For Quick Alerts
ALLOW NOTIFICATIONS  
For Daily Alerts

ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾಪ್ಟನ್ ಪ್ರೀತ್‌ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ

|

ಮಹಿಳೆ ಮನಸ್ಸು ಮಾಡಿದರೆ ಅವಳಿಗೆ ಯಾವುದೂ ಅಸಾಧ್ಯವಲ್ಲ ಎಂಬುವುದನ್ನು ಅನೇಕ ಮಹಿಳೆಯರು ಸಾಬೀತು ಪಡಿಸುತ್ತಲೇ ಬಂದಿದ್ದಾರೆ, ಇದೀಗ ಅಂಥವರ ಸಾಲಿಗೆ ಕ್ಯಾಪ್ಟನ್‌ ಪ್ರೀತ್‌ ಚಾಂದಿ ನಿಲ್ಲುತ್ತಾರೆ. ಇದುವರೆಗೆ ಯಾವ ಮಹಿಳೆಯೂ ಮಾಡಿರದಂಥ ಸಾಧನೆಯನ್ನು ಅವರು ಮಾಡಿದ್ದಾರೆ.

ಭಾರತೀಯ ಮೂಲದ ಸಿಖ್‌ ಆರ್ಮಿ ಆಫೀಸರ್ ಆಗಿರುವ ಕ್ಯಾಪ್ಟನ್ ಪ್ರೀತ್ ಚಾಂದಿ ಸೋಲೋ ಪೋಲಾರ್ ಸ್ಕೀ ದಂಡಯಾತ್ರೆ ಮಾಡುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.

Preet Chandi

ಅಂಟಾರ್ಟಿಕಾ ಅಥವಾ ಅಂಟಾರ್ಕ್ಟಿಕಾ ಯಾವಾಗಲೂ ಮಂಜಿನಿಂದ ಹೆಪ್ಪುಗಟ್ಟಿದ ಖಂಡ. ಇಲ್ಲಿ ತಾಪಮಾನ ಕಡಿಮೆ ಇರುವುದರಿಂದ ಹಿಮನದಿಗಳಿಂದ ಆವೃತವಾಗಿರುವ ಭೂಖಂಡವಾಗಿದೆ. ಇಲ್ಲಿ ಸಾಮಾನ್ಯ ಜೀವನ ಅಸಾಧ್ಯ, ಇಂಥ ಕಷ್ಟಕರವಾದ ಪ್ರದೇಶದ ಪರ್ವತವನ್ನು ಒಂಟಿಯಾಗಿ ತಲುಪಿದ್ದಾರೆ ಪ್ರೀತ್‌ ಚಾಂದಿ.

ಅವರಿಗೆ ಈ ಯಾತ್ರೆ ತುಂಬಾನೇ ಕಷ್ಟವಾರವಾಗಿತ್ತು, ಆದರೂ ಸಾಧನೆ ಮಾಡುವ ಮೂಲಕ ಅನೇಕ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ.

ಅಂಟಾರ್ಟಿಕಾದಲ್ಲಿನ ಹಿಮ ಪರ್ವತದಲ್ಲಿ ಒಬ್ಬರೇ ಎಲ್ಲಾ ಅಡೆತಡೆಗಳನ್ನು ಎದುರಿಸಿ 1,485 ಕಿ.ಮೀ ದೂರವನ್ನು 7]0 ದಿನ 16 ಗಂಟೆಗಳಲ್ಲಿ ತಲುಪುವ ಮೂಲಕ ಹೊಸ ದಾಖಲೆ ಮಾಡಿದ್ದಾರೆ. ಅವರ ಯಾತ್ರೆ ಸುಲಭವಾಗಿರಲಿಲ್ಲ, ಮೈನಸ್‌ 30 ಡಿಗ್ರಿ C ಹಿಮದಲ್ಲಿ ದಿನದಲ್ಲಿ 13-15 ಗಂಟೆ ನಡೆಯುತ್ತಿದ್ದರು, ಅವರು ದಿನದಲ್ಲಿ 5 ಗಂಟೆಗಿಂತ ಕಡಿಮೆ ನಿದ್ದೆ ಮಾಡಿ ತಮ್ಮ ಗುರಿ ಮುಟ್ಟಿ ಗೆಲುವಿನ ನಗೆ ಬೀರಿದ್ದಾರೆ.

ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ "Polar Preet has broken the world record for the longest, solo, unsupported and unassisted polar expedition by any woman in history!" ಎಂದು ಬರೆದುಕೊಂಡಿದ್ದಾರೆ.

ಇವರ ದಂಡಯಾತ್ರೆ ಅಷ್ಟು ಸುಲಭವಾಗಿರಲಿಲ್ಲ, ಒಬ್ಬಂಟಿಯಾಗಿ ಹಲವು ಸವಾಲುಗಳನ್ನು ಒಬ್ಬರೇ ಎದುರಿಸಿ ತೀರದಿಂದ ತೀರಕ್ಕೆ ಕ್ರಮಿಸುವುದು ಅಷ್ಟು ಸುಲಭವಾಗಿರಲಿಲ್ಲ ಎನ್ನುತ್ತಾರೆ 33 ವರ್ಷದ ಪ್ರೀತ್‌ ಚಾಂದ್‌.

ಪ್ರೀತ್ ಚಾಂದ್‌ ತಮ್ಮ ಬ್ಲಾಗ್‌ನಲ್ಲಿ ಅಂಟಾರ್ಟಿಕಾದಿಂದ ಚಿಲೆಗೆ ಪ್ರಯಾಣಿಸಿದೆ. ನಾನು ಪಿಕ್‌ ಪಾಯಿಂಟ್‌ಗೆ ಹೋಗಲು 24 ಗಂಟೆಗಳ ಸಮಯ ತೆಗೆದುಕೊಂಡೆ. ಈ ದಿನ ತುಂಬಾನೇ ಕಷ್ಟವಾರಗಿತ್ತು, ತುಂಬಾನೇ ಸುಸ್ತು ಆಗಿದೆ.

ಅಂಟಾರ್ಟಿಕಾ ದಾಟುವುದು ಅಷ್ಟು ಸುಲಭವಾಗಿರಲಿಲ್ಲ, ಅಷ್ಟು ಸಮಯವೂ ಇರಲಿಲ್ಲ, ಆದರೆ ನನ್ನಿಂದ ಆದಷ್ಟು ಪ್ರಯತ್ನಿಸಿದೆ, ಕಷ್ಟವಾಗಿದ್ದನ್ನು ಸಾಧಿಸಿದ್ದಕ್ಕೆ ಹೆಮ್ಮೆಯಿದೆ ಎಂದು ಪ್ರೀತ್‌ ಚಾಂದ್‌ ಹೇಳಿದ್ದಾರೆ.


ನನಗೆ ನನ್ನ ಬಗ್ಗೆ ಹೆಮ್ಮೆಯಿದೆ, ನನಗೆ ಯಾವಾಗ ನನ್ನಿಂದ ಸಾಧ್ಯವಿಲ್ಲ ಎಂದನಿಸುತ್ತಿತ್ತೋ ನನ್ನ ಮಿತಿ ಮೀರಿ ಪ್ರಯತ್ನ ಪಡುತ್ತಿದ್ದೆ, ನೀವು ಎಲ್ಲಿಂದ ಬಂದಿದ್ದೀರ ಎಂಬುವುದು ಮುಖ್ಯವಾಗಲ್ಲ, ನಿಮಗೆ ಏನು ಇಷ್ಟ, ಎಲ್ಲಿಂದ ಪ್ರಾರಂಭಿಸುತ್ತೀರಿ ಎಂಬುವುದು ಮುಖ್ಯವಾಗುತ್ತದೆ.

