Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಂಜಾನ್ ಸ್ಪೆಷಲ್: ಚುಮುಚುಮು ಚಳಿಗೆ, ಬಿಸಿಬಿಸಿ 'ಬ್ರೆಡ್ ವಡೆ'
ಹೇಳಿ ಕೇಳಿ ಇದು ರಂಜಾನ್ ಮಾಸವಾಗಿದೆ. ದಿನವಿಡೀ ಉಪವಾಸವಿದ್ದುಕೊಂಡು ಸಂಜೆ ನಡೆಯುವ ಇಫ್ತಾರ್‌ನಲ್ಲಿ ಅಲ್ಲಾಹುವನ್ನು ಪ್ರಾರ್ಥಿಸಿ ಆಹಾರ ಸೇವಿಸುವ ಕ್ರಮ ಒಂದು ತಿಂಗಳ ಕಾಲ ನಡೆಯಲಿದೆ. ಮುಸ್ಲಿಂ ಬಾಂಧವರಿಗೆ ಇದು ಬರಿಯ ಉಪವಾಸ ಮಾತ್ರವಾಗಿರದೇ ಅಲ್ಲಾಹುವನ್ನು ಸ್ತುತಿಸಿಕೊಂಡು ಮಹಮ್ಮದ್ ಪೈಗಂಬರರು ತಿಳಿಸಿದ ಧರ್ಮ ಮಾರ್ಗದಲ್ಲಿ ನಡೆದು ಮೋಕ್ಷವನ್ನು ಕಂಡುಕೊಳ್ಳುವ ದಾರಿಗೆ ಸೋಪಾನವಾಗಿದೆ.
ಹಿರಿಯರಿ ಕಿರಿಯರೆನ್ನದೆ ಮನೆಯ ಪ್ರತಿಯೊಬ್ಬ ಸದಸ್ಯರೂ ರಂಜಾನ್ ಉಪವಾಸವನ್ನು ಕೈಗೊಳ್ಳುತ್ತಾರೆ. ಅದಾಗ್ಯೂ ವೃದ್ಧರು, ಗರ್ಭಿಣಿಯರು, ಅಶಕ್ತರು, ರೋಗಿಗಳಿಗೆ ಈ ಉಪವಾಸವನ್ನು ಕೈಗೊಳ್ಳದಿರಲು ವಿನಾಯಿತಿ ಇದೆ. ಅದಾಗ್ಯೂ ಹೆಚ್ಚಿನವರು ದೇವರ ಕಾರ್ಯವೆಂದು ತಮಗೆ ಶಕ್ತಿ ಇರುವಷ್ಟು ಸಮಯ ಉಪವಾಸವನ್ನು ಕೈಗೊಳ್ಳುತ್ತಾರೆ.
ದಿನಪೂರ್ತಿ ಉಪವಾಸವಿರುವುದು ಕಡ್ಡಾಯವಾಗಿರುವುದರಿಂದ ಹೆಚ್ಚು ಪ್ರೋಟೀನ್ ನ್ಯೂಟ್ರೀನ್ ಇರುವ ಆಹಾರಗಳನ್ನು ಸೇವಿಸಬೇಕಾಗುತ್ತದೆ. ಆದಷ್ಟು ಹಣ್ಣು ತರಕಾರಿಗಳನ್ನು ಈ ಸಂದರ್ಭದಲ್ಲಿ ಸೇವಿಸುವುದರಿಂದ ಹೊಟ್ಟೆಯುಬ್ಬರ, ವಾಂತಿ ಮೊದಲಾದ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದು.
