Just In
Don't Miss
- Sports
ಸಿಕ್ಸರ್ ದಾಖಲೆ ಪಟ್ಟಿಯಲ್ಲಿ ಎಂಎಸ್ ಧೋನಿ ಸರಿಗಟ್ಟಿದ ರೋಹಿತ್ ಶರ್ಮಾ
- News
ಬಿಟ್ ಕಾಯಿನ್ ಮೌಲ್ಯ $60,000 ನಂತೆ ಸ್ಥಿರ, ಟ್ರೇಡರ್ಸ್ಗೆ ನೆಮ್ಮದಿ
- Automobiles
ಕೋವಿಡ್ ಅಬ್ಬರ: ಹೊಸ ವಾಹನಗಳ ಉತ್ಪಾದನೆಯಲ್ಲಿ ಕುಸಿತ
- Movies
ಸುಶಾಂತ್ ಸಿಂಗ್ ಸಾವಿನ ಬಗ್ಗೆ ಕಂಗನಾ ರಣಾವತ್ ಯೂ-ಟರ್ನ್?
- Finance
HDFC ಬ್ಯಾಂಕ್ ತ್ರೈಮಾಸಿಕ ಲಾಭ 18% ಏರಿಕೆ: 8,186 ಕೋಟಿ ರೂಪಾಯಿ ಲಾಭ
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಣ್ಣ ವಯಸ್ಸಿನಲ್ಲೇ ಯಶಸ್ಸು ಪಡೆಯುವ ರಾಶಿಚಕ್ರಗಳಿವು, ನೀವು ಇದೀರಾ ಒಮ್ಮೆ ನೋಡಿ
ಇಂದಿನ ಕಾಲದಲ್ಲಿ ಎಲ್ಲರೂ ಹಣ ಸಂಪಾದಿಸಲು ಬಯಸುತ್ತಾರೆ. ಆದರೆ ಎಲ್ಲರೂ ವ್ಯವಹಾರ ಮತ್ತು ಉದ್ಯೋಗಗಳಲ್ಲಿ ಯಶಸ್ಸನ್ನು ಸಾಧಿಸುವುದಿಲ್ಲ. ಜ್ಯೋತಿಷ್ಯದ ಪ್ರಕಾರ, ಕೆಲವೊಂದು ರಾಶಿಚಕ್ರ ಚಿಹ್ನೆಗಳನ್ನು ಅದೃಷ್ಟ ರಾಶಿಗಳೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಈ ರಾಶಿಚಕ್ರದ ಜನರು ತಮ್ಮ ಕೆಲಸದ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ ಮತ್ತು ಅವರಿಗೆ ಹಣದ ಕೊರತೆಯಿಲ್ಲ ಎಂದು ಹೇಳಲಾಗುತ್ತದೆ. ಆ ಅದೃಷ್ಟ ರಾಶಿಚಕ್ರ ಚಿಹ್ನೆಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ಜೀವನದಲ್ಲಿ ಅದೃಷ್ಟವಿರುವ ರಾಶಿಚಕ್ರಗಳನ್ನು ಈ ಕೆಳಗೆ ನೀಡಲಾಗಿದೆ:

1. ವೃಷಭ:
ಈ ರಾಶಿಚಕ್ರದ ಜನರನ್ನು ಜ್ಯೋತಿಷ್ಯದಲ್ಲಿ ತುಂಬಾ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ. ಈ ರಾಶಿಚಕ್ರದ ಜನರು ತುಂಬಾ ಶ್ರಮಿಸುತ್ತಾರೆ. ಅವರಿಗೆ ಜೀವನದಲ್ಲಿ ಸೌಕರ್ಯಗಳ ಕೊರತೆಯಿರುವುದಿಲ್ಲ. ಈ ರಾಶಿಚಕ್ರದ ಜನರು ಕಷ್ಟಪಟ್ಟು ದುಡಿಯುವ ಮೂಲಕ ಉತ್ತಮ ಸ್ಥಾನಮಾನವನ್ನು ಸಾಧಿಸುತ್ತಾರೆ. ಅವರು ಚಿಕ್ಕ ವಯಸ್ಸಿನಲ್ಲಿಯೇ ಹಣ ಸಂಪಾದಿಸುತ್ತಾರೆ ಎಂದು ಹೇಳಲಾಗುತ್ತದೆ.

