For Quick Alerts
ALLOW NOTIFICATIONS  
For Daily Alerts

ಅ.20ಕ್ಕೆ ವಾಲ್ಮೀಕಿ ಜಯಂತಿ: ಇಲ್ಲಿದೆ ಮಹತ್ವ ಹಾಗೂ ಇತಿಹಾಸ

|

ಭಾರತದ ಮಹಾಕಾವ್ಯಗಳಲ್ಲಿ ಒಂದಾದ ರಾಮಾಯಣವನ್ನು ರಚಿಸಿದ ಆದಿಕವಿ ವಾಲ್ಮೀಕಿಯ ಜಯಂತಿಯನ್ನು ಇದೇ ಅಕ್ಟೋಬರ್ 20ರಂದು ಆಚರಿಸಲಾಗುತ್ತಿದೆ. ಸಂಸ್ಕೃತದಲ್ಲಿ ರಚಿಸಲಾಗಿರುವ ರಾಮಾಯಣವು 24,000 ಶ್ಲೋಕಗಳನ್ನು ಹೊಂದಿದ್ದು, ಅನೇಕ ಕವಿಗಳಿಗೆ-ವಿದ್ವಾಂಸರಿಗೆ ಸ್ಪೂರ್ತಿಯಾಗಿ ನಿಂತಿದೆ. ಇಂತಹ ಮಹಾಕಾವ್ಯ ಬರೆದ ವಾಲ್ಮೀಕಿಯ ಹುಟ್ಟು ಹೇಗಾಯ್ತು? ವಾಲ್ಮೀಕಿ ಜಯಂತಿ ಆಚರಣೆಗಿರುವ ಶುಭಮುಹೂರ್ತ ಯಾವುದು ಎಂಬುದನ್ನು ಇಲ್ಲಿ ನೋಡೋಣ.

ಮಹರ್ಷಿ ವಾಲ್ಮೀಕಿಯ ಹುಟ್ಟಿನ ಕುರಿತಾದ ದಂತಕಥೆಗಳು:

ಮಹರ್ಷಿ ವಾಲ್ಮೀಕಿಯ ಹುಟ್ಟಿನ ಕುರಿತಾದ ದಂತಕಥೆಗಳು:

ಮಹರ್ಷಿ ವಾಲ್ಮೀಕಿಯ ಜನನದ ಸುತ್ತಲೂ ಹಲವಾರು ದಂತಕಥೆಗಳಿವೆ, ಅವರು ಮಹರ್ಷಿ ಕಶ್ಯಪ ಮತ್ತು ದೇವಿ ಅದಿತಿ ಅವರ 9 ನೇ ಮಗ ವರುಣನಿಗೆ ಮತ್ತು ಆತನ ಪತ್ನಿ ಚಾರ್ಶಿನಿಗೆ ಜನಿಸಿದರು ಎಂದು ಹೇಳಲಾಗುತ್ತದೆ.

ಇನ್ನೊಂದು ದಂತಕಥೆಯ ಪ್ರಕಾರ, ವಾಲ್ಮೀಕಿ ಋಷಿಯಾಗುವ ಮೊದಲು ರತ್ನಾಕರ ಎಂಬ ಡಕಾಯತ್ ಅಥವಾ ದರೋಡೆಕೋರನಾಗಿದ್ದನು. ಆದರೆ ನಾರದನ ಉಪದೇಶದಿಂದ ರತ್ನಾಕರನಿಗೆ ಜ್ಞಾನೋದಯವಾಯಿತೆಂದು ಹೇಳಲಾಗುತ್ತದೆ. ವಾಲ್ಮೀಕಿ ಮಹರ್ಷಿಗಳು ಪ್ರಚೇತಸ ಮುನಿಯ ಮಗ. ಹೀಗಾಗಿ ಅವರಿಗೆ 'ಪ್ರಾಚೇತಸ' ಎಂಬ ಹೆಸರಿದೆ.

ಪರಮಾತ್ಮನನ್ನು ಕುರಿತು ಬಹಳ ವರ್ಷಗಳ ಕಾಲ ತಪಸ್ಸು ಮಾಡುತ್ತಿದ್ದಾಗ ಅವರ ಸುತ್ತ ಹುತ್ತ ಬೆಳೆದಿತ್ತು. ಹುತ್ತ(ಸಂಸ್ಕೃತದಲ್ಲಿ-ವಲ್ಮೀಕ)ವನ್ನು ಭೇದಿಸಿಕೊಂಡು ಹೊರಗೆ ಬಂದಿದ್ದರಿಂದ 'ವಾಲ್ಮೀಕಿ' ಎಂಬ ಹೆಸರು ಬಂತು ಎಂದು ಹೇಳುತ್ತಾರೆ.

