For Quick Alerts
ALLOW NOTIFICATIONS  
For Daily Alerts

ಪುರುಷರೇ, ಜೀವನದಲ್ಲಿ ಯಶಸ್ಸು ಬೇಕಾದ್ರೆ ಈ ಕೌಶಲ್ಯಗಳನ್ನ ಕರಗತ ಮಾಡಿಕೊಳ್ಳಿ

|

ಪ್ರತಿಯೊಬ್ಬರಿಗೂ ಉತ್ತಮ ನಾಗರಿಕನಾಗಬೇಕು, ಆದರ್ಶ ಗುಣಗಳನ್ನು ಬೆಳೆಸಿಕೊಂಡು ನಾಲ್ಕು ಜನ ಮೆಚ್ಚುವಂತಿರಬೇಕು ಎಂಬ ಆಸೆಯಿರುತ್ತದೆ. ಇದನ್ನು ಸಾಧಿಸಲು ವಿವಿಧ ಪ್ರಯತ್ನ ಪಡುತ್ತಿರುತ್ತೇವೆ. ಇದಲ್ಲದೆ, ಜೀವನದ ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರತಿಯೊಬ್ಬ ವ್ಯಕ್ತಿಯು ಹೊಂದಿರಬೇಕಾದ ಕೆಲವು ಕೌಶಲ್ಯ ಮತ್ತು ಗುಣಗಳಿವೆ. ಈ ಕೌಶಲ್ಯಗಳು ಜನರನ್ನು ಮೆಚ್ಚಿಸಲು ಮತ್ತು ನಿಮ್ಮ ಸಂಗಾತಿಯನ್ನು ಆಕರ್ಷಿಸಲು ಸಹ ಸಹಾಯ ಮಾಡುತ್ತದೆ. ಪ್ರತಿಯೊಬ್ಬ ಮನುಷ್ಯನು ಅಳವಡಿಸಿಕೊಳ್ಳಬೇಕಾದ ಕೌಶಲ್ಯ ಗಳು ಇಲ್ಲಿದೆ:

ಪ್ರತಿಯೊಬ್ಬ ಮನುಷ್ಯನು ಅಳವಡಿಸಿಕೊಳ್ಳಬೇಕಾದ ಕೌಶಲ್ಯ ಗಳು ಇಲ್ಲಿದೆ:

ಸಂಬಂಧಗಳು:

ಸಂಬಂಧಗಳು:

ನೀವು ಯಾವುದೇ ಮಟ್ಟದ ಯಶಸ್ಸನ್ನು ಸಾಧಿಸಲು ಬಯಸಿದರೆ ಸ್ನೇಹಿತರು, ಕುಟುಂಬ ಮತ್ತು ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸುವುದು ಅವಶ್ಯಕ. ದಾರಿಯುದ್ದಕ್ಕೂ ಯಾವುದೇ ಸಹಾಯವಿಲ್ಲದೆ ಯಾರಿಗೂ ಯಾವುದೇ ಯಶಸ್ಸನ್ನು ಪಡೆಯಲು ಸಾಧ್ಯವಿಲ್ಲ. ಹೀಗಾಗಿ, ಸಂಬಂಧಗಳನ್ನು ಬೆಳೆಸಲು ಕಲಿಯಿರಿ, ಜನರೊಂದಿಗೆ ಹೇಗೆ ಸಂಪರ್ಕ ಸಾಧಿಸಬೇಕು ಮತ್ತು ಜನರಿಗೆ ಹೇಗೆ ಸೇವೆ ಸಲ್ಲಿಸಬೇಕು ಎಂಬುದನ್ನು ಕಲಿಯಿರಿ.