2. ಕರ್ಕಾಟಕ:
ಚಂದ್ರನು ಕರ್ಕ ರಾಶಿಚಕ್ರದ ಅಧಿಪತಿ. ಚಂದ್ರನು ಬಲಶಾಲಿಯಾಗಿರುವುದರಿಂದ ಅವರು ಎಲ್ಲವನ್ನೂ ಪೂರ್ಣ -
ಹೃದಯದಿಂದ ಮಾಡುತ್ತಾರೆ ಮತ್ತು ಶ್ರಮಿಸುತ್ತಾರೆ. ಅವರ ಕಠಿಣ ಪರಿಶ್ರಮವು ಯಶಸ್ಸನ್ನು ತರುತ್ತದೆ. ಜ್ಯೋತಿಷ್ಯದ ಪ್ರಕಾರ, ಈ ರಾಶಿಚಕ್ರವು ಜೀವನದಲ್ಲಿ ಎಮದಿಗೂ ಯೋಚಿಸದ ಉತ್ತಮ ಮೈಲಿಗಲ್ಲನ್ನು ಸಾಧಿಸುತ್ತಾರೆ. ಅವರು ಪೂರ್ವಜರ ಆಸ್ತಿಯ ಲಾಭವನ್ನು ಪಡೆಯುತ್ತಾರೆ. ಅವರು ಚಿಕ್ಕ ವಯಸ್ಸಿನಲ್ಲಿಯೇ ಬಡ್ತಿ ಪಡೆಯುತ್ತಾರೆ ಮತ್ತು ಹಣದ ಕೊರತೆಯಿರುವುದಿಲ್ಲ.

3. ಸಿಂಹ:
ಈ ಜನರು ಶ್ರೀಮಂತರು ಮತ್ತು ಪ್ರತಿಭಾವಂತರು. ಸೂರ್ಯನು ಈ ರಾಶಿಚಕ್ರ ಚಿಹ್ನೆಯ ಮಾಲೀಕನಾಗಿದ್ದು, ಇದರಿಂದಾಗಿ ಅವರು ಅಪಾರ ಖ್ಯಾತಿ ಮತ್ತು ಯಶಸ್ಸನ್ನು ಪಡೆಯುತ್ತಾರೆ. ಅವರಿಗೆ ಕಡಿಮೆ ನಾಯಕತ್ವ ಸಾಮರ್ಥ್ಯವಿದೆ. ಇವರು ಜೀವನದಲ್ಲಿ ತ್ವರಿತ ಪ್ರಗತಿಯನ್ನು ಸಾಧಿಸುತ್ತಾರೆ. ಜನಸಮೂಹದಲ್ಲಿ ಅವರು ತಮ್ಮದೇ ಆದ ಗುರುತನ್ನು ಮಾಡಿಕೊಳ್ಳುತ್ತಾರೆ.

4. ವೃಶ್ಚಿಕ:
ಈ ರಾಶಿಚಕ್ರದ ಜನರು ತುಂಬಾ ಶ್ರಮಿಸುತ್ತಾರೆ. ಅವರು ತಮ್ಮ ಗುರಿಯನ್ನು ಪೂರ್ಣ ವಿಶ್ವಾಸ ಮತ್ತು ಸಮರ್ಪಣೆಯೊಂದಿಗೆ ಸಾಧಿಸುತ್ತಾರೆ. ಕಠಿಣ ಪರಿಶ್ರಮದಿಮದಾಗಿ ಅವರು ಯಶಸ್ಸಿನ ಮೆಟ್ಟಿಲುಗಳನ್ನು ಬಹಳ ಬೇಗನೆ ಏರುತ್ತಾರೆ. ಅವರು ಜೀವನದಲ್ಲಿ ಎಂದಿಗೂ ಭೌತಿಕ ಸೌಕರ್ಯಗಳನ್ನು ಹೊಂದಿರುವುದಿಲ್ಲ. ಅವರು ಇದನ್ನು ಪ್ರತಿ ಹಂತದಲ್ಲೂ ತಾವಾಗಿಯೇ ಸಾಧಿಸುತ್ತಾರೆ.