For Quick Alerts
ALLOW NOTIFICATIONS  
For Daily Alerts

ಆಷಾಢ ಮಾಸ 2021: ಈ ತಿಂಗಳಲ್ಲಿ ಶುಭಕಾರ್ಯ ಮಾಡಬಾರದೆನ್ನಲು ಇಲ್ಲಿವೆ ವೈಜ್ಞಾನಿಕ ಕಾರಣಗಳು

|

ಸಾಮಾನ್ಯವಾಗಿ ಶುಭ ಕಾರ್ಯಗಳಿಗೆ ಒಳ್ಳೆಯದಲ್ಲ ಎಂದು ಹೇಳುವ ತಿಂಗಳೆಂದರೆ ಅದು ಆಷಾಢ ತಿಂಗಳು. ಈ ಸಮಯ ಅಶುಭ ಎಂಬ ನಂಬಿಕೆ ನಮ್ಮಲ್ಲಿದೆ. ಜುಲೈ 11ರಿಂದ ಅಂದರೆ ನಿನ್ನೆಯಿಂದ ಕರ್ನಾಟಕದಲ್ಲಿ ಆಷಾಢ ಮಾಸ ಆರಂಭವಾಗಿದ್ದು, ಇದು ಆಗಸ್ಟ್‌ 8ರವರೆಗೆ ಇರಲಿದೆ.

ಸಾಮಾನ್ಯವಾಗಿ ಶುಭ ಕಾರ್ಯಗಳಿಗೆ ಒಳ್ಳೆಯದಲ್ಲ ಎಂದು ಹೇಳುವ ತಿಂಗಳೆಂದರೆ ಅದು ಆಷಾಢ ತಿಂಗಳು. ಈ ಸಮಯ ಅಶುಭ ಎಂಬ ನಂಬಿಕೆ ನಮ್ಮಲ್ಲಿದೆ. ಜುಲೈ ೧೧ರಿಂದ ಅಂದರೆ ನಿನ್ನೆಯಿಂದ ಕರ್ನಾಟಕದಲ್ಲಿ ಆಷಾಢ ಮಾಸ ಆರಂಭವಾಗಿದ್ದು, ಇದು ಆಗಸ್ಟ್‌ ೮ರವರೆಗೆ ಇರಲಿದೆ. ಆದ್ದರಿಂದ ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ.

ಶುಭ ಕಾರ್ಯಕ್ರಮಗಳಾದ ಮದುವೆಗಳು, ಗೃಹಪ್ರವೇಶ, ಪವಿತ್ರ ದಾರವನ್ನು ಧರಿಸುವುದು, ಮನೆ ನಿರ್ಮಾಣ ಪ್ರಾರಂಭ ಇತರ ಹಲವು ಪ್ರಮುಖ ಕಾರ್ಯಗಳನ್ನು ಆಷಾಢ ತಿಂಗಳ ಕಾರಣ ಮುಂದೂಡಲಾಗುವುದು. ಅಷ್ಟೇ ಅಲ್ಲ, ಗಂಡ-ಹೆಂಡತಿ ಈ ಸಮಯದಲ್ಲಿ ಒಟ್ಟಿಗೆ ಸೇರಬಾರದು ಎಂಬ ನಿಯಮವೂ ಇದೆ. ಇದನ್ನು ಶೂನ್ಯ ಮಾಸ ಎಂದೂ ಕರೆಯುತ್ತಾರೆ. ಇದರ ಹಿಂದೆ ಇರುವ ವೈಜ್ಞಾನಿಕ ಮಹತ್ವ ಏನು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಹಿಂದೂ ಪಂಚಾಂಗದ ಪ್ರಕಾರ, ಆಷಾಢ ತಿಂಗಳು ಜೂನ್ - ಜುಲೈನಲ್ಲಿ ಬರುತ್ತದೆ. ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ, ಹೊಸದಾಗಿ ಮದುವೆಯಾದ ಸೊಸೆ ಮತ್ತು ಅತ್ತೆ ಒಂದೇ ಮನೆಯಲ್ಲಿ ಉಳಿಯುವುದಿಲ್ಲ. ಜೊತೆಗೆ ಹೊಸದಾಗಿ ಮದುವೆಯಾದ ದಂಪತಿಗಳು ಈ ತಿಂಗಳಲ್ಲಿ ಪರಸ್ಪರ ದೂರವಿರುತ್ತಾರೆ, ಅಂದರೆ ಹೆಂಡತಿ ಒಂದು ತಿಂಗಳ ಕಾಲ ತಾಯಿಯ ಮನೆಗೆ ಹೋಗುತ್ತಾಳೆ. ಆಷಾಢ ತಿಂಗಳನ್ನು ತಾಯಿಯ ಮನೆಯಲ್ಲಿ ಕಳೆದ ನಂತರ, ಶ್ರಾವಣ ತಿಂಗಳಲ್ಲಿ ಹಿಂತಿರುಗುತ್ತಾಳೆ. ಈ ಆಚರಣೆಗೆ ಹಲವಾರು ಕಾರಣಗಳಿವೆ.

