ಇಸ್ಲಾಂ ಧರ್ಮದ ಪವಿತ್ರ 'ರಂಜಾನ್' ಹಬ್ಬದ ಮಹತ್ವ

By: jaya subramanya
Subscribe to Boldsky

ಪವಿತ್ರ ರಂಜಾನ್ ಮಾಸವು ಆರಂಭವಾಗಿದೆ. ನಿಮ್ಮದೆಲ್ಲವನ್ನೂ ದೇವರ ಚರಣಗಳಿಗೆ ಅರ್ಪಿಸಿಕೊಂಡು ಮನದಲ್ಲಿ ದೇವರನ್ನು ನೆನೆಯುತ್ತಾ ಇಡೀ ದಿನ ಉಪವಾಸವಿರುವ ಈ ಮಾಸದಲ್ಲಿ ಮನಸ್ಸು ಪ್ರಶಾಂತವಾಗಿರಬೇಕು ಮತ್ತು ಇತರರಿಗೆ ಒಳಿತನ್ನೇ ಬಯಸುವ ಶುದ್ಧ ಮನಸ್ಸನ್ನು ನೀವು ಹೊಂದಿರಬೇಕು.

ಪ್ರವಾದಿ ಮಹಮ್ಮದರು ಉಪದೇಶಿಸಿದ ತತ್ವಗಳಲ್ಲಿ ರಂಜಾನ್ ಮಾಸದಲ್ಲಿ ಅಲ್ಲಾಹುವಿನ ಭಕ್ತರು ಹೇಗಿರಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಮನುಷ್ಯರು ತಮ್ಮ ಜೀವನದಲ್ಲಿ ತಪ್ಪು ಮಾಡುವುದು ಸಹಜವಾಗಿದ್ದರೂ ಆ ತಪ್ಪಿನಿಂದ ಪಾಠವನ್ನು ಕಲಿತುಕೊಂಡು ಒಳ್ಳೆಯ ಸಂಸ್ಕಾರ ಮಾರ್ಗದಲ್ಲಿ ನಡೆಯುವುದು ಅತೀ ಮುಖ್ಯವಾಗಿದೆ. ಪವಿತ್ರ ರಂಜಾನ್ ಮಾಸದಲ್ಲಿ ಒಳ್ಳೆಯ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮಹತ್ವದ ಪಾಠ ದೊರೆಯಲಿದೆ. 

ಶಾಂತಿ ಸೌಹಾರ್ದತೆಯ ಸಾರುವ-ರಂಜಾನ್ ಹಬ್ಬದ ಮಹತ್ವ

ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ದಿನಗಳು ನಿಮಗೆ ಮಾರ್ಗಸೂಚಿಗಳಾಗಲಿವೆ. ಈ ಮಾಸದಲ್ಲಿ ದೇವರಿಗೆ ವಂದಿಸಲು ನಮಾಜ್ ಅನ್ನು ಮಾಡುವುದು ಕ್ರಮವಾಗಿದೆ. ಹೆಚ್ಚಿನವರು ನಮಾಜ್ ಅನ್ನು ಯಾಂತ್ರಿಕವಾಗಿ ಕಾಟಾಚಾರಕ್ಕೆ ಮಾಡುತ್ತಾರೆ. ಅದಾಗ್ಯೂ ಮನುಕುಲದ ಉತ್ತಮತೆಗಾಗಿ ಈ ರಂಜಾನ್ ಮಾಸದಲ್ಲಿ ಮಾಡುವ ಪ್ರತಿಯೊಂದು ಕಾರ್ಯವೂ ಮೌಲ್ಯಯುತವಾಗಿದೆ ಎಂಬುದನ್ನು ನಾವು ಮರೆಯಬಾರದು. 

