For Quick Alerts
ALLOW NOTIFICATIONS  
For Daily Alerts

ರಂಜಾನ್ ವಿಶೇಷ: ಎಂದಿಗೂ ಮನಸ್ಸು ಭಕ್ತಿ-ಭಾವದಿಂದ ಕೂಡಿರಲಿ

By Manu
|

ಚಂದ್ರನನ್ನು ಆಧರಿಸದ ಮುಸ್ಲಿಂ ಕ್ಯಾಲೆಂಡರ್‌ನ ಒಂಬತ್ತನೆಯ ತಿಂಗಳಾದ ರಂಜಾನ್ (ರಂಜಾನ್ ಎನ್ನುವುದು ವಾಡಿಕೆಯಾದರೂ ರಮಧಾನ್ ಎಂಬುದೇ ಸರಿಯಾದ ಉಚ್ಛಾರಣೆಯಾಗಿದೆ) ಮುಸ್ಲಿಮರ ಪಾಲಿಗೆ ಅತಿ ಪವಿತ್ರವಾದ ಮಾಸವಾಗಿದ್ದು ಈ ಮಾಸದಲ್ಲಿ ಹಲವು ಕಟ್ಟುಪಾಡುಗಳನ್ನು ಆಚರಿಸುವುದು ಅನಿವಾರ್ಯವಾಗಿದೆ.

ಸೂರ್ಯೋದಯಕ್ಕೂ ಸುಮಾರು ಒಂದು ಗಂಟೆ ಮೊದಲಿನಿಂದ ಹಿಡಿದು ಸೂರ್ಯಾಸ್ತದ ವರೆಗೆ ಇಡಿಯ ತಿಂಗಳು ಮಾನಸಿಕ ಮತ್ತು ದೈಹಿಹ ಇಚ್ಛೆಗಳನ್ನು ಹತ್ತಿಕ್ಕುವುದೇ ಇದರ ಪ್ರಮುಖ ಅಂಗವಾಗಿದ್ದು ಆಹಾರ ಸೇವನೆಯಿಂದ ದೂರವಿರುವುದೂ ಇದರಲ್ಲಿ ಒಂದು ಅಂಗವಾಗಿದೆ. ಅದರಲ್ಲೂ ಇನ್ನೂ ಪ್ರಮುಖವಾದ ವಿಚಾರವೆಂದರೆ, ಇಲ್ಲಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ದೇಹದ ಹಸಿವು, ಕಾಮನೆ, ಕೆಟ್ಟದನ್ನು ಆಚರಿಸುವ ಬಯಕೆಯನ್ನೇ ಮನಸ್ಸಿನಲ್ಲಿ ಮೊಳೆಯದಂತೆ ಮಾಡಿ ಶುದ್ಧೀಕರಿಸುವುದೇ ಪ್ರಮುಖ ಉದ್ದೇಶ.

ರಂಜಾನ್ ಪಥ್ಯ- ಕಷ್ಟವಾದರೂ, ಇಷ್ಟಪಟ್ಟು ಅನುಸರಿಸಿ

ಸೂರ್ಯೋದಯಕ್ಕೂ ಸುಮಾರು ಒಂದೂವರೆ ಗಂಟೆ ಮೊದಲೇ ಊಟ ಮಾಡಿ ಇಂದಿನ ದಿನ ನಾನು ಉಪವಾಸವಿರುತ್ತೇನೆ ಎಂದು ಅಲ್ಲಾನಲ್ಲಿ ಮನವಿ ಮಾಡಿಕೊಂಡು ಮುಂದಿನ ಹದಿನಾಲ್ಕು ಗಂಟೆಗಳ ಕಾಲ ಮಾನಸಿಕವಾಗಿ (ಬರೆಯ ಹಸಿವು ಹತ್ತಿಕ್ಕಿಕೊಂಡು ಮಾತ್ರ ಅಲ್ಲ) ಯಾವುದೇ ಪ್ರಲೋಭನೆಗೆ ಒಳಗಾಗದೇ ಸೂರ್ಯಾಸ್ತದವರೆಗೆ ಕುರಾನ್ ಪಠಣ, ಪ್ರಾರ್ಥನೆ, ದಾನ ಮತ್ತಿತರ ಕೆಲಸಗಳನ್ನು ನಮ್ಮ ನಿತ್ಯದ ಕೆಲಸಗಳೊಂದಿಗೆ ಆಚರಿಸುವುದೇ ನಿಜವಾದ ಉಪವಾಸವಾಗಿದೆ... ಇಷ್ಟು ಮಾತ್ರವಲ್ಲಿ ರಂಜಾನ್ ತಿಂಗಳಲ್ಲಿ ಕಡ್ಡಾಯವಾಗಿ ಪಾಲಿಸಬೇಕಾದ ಇನ್ನೂ ಹಲವು ಕಟ್ಟುಪಾಡುಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ ಮುಂದೆ ಓದಿ....