ಆದಷ್ಟು ಹೆಚ್ಚು ಕರಿದ ಪದಾರ್ಥಗಳನ್ನು ಸೇವಿಸಲು ಹೋಗಬೇಡಿ. ಹಣ್ಣಿನ ರಸವನ್ನು ಆದಷ್ಟು ಸೇವಿಸಿ. ಇಂದಿನ ಲೇಖನದಲ್ಲಿ ನಿಮ್ಮ ಉಪವಾಸಕ್ಕೆ ಹೆಚ್ಚುವರಿ ಶಕ್ತಿಯನ್ನು ನೀಡುವಂತಹ ತರಕಾರಿ ರೆಸಿಪಿಯೊಂದಿಗೆ ನಾವು ಬಂದಿರುವೆವು. ತರಕಾರಿ ಮಿಶ್ರಿತ ಬ್ರೆಡ್ ವಡಾ ಇದಾಗಿರುವುದರಿಂದ ನಿಮಗೆ ಪ್ರೋಟೀನ್ ಮತ್ತು ನ್ಯೂಟ್ರೀನ್ ಅನ್ನು ಯಥೇಚ್ಛವಾಗಿ ಪಡೆದುಕೊಳ್ಳಬಹುದಾಗಿದೆ. ಈ ರೆಸಿಪಿಯನ್ನು ನಿಮಗೆ ಆದಷ್ಟು ಸುಲಭವಾಗಿ ಹೆಚ್ಚು ಶ್ರಮಪಡದೆ ತಯಾರಿಸಬಹುದಾಗಿದೆ. ಇದರಲ್ಲಿ ಬಳಸಬೇಕಾಗಿರುವ ಸಾಮಾಗ್ರಿಗಳು ಕೂಡ ಸರಳವಾಗಿದ್ದು ಸಂಜೆಯ ನಿಮ್ಮ ಇಫ್ತಾರ್ ಕೂಟವನ್ನು ರಂಗೇರಿಸಲು ಇದು ಸಾಕು.

ಬೇಕಾಗುವ ಸಾಮಾಗ್ರಿಗಳು:
*ಬ್ರೆಡ್ ಸ್ಲೈಸ್ - 3
*ತುರಿದ ಕ್ಯಾರೆಟ್ - 1/2 ಕಪ್
*ಬೇಯಿಸಿದ ಆಲೂಗಡ್ಡೆಯನ್ನು ಹಿಸುಕೊಂಡಿದ್ದು - 1/2 ಕಪ್
*ಸಣ್ಣದಾಗಿ ಕತ್ತರಿಸಿದ ಈರುಳ್ಳಿ - 1 ಕಪ್
*ಹಸಿ ಮೆಣಸು - 2 ಚಮಚ
*ಕತ್ತರಿಸಿದ ಪುದೀನಾ - ಒಂದು ಮುಷ್ಟಿಯಷ್ಟು
*ಕೊತ್ತಂಬರಿ ಸೊಪ್ಪು - ಮುಷ್ಟಿಯಷ್ಟು
*ಗರಮ್ ಮಸಾಲಾ - 1 ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
*ಜೀರಿಗೆ ಹುಡಿ - 1/2 ಚಮಚ
*ಅಕ್ಕಿ ಹುಡಿ - 2 ಚಮಚ
*ನೀರು - 1 ಕಪ್
*ಎಣ್ಣೆ - ಕರಿಯಲು
ಮಾಡುವ ವಿಧಾನ
1. ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಬ್ರೆಡ್ ತುಂಡುಗಳನ್ನು ಕೈಯಲ್ಲಿ ತುಂಡು ಮಾಡಿಕೊಂಡು ಪಾತ್ರೆಗೆ ಹಾಕಿ.
2. ತುರಿದ ಕ್ಯಾರೆಟ್, ಹಿಸುಕಿದ ಆಲೂಗಡ್ಡೆ, ಈರುಳ್ಳಿ ಮತ್ತು ಹಸಿಮೆಣಸನ್ನು ಸೇರಿಸಿ.
3. ನಿಮ್ಮ ಕೈಗಳಿಂದ ಸಾಮಾಗ್ರಿಗಳನ್ನು ಕಲಸಿಕೊಳ್ಳಿ/
4. ಈಗ ಗರಮ್ ಮಸಾಲೆಯನ್ನು ಸೇರಿಸಿ. ಜೀರಿಗೆ ಹುಡಿಯನ್ನು ಸೇರಿಸಿ.
5. ನಿಮ್ಮ ರುಚಿಗೆ ಎಷ್ಟು ಬೇಕೋ ಅಷ್ಟು ಉಪ್ಪು ಹಾಕಿಕೊಳ್ಳಿ.
