For Quick Alerts
ALLOW NOTIFICATIONS  
For Daily Alerts

ರಂಜಾನ್ 2021:ಉಪವಾಸದ ಸಂದರ್ಭದಲ್ಲಿ ನಿರ್ಜಲೀಕರಣದಿಂದ ದೂರವಿರಲು ತಪ್ಪಿಸಬೇಕಾದ ಆಹಾರಗಳು

|

ಪ್ರಪಂಚದಾದ್ಯಂತ ಮುಸ್ಲಿಂ ಸಮುದಾಯದಲ್ಲಿ ವರ್ಷದ ಪವಿತ್ರ ತಿಂಗಳು ಎಂದು ಪರಿಗಣಿಸಲ್ಪಟ್ಟ ರಂಜಾನ್ ತಿಂಗಳು ಆರಂಭವಾಗಿದೆ. ಈ ವರ್ಷ ಈ ತಿಂಗಳು ಬೇಸಿಗೆಯಲ್ಲಿ ಬಂದಿರುವುದು ಎಲ್ಲರಿಗೂ ಗೊತ್ತೇ ಇದೆ. ರಂಜಾನ್ ಸಮಯದಲ್ಲಿ, ಮುಸ್ಲಿಮರು ಮುಂಜಾನೆಯಿಂದ ಮುಸ್ಸಂಜೆಯವರೆಗೆ ಇಡೀ ತಿಂಗಳು ಉಪವಾಸ ಮಾಡುತ್ತಾರೆ ಮತ್ತು ಸರ್ವಶಕ್ತನಾದ ಅಲ್ಲಾಹುವನ್ನು ಪ್ರಾರ್ಥಿಸುತ್ತಾರೆ ಮತ್ತು ಬಡವರಿಗೆ ಭಿಕ್ಷೆ ನೀಡುತ್ತಾರೆ.

ಬೇಸಿಗೆಯಲ್ಲಿ ಉಪವಾಸ ಮಾಡುವುದು ಕಷ್ಟದ ಕೆಲಸ. ತಾಪಮಾನದಿಂದಾಗಿ ನಿರ್ಜಲೀಕರಣ ಮತ್ತು ದಣಿವು ಆಗಬಹುದು. ಆದರೆ ಚಿಂತಿಸಬೇಡಿ, ಉತ್ತಮ ಉಪವಾಸದ ಅನುಭವಕ್ಕಾಗಿ ರಂಜಾನ್ ಸಮಯದಲ್ಲಿ ತಪ್ಪಿಸಬೇಕಾದ ಕೆಲವೊಂದು ಆಹಾರಗಳನ್ನು ಇಲ್ಲಿ ನೀಡಿದ್ದೇವೆ.

ರಂಜಾನ್ ತಿಂಗಳಲ್ಲಿ ನಿರ್ಜಲೀಕರಣದಿಂದ ದೂರವಿರಲು ತಪ್ಪಿಸಬೇಕಾದ ಆಹಾರಗಳು ಇಲ್ಲಿವೆ:

ಚಹಾ ಮತ್ತು ಕಾಫಿ:

ಚಹಾ ಮತ್ತು ಕಾಫಿ:

ಜನರಲ್ಲಿ ಹೆಚ್ಚು ಜನಪ್ರಿಯವಾಗಿರುವ ಈ ಎರಡೂ ಪಾನೀಯಗಳು ಕೆಫೀನ್ ಅನ್ನು ಹೊಂದಿರುತ್ತವೆ, ಇದು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ನಿಮಗೆ ಚಹಾ ಮತ್ತು ಕಾಫಿಯನ್ನು ಸಂಪೂರ್ಣವಾಗಿ ಬಿಟ್ಟುಕೊಡಲು ಸಾಧ್ಯವಾಗದಿದ್ದರೆ ನೀವು ಸೇವಿಸುವ ಪ್ರಮಾಣವನ್ನು ಕಡಿಮೆ ಮಾಡಲು ಪ್ರಯತ್ನಿಸಿ.

ಉಪ್ಪುಯುಕ್ತ ಆಹಾರ ಪದಾರ್ಥಗಳು:

ಉಪ್ಪುಯುಕ್ತ ಆಹಾರ ಪದಾರ್ಥಗಳು:

ಉಪ್ಪುಸಹಿತ ಆಹಾರ ಪದಾರ್ಥಗಳಾದ ಸಮೋಸಾ ಮತ್ತು ಪಕೋಡಗಳು ಇಫ್ತಾರ್ ನ ದೊಡ್ಡ ಭಾಗವಾಗಿದ್ದರೂ, ಅವು ಆರೋಗ್ಯಕರ ಆಹಾರ ಆಯ್ಕೆಯಾಗಿಲ್ಲ. ಉಪ್ಪು, ನೀರಿನ ನಷ್ಟವನ್ನು ಹೆಚ್ಚಿಸುವುದರಿಂದ ಈ ಆಹಾರವು ನಿಮಗೆ ಹೆಚ್ಚು ಬಾಯಾರಿಕೆಯನ್ನುಂಟು ಮಾಡುತ್ತದೆ. ಬದಲಿಗೆ ಕಲ್ಲಂಗಡಿ, ಸೌತೆಕಾಯಿ, ಟೊಮ್ಯಾಟೊ ಮುಂತಾದ ಹೆಚ್ಚಿನ ನೀರಿನ ಅಂಶವಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಆರಿಸಿಕೊಳ್ಳಿ.