ಮೈಮಾಟ ತೋರಿಸುವ ಉಡುಗೆಗೆ ನಿಷೇಧ

ಮೈಮಾಟ ತೋರಿಸುವ ಉಡುಗೆಗೆ ನಿಷೇಧ

ಇಸ್ಲಾಂ ಎಂದಿಗೂ ಮೈಮಾಟವನ್ನು ಪ್ರಚುರಪಡಿಸುವ ಉಡುಗೆಗಳ ಉಪಯೋಗವನ್ನು ನಿಷೇಧಿಸಿದೆ. ಮನೆಯಿಂದ ಹೊರಗಿದ್ದಾಗ ಇತರರು ಈ ಮೈಮಾಟವನ್ನು ತಪ್ಪು ದೃಷ್ಟಿಯಿಂದ ನೋಡಬಹುದಾದ ಸಾಧ್ಯತೆಯನ್ನು ಪರಿಗಣಿಸಿ ಈ ಕಟ್ಟುಪಾಡು ವಿಧಿಸಲಾಗಿದೆ. ಇದು ಇತರರ ಉಪವಾಸವನ್ನೂ ಭಂಗಗೊಳಿಸುವ ಸಾಧ್ಯತೆ ಇರುವುದರಿಂದ ಸಾಧ್ಯವಾದಷ್ಟು ಮೈಮಾಟ ತೋರದ, ಅಪಾರದರ್ಶಕ, ಇಡಿಯ ಮೈಯನ್ನು ಮುಚ್ಚುವ ಉಡುಗೆಗಳನ್ನೇ ತೊಡಿರಿ. ಇರು ಪುರುಷರಿಗೂ, ಮಹಿಳೆಯರಿಗೂ ಸಮಾನವಾಗಿ ಅನ್ವಯಿಸುತ್ತದೆ.

ಮಹಿಳೆಯರನ್ನು ದಿಟ್ಟಿಸಿ ನೋಡಬಾರದು!

ಮಹಿಳೆಯರನ್ನು ದಿಟ್ಟಿಸಿ ನೋಡಬಾರದು!

ನಿಸರ್ಗ ಪ್ರತಿ ಜೀವಿಗೂ ತನ್ನ ವಿರುದ್ಧ ಲಿಂಗದ ಕುರಿತು ಆಕರ್ಷಣೆಯನ್ನು ಒದಗಿಸಿದೆ. ಆದರೆ ಈ ಆಕರ್ಷಣೆ ನಿಮ್ಮ ಸಂಗಾತಿಗೆ ಮೀಸಲಾಗಿರಬೇಕು ಎಂಬುದೇ ಇಸ್ಲಾಂ ಬೋಧಿಸುವ ತತ್ವ. ಪರಸ್ತ್ರಿ ಅಥವಾ ಪರಪುರುಷನನ್ನು ದಿಟ್ಟಿಸಿ ನೋಡಿದಾಗ ಮನಸ್ಸಿನಲ್ಲಿ ಹಲವು ಪ್ರಲೋಭನೆಗಳು ಹುಟ್ಟುವುದು ಸಹಜ ಆದರೆ ರಂಜಾನ್ ತಿಂಗಳಲ್ಲಿ ಈ ಪ್ರಲೋಭನೆಗಳು ಹುಟ್ಟುವುದನ್ನು ತಡೆಯುವುದೇ ಪ್ರಮುಖ ಕಟ್ಟುಪಾಡಾಗಿದೆ. ಆ ಪ್ರಕಾರ ಪರಸ್ತ್ರೀ ಅಥವಾ ಪರಪುರುಷನನ್ನು ನೇರವಾಗಿ ನಿಟ್ಟಿಸಿ ನೋಡುವುದು ತರವಲ್ಲ. ಇಸ್ಲಾಮಿಕ್ ಪಂಡಿತರ ಪ್ರಕಾರ ಅನಿವಾರ್ಯವಾದ ಸಂದರ್ಭದಲ್ಲಿ ಕಣ್ಣುಗಳನ್ನು ಬಿಟ್ಟು ಕೊಂಚ ಬದಿಗೆ ನೋಡಿ ಮಾತನಾಡಬಹುದು.

