For Quick Alerts
ALLOW NOTIFICATIONS  
For Daily Alerts

ಚೀನಾದ ಐಸ್ ಕ್ರೀಮ್ ನಲ್ಲಿ ಕೊರೊನಾ ವೈರಸ್ ಪತ್ತೆ!!!

|

ಕೊರೊನಾವನ್ನು ಜಗತ್ತಿಗೆ ಕೊಡುಗೆ ನೀಡಿದ ಕುಖ್ಯಾತಿಗೆ ಪಾತ್ರವಾಗಿದ್ದ ಚೀನಾ ದೇಶದಲ್ಲಿ ಹೊಸತೊಂದು ವಿಚಾರ ಹೊರಬಿದ್ದಿದೆ. ಅದೇನಪ್ಪ ಅಂದ್ರೆ, ಉತ್ತರ ಚೀನಾದಲ್ಲಿನ ಐಸ್ ಕ್ರೀಂನ ಕೆಲವು ಮಾದರಿಗಳಲ್ಲಿ ಮಾರಣಾಂತಿಕ ಕೊರೊನಾವೈರಸ್ ಪತ್ತೆಯಾಗಿದೆ. ಈ ಹಿಂದೆ ಫ್ರೀಜ್ ಮಾಡಿದ್ದ ಮೀನಿನ ಪೊಟ್ಟಣಗಳಲ್ಲಿ ಕಂಡುಬಂದಿದ್ದ ಈ ಕೊರೊನಾ ಇದೀಗ ಐಸ್ ಕ್ರೀಮ್ ನಲ್ಲೂ ಕಂಡುಬಂದಿರುವುದುದು ಎಲ್ಲರಲ್ಲೂ ಆತಂಕವನ್ನು ಹುಟ್ಟು ಹಾಕಿದೆ. ಹಾಗಾದ್ರೆ ಬನ್ನಿ ಏನಿದು ವಿಚಾರ ನೋಡ್ಕೊಂಡು ಬರೋಣ.

Ice Cream Samples Test Positive For Coronavirus In China

ಏನಿದು ವಿಚಾರ?:

ಚೀನಾದ ಟಿಯಾಂಜಿನ್ ಡಕಿಯೊಡಾವೊ ಫುಡ್ ಕಂಪೆನಿಯು ತಯಾರಿಸಿದ ಐಸ್ ಕ್ರೀಮ್ ನಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಇದೀಗ ಈ ಕಂಪನಿಯ ಸಂಪರ್ಕಕ್ಕೆ ಬಂದವರನ್ನು ಕಂಡುಹಿಡಿಯಲಾಗುತ್ತಿದೆ.

ಸದ್ಯ ಟಿಯಾಂಜಿನ್ ಡಕಿಯೊಡಾವೊ ಅವರ ಎಲ್ಲಾ ಉತ್ಪನ್ನಗಳನ್ನು ಈಗ ತಾತ್ಕಾಲಿಕವಾಗಿ ಸೀಲ್ ಮಾಡಲಾಗಿದೆ. ಈ ಹಿಂದೆ, ಕಂಪನಿಯು ತನ್ನ ಉತ್ಪನ್ನದ ಮೂರು ಮಾದರಿಗಳನ್ನು ಕೊರೊನಾ ಪರೀಕ್ಷೆಗೆ ಕಳುಹಿಸಿತ್ತು. ಅದರಲ್ಲಿ ಮೂರು ಉತ್ಪನ್ನಗಳ ಫಲಿತಾಂಶವು ಪಾಸಿಟಿವ್ ಆಗಿದೆ ಎಂದು ವರದಿಗಳು ಹೇಳುತ್ತಿವೆ.

ಇಲ್ಲಿಯವರೆಗೆ ನಡೆಸಿದ ತನಿಖೆಯ ಪ್ರಕಾರ, ಕಂಪನಿಯು ಐಸ್ ಕ್ರೀಂನ ಬ್ಯಾಚ್ಗಳನ್ನು ತಯಾರಿಸಲು ಅನೇಕ ಕಚ್ಚಾ ವಸ್ತುಗಳನ್ನು ಬಳಸಿದೆ. ಮತ್ತು ಅವುಗಳಲ್ಲಿ ಕೆಲವು ಆಮದು ಮಾಡಿಕೊಳ್ಳಲ್ಪಟ್ಟವು. ಉದಾಹರಣೆಗೆ, ಹಾಲಿನ ಪುಡಿಯನ್ನು ನ್ಯೂಜಿಲೆಂಡ್ ನಿಂದ ಆಮದು ಮಾಡಿಕೊಳ್ಳಲಾಗಿದ್ದರೆ, ವೇ ಪೌಡರನ್ನುಉಕ್ರೇನ್ ನಿಂದ ಆಮದು ಮಾಡಿಕೊಳ್ಳಲಾಗಿತ್ತು. ವರದಿಯ ನಂತರ 1600 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕ್ವಾರೈಂಟೈನ್ ಗೆ ಒಳಪಡಿಸಲಾಗಿದೆ. ಅದರಲ್ಲಿ ೭೦೦ ಜನರ ವರದಿ ನೆಗೆಟಿವ್ ಆಗಿದ್ದು, ಉಳಿದವರ ಫಲಿತಾಂಶ ಇನ್ನಷ್ಟೇ ಬರಬೇಕಾಗಿದೆ.

ಅಂದಹಾಗೇ ಚೀನಾದ ಆಹಾರ ಪದಾರ್ಥಗಳಲ್ಲಿ ವೈರಸ್ ಕಂಡುಬಂದಿರುವುದು ಇದೇ ಮೊದಲೇನಲ್ಲ. ವಿವಿಧ ದೇಶದಿಂದ ಚೀನಾಕ್ಕೆ ಆಮದು ಆದ ಹಲವಾರು ಪದಾರ್ಥಗಳಲ್ಲಿ ವೈರಸ್ ಪತ್ತೆಯಾಗಿದೆ ಎಂದು ಚೀನಾ ಆಗಾಗ ಆರೋಪ ಮಾಡುತ್ತಲೇ ಇದೆ. ಇದೀಗ ಐಸ್ ಕ್ರೀಮ್ ನಲ್ಲಿ ವೈರಸ್ ದೃಢಪಟ್ಟಿರುವುದು ಆತಂಕ ಸೃಷ್ಟಿ ಮಾಡಿದೆ.

English summary

Ice Cream Samples Test Positive For Coronavirus In China

Here we told about Ice Cream Samples Test Positive For Coronavirus In China, read on.
Story first published: Tuesday, January 19, 2021, 16:18 [IST]
X
Desktop Bottom Promotion