ಇತರರ ಮಾತುಗಳನ್ನು ಕೇಳುವುದು:

ಇತರರ ಮಾತುಗಳನ್ನು ಕೇಳುವುದು:

ಉತ್ತಮ ಕೇಳುಗನಿಗೆ ಉತ್ತಮವಾದ ಯಶಸ್ಸು ಸಿಗುತ್ತದೆ ಎಂಬ ಮಾತಿದೆ. ನಿಮ್ಮ ಕೇಳುವ ಸಾಮರ್ಥ್ಯವು ನಿಮ್ಮ ವೃತ್ತಿಜೀವನ ಮತ್ತು ಇತರರೊಂದಿಗಿನ ನಿಮ್ಮ ಸಂಬಂಧಗಳ ಗುಣಮಟ್ಟದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಹೀಗಾಗಿ, ನೀವು ಸಕ್ರಿಯವಾಗಿ ಕೇಳಲು ಕಲಿಯಬೇಕು. ಇನ್ನೊಬ್ಬ ವ್ಯಕ್ತಿಯು ಹೇಳುತ್ತಿರುವ ಮಾತುಗಳನ್ನು ಕೇಳಲು ಮತ್ತು ಅವರು ಸಂವಹನ ಮಾಡುತ್ತಿರುವ ಸಂಪೂರ್ಣ ವಿಚಾರವನ್ನು ಅರ್ಥೈಸಲು ನೀವು ಪ್ರಯತ್ನ ಮಾಡಿ, ಅದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.

ನಾಯಕತ್ವ:

ನಾಯಕತ್ವ:

ಕೆಲವು ಸಮಯದಲ್ಲಿ, ನೀವು ನಾಯಕನ ಪಾತ್ರವನ್ನು ಮಾಡಬೇಕಾಗುತ್ತದೆ. ಅದು ನಿಮ್ಮ ವ್ಯವಹಾರದಲ್ಲಿರಲಿ, ನಿಮ್ಮ ಕುಟುಂಬವಾಗಲಿ ಅಥವಾ ನಿಮ್ಮ ಸಮುದಾಯವಾಗಲಿ, ನೀವು ಆ ಜವಾಬ್ದಾರಿ ತೆಗೆದುಕೊಂಡಾಗ ಹೇಗೆ ನಿರ್ವಹಿಸುತ್ತೀರಿ ಎನ್ನುವುದರ ಮೇಲೆ ನಿಮ್ಮ ಯಶಸ್ಸು ನಿಂತಿರುತ್ತದೆ. ಆದ್ದರಿಂದ ಈ ನಾಯಕತ್ವ ಗುಣಗಳನ್ನು ಚೆನ್ನಾಗಿ ಮೈಗೂಡಿಸಿಕೊಂಡಿರಬೇಕು. ಇತರರ ಮೇಲೆ ಪ್ರಭಾವ ಬೀರುವ ಮತ್ತು ಮುನ್ನಡೆಸುವ ನಿಮ್ಮ ಸಾಮರ್ಥ್ಯವು ಸೋಲು ಮತ್ತು ಗೆಲುವಿನ ನಡುವಿನ ವ್ಯತ್ಯಾಸವನ್ನು ನಿರ್ಧರಿಸುತ್ತದೆ.

ಕರುಣೆ ಬೆಳೆಸಿಕೊಳ್ಳಿ:

ಕರುಣೆ ಬೆಳೆಸಿಕೊಳ್ಳಿ:

ಬೇರೊಬ್ಬರ ನೋವಿನ ಕುರಿತ ಕಾಳಜಿ ಮಾಡಿ. ಆ ಸ್ಥಾನದಲ್ಲಿ ನಿಮ್ಮನ್ನು ಕಲ್ಪಿಸಿಕೊಳ್ಳುವ ಮೂಲಕ, ಅವರು ತೆಗೆದುಕೊಳ್ಳುವ ನಿರ್ಧಾರಗಳು ಮತ್ತು ನಿಮ್ಮ ನಿರ್ಧಾರಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಇದು ವೈಯಕ್ತಿಕವಾಗಿ ಮಾತ್ರವಲ್ಲ, ಯಾವುದೇ ವ್ಯವಹಾರ ಪರಿಸ್ಥಿತಿಯಲ್ಲಿ ಇದು ಅವಶ್ಯಕವಾಗಿದೆ. ನೀವು ಹೆಚ್ಚು ಎಂಪತಿ ಅಥವಾ ಅನುಭೂತಿ ಹೊಂದಿದ್ದರೆ, ನಿಮ್ಮ ಜೀವನದುದ್ದಕ್ಕೂ ನೀವು ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ.