ರಂಜಾನ್ ಉಪವಾಸಕ್ಕಾಗಿ ತಂಪುಣಿಸುವ ಬಾದಾಮಿ ಹಾಲು

ಇಡಿಯ ದಿನ ಉಪವಾಸವನ್ನು ಕೈಗೊಂಡು ಶ್ರದ್ಧೆ ಭಕ್ತಿಗಳಿಂದ ದೇವರನ್ನು ಪ್ರಾರ್ಥಿಸುವುದು ಕಷ್ಟಕರ ಎಂದೆನಿಸಿದರೂ ದೇವರು ನಮ್ಮೊಂದಿಗೆ ಇದ್ದಾರೆ, ನಮ್ಮ ಈ ಸುಂದರ ಜೀವನವನ್ನು ದಯಪಾಲಿಸಿದ್ದಕ್ಕಾಗಿ ಆ ದೇವರಿಗೆ ಈ ರೀತಿಯಲ್ಲಿ ನಾವು ವಂದನೆಗಳನ್ನು ಸಲ್ಲಿಸುತ್ತಿದ್ದೇವೆ ಎಂಬ ಆಶಯ ಮನದಲ್ಲಿದ್ದರೆ ಯಾವುದೂ ಕಷ್ಟವೆಂದು ಅನ್ನಿಸುವುದೇ ಇಲ್ಲ. ನಮಾಜ್ ಸಮಯದಲ್ಲಿ ಕೂಡ ಕೊಂಚ ಶ್ರದ್ಧೆಯನ್ನಿಟ್ಟುಕೊಂಡು ನಿಮ್ಮ ನಮಾಜ್ ಅನ್ನು ಮಾಡಿದರೆ ಆಮೇಲೆ ನಿಧಾನವಾಗಿ ಅದೊಂದು ಅಭ್ಯಾಸವಾಗಿ ಮನದಲ್ಲಿ ಭಕ್ತಿ ಮೂಡಿ ಏಕಾಗ್ರತೆ ಉಂಟಾಗುತ್ತದೆ. ಇಷ್ಟಲ್ಲದೆ ರಂಜಾನ್ ಮಾಸದಲ್ಲಿ ನೀವು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿರುವ ಕೆಲವೊಂದು ಕ್ರಮಗಳನ್ನು ಅಂಶಗಳನ್ನು ನಾವಿಲ್ಲಿ ನೀಡುತ್ತಿದ್ದು ಅದೇನು ಎಂಬುದನ್ನು ಅರಿತುಕೊಳ್ಳೋಣ.....  

ರಂಜಾನ್ ಮಂತ್ರ

ರಂಜಾನ್ ಮಂತ್ರ

ರಂಜಾನ್ ಸಮಯದಲ್ಲಿ ನೀವು ಮಾಡಬೇಕಾಗಿರುವ ರೀತಿ ನೀತಿಗಳೇನು ಎಂಬುದನ್ನು ಮನನ ಮಾಡಿಕೊಂಡಲ್ಲಿ ಈ ದಿನ ಉಪವಾಸವಿರುವುದು ಮತ್ತು ರಂಜಾನ್‌ನ ಮಹತ್ವವನ್ನು ಅರಿತುಕೊಳ್ಳುವುದಾಗಿದೆ.

ರಂಜಾನ್ ಮಂತ್ರ

ರಂಜಾನ್ ಮಂತ್ರ

ರಂಜಾನ್ ಕುರಿತು ಮತ್ತಷ್ಟು ಅಂಶಗಳನ್ನು ತಿಳಿದುಕೊಳ್ಳಿ. ಹಿರಿಯರಿಂದ ಈ ಪವಿತ್ರ ಹಬ್ಬದ ಆಚರಣೆಯ ಮಹತ್ವತೆಯನ್ನು ಬಗ್ಗೆ ತಿಳಿದುಕೊಳ್ಳಿ. ಇದರಿಂದ ಅರಿತುಕೊಂಡ ಜ್ಞಾನವನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಇದರಿಂದ ನಿಮ್ಮ ಜೀವನದಲ್ಲಿ ಧನಾತ್ಮಕ ಅಂಶಗಳನ್ನು ನಿಮಗೆ ಪಡೆದುಕೊಳ್ಳಬಹುದು.

 ಈ ರಂಜಾನ್‌ನಲ್ಲಿ ಯೋಜನೆಯನ್ನು ಮಾಡಿಕೊಳ್ಳಿ

ಈ ರಂಜಾನ್‌ನಲ್ಲಿ ಯೋಜನೆಯನ್ನು ಮಾಡಿಕೊಳ್ಳಿ

ಈ ರಂಜಾನ್‌ನಗಾಗಿ ಕೆಲವೊಂದು ಯೋಜನೆಯನ್ನು ಮಾಡಿಕೊಳ್ಳಿ ಮತ್ತು ಇದು ನಿಮ್ಮ ಮೇಲೆ ಅಗಾಧವಾದ ಪರಿಣಾಮವನ್ನು ಬೀರುವಂತೆ ಮಾಡಿ. ಕುರಾನ್ ಪಠಿಸುವುದು ಅಂತೆಯೇ ಯಾರಿಗಾದರೂ ಏನನ್ನಾದರೂ ದಾನ ಮಾಡುವುದು ಮೊದಲಾದ ಯೋಜನೆಗಳನ್ನು ಹಮ್ಮಿಕೊಳ್ಳಿ. ನೀವು ಈ ಸಮಯದಲ್ಲಿ ಮಾಡುವ ಯಾವುದೇ ಯೋಜನೆಗಳನ್ನು ಬರಿಯ ರಂಜಾನ್‌ಗಾಗಿ ಮಾತ್ರವೇ ಮೀಸಲಿರಿಸಬೇಡಿ. ಜೀವನಪೂರ್ತಿ ಇದನ್ನು ಮುಂದುವರಿಸಿ.

