For Quick Alerts
ALLOW NOTIFICATIONS  
For Daily Alerts

ನಾಲಗೆಯ ರುಚಿ ಹೆಚ್ಚಿಸುವ 'ಗ್ರಿಲ್ಡ್ ಆಮ್ಲೆಟ್ ಸ್ಯಾಂಡ್‌ವಿಚ್‌'

By Divya
|

ಪ್ರವಾದಿ ಮಹಮದ್‍ನ ಮೊದಲ ಧರ್ಮೋಪದೇಶವನ್ನು ಗೌರವಿಸಲು ಮುಸ್ಲಿಂ ಧರ್ಮದವರು ಉಪವಾಸವನ್ನು ಕೈಗೊಳ್ಳುತ್ತಾರೆ. ಇದಕ್ಕೆ ಪವಿತ್ರವಾದ ರಂಜಾನ್ ತಿಂಗಳು ಎಂದು ಕರೆಯುವರು. ಚಂದ್ರಮಾನ ಪಂಚಾಂಗದ ಪ್ರಕಾರ 9ನೇ ತಿಂಗಳು ಧರ್ಮನಿಷ್ಠೆ ಮತ್ತು ಆಧ್ಯಾತ್ಮಿಕ ಜಾಗೃತಿಗೆ ಮೀಸಲು. ಇಫ್ತಾರ್ ಮತ್ತು ಸುಹೂರ್‌ನ ಸಮಯದಲ್ಲಿ ಕಠಿಣವಾದ ಉಪವಾಸವನ್ನು ಕೈಗೊಳ್ಳುವುದರಿಂದ, ದೇಹದಲ್ಲಿ ನಿಷ್ಯಕ್ತಿ ಉಂಟಾಗುವುದು. ದೇಹ ಮತ್ತು ಆತ್ಮವನ್ನು ಚೈತ್ಯಗೊಳಿಸಲು ನಿಮಗಾಗಿ ಆರೋಗ್ಯಕರ ಹೊಸ ರುಚಿಯನ್ನು ಪರಿಚಯಿಸುತ್ತಿದ್ದೇವೆ.

ಸೌತೆಕಾಯಿಯ ಸ್ಯಾಂಡ್ ವಿಚ್ ರೆಸಿಪಿ

ಉಪವಾಸ ಕೈಗೊಳ್ಳುವ ಮುಂಚೆ ಅಥವಾ ಉಪವಾಸದ ನಂತರ ಈ ತಿನಿಸನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್‍ಗಳನ್ನು ಪಡೆಯಬಹುದು. ಅದಕ್ಕೆಂದೇ ಸರಳವಾಗಿ ಮಾಡಬಹುದಾದ ಗ್ರಿಲ್ಡ್ ಆಮ್ಲೆಟ್ ಸ್ಯಾಂಡ್‌ವಿಚ್‌ ರೆಸಿಪಿಯನ್ನು ನಿಮಗೆ ಪರಿಚಯಿಸುತ್ತಿದ್ದೇವೆ...ಬನ್ನಿ ಇನ್ನು ತಡ ಮಾಡುವುದು ಬೇಡ, ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಈ ತಿಂಡಿಯ ತಯಾರಿಸುವ ವಿಧಾನ ಹಾಗೂ ಸಲಕರಣೆಗಳ ಕುರಿತು ತಿಳಿಯೋಣ ...