ತುಂಬಾ ಜನ ನನಗೆ ನಿನ್ನಿಂದ ಸಾಧ್ಯವಿಲ್ಲ ಎಂದು ಹೇಳಿದ್ದರು, ಆದರೆ ಅವರ ಮಾತುಗಳನ್ನು ಕೇಳದಿದ್ದದ್ದೇ ಒಳ್ಳೆಯದಾಯ್ತು.

ನಾನು ಪವರ್ತವನ್ನು ಮತ್ತಷ್ಟು ದೊಡ್ಡದು ಮಾಡಿದ್ದೇನೆ ಎಂದು ಭಾವಿಸುತ್ತೇನೆ, ನಿಮಗೆ ತುಂಬಾ ಸಾಧಿಸುವ ಸಾಮರ್ಥ್ಯ ಇದೆ, ಬೇರೆಯವರು ನಿನ್ನಿಂದ ಸಾಧ್ಯವಿಲ್ಲ ಎಂದು ಹೇಳಲು ಅವಕಾಶ ಕೊಡಬೇಡಿ ಎಂದು ಮಹಿಳೆಯರನ್ನು ಹುರಿದುಂಬಿಸಿದ್ದಾರೆ.

ದರ್ಬೆಯ ಪಂಜಾಬಿ ಮಹಿಳೆಗೆ ಇದು ಮಾಡಲು ಸಾಧ್ಯವಾಯಿತು (ಅಂಟಾರ್ಟಿಕಾ ಪರ್ವತ ಹತ್ತಿದ್ದು) ಎಂದಾದರೆ ಯಾರಿಗೆ ಬೇಕಾದರು ಇದು ಸಾಧ್ಯವಾಗುತ್ತೆ ಎಂಬುವುದಾಗಿ ಹೇಳಿದ್ದಾರೆ.

ದಕ್ಷಿಣ ಧ್ರುವದಲ್ಲಿ ಯಾತ್ರೆ ಮಾಡಿದ ಮೊದಲ ಮಹಿಳೆ ಎಂಬ ಕೀರ್ತಿ ಕ್ಯಾಪ್ಟನ್‌ ಪ್ರೀತಿ ಚಾಂದ್‌ಗೆ ಸಲ್ಲುತ್ತದೆ. ಇವರು ಬ್ರಿಟಿಷ್‌ ಆರ್ಮಿಯಲ್ಲಿ ಮೆಡಿಕಲ್ ಆಫಿಸರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಮೂಲತಃ ಭಾರತದ ಪಂಜಾಬ್‌ ಮೂಲದವರು. ತಮ್ಮ ರಜೆಯ ಸಮಯದಲ್ಲಿ ಧಕ್ಷಿಣ ಧ್ರುವ ಯಾತ್ರೆಯನ್ನು ಒಬ್ಬಂಟಿಯಾಗಿ ಕೈಗೊಳ್ಳುವ ಮೂಲಕ ಸಾಧನೆ ಮಾಡಿದ್ದಾರೆ. ಇವರು ಆರ್ಮಿಯಲ್ಲಿ ಪಿಸಿಯೋ ಥೆರಪಿಸ್ಟ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದು ಗಾಯಗೊಂಡ ಸೈನಿಕರ ಕಾಳಜಿ ಮಾಡುತ್ತಾರೆ.

ಕ್ಯಾಪ್ಟನ್‌ ಪ್ರೀತ್‌ ಚಾಂದಿ ತಮ್ಮ 19ನೇ ವಯಸ್ಸಿನಲ್ಲಿ ಆರ್ಮಿಗೆ ಸೇರುತ್ತಾರೆ, ಇದೀಗ ಬ್ರಿಟಿಷ್‌ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕ್ಯಾ.ಪ್ರೀತಿ ಇದುವರೆಗೆ ಯಾವ ಮಹಿಳೆಯರೂ ಮಾಡಿರದ ಸಾಧನೆ ಮಾಡುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ.

English summary

Preet Chandi: Indian-Origin British Army Officer sets new record for polar expedition

Preet Chandi: Indian Origin British army officer sets new record for polar expedition read on...
X
Desktop Bottom Promotion