ಅಧಿಕ-ಸಕ್ಕರೆಯುಳ್ಳ ಆಹಾರ:

ಅಧಿಕ-ಸಕ್ಕರೆಯುಳ್ಳ ಆಹಾರ:

ಜಲೇಬಿಯತಹ ಸಂಸ್ಕರಿಸಿದ ಸಕ್ಕರೆಯಲ್ಲಿನ ಆಹಾರವು ನಿಮ್ಮ ತೂಕವನ್ನು ಹೆಚ್ಚಿಸುತ್ತದೆ. ಸಕ್ಕರೆ ಆಹಾರವು ಶಕ್ತಿಯ ಮಟ್ಟದಲ್ಲಿ ತ್ವರಿತ ಏರಿಕೆಯನ್ನು ನೀಡುತ್ತದೆ ಮತ್ತು ನಂತರ ಹಠಾತ್ ಕರಗಿ ನಿಮಗೆ ಹಸಿವನ್ನುಂಟು ಮಾಡುತ್ತದೆ. ಓಟ್ಸ್, ರಾಗಿ, ಮೊಟ್ಟೆಗಳಂತಹ ಕಡಿಮೆ ಗ್ಲೈಸೆಮಿಕ್ ಆಹಾರಗಳನ್ನು (ಜೀರ್ಣವಾಗಲು ಸಮಯ ತೆಗೆದುಕೊಳ್ಳುವ ಆಹಾರಗಳು, ಆದ್ದರಿಂದ ನೀವು ದೀರ್ಘಕಾಲ ಪೂರ್ಣವಾಗಿರುತ್ತೀರಿ) ಆಯ್ಕೆಮಾಡಿ. ನೀವು ಸಿಹಿತಿಂಡಿಗಳನ್ನು ಇಷ್ಟಪಡುತ್ತಿದ್ದರೆ, ಖರ್ಜೂರ ಮತ್ತು ಹಣ್ಣುಗಳು ಪೋಷಕಾಂಶಗಳಿಂದ ಸಮೃದ್ಧವಾಗಿರುವುದರಿಂದ ಅವುಗಳನ್ನು ಸೇವಿಸಬಹುದು.

ಕೊನೆಯಲ್ಲಿ ಹೆಚ್ಚು ನೀರು ಕುಡಿಯುವುದನ್ನು ತಪ್ಪಿಸಿ:

ಕೊನೆಯಲ್ಲಿ ಹೆಚ್ಚು ನೀರು ಕುಡಿಯುವುದನ್ನು ತಪ್ಪಿಸಿ:

ಅನೇಕ ಜನರು ತಮ್ಮ ಉಪವಾಸವನ್ನು ಹೆಚ್ಚು ನೀರು ಕುಡಿಯುವುದರ ಮೂಲಕ ಕೊನೆಗೊಳಿಸುತ್ತಾರೆ. ಇದು ಸರಿಯಲ್ಲ. ಹೆಚ್ಚು ನೀರು ಕುಡಿಯುವುದರಿಂದ ನಿಮ್ಮ ಜೀರ್ಣಕಾರಿ ರಸವನ್ನು ಹೊಟ್ಟೆಯಲ್ಲಿ ದುರ್ಬಲಗೊಳಿಸಬಹುದು ಮತ್ತು ಹೆಚ್ಚಿನ ನೀರಿನ ಸೇವನೆಯಿಂದಾಗಿ ನೀವು ಹೊಟ್ಟೆ ತುಂಬಿದ ಭಾವನೆ ಪಡೆಯುತ್ತೀರಿ. ಆಗ ನೀವು ಪೌಷ್ಠಿಕಾಂಶಯುಕ್ತ ಸಮೃದ್ಧ ಆಹಾರವನ್ನು ಸೇವಿಸಲು ಸಾಧ್ಯವಾಗದು. ಬದಲಿಗೆ ಸಣ್ಣ ಮಧ್ಯಂತರದಲ್ಲಿ ನೀರು ಕುಡಿಯಿರಿ.

English summary

Ramadan 2021: Foods To Avoid Dehydration While Fasting

Here we told about Ramadan 2021: Foods to avoid dehydration while fasting, read on
X
Desktop Bottom Promotion