ಮೂರು ಮಂದಿಗೆ ನೀಡಬಹುದು.
*ಪೂರ್ವ ತಯಾರಿಗೆ 30 ನಿಮಿಷ
*ತಯಾರಿಸಲು 30 ನಿಮಿಷ

Grilled Omelet Sandwich

ಸಲಕರಣೆಗಳು:
* ಪುದೀನಾ ಚಟ್ನಿಗೆ ಬೇಕಾಗುವ ಸಲಕರಣೆಗಳು:
1. ಪುದೀನದ ಎಲೆಗಳು - ಎರಡು ಮುಷ್ಟಿ
2. ಕೊತ್ತಂಬರಿ ಸೊಪ್ಪು - ಒಂದು ಮುಷ್ಟಿ
3. ಹಸಿ ಮೆಣಸಿನಕಾಯಿ - 2
4. ಬೆಳ್ಳುಳ್ಳಿ ಎಸಳು - 2
5. ಶುಂಠಿ - 1/2 ಇಂಚು
6. ನಿಂಬೆ ರಸ -1 ಚಮಚ
7. ಸಕ್ಕರೆ - 1 ಚಮಚ
8. ಉಪ್ಪು - ರುಚಿಗೆ ತಕ್ಕಷ್ಟು
9. ನೀರು -1/2 ಕಪ್

ಗ್ರಿಲ್ಡ್ ಆಮ್ಲೆಟ್‍ಗೆ ಬೇಕಾಗುವ ಸಲಕರಣೆಗಳು:
1. ಬ್ರೆಡ್ ಸ್ಲೈಸ್ - 3
2. ಚೀಸ್ ಸ್ಲೈಸ್ - 2
3. ಮೊಟ್ಟೆ - 4
4. ಉಪ್ಪು ರುಚಿಗೆ ತಕ್ಕಷ್ಟು
5. ಪೆಪ್ಪರ್ - ರುಚಿಗೆ ತಕ್ಕಷ್ಟು ಸಕತ್ ರುಚಿ ಈ ಭೇಲ್ ಪುರಿ ಸ್ಯಾಂಡ್‌ವಿಚ್

ಮಾಡುವ ವಿಧಾನ:
* ಪುದೀನಾ ಚಟ್ನಿ ತಯಾರಿಸುವ ವಿಧಾನ:
1. ಚಟ್ನಿ ಮಾಡಲು ನಿಮಗೆ ಅನುಕೂಲವಾಗುವ ಮಿಕ್ಸರ್ ಗ್ರೈಂಡರ್ ಅಥವಾ ಬ್ಲೆಂಡರ್‍ಅನ್ನು ಆಯ್ಕೆ ಮಾಡಿಕೊಳ್ಳಬಹುದು.
2. ಈ ಮೇಲೆ ಹೇಳಲಾದ ಪುದೀನಾ ಚಟ್ನಿ ಸಲಕರಣೆಗಳನ್ನು ಮಿಕ್ಸರ್/ಬ್ಲೆಂಡರ್ ಜಾರ್‌ನಲ್ಲಿ ಹಾಕಿ
3. ಇವೆಲ್ಲವೂ ಮೃದುವಾದ ಚಟ್ನಿ ಆಗುವ ಹಾಗೆ ರುಬ್ಬಿಕೊಳ್ಳಿ.
4. ಇನ್ನು ಇದನ್ನು ನಿಮಗೆ ಅಗತ್ಯವಿರುವ ಇತರ ತಿಂಡಿಗಳೊಂದಿಗೂ ಸವಿಯಬಹುದು.
5. ಇದನ್ನು ಎರಡುದಿನಗಳ ಕಾಲ ರೆಫ್ರಿಜರೇಟರ್‌ನಲ್ಲೂ ಇಡಬಹುದು.