ಮಾಸಿಕವಾಗಿ ಸಬಲರಾಗಿ

ಮಾಸಿಕವಾಗಿ ಸಬಲರಾಗಿ

ನಿಮ್ಮ ಜೀವನದಲ್ಲಿ ನೀವು ಅಳವಡಿಸಿಕೊಳ್ಳುವ ಈ ಯೋಜನೆಗಳಿಗೆ ಮಾನಸಿಕವಾಗಿ ಸಬಲರಾಗಿ. ರಂಜಾನ್‌ನಲ್ಲಿ ಆರೋಗ್ಯಕರವಾಗಿರುವ ಆಹಾರಗಳನ್ನು ನೀವು ಸೇವಿಸುತ್ತೀರಿ ಎಂದಾದಲ್ಲಿ ಇದೇ ರೀತಿಯ ಆಹಾರವನ್ನು ಜೀವನದಾದ್ಯಂತ ಅಳವಡಿಸಿಕೊಳ್ಳಿ. ನಿಮ್ಮ ಕೆಟ್ಟ ಆಲೋಚನೆಗಳನ್ನು ಒಳ್ಳೆಯದಕ್ಕೆ ಬದಲಾಯಿಸಿಕೊಳ್ಳಿ. ಆರೋಗ್ಯಕರವಾಗಿ ಜೀವನ ಪದ್ಧತಿಯನ್ನು ಅನುಸರಿಸಿ

ಪ್ರಾರ್ಥನೆಯನ್ನು ಜೀವನದಲ್ಲಿ ಮುಖ್ಯವಾಗಿಸಿ

ಪ್ರಾರ್ಥನೆಯನ್ನು ಜೀವನದಲ್ಲಿ ಮುಖ್ಯವಾಗಿಸಿ

ಜೀವನದಲ್ಲಿ ದೇವರನ್ನು ಪ್ರಾರ್ಥಿಸುವುದು ಎಂದರೆ ಅದೊಂದು ಸಾಮಾನ್ಯ ಕ್ರಿಯೆಯಲ್ಲ. ನಮ್ಮ ಈ ಸುಂದರ ಜೀವನಕ್ಕಾಗಿ ಅಲ್ಲಾಹುವಿಗೆ ಧನ್ಯವಾದಗಳನ್ನು ಸಮರ್ಪಿಸುವುದಾಗಿದೆ. ಕೆಟ್ಟ ಆಲೋಚನೆಗಳನ್ನು ಕೆಟ್ಟ ವರ್ತನೆಗಳನ್ನು ನಿಮ್ಮ ಜೀವನದಿಂದ ದೂರವಾಗಿಸಿಕೊಳ್ಳಿ. ಮತ್ತೊಬ್ಬರಿಗೆ ಒಳ್ಳೆಯದನ್ನು ಬಯಸುವ ಗುಣವನ್ನು ನಿಮ್ಮಲ್ಲಿ ಪೋಷಿಸಿ.

ರಂಜಾನ್‌ಗಾಗಿ ಆಧ್ಯಾತ್ಮಿಕ ಸಿದ್ಧತೆ

ರಂಜಾನ್‌ಗಾಗಿ ಆಧ್ಯಾತ್ಮಿಕ ಸಿದ್ಧತೆ

ನೀವು ಬದಲಾವಣೆಗಳನ್ನು ಮಾಡಿಕೊಳ್ಳಬೇಕೆಂದು ಬಯಸಿದಲ್ಲಿ ಅದನ್ನು ಕೂಡಲೇ ಕಾರ್ಯಾಚರಣೆಗೆ ತನ್ನಿ. ರಂಜಾನ್ ಮಾಸದ ಮೊದಲ ದಿನದಿಂದಲೇ ಪವಿತ್ರ ಯೋಜನೆಗಳನ್ನು ಯೋಚನೆಗಳನ್ನು ಜಾರಿಗೆ ತನ್ನಿ. ಬರಿಯ ರಂಜಾನ್‌ಗಾಗಿ ಮಾತ್ರವೇ ಇವುಗಳನ್ನು ಮೀಸಲಿರಿಸದೇ ಜೀವನ ಪೂರ್ತಿ ಅದನ್ನು ಪಾಲಿಸಿ. ಆಧ್ಯಾತ್ಮಿಕ ಚಿಂತನೆಗಳನ್ನು ಮನದಲ್ಲಿ ಮೂಡಿಸಿ. ಇತರರಿಗೆ ಸಹಾಯ ಮಾಡುವುದು, ದಾನಧರ್ಮ ಮೊದಲಾದ ಮನಸ್ಸಿಗೆ ಖುಷಿ ಎನಿಸುವ ಕಾರ್ಯಗಳನ್ನು ಮಾಡಿ.

English summary

How To Make Positive Changes In Your Life During Ramzan

The holy month of Ramzan is a spiritual time of prayer, self-evaluation and repentance. The month of Ramzan is a very good time to reflect on our life and make changes to better your life. As humans, we are all fallible. We are prone to ill thoughts, bad habits and decisions that affect our life in a negative way. When the holy month of Ramzan arrives each year, it brings with it a new chance for every believer to bring about a difference that helps direct our life towards the right path.
Story first published: Saturday, June 3, 2017, 23:27 [IST]
Subscribe Newsletter