಿಯಾಗುತ್ತದೆ.

ಬಾಗಿನ ನೀಡಿ:

ಬಾಗಿನ ನೀಡಿ:

ಪೂಜೆ ಮುಗಿದ ಮೇಲೆ ಮುತ್ತೈದೆಯರಿಗೆ ಕಾಣಿಕೆಗಳನ್ನು ಅಥವಾ ಬಾಗಿನ ನೀಡಬೇಕು. ಅವರ ಕೈಗಳಿಗೆ ಕಡಗಗಳನ್ನು ಧರಿಸಬೇಕು ಬಳೆ ಧರಿಸಿ, ಅಕ್ಷತೆ ಹಾಕಬೇಕು. ಅದರ ನಂತರ, ಎಲ್ಲಾ ಭಕ್ತರಿಗೆ ತಾಂಬೂಲ ಮತ್ತು ತೀರ್ಥ ಪ್ರಸಾದವನ್ನು ನೀಡಬೇಕು. ದೇವಿಗೆ ಅರ್ಪಿಸಿದ ನೈವೇದ್ಯವನ್ನು ಎಲ್ಲರಿಗೂ ಹಂಚಿ, ತಾವು ಸೇವಿಸಿ, ರಾತ್ರಿಯವರೆಗೂ ಉಪವಾಸ ಮುಂದುವರಿಸಬೇಕು. ಮರುದಿನ ಕಲಶ ತೆಗೆದು, ಆ ನೀರನ್ನು ಮನೆಯ ಮೇಲೆ ಚಿಮುಕಿಸಿದ ಮೇಲೆ ವ್ರತ ಮುಗಿಯುವುದು.

ಏನೇ ಮಾಡಿದರೂ ಭಕ್ತಿಯಿಂದ ಮಾಡಿ:

ಏನೇ ಮಾಡಿದರೂ ಭಕ್ತಿಯಿಂದ ಮಾಡಿ:

ದೇವಿಯನ್ನು ಬಹಳ ಭಕ್ತಿಯಿಂದ ಪೂಜಿಸಬೇಕು. ವರಲಕ್ಷ್ಮಿ ಸಂಪತ್ತಿನ ತಾಯಿಯಾಗಿರುವುದರಿಂದ ಈ ಎಲ್ಲಾ ಆಚರಣೆಗಳನ್ನು ಭಕ್ತಿಯಿಂದ ಮನಸ್ಸಿಟ್ಟು ಮಾಡಿದರೆ, ಎಲ್ಲಾ ಸೌಭಾಗ್ಯಗಳು ಬರುತ್ತವೆ. ಇದಲ್ಲದೆ, ಅನೇಕ ಜನರು ಅಷ್ಟೈಶ್ವರ್ಯಗಳು ಮತ್ತು ಆರೋಗ್ಯಭಾಗ್ಯಗಳು ಧರ್ಮಗ್ರಂಥವನ್ನು ಓದಿದಾಗ ಪಡೆಯಬಹುದು ಎಂದು ನಂಬುತ್ತಾರೆ. ಅದೇ ರೀತಿ ಕೆಲವರು ದೇವಿಗೆ ವಿವಿಧ ಅಲಂಕಾರಗಳನ್ನು ಮಾಡುವ ಮೂಲಕ ವಿಶೇಷ ಪೂಜೆಗಳನ್ನು ಮಾಡುತ್ತಾರೆ. ಆದರೆ, ಹಾಗೆ ಮಾಡಲಾಗದವರು, ಕೇವಲ ಕಲಶವಿಟ್ಟು ಪೂಜಿಸಿದರೂ, ಅದೇ ಫಲಿತಾಂಶಗಳು ಲಭ್ಯವಾಗುತ್ತದೆ ಆದರೆ ನಿಜವಾದ ಭಕ್ತಿಯರಬೇಕಷ್ಟೇ..

ವರಮಹಾಲಕ್ಷ್ಮಿ ವ್ರತದಂದು ಇದನ್ನು ಮಾಡಬೇಡಿ:

ವರಮಹಾಲಕ್ಷ್ಮಿ ವ್ರತದಂದು ಇದನ್ನು ಮಾಡಬೇಡಿ:

1. ವರಲಕ್ಷ್ಮಿ ವ್ರತದ ದಿನ, ಮನಸ್ಸಿನಲ್ಲಿ ಏನನ್ನಾದರೂ ಯೋಚಿಸುತ್ತಾ, ವಿಚಲಿತ ಮನಸ್ಸಿನಿಂದ ಪೂಜಿಸಬಾರದು, ನೀವು ಇಂತಹ ಮನಸ್ಥಿತಿಯಿಂದ ಪೂಜೆ ಮಾಡಿದರೆ, ಎಷ್ಟು ಅಲಂಕಾರ ಮಾಡಿದರೂ ಮತ್ತು ಎಷ್ಟು ಕಾಣಿಕೆಗಳನ್ನು ನೀಡಿದರೂ, ನಿಮ್ಮ ಆಸೆ ಈಡೇರುವುದಿಲ್ಲ. ಸಂಪೂರ್ಣ ಮನಸ್ಸು ದೇವಿಯ ಮೇಲಿರಬೇಕು.

2. ಇಂದು ಮಧ್ಯಾಹ್ನ ಮಲಗಲು ಹೋಗಬೇಡಿ.

3. ರಾತ್ರಿ ಕೂಡ ಅನ್ನವನ್ನು ತಿನ್ನಬೇಡಿ. ಯಾವುದೇ ಪಾನೀಯವನ್ನು ಮಾತ್ರ ಕುಡಿಯಿರಿ.

4. ಸಂಗಾತಿಯೊಂದಿಗೆ ಇಂದು ಯಾವುದೇ ದೈಹಿಕ ಸಂಪರ್ಕ ಬೇಡ.

English summary

Varalakshmi Vratham Do's and Dont's in Kannada

Varalakshmi Vratam is a Hindu ritual that falls in the Shravan month every year.The day involves a observing a fast by married Hindu women for Lakshmi in a bid to seek her blessings.Here we talking about Varalakshmi Vratham do's and dont's, read on
X
Desktop Bottom Promotion