For Quick Alerts
ALLOW NOTIFICATIONS  
For Daily Alerts

ರಂಜಾನ್ ಮಾಸದ 'ಉಪವಾಸದ' ಹಿಂದಿರುವ ಮಹತ್ವ

By Jaya subramanya
|

ರಂಜಾನ್ ಮಾಸದಲ್ಲಿ ಉಪವಾಸ ಕೈಗೊಳ್ಳುವುದು ಎಂದರೆ ಅದೊಂದು ಪವಿತ್ರ ಕ್ರಿಯೆ ಎಂದೆನಿಸಿದೆ. ಅದರಲ್ಲೂ ರಂಜಾನ್ ಮಾಸದಲ್ಲಿ ಮಾಡುವ ಉಪವಾಸ ಒಂದು ತಿಂಗಳಕಾಲ ಇರುತ್ತದೆ. ರಂಜಾನಿನ ಅರ್ಥ ಮನುಷ್ಯನ ಆಹಾರಗಳು ಮತ್ತು ಪಾನೀಯಗಳ ಮೇಲೆ ಸಂಯಮ ಗಮನಿಸುವುದು. ಇದರಲ್ಲಿ ಬಹಳ ಮುಖ್ಯವಾದದ್ದೆಂದರೆ ಈ ಇಂದ್ರಿಯನಿಗ್ರಹದಿಂದ ನಕಾರಾತ್ಮಕ ಅಂಶಗಳನ್ನು ಗಮನಿಸುವುದು.

ಈ ಸಮಯದಲ್ಲಿ ಮನುಷ್ಯನು ಎಲ್ಲಾ ರೀತಿಗಳ ದುರಭ್ಯಾಸಗಳು, ಲೈಂಗಿಕ ಚಟುವಟಿಕೆಗಳಿಂದ ದೂರವಿದ್ದು ತನ್ನ ಜೀವನದಲ್ಲಿ ಶೋಚನೀಯ ಪರಿಸ್ಥಿತಿಯು ಉಂಟಾಗಬಹುದನ್ನು ತಡೆಯುವುದು. ರಂಜಾನ್ ಸಮಯದಲ್ಲಿ ದೇವರಮೇಲೆ ತೀವ್ರ ಪ್ರೀತಿಯಿಟ್ಟು ಉಪವಾಸವನ್ನು ಆಚರಣೆಮಾಡುವುದು.

fasting

ರಂಜಾನ್ ಉಪವಾಸದಾಚರಣೆ 30 ದಿನಗಳಕಾಲ ಇರುತ್ತದೆ. ಇದು ಅಮಾವಾಸ್ಯೆಯ ನಂತರ ಕಾಣುವ ಮೊದಲನೇ ಚಂದ್ರದರ್ಶನದಿಂದ ಆರಂಭವಾಗಿ ಮತ್ತೆ ಬರುವ ಅಮಾವಾಸ್ಯೆಯ ನಂತರ ಕಾಣುವ ಮೊದಲನೇ ಚಂದ್ರದರ್ಶನವಾದ ನಂತರ ಕೊನೆಗೊಳ್ಳುತ್ತದೆ. ರಂಜಾನ್ ಮಾಸದ ಸಮಯದಲ್ಲಿ ಮುಂಜಾನೆ ಸೂರ್ಯೋದಯದ ನಂತರದಿಂದ ಸೂರ್ಯಾಸ್ತಮವಾಗುವವರೆಗೆ ಉಪವಾಸ ಮಾಡಬೇಕು. ತದನಂತರ ದೇವರಲ್ಲಿ ಪ್ರಾರ್ಥನೆ ಮಾಡಿದ ಮೇಲೆಯೇ ಅಂದಿನ ದಿನದ ಆಹಾರದ ಮೊದಲ ತುತ್ತನ್ನು ತಿನ್ನಬೇಕು. ರಂಜಾನ್ ಉಪವಾಸದ ಪ್ರಾಮುಖ್ಯತೆಗೆ ಹಲವಾರು ಕಾರಣಗಳಿವೆ. ಆ ಪ್ರಾಮುಖ್ಯತೆಗೆ ಕಾರಣಗಳೇನೆಂದು ನೋಡೋಣ ಬನ್ನಿ...

