For Quick Alerts
ALLOW NOTIFICATIONS  
For Daily Alerts

ನವರಾತ್ರಿ 2021: ನವರಾತ್ರಿಯಂದು ಈ ವಸ್ತುಗಳನ್ನು ಮನೆಗೆ ತಂದರೆ ಅದೃಷ್ಟ ಒಲಿಯುವುದು

|

ದುರ್ಗೆಯ ಒಂಬತ್ತು ರೂಪಗಳನ್ನು ಒಂಬತ್ತು ದಿನಗಳ ಕಾಲ ಪೂಜಿಸುವ ಹಬ್ಬವೇ ನವರಾತ್ರಿ. ಅಶ್ವಿನಿ ಮಾಸದ ಶುಕ್ಲ ಪಕ್ಷದ ಪ್ರತಿಪಾದದಿಂದ ಆರಂಭವಾಗುವ ಈ ನವರಾತ್ರಿಯನ್ನು ಶಾರದಿಯಾ ನವರಾತ್ರಿ ಎಂದು ಕರೆಯಲಾಗುತ್ತದೆ. ಈ ಬಾರಿ ಶಾರದಿಯಾ ನವರಾತ್ರಿ ಅಕ್ಟೋಬರ್ 07, 2021 ಗುರುವಾರದಿಂದ ಆರಂಭವಾಗಿ, ನವಮಿಯಂದು ಕನ್ಯಾ ಪೂಜೆಯೊಂದಿಗೆ ಕೊನೆಗೊಳ್ಳುತ್ತದೆ.

ದುರ್ಗಾ ಪೂಜೆಗೆ ನವರಾತ್ರಿಯ ಒಂಬತ್ತು ದಿನಗಳು ಬಹಳ ಮುಖ್ಯ ಮತ್ತು ಪವಿತ್ರವಾಗಿದ್ದು, ತಾಯಿಯ ಒಂಬತ್ತು ರೂಪಗಳನ್ನು ಪೂಜಿಸುವುದರಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಆದ್ದರಿಂದ ಈ ಅವಧಿಯಲ್ಲಿ ಮನೆಗೆ ಕಲವು ವಸ್ತುಗಳನ್ನು ತಂದರೆ, ಲಕ್ಷ್ಮಿ ದೇವಿಯು ಸಂತುಷ್ಟಳಾಗುತ್ತಾಳೆ. ಈ ಮೂಲಕ, ಸಂತೋಷ ಮತ್ತು ಸಮೃದ್ಧಿ ಮನೆಯಲ್ಲಿ ಉಳಿಯುವಂತೆ ಮಾಡುತ್ತಾಳೆ ಎಂಬ ನಂಭಿಕೆಯಿದೆ. ಹಾಗಾದ್ರೆ ನವರಾತ್ರಿಯಂದು ಯಾವ ವಸ್ತುಗಳನ್ನು ಮನೆಗೆ ತರಬೇಕು ಎಂಬುದನ್ನು ಇಲ್ಲಿ ನೋಡೋಣ.

ಮನೆಯಲ್ಲಿ ಸಂಪತ್ತು ವೃದ್ಧಿಗಾಗಿ ನವರಾತ್ರಿಯಂದು ಯಾವ ವಸ್ತುಗಳನ್ನು ಮನೆಗೆ ತರಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಲಕ್ಷ್ಮಿಯ ಚಿತ್ರ:

ಲಕ್ಷ್ಮಿಯ ಚಿತ್ರ:

ನವರಾತ್ರಿಯ ಸಮಯದಲ್ಲಿ, ಲಕ್ಷ್ಮಿಯ ಚಿತ್ರವನ್ನು ದೇವರ ಕೋಣೆಯಲ್ಲಿ ಸ್ಥಾಪಿಸಬೇಕು. ಕಮಲದ ಮೇಲೆ ಕುಳಿತು, ಕೈಯಿಂದ ಹಣದ ಮಳೆ ಸುರಿಯವಂತಹ ಲಕ್ಷ್ಮಿ ಚಿತ್ರವನ್ನು ಮನೆಯಲ್ಲಿ ಸ್ಥಾಪಿಸುವುದರಿಂದ ಅಥವಾ ಅದನ್ನು ನವರಾತ್ರಿಯಂದು ತಂದು ಪೂಜಿಸುವುದರಿಂದ, ಸಂಪತ್ತು ವೃದ್ಧಿಯಾಗುತ್ತದೆ. ಜೊತೆಗೆ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಉಳಿಸಿ, ಹಣದ ಕೊರತೆಯನ್ನು ನಿವಾರಿಸುತ್ತದೆ ಎಂಬ ನಂಬಿಕೆಯಿದೆ.