ಗ್ರಿಲ್ಡ್ ಆಮ್ಲೆಟ್ ತಯಾರಿಸುವ ವಿಧಾನ:
1. ಒಂದು ಪಾತ್ರೆಯಲ್ಲಿ ಮೊಟ್ಟೆಯನ್ನು ಒಡೆದು ಅದಕ್ಕೆ ಉಪ್ಪು ಮತ್ತು ಪೆಪ್ಪರ್ ಪುಡಿಯನ್ನು ಹಾಕಿ ಚೆನ್ನಾಗಿ ಬೀಟ್/ ಕಲುಕಿ. ಅದು ಎಲ್ಲವೂ ಸೇರಿಕೊಂಡು ಒಂದು ಸಮ್ಮಿಶ್ರಣದಂತೆ ಆಗಬೇಕು.
2. ಈ ಮೊಟ್ಟೆಯ ಮಿಶ್ರಣವನ್ನು ಒಂದು ಕಾವಲಿ ಮೇಲೆ ಹಾಕಿ.
3. ಕಾವಲಿ ತುಂಬಾ ಇದನ್ನು ಹರಡಿ (ದೋಸೆಯಂತೆ).
4. ಕಾವಲಿ ಮೇಲೆ ಆಮ್ಲೆಟ್‍ನ ಕೆಳಭಾಗ ಬೆಂದಿದೆ ಎಂದಾಗ ಒಂದು ಬ್ರೆಡ್‍ನ ಸ್ಲೈಸ್‍ಅನ್ನು ಅದರ ಮೇಲೆ ಇಡಿ.
5. ಸುತ್ತಲು ಉಳಿದ ಆಮ್ಲೆಟ್ ಪದರವನ್ನು ಬ್ರೆಡ್ ಸ್ಲೈಸ್‍‌ನಿಂದ ಮುಚ್ಚಿ.
6. ನಂತರ ಎರಡು ನಿಮಿಷ ಚೆನ್ನಾಗಿ ಬೇಯುವಂತೆ ತಿರುವಿ.
7. ಆಮ್ಲೆಟ್‍ನಿಂದ ಪ್ಯಾಕ್ ಆದ ಬ್ರೆಡ್ ಸ್ಲೈಸ್‍ನ ಮೇಲೆ ಒಂದು ಚೀಸ್ ಸ್ಲೈಸ್‌ನ್ನು ಇಡಿ.
8. ಈಗ ಉಳಿದ ಎರಡು ಬ್ರೆಡ್ ಸ್ಲೈಸ್‍ನ್ನು ತೆಗೆದುಕೊಳ್ಳಿ.
9. ಒಂದು ಚಮಚದಿಂದ ಪುದೀನಾ ಚಟ್ನಿಯನ್ನು ಎರಡು ಬ್ರೆಡ್ ಸ್ಲೈಸ್ ಮೇಲೆ ಹರಡಿ.
10. ಈ ಎರಡು ಬೆಡ್ ಸ್ಲೈಸ್ ಮಧ್ಯೆ ಆಮ್ಲೆಟ್ ನಿಂದ ಕವರ್ ಮಾಡಿರುವ ಬ್ರೆಡ್ ಸ್ಲೈಸ್ ಬರುವಂತೆ ಜೋಡಿಸಿ.
11. ನಂತರ ಇವುಗಳನ್ನು ಗ್ರಿಲ್ ಮಾಡಿ.
12. ಗ್ರಿಲ್ ಆದ ಬಳಿಕ ತ್ರಿಬುಜ(ಟ್ರೈಂಗಲ್)ದ ಆಕೃತಿಯಲ್ಲಿ ಕತ್ತರಿಸಿ. ಬಿಸಿಯಿರುವಾಗಲೇ ಪುದೀನಾ ಚೆಟ್ನಿ ಅಥವಾ ಸಾಸ್ ಜೊತೆ ಸವಿಯಲು ನೀಡಿ.
13. ಇವುಗಳ ಗ್ರಿಲ್ ಮಾಡಲು ಸ್ಯಾಂಡ್‌ವಿಚ್ ಮೇಕರ್‌ನಲ್ಲಿ ತಯಾರಿಸಬೇಕು.

ಐಸ್ ಕ್ರೀಮ್ ಸ್ಯಾಂಡ್ ವಿಚ್ ಟೇಸ್ಟ್ ಗೆ ಕ್ಲೀನ್ ಬೋಲ್ಡ್

English summary

Grilled Omelet Sandwich With Fresh Mint Chutney For Suhoor

It is also important that one eats nutritious food at Suhoor, as it helps in preparing the body for the tough fast ahead during the day. With this in mind, we bring you the simple, tasty and easy Grilled Omelet Sandwich recipe. This dish is accompanied with fresh mint chutney. With the proteins in the eggs and carbohydrates in the bread, you will surely feel full and prepared for the day's fast. Let's now take a look at the recipe.
X
Desktop Bottom Promotion