ಪವಿತ್ರ ಕುರಾನ್
ಪ್ರವಾದಿ ಮೊಹಮ್ಮದ್ ಅವನಿಗೆ ರಂಜಾನ್ ಮಾಸದಲ್ಲಿ ಪವಿತ್ರ ಖುರಾನ್ ಗೋಚರವಾಯಿತು. ದೇವರು ಪ್ರವಾದಿ ಮೊಹಮ್ಮದ್ದನನ್ನು ತನ್ನ ಪ್ರತಿನಿಧಿಯೆಂದು ಆಯ್ಕೆಮಾಡಿ ಪವಿತ್ರ ಖುರಾನ್ ಗ್ರಂಥವನ್ನು ಸಂಗ್ರಹಿಸಿದನು. ರಂಜಾನ್ ಮಾಸದ ಕೊನೆಯ ಹತ್ತು ದಿನಗಳು ಲಾಯಿಲತುಲ್ ಕದಿರ್ (ಶಕ್ತಿಯ ರಾತ್ರಿ) ಎಂದು ಗಮನಾರ್ಹವಾಗಿ ವಿಶೇಷವಾದದ್ದು. ಈ ಸಮಯದಲ್ಲಿಯೇ ಪ್ರವಾದಿಗೆ ಖುರಾನಿನ ಪುಸ್ತಕ ಪೂರ್ಣವಾದದ್ದು.

ಶಾಂತಿ ಸೌಹಾರ್ದತೆಯ ಸಾರುವ-ರಂಜಾನ್ ಹಬ್ಬದ ಮಹತ್ವ

ಪ್ರವಾದಿ ಮೊಹಮ್ಮದ್ ಮೋಕ್ಷವನ್ನು ಪಡೆದಿದ್ದು
ಪ್ರವಾದಿ ಮೊಹಮ್ಮದ್ ಅವನು ಒಂದು ಸಂತನಾಗಿ ಜನಿಸಿದನು. ಆದರೆ ಅವನ ಸಮಯದಲ್ಲಿ ಹಿಂಸಾಚಾರಗಳು ನಡೆಯುತ್ತಿತ್ತು. ಆ ಸಮಯದಲ್ಲಿ ಜನಗಳು ನಡೆದುಕೊಳ್ಳುತ್ತಿದ್ದ ರೀತಿಯಿಂದ ಅವನಿಗೆ ಬಹಳವಾಗಿ ಅಪಮಾನವಾಯಿತು. ತನ್ನ ಸುತ್ತಮುತ್ತ ಇದ್ದ ಪರಿಸ್ಥಿತಿಯಿಂದ ಜುಗುಪ್ಸೆಗೊಂಡ ಪ್ರವಾದಿಯು ಏಕಾಂತವಾಗಿ ನಿರ್ಜನ ಪ್ರದೇಶಗಳಲ್ಲಿ ಓಡಾಡಲು ಪ್ರಾರಂಭಿಸಿದನು. ಹೀಗೆ ಮಾಡುತ್ತಿದ್ದಾಗ ಹಿಜ್ರಾ ಬೆಟ್ಟದಲ್ಲಿ ಉಪವಾಸ ಮಾಡುತ್ತಾ ಮತ್ತು ದೇವರಲ್ಲಿ ಪ್ರಾರ್ಥನೆ ಮಾಡುತ್ತಾ ಹಗಲು ರಾತ್ರಿಗಳನ್ನು ಕಳೆದನು.

ಅಂತಿಮವಾಗಿ ದೇವರು ಅವನಿಗೆ ಬೆಳಕಿನ ಮಾರ್ಗವನ್ನು ತೋರಿದನು. ದೇವರು ಅವನ ಮುಖಾಂತರ ಜನಗಳಿಗೆ ನೈಜ ಜ್ಞಾನದ ಬೆಳಕನ್ನು ಹರಡಿಸಿದನು. ಈ ಕಾರಣದಿಂದ ಜನರು ರಂಜಾನ್ ಸಮಯದಲ್ಲಿ ಉಪವಾಸವನ್ನು ಆಚರಿಸಿ, ಪ್ರವಾದಿ ಮೊಹಮ್ಮದ್ ಅವರ ಆಶಯದಂತೆ, ಜಗತ್ತಿನಲ್ಲಿ ಶಾಂತಿ, ಸಾಮರಸ್ಯ-ಸಮನ್ವತೆ ದೇವರಲ್ಲಿ ಪ್ರಾರ್ಥಿಸುತ್ತಾರೆ.