 ರಂಜಾನ್ ಸಮಯದಲ್ಲಿ ಜಗಳ ಮಾಡಲೇಬಾರದು!

ರಂಜಾನ್ ಸಮಯದಲ್ಲಿ ಜಗಳ ಮಾಡಲೇಬಾರದು!

ಇಸ್ಲಾಂ ಜಗಳ, ಕದನ ಮೊದಲಾದವು ಪ್ರಾರಂಭವಾಗುವ ಈ ಮೂಲ ಕಾರಣಕ್ಕೇ ತಡೆಯೊಡ್ಡಲು ನಿರ್ದೇಶಿಸುತ್ತದೆ. ವಿಶೇಷವಾಗಿ ರಮಧಾನ್ ತಿಂಗಳಲ್ಲಿ ಜಗಳಕ್ಕೆ ಕಾರಣವಾಗುವ ಯಾವುದೇ ಕಾರಣಗಳಿದ್ದರೂ, ತಪ್ಪು ನಿಮ್ಮದಲ್ಲದೇ ಇದ್ದರೂ ಸರ್ವಥಾ ಸಿಟ್ಟಿಗೇಳದೇ ಕ್ಷಮೆ ಯಾಚಿಸಿ ಬೈಗುಳ ಅಥವಾ ಜಗಳಕ್ಕೆ ಮುಂದುವರೆಯದಂತೆ ತಡೆಯಲು ಕಟ್ಟುಪಾಡು ವಿಧಿಸಲಾಗಿದೆ. ಇಂತಹ ಸಂದರ್ಭದಲ್ಲಿ ' ಕ್ಷಮಿಸಿ, ನಾನು ಉಪವಾಸದಲ್ಲಿದ್ದೇನೆ' ಎಂದು ನಯವಾಗಿ ಹೇಳಿ ಈ ಜಗಳ ಮುಂದುವರೆಯದಂತೆ ತಡೆಯಿರಿ. ಮುಂದಿನವ ಸಿಟ್ಟಾಗಿದ್ದರೂ ನೀವು ತಾಳ್ಮೆ ವಹಿಸಿ ಮೂರು ಬಾರಿ ಉಪವಾಸದಲ್ಲಿದ್ದೇನೆ ಎಂದು ಉಚ್ಛರಿಸಿ.

ಜೋರಾಗಿ ನಗಬಾರದು!

ಜೋರಾಗಿ ನಗಬಾರದು!

ರಮಧಾನ್ ತಿಂಗಳಲ್ಲಿ ಜೋರಾಗಿ ನಗುವುದನ್ನೂ ನಿಷೇಧಿಸಲಾಗಿದೆ. ಏಕೆಂದರೆ ಜೋರಾಗಿ ನಗುವ ಸಂದರ್ಭ ಇನ್ನೊಬ್ಬರನ್ನು ಹೀಯಾಳಿಸಲೂ ಬಳಕೆಯಾಗುವುದರಿಂದ ಜೋರಾದ ನಗುವಿನ ಕಾರಣ ಅನೈಚ್ಛಿಕವಾಗಿ ಇನ್ನೊಬ್ಬರಿಗೆ ನೋವುಂಟುಮಾಡಬಹುದು. ಪ್ರವಾದಿ ಮೊಹಮ್ಮದರು ರಮಧಾನ್ ತಿಂಗಳಲ್ಲಿ ಕೇವಲ ಮಂದಹಾಸ ಮತ್ತು ಮುಗುಳ್ನಗೆ ಬೀರುತ್ತಿದ್ದರೇ ಹೊರತು ಎಂದೂ ಗಹಗಹಿಸಿ ನಗುತ್ತಿರಲಿಲ್ಲ. ನಗುವ ಸಂದರ್ಭ ಬಂದಾಗ ಚಿಕ್ಕ ಧ್ವನಿಯಲ್ಲಿ ಅಥವಾ ಮುಗುಳ್ನಗೆಯ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುವುದು ಉತ್ತಮ.