ವಾಲ್ಮೀಕಿ ಜಯಂತಿ 2021 ರ ದಿನಾಂಕ ಮತ್ತು ಪೂಜಾ ಸಮಯ:

ವಾಲ್ಮೀಕಿ ಜಯಂತಿ 2021 ರ ದಿನಾಂಕ ಮತ್ತು ಪೂಜಾ ಸಮಯ:

ಅಶ್ವಿನ್ ಮಾಸದ ಪೂರ್ಣಿಮೆಯಂದು ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ 20 ನೇ ಅಕ್ಟೋಬರ್ 2021 ರಂದು ಬಂದಿದೆ. ಪೂರ್ಣಿಮೆಯು ಅಕ್ಟೋಬರ್ 19ರಂದು ಸಂಜೆ 07.03ಕ್ಕೆ ಶುರುವಾಗಿ, ಅಕ್ಟೋಬರ್ 20ರ ರಾತ್ರಿ 08.26ಕ್ಕೆ ಮುಕ್ತಾಯಗೊಳ್ಳಲಿದೆ. ಅಂದು ಶೋಭಾ ಯಾತ್ರಾ, ಭಜನೆಯನ್ನು ಕೈಗೊಳ್ಳಲಾಗುತ್ತದೆ.

ವಾಲ್ಮೀಕಿ ಜಯಂತಿಯ ಇತಿಹಾಸ ಹಾಗೂ ಮಹತ್ವ:

ವಾಲ್ಮೀಕಿ ಜಯಂತಿಯ ಇತಿಹಾಸ ಹಾಗೂ ಮಹತ್ವ:

ನಮ್ಮ ದೇಶದ ಮಹಾಕಾವ್ಯಗಳಲ್ಲಿ ಒಂದಾದ ರಾಮಾಯಣವು ಭಾರತೀಯರ ಜೀವನಚರಿತ್ರೆಯನ್ನು ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಗ್ರಂಥವಾಗಿದೆ. ಇದರ ಕೀರ್ತಿ ಸಲ್ಲಬೇಕಾಗಿರುವುದು ಮಹರ್ಷಿ ವಾಲ್ಮೀಕಿಗೆ. ರಾಮಾಯಣದಲ್ಲಿ ಭರತಖಂಡದಲ್ಲಿನ ಅರಣ್ಯ, ಪರ್ವತ, ನದಿ, ಸರೋವರ, ಸಮುದ್ರಗಳು ಮತ್ತು ಜಲಪಾತಗಳ ಸೌಂದರ್ಯವನ್ನು ವರ್ಣಿಸಿದ್ದಾರೆ. ವಿವಿಧ ಪಾತ್ರಗಳ ಮುಖಾಂತರ ಕೌಟುಂಬಿಕ ಮೌಲ್ಯಗಳು ಮತ್ತು ಆದರ್ಶ ವ್ಯಕ್ತಿಯ ಗುಣಲಕ್ಷಣಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ.

ರಾಮಾಯಣ ಮಹಾಕಾವ್ಯದಲ್ಲಿ ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ, ಅತಿಥಿದೇವೋಭವದಂತಹ ಮೌಲ್ಯಗಳನ್ನು ಎತ್ತಿ ಹಿಡಿಯಲಾಗಿದೆ. ಮಮತೆ, ಸಮತೆ, ಭ್ರಾತೃತ್ವ, ತ್ಯಾಗ, ದೇಶಪ್ರೇಮ, ಅಳಿಲು ಸೇವೆ, ಪಿತೃವಾಕ್ಯ ಪರಿಪಾಲನೆ ಮುಂತಾದ ಹಲವಾರು ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸಲಾಗಿದೆ.

ಇಂತಹ ಅನನ್ಯವಾದ ರಾಮಾಯಣ ಮಹಾಕಾವ್ಯವನ್ನು ರಚಿಸಿದ ಮಹರ್ಷಿ ವಾಲ್ಮೀಕಿಯನ್ನು ಹಾಗೂ ಮಹಾಕಾವ್ಯವನ್ನು ಮಹಾಕವಿ ಕಾಳಿದಾಸ, ನೆಹರು, ಕುವೆಂಪುರಂತಹ ಮಹಾನ್ ಪುರುಷರು ಹಾಡಿಹೊಗಳಿದ್ದಾರೆ. ಇಂತಹ ವ್ಯಕ್ತಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ ಹಾಗೂ ಜವಾಬ್ದಾರಿ ಎಂದರೆ ತಪ್ಪಾಗಲ್ಲ.

English summary

Valmiki Jayanti 2021: Date, History, Shubh Muhurat and Significance in kannada

Here we talking about Valmiki Jayanti 2021: Date, History, Shubh Muhurat and Significance in kannada, readon
Story first published: Tuesday, October 19, 2021, 13:09 [IST]
X