ಬೆಳ್ಳಿ ನಾಣ್ಯ:

ಬೆಳ್ಳಿ ನಾಣ್ಯ:

ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳಲು ನವರಾತ್ರಿಯ ಸಮಯದಲ್ಲಿ ನಿಮ್ಮ ಮನೆಗೆ ಬೆಳ್ಳಿಯ ನಾಣ್ಯವನ್ನು ತರುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದರ ಹೊರತಾಗಿ, ಗಣೇಶ ಮತ್ತು ಲಕ್ಷ್ಮಿಯ ಚಿತ್ರವಿರುವ ಬೆಳ್ಳಿ ನಾಣ್ಯ ತಂದರೆ, ಇನ್ನೂ ಉತ್ತಮ ಎಂಬುದನ್ನು ನೆನಪಿನಲ್ಲಿಡಿ.

ಮೇಕ್ಅಪ್ ಪರಿಕರಗಳು:

ಮೇಕ್ಅಪ್ ಪರಿಕರಗಳು:

ನವರಾತ್ರಿಯ ಸಮಯದಲ್ಲಿ, ನೀವು ನಿಮ್ಮ ಮನೆಯಲ್ಲಿ ಮೇಕಪ್ ವಸ್ತುಗಳನ್ನು ತಂದು ಪೂಜೆಯ ಸ್ಥಳದಲ್ಲಿ ಇಟ್ಟುಕೊಳ್ಳಬೇಕು. ಏಕೆಂದರೆ ಮೇಕಪ್ ವಸ್ತುಗಳು ದೇವಿಗೆ ಬಹಳ ಇಷ್ಟವಾದ ವಿಷಯವಾಗಿದೆ. ಇದನ್ನು ಮಾಡುವುದರಿಂದ ದುರ್ಗಾ ದೇವಿಯನ್ನು ಸಂತೋಷಗೊಳ್ಳುತ್ತಾಳೆ. ಆಕೆ ಸಂತಸಗೊಂಡರೆ, ನಿಮ್ಮ ಮನೆಯಲ್ಲಿ ಸಮೃದ್ಧಿ ಮತ್ತು ಅದೃಷ್ಟ ಉಳಿಯುತ್ತದೆ.

ತುಳಸಿ ಗಿಡ:

ತುಳಸಿ ಗಿಡ:

ಅಂದಹಾಗೆ, ಸನಾತನ ಧರ್ಮ ಅಥವಾ ಹಿಂದೂ ಧರ್ಮವನ್ನು ನಂಬುವ ಬಹುತೇಕ ಮನೆಗಳಲ್ಲಿ ತುಳಸಿ ಗಿಡವಿರುತ್ತದೆ. ನಿಮ್ಮ ಮನೆಯಲ್ಲಿ ಅದು ಇಲ್ಲದಿದ್ದರೆ, ನವರಾತ್ರಿಯ ಸಮಯದಲ್ಲಿ ನಿಮ್ಮ ಮನೆಗೆ ತುಳಸಿಯನ್ನು ತಂದು ಅದನ್ನು ನಿಯಮಿತವಾಗಿ ನೋಡಿಕೊಳ್ಳಿ. ಪ್ರತಿದಿನ ತುಳಸಿಗೆ ದೀಪ ಬೆಳಗಿಸಿ. ಇದು ಲಕ್ಷ್ಮಿ ದೇವಿಯನ್ನು ಸಂತೋಷಪಡಿಸುವುದರಿಂದ ನಿಮ್ಮ ಮನೆಯಲ್ಲಿ ಸಮೃದ್ಧಿ ಉಳಿಯುತ್ತದೆ.

English summary

Shardiya Navratri 2021 : Bringing These Things to Home During Navratri to avoid Shortage Of Money

Here we talking about Shardiya Navratri 2021 : Bringing These Things to Home During Navratri to avoid Shortage Of Money, read on
Story first published: Tuesday, October 5, 2021, 15:18 [IST]
X
Desktop Bottom Promotion