ಆರ್ಥಿಕ ಪ್ರಬುದ್ಧತೆಯನ್ನು ಸಾಧಿಸಿ:

ಆರ್ಥಿಕ ಪ್ರಬುದ್ಧತೆಯನ್ನು ಸಾಧಿಸಿ:

ಹಣಕಾಸಿನ ಪ್ರಬುದ್ಧತೆ ಎಂದರೆ ನಿಮ್ಮ ಉತ್ತಮ ಆರ್ಥಿಕ ಸ್ಥಿತಿಗೆ ಕರೆದೊಯ್ಯುವ ಹಂತವಾಗಿದೆ. ಇದು ಹೆಚ್ಚು ಆರ್ಥಿಕವಾಗಿ ಸುರಕ್ಷಿತ ಮತ್ತು ಸ್ವತಂತ್ರ ಜೀವನವನ್ನು ನಡೆಸಲು ನಿಮಗೆ ಅನುವು ಮಾಡಿಕೊಡುತ್ತದೆ. ಇದನ್ನು ಸಾಧಿಸಲು, ವೈಯಕ್ತಿಕ ಹಣಕಾಸಿನ ಬಗ್ಗೆ ನಿಮಗೆ ನೀವೇ ಅರಿತುಕೊಳ್ಳಬೇಕು.

ಅಳುವುದು ಹೇಗೆ?:

ಅಳುವುದು ಹೇಗೆ?:

ಪುರುಷರು ಅಳುವುದು ಕೆಟ್ಟದು ಅಥವಾ ತಪ್ಪು ಎಂದು ಹೇಳಲಾಗುತ್ತದೆ. ದುಃಖವನ್ನು ನಿರ್ಲಕ್ಷಿಸಲು ಮತ್ತು ಅಳು ಹೊರಗೆ ಕಾಣದೇ ಇರುವಂತೆ ನಿರ್ವಹಿಸಲು ಇದು ಅವರಿಗೆ ಕಲಿಸುತ್ತದೆ. ಆದರೆ ದುಃಖವು ಒಂದು ಜೀವನದ ಭಾಗವಾಗಿದೆ. ಇದು ನೋವು ಮತ್ತು ಒತ್ತಡವನ್ನು ನಿವಾರಿಸುತ್ತದೆ ಜೊತೆಗೆ ನಿಮ್ಮನ್ನು ಬಲವಾದ ವ್ಯಕ್ತಿಯನ್ನಾಗಿ ಮಾಡುತ್ತದೆ.

ಸಹಾಯವನ್ನು ಹೇಗೆ ಕೇಳಬೇಕೆಂದು ತಿಳಿಯಿರಿ:

ಜಾಗತಿಕವಾಗಿ, ಆತ್ಮಹತ್ಯೆಯು ಸ್ತ್ರೀಯರಿಗಿಂತ ಹೆಚ್ಚಾಗಿ ಪುರುಷರಲ್ಲಿ ಕಂಡುಬರುತ್ತದೆ. ಪಾಶ್ಚಿಮಾತ್ಯ ಜಗತ್ತಿನಲ್ಲಿ, ಗಂಡು, ಹೆಣ್ಣುಮಕ್ಕಳಗಿಂತ ಮೂರರಿಂದ ನಾಲ್ಕು ಪಟ್ಟು ಹೆಚ್ಚು ಆತ್ಮಹತ್ಯೆಯಿಂದ ಸಾಯುತ್ತಾರೆ. ಈ ಅಂತರಕ್ಕೆ ಕಾರಣವಾಗುವ ಒಂದು ಅಂಶವೆಂದರೆ, ಪುರುಷರು ತಾವು ಸಾಧ್ಯವಾದಷ್ಟು ಜವಾಬ್ದಾರಿಯನ್ನು ಹೊತ್ತುಕೊಂಡಿರುವುದು ಮತ್ತು ಎಂದಿಗೂ ಸಹಾಯವನ್ನು ಕೇಳದೇ ಇರುವುದು. ಹೀಗಾಗಿ, ಯಾವಾಗ ಮತ್ತು ಹೇಗೆ ಸಹಾಯವನ್ನು ಕೇಳಬೇಕೆಂದು ಮನುಷ್ಯ ತಿಳಿದಿರಬೇಕು.

Read more about: ಮನುಷ್ಯ insync
English summary

Skill Sets Every Man Must Master in Kannada

Here we talking about skill sets every man must master in Kannada, read on
Story first published: Wednesday, May 26, 2021, 17:07 [IST]
X
Desktop Bottom Promotion