Just In
Don't Miss
- Automobiles
ಅನಾವರಣಕ್ಕೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಟಾಟಾ ನ್ಯೂ ಜನರೇಷನ್ ಸಫಾರಿ
- Finance
ಕೊರೊನಾ ಕೃಪೆಯಿಂದ ತುಂಬಿ ತುಳುಕುತ್ತಿರುವ ಸಿರಿವಂತರ ತಿಜೋರಿ; ಬಡವರ ಬದುಕು ಮತ್ತೂ ಕಷ್ಟ ರೀ
- News
ಇನ್ನು ಶೇ 5ರಷ್ಟು ಅಸಮಾಧಾನ ಉಳಿದಿದೆ; ಲಕ್ಷ್ಮಣ ಸವದಿ!
- Movies
ಸುದೀಪ್ 'ಫ್ಯಾಂಟಮ್' ಸಿನಿಮಾ 'ವಿಕ್ರಾಂತ್ ರೋಣ' ಆಗಿದ್ದೇಕೆ? ನಿರ್ದೇಶಕರು ಹೇಳಿದ್ದೇನು?
- Sports
ಐಎಸ್ಎಲ್ 2020-21: ಅಂಕ ಹಂಚಿಕೊಂಡ ಜೆಮ್ಷೆಡ್ಪುರ, ಹೈದರಾಬಾದ್
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಕರ ರಾಶಿಯವರು ಈ ರೀತಿಯ ಸ್ವಭಾವದವರಾಗಿರುತ್ತಾರೆ
ನಾವು ಹುಟ್ಟಿದ ದಿನಾಂಕ, ಸಮಯಕ್ಕೆ ತಕ್ಕಂತೆ ರಾಶಿ ನಿಗದಿಯಾಗಿರುತ್ತೆ. ಹೇಗೆ ವ್ಯಕ್ತಿಯಿಂದ-ವ್ಯಕ್ತಿಯ ಸ್ವಭಾವದಲ್ಲಿ ಭಿನ್ನತೆ ಇರುತ್ತದೆಯೋ ಹಾಗೆಯೇ ಆಯಾ ರಾಶಿಗಳಿಗೆ ಅನುಗುಣವಾಗಿ ಅವರ ಸ್ವಭಾವದಲ್ಲಿ ವ್ಯತ್ಯಾಸವಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ನಾವು ಈ ಲೇಖನದಲ್ಲಿ ಮಕರ ರಾಶಿಯಲ್ಲಿ ಹುಟ್ಟಿದವರ ಗುಣ-ಸ್ವಭಾವಗಳ ಬಗ್ಗೆ ಹೇಳಿದ್ದೇವೆ. 12 ರಾಶಿಗಳಲ್ಲಿ 10ನೇ ರಾಶಿ ಮಕರ ರಾಶಿ. ನೀವು ಈ ರಾಶಿಯವರಲ್ಲಿ ಕೆಲವೊಂದು ಗುಣಗಳನ್ನು ಕಾಣಬಹುದು, ಇವರಲ್ಲಿರುವ ಆ ಸ್ಪೆಷಲ್ ಗುಣಗಳೇನು ಎಂದು ನೋಡೋಣ ಬನ್ನಿ:

ಸದಾ ಕೆಲಸ-ಕೆಲಸ ಅಂತ ಮುಳುಗಿರುತ್ತಾರೆ
ಮಕರ ರಾಶಿಯವರನ್ನು workaholicಎಂದೇ ಹೇಳಬಹುದು, ಅಂದ್ರೆ ಸದಾ ಕೆಲಸ-ಕೆಲಸ ಅಂತಲೇ ಇರುತ್ತಾರೆ. ಇವರು ಇತರ ವಿಷಯಗಳಿಗಿಂತ ಕೆಲಸಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಈ ಗುಣ ಕೆಲವೊಮ್ಮೆ ಅವರ ಆಪ್ತರಿಗೆ ಕಿರಿಕಿರಿಯಾಗಬಹುದು, ಸದಾ ಕೆಲಸ ಅಂತ ಇರುತ್ತೀಯ, ನಮಗೆ ಸಮಯವೇ ಕೊಡಲ್ಲ ಅನ್ನಬಹುದು. ಆದರೆ ಸದಾ ಕೆಲಸದಲ್ಲಿ ಮುಳುಗಿರುವ ಇವರ ಈ ಗುಣದಿಂದಾಗಿ ಕೆಲಸದ ಜಾಗದಲ್ಲಿ ಮೆಚ್ಚುಗೆ ಗಳಿಸಿರುತ್ತಾರೆ.