ಉಪವಾಸ ಮಾಡುವುದಕ್ಕೆ ಮುಖ್ಯ ವಾದ(ತರ್ಕ)
ಪ್ರತಿ ಧರ್ಮದಲ್ಲಿಯೂ ಒಂದು ರೀತಿಯ ಪ್ರಾಪಂಚಿಕ ವಿನೋದಗಳನ್ನು ತ್ಯಜಿಸಿ ದೇವರ ಕೃಪೆಯನ್ನು ಪಡೆಯುವುದಕ್ಕೆ ಉಪವಾಸದ ಆಚರಣೆ ಒಂದು ವಿಧಾನವಾಗಿದೆ. ಒಬ್ಬ ಸಾಧಾರಣ ಮನುಷ್ಯನು ಸದಾ ತನ್ನ ಲೌಕಿಕ ಕರ್ತವ್ಯಗಳ ಮಧ್ಯೆ ಕಟ್ಟಿಹಾಕಿಕೊಂಡು, ದೇವರ ಬಗ್ಗೆ ಯೋಚನೆ ಮಾಡಲು ಸಮಯವೇ ಇರುವುದಿಲ್ಲ. ಉಪವಾಸವು ಒಂದು ರೀತಿಯ ತಪಸ್ಸಿನಂತೆ ಆಹಾರವನ್ನು ತ್ಯಜಿಸಿ ದೇವರಲ್ಲಿ ಸಂಪೂರ್ಣವಾಗಿ ಗಮನವನ್ನು ಕೇಂದ್ರೀಕೃತಮಾಡುವುದು.

ಹಗಲಿನಲ್ಲಿ ಉಪವಾಸ ಮಾಡುವವನು ದೇವರಲ್ಲಿ ಪ್ರಾರ್ಥನೆ ಮಾಡುತ್ತ ಸಂಪೂರ್ಣವಾಗಿ ಮುಳುಗಿಹೋಗಿದ್ದರೆ ಪ್ರಪಂಚದಲ್ಲಿ ಇತರರಿಗೆ ಒಂದು ಸತ್ತ ಮನುಷ್ಯನಂತೆ ಸಂಕೇತಿಸುತ್ತದೆ. ಹಾಗೆಯೇ, ರಾತ್ರಿ ವೇಳೆ ಆಹಾರ ತೆಗೆದುಕೊಳ್ಳುವುದು ತನ್ನ ಜೀವಕ್ಕೆ ಆಧಾರದ ಸಂಕೇತವಾಗಿರುವುದು ಮತ್ತು ಕಾಣುವ ಪ್ರಪಂಚದಿಂದ ದೂರವಿರುವುದು. ಹೀಗೆ ಮಾಡುವುದರಿಂದ ಆಂತರಿಕ ಆಧ್ಯಾತ್ಮಿಕ ಪ್ರಪಂಚದ ಪುಷ್ಟಿಯನ್ನು ಸೆಳೆಯಬಹುದಾಗಿದೆ.

ಚಂದ್ರನು ದೇವರಿಂದ ಜ್ಞಾನದ ಬೆಳಕನ್ನು ಕೊಡುವ ಒಂದು ಸಂಕೇತ
ಹೀಗಾಗಿ ಚಂದ್ರನಿಂದ ರಂಜಾನ್ ಮಾಸದ ಉಪವಾಸದ ಆಚರಣೆಗೆ ಒಂದು ನಿರ್ದಿಷ್ಟ ಪಾತ್ರವಿದೆ. ಮನುಷ್ಯನು ಪ್ರಾಪಂಚಿಕ ವಿನೋದಗಳಿಂದ ದೂರವಿದ್ದು, ತನ್ನನ್ನು ತಾನೇ ಅರಿತುಕೊಳ್ಳುವುದಕ್ಕೆ ರಂಜಾನ್ ಒಂದು ಸಮಯವಾಗಿದೆ. ರಂಜಾನ್ ಉಪವಾಸ ಮಾಡುವುದು ದೇವರಿಗೋಸ್ಕರ ಮಾತ್ರವೇ ಅಲ್ಲ, ಅದು ನಮಗಾಗಿ ಸುಧಾರಿಸಲೂ ಹೌದು. ಇದು ವಾಸ್ತವವಾಗಿ ಪ್ರತಿ ಮನುಷ್ಯನೂ ಅಜ್ಞಾನದ ಅಂಧಕಾರದಿಂದ ನಿಜವಾದ ಜ್ಞಾನದ ಬೆಳಕಿನೆಡೆಗೆ ತೆರಳಲು ಅನುಸರಿಸುವ ಒಂದು ರೀತಿಯ ಜೀವನದ ದಾರಿಯಾಗಿದೆ.

English summary

What is the significance of fasting in the month of Ramadan

The Ramzan fast lasts for 30 days. It starts with sighting of new moon and ends after seeing the new moon of the next month. During the month of Ramzan, a person is supposed to fast from the day break till the sunset. Only after offering prayers can he/she take the first morsel of food. There are a number of reasons why the Ramzan fasting is considered to be of great importance. Let us take a look at the significance of fasting during Ramzan.
X
Desktop Bottom Promotion