ಸುಳ್ಳು ಹೇಳಬೇಡಿ, ಪರನಿಂದನೆ ಮಾಡಬೇಡಿ

ಸುಳ್ಳು ಹೇಳಬೇಡಿ, ಪರನಿಂದನೆ ಮಾಡಬೇಡಿ

ರಂಜಾನ್ ಉಪವಾಸದ ಅವಧಿಯಲ್ಲಿ ಸುಳ್ಳು ಹೇಳುವುದು, ಚಾಡಿ ಚುಚ್ಚುವುದು, ಪರನಿಂದನೆ, ಇತರರ ಬಗ್ಗೆ ಅವರ ಹಿಂದಿನಿಂದ ಮಾತನಾಡುವುದು, ತಪ್ಪು ವಿಷಯದ ಬಗ್ಗೆ ಚರ್ಚಿಸುವುದು, ಕಳ್ಳತನ (ಕಳ್ಳತನದ ಬಗ್ಗೆ ಯೋಚಿಸುವುದು), ಮೋಸ ಮಾಡುವುದು (ಮೋಸ ಮಾಡುವ ಬಗ್ಗೆ ಯೋಚಿಸುವುದು) ಮೊದಲಾದ ಕೆಟ್ಟಕಾರ್ಯಗಳಿಂದ ದೂರವಿರುವಂತೆ ಪ್ರವಾದಿ ಮೊಹಮ್ಮದ್ (ಸ) ರವರು ಸ್ಪಷ್ಟವಾಗಿ ತಿಳಿಸಿದ್ದಾರೆ (ಅನುವಾದ:ಬುಖಾರಿ). ಈ ಪರಿಯನ್ನು ಅನುಸರಿಸಿದವರಿಗೆ ಅಲ್ಲಾಹನು ಅನ್ನ ಮತ್ತು ನೀರಿನಿಂದ ದೂರವಿಡುತ್ತಾನೆ ಎಂದೂ ಪ್ರವಾದಿಗಳು ತಿಳಿಸಿದ್ದಾರೆ.

ಪೋಲಿ ಮಾತುಗಳನ್ನು ಆಡದಿರಿ

ಪೋಲಿ ಮಾತುಗಳನ್ನು ಆಡದಿರಿ

ಬೈಗುಳ, ಪೋಲಿ ಅರ್ಥದ ಪದಗಳನ್ನು ಬಳಸುವುದು, ಸಿಟ್ಟಿನಿಂದ ಮಾತನಾಡುವುದು, ದರ್ಪದ ಪದಗಳು ಅಥವಾ ಒಂದು ರೀತಿಯ ಯಜಮಾನಿಕೆಯನ್ನು ಹೇರುವ ಯಾವುದೇ ಪದವನ್ನು ಬಳಸುವುದನ್ನು ನಿಷೇಧಿಸಲಾಗಿದೆ. ನಮ್ಮ ಮಾತುಗಳು ಸಾಧ್ಯವಾದಷ್ಟು ಸೌಮ್ಯವಾಗಿದ್ದು ಎದುರಿನವರು ಗೌರವರೂಪದಲ್ಲಿ ಪಡೆಯುವಂತಿರಬೇಕು. ಈ ಎಲ್ಲಾ ಕಟ್ಟುಪಾಡುಗಳು ರಂಜಾನ್ ಮಾಸಕ್ಕೆ ಸೀಮಿತವಾಗಿಲ್ಲ. ಈ ತಿಂಗಳಲ್ಲಿ ಲಭ್ಯವಾದ ತರಬೇತಿಯನ್ನು ವರ್ಷದ ಎಲ್ಲಾ ತಿಂಗಳುಗಳಿಗೆ ಅನ್ವಯಿಸಿ ಉತ್ತಮ ಜೀವನ ನಡೆಸುವಂತಾಗಬೇಕೆಂಬುದೇ ರಮಧಾನ್ ಮಾಸದ ತತ್ವವಾಗಿದೆ.

ಲೈಂಗಿಕ ಕ್ರಿಯೆ ಮಾಡಬಾರದು

ಲೈಂಗಿಕ ಕ್ರಿಯೆ ಮಾಡಬಾರದು

ರಂಜಾನ್ ಅವಧಿಯಲ್ಲಿ ಯಾವುದೇ ಲೈಂಗಿಕ ಬಯಕೆ, ಲೈಂಗಿಕ ಚಟುವಟಿಕೆ ಅಥವಾ ದೈಹಿಕ ಸಂಪರ್ಕವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

English summary

Ramzan festival: Ramadan rules and regulations....

There are many spiritual benefits too. You soul is purified and your mind is cleansed from all evil thoughts. You come close to Allah and forget the evil deeds. Ramadan is a time of blessings and all devils are tied by the almighty Allah so that they will not interfere with the Ramadan. Here are few important things that you have to avoid during Ramadan.
Story first published: Sunday, June 25, 2017, 16:42 [IST]
X
Desktop Bottom Promotion