ತುಂಬಾ ಶಿಸ್ತಿನ ಸ್ವಭಾವದರು
ಇವರು ಎಲ್ಲದರಲ್ಲೂ ಶಿಸ್ತು ಬಯಸುತ್ತಾರೆ. ಕೆಲಸವಿರಲಿ, ವೈಯಕ್ತಿಕ ವಿಷಯವಿರಲಿ ಪ್ರತಿಯೊಂದರಲ್ಲೂ ಒಂದು ರೀತಿಯ ಶಿಸ್ತು ಹೊಂದಿರುತ್ತಾರೆ.

ಬೇರೆಯವರ ಭಾವನೆಗಳನ್ನು ಬೇಗನೆ ಅರ್ಥ ಮಾಡಿಕೊಳ್ಳುತ್ತಾರೆ
ಅವರು ಇತರರ ಸ್ವಭಾವ ಬೇಗನೆ ಅರ್ಥ ಮಾಡಿಕೊಂಡು ಬಿಡುತ್ತಾರೆ. ಅವರ ಸ್ವಭಾವವೇನು ಎಂಬುವುದೇನು ಅರಿತು ನಾಜೂಕಾಗಿ ವರ್ತಿಸುತ್ತಾರೆ. ಇವರಿಗೆ ಬೇಗನೆ ಕೋಪ ಬರಲ್ಲ, ಆದ್ರೆ ಬಂದರೆ ತಡೆಯಲು ಸಾಧ್ಯವಿಲ್ಲ.

ವೃತ್ತಿ ಬಗ್ಗೆ ಮಹತ್ವಾಕಾಂಕ್ಷೆ ಹೊಂದಿರುತ್ತಾರೆ
ಮಕರ ರಾಶಿಯವರು ತಮ್ಮ ವೃತ್ತಿ ಬಗ್ಗೆ ತುಂಬಾನೇ ಮಹತ್ವಾಕಾಂಕ್ಷೆ ಹೊಂದಿರುತ್ತಾರೆ. ಭವಿಷ್ಯದ ಕುರಿತು ಪ್ಲ್ಯಾನ್ ಅವರಲ್ಲಿರುತ್ತೆ.
ಅಲ್ಲದೆ ಅವರು ತಮ್ಮ ಮಾತಿಗೆ ಸದಾ ಬದ್ಧರಾಗಿರುತ್ತಾರೆ, ತಾವಾಡಿದ ಮಾತಿಗೆ ವಿರುದ್ಧವಾಗಿ ಹೋಗುವುದೇ ಇಲ್ಲ.

ತಮ್ಮ ಆಪ್ತರಿಗೆ ಸದಾ ಮಾರ್ಗದರ್ಶಿಯಾಗಿರುತ್ತಾರೆ
ಇವರು ತಮ್ಮ ಆಪ್ತರಿಗೆ ಸದಾ ಮಾರ್ಗದರ್ಶಕರಾಗಿರುತ್ತಾರೆ. ಯಾವುದೇ ವಿಷಯವನ್ನು ನಿರ್ಧರಿಸುವಾಗ ತಪ್ಪು-ಸರಿ ಅವಲೋಕಿಸಿಯೇ ನಿರ್ಧರಿಸುತ್ತಾರೆ, ನಿರ್ಧಾರವನ್ನು ಹೃದಯದಿಂದ ತೆಗೆದುಕೊಳ್ಳುವ ಬದಲು ಆಲೋಚಿಸಿ ತೆಗೆದುಕೊಳ್ಳುತ್ತಾರೆ.

ನೋಯಿಸುವುದರನ್ನು ಬೇಗನೆ ಕ್ಷಮಿಸುವುದಿಲ್ಲ
ಇವರು ಅಷ್ಟೇನು ಭಾವನಾತ್ಮಕವಾದ ವ್ಯಕ್ತಿ ಅಲ್ಲದಿದ್ದರೂ ಮೋಸ ಮಾಡಿದವರನ್ನು, ನಾಯಿಸಿದವರನ್ನು ಸುಲಭವಾಗಿ ಕ್ಷಮಿಸುವುದಿಲ್ಲ.

ಬುದ್ಧಿವಂತರು, ಲೆಕ್ಕಾಚಾರದ ವ್ಯಕ್ತಿಗಳು'
ಇವರು ತುಂಬಾ ಹೈ ಸ್ಟ್ಯಾಂಡರ್ಡ್ ವ್ಯಕ್ತಿಗಳಾಗಿರುತ್ತಾರೆ. ಅವರು ಯಾವುದೇ ವಿಷಯವಾಗಿರಲಿ ತುಂಬಾ ಲೆಕ್ಕಾಚಾರದ ವ್ಯಕ್ತಿಗಳು, ಇವರು ವ್ಯಂಗ್ಯವಾಗಿ ಮಾತನಾಡುವ ರೀತಿ ಕೆಲವೊಮ್ಮೆ ಇಷ್ಟವಾಗಲ್ಲ.