6. ಸ್ವಲ್ಪ ಸಮಯ ಈ ಮಿಶ್ರಣವನ್ನು ಕಲಸಿ. ಇದರಲ್ಲಿ ತೇವಾಂಶವಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ನೀರಿಲ್ಲದಿದ್ದರೆ ಕೊಂಚ ನೀರನ್ನು ಚಿಮುಕಿಸಿ. ಅಂತೆಯೇ ನಾದಲು ಆರಂಭಿಸಿ.
7. ಇದೇ ಪಾತ್ರೆಗೆ ಅಕ್ಕಿ ಹುಡಿಯನ್ನು ಸೇರಿಸಿ. ಮತ್ತು ಮೃದು ಹಿಟ್ಟು ಆಗುವವರೆಗೆ ಕಲಸಿರಿ.
8. ಹಿಟ್ಟನ್ನು 8 ರಿಂದ 9 ಭಾಗಗಳನ್ನಾಗಿ ಮಾಡಿ. ಪ್ರತಿಯೊಂದನ್ನು ಚೆಂಡಿನಂತೆ ತಯಾರಿಸಿಕೊಳ್ಳಿ ಮತ್ತು ವಡೆಯಂತೆ ನಿಮ್ಮ ಹಸ್ತದಲ್ಲಿ ತಟ್ಟಿ ಸಿದ್ಧಪಡಿಸಿಕೊಳ್ಳಿ.
9. ವಡೆಯನ್ನು ಚೆನ್ನಾಗಿ ತಟ್ಟಿ ಚಪ್ಪಟೆಯನ್ನಾಗಿ ಮಾಡಿಕೊಳ್ಳಿ ಇಲ್ಲದಿದ್ದಲ್ಲಿ ಒಳಭಾಗ ಸರಿಯಾಗಿ ಬೇಯದಿರಬಹುದು.
10. ಬಾಣಲೆಯನ್ನು ತೆಗೆದುಕೊಂಡು ಅದರಲ್ಲಿ ಎಣ್ಣೆ ಬಿಸಿ ಮಾಡಿ.
11. ಎಣ್ಣೆ ಬಿಸಿಯಾಗುತ್ತಿದ್ದಂತೆ ವಡೆಯನ್ನು ಅದರಲ್ಲಿ ಹಾಕಿ. ಹೆಚ್ಚು ಕಾಯಿಸಲು ಹೋಗಬೇಡಿ. ಇನ್ನು ಬಾಣಲೆಯ ಆಕೃತಿಯನ್ನು ಗಮನಿಸಿಕೊಂಡು 2, 3 ವಡೆಯನ್ನು ಒಮ್ಮೆಗೆ ಕರಿದುಕೊಳ್ಳಬಹುದು.
12. ಎರಡೂ ಕಡೆ ವಡೆಯನ್ನು ಚೆನ್ನಾಗಿ ಕರಿದುಕೊಳ್ಳಿ.
13. ವಡೆಯನ್ನು ಹೆಚ್ಚು ಕಾಯಿಸದಿರಿ ಇದರಲ್ಲಿ ಅದು ಹೆಚ್ಚು ಉರಿದುಹೋಗಬಹುದು.
14. ಚಿನ್ನದ ಬಣ್ಣದಕ್ಕೆ ವಡೆ ಬರುವವರೆಗೆ ಕರಿಯಿರಿ
15. ವಡೆ ಈ ಬಣ್ಣಕ್ಕೆ ಬರುತ್ತಿದ್ದಂತೆ ಅದನ್ನು ಹೊರತೆಗೆಯಿರಿ ಮತ್ತು ಕಿಚನ್ ಟವಲ್ ಬಳಸಿಕೊಂಡು ಹೆಚ್ಚುವರಿ ಎಣ್ಣೆಯನ್ನು ಬೇರ್ಪಡಿಸಿ
16. ಈಗ ವಡೆ ಗರಿಗರಿಯಾಗಿರುತ್ತದೆ.
ಟೊಮೇಟೊ ಮತ್ತು ಬೆಳ್ಳುಳ್ಳಿ ಚಟ್ನಿಯೊಂದಿಗೆ ಗರಿ ಗರಿ ತರಕಾರಿ ಬ್ರೆಡ್ ವಡೆಯನ್ನು ಸೇವಿಸಲು ನೀಡಿ.



Click it and Unblock the Notifications