ವೈಜ್ಞಾನಿಕ ದೃಷ್ಟಿಕೋನ:

ವೈಜ್ಞಾನಿಕ ದೃಷ್ಟಿಕೋನ:

ಜೂನ್‌ನಲ್ಲಿ ಹೊಸದಾಗಿ ಮದುವೆಯಾದ ದಂಪತಿಗಳು ದೈಹಿಕ ಸಂಪರ್ಕ ಬೆಳೆಸಿದಾಗ, ಬೇಸಿಗೆಯಲ್ಲಿ ಮಗು ಹುಟ್ಟುವ ಸಾಧ್ಯತೆಯಿದೆ. ಆಷಾಢದಲ್ಲಿ ಗರ್ಭಧಾರಣೆ ನಡೆದರೆ, ಮಗುವಿನ ಜನನವು 9 ತಿಂಗಳ ನಂತರ ಅಂದರೆ ಏಪ್ರಿಲ್ -ಮೇ ನಲ್ಲಿ ಆಗಬಹುದು. ಇದು ಬಿಸಿಲು ಮತ್ತು ಶುಷ್ಕ ಹವಾಮಾನವನ್ನು ಹೊಂದಿರುವ ಬಿಸಿಯಾದ ಕಾಲವಾಗಿದೆ. ಅಂತಹ ಹವಾಮಾನದಲ್ಲಿ ಜನಿಸಿದ ಮಗು ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು, ಏಕೆಂದರೆ ಬೇಸಿಗೆ ಅನೇಕ ವಾಯುವಿನ ಮೂಲಕ ಹರಡುವ ರೋಗಗಳ ಋತುವಾಗಿದೆ. ಇದನ್ನು ತಪ್ಪಿಸಲು, ನವವಿವಾಹಿತ ದಂಪತಿಗಳನ್ನು ಈ ತಿಂಗಳಲ್ಲಿ ಬೇರೆಯಾಗುವಂತೆ ಸೂಚಿಸಲಾಗಿದ್ದು, ಆಶಾಢ ತಿಂಗಳಲ್ಲಿ ಗರ್ಭಧಾರಣೆ ತಪ್ಪಿಸುವದೇ ಇದರ ಮುಖ್ಯ ಉದ್ದೇಶವಾಗಿದೆ.

ಸಾಮಾಜಿಕ-ಆರ್ಥಿಕ ಕಾರಣಗಳು:

ಸಾಮಾಜಿಕ-ಆರ್ಥಿಕ ಕಾರಣಗಳು:

ಆಷಾಢವನ್ನು ಕೃಷಿಕ ಭಾರತೀಯ ಸಮಾಜವು ತಟಸ್ಥ ತಿಂಗಳು ಎಂದು ಪರಿಗಣಿಸುತ್ತದೆ ಏಕೆಂದರೆ ಇದು ಮಳೆಗಾಲದ ಪ್ರಾರಂಭವಾಗಿದೆ ಮತ್ತು ಮೊದಲ ಮಳೆಯ ನಂತರ ಬಿತ್ತನೆ ಪ್ರಾರಂಭವಾಗುತ್ತದೆ. ಆದ್ದರಿಂದ ಈ ತಿಂಗಳು ಏನು ಕೆಲಸವಿಲ್ಲದೇ ಸುಮ್ಮನೇ ಇರಬೇಕಾಗುವುದು. ಈ ರೀತಿ ದುಡಿಮೆಯಿಲ್ಲದೇ, ಸಂಪಾದನೆಯಿಲ್ಲದೇ ಇರುವಾಗ ಶುಭ ಕಾರ್ಯಗಳನ್ನು ಮಾಡುವುದಾದರೂ ಹೇಗೆ? ಅದೇ ಕಾರಣಕ್ಕಾಗಿ ಆಷಾಢ ತಿಂಗಳಲ್ಲಿ ಮದುವೆಗಳನ್ನು ಸಹ ನಡೆಸುವುದಿಲ್ಲ.

ಜ್ಯೋತಿಷ್ಯ ಶಾಸ್ತ್ರದ ನಿಲುವುಗಳು:

ಜ್ಯೋತಿಷ್ಯ ಶಾಸ್ತ್ರದ ನಿಲುವುಗಳು:

ಆಷಾಢ ತಿಂಗಳಲ್ಲಿ ದಂಪತಿಗಳು ಸೇರಿದರೆ ಅವರು ಏಪ್ರಿಲ್ ನಲ್ಲಿ ಅಂದರೆ ಚೈತ್ರ ಮಾಸದಲ್ಲಿ ಮಗು ಪಡೆಯಬಹುದು. ಇದು ಒಳ್ಳೆಯದಲ್ಲ. ಏಕೆಂದರೆ ಆ ಸಮಯದಲ್ಲಿ ಸೂರ್ಯ ಬುಧ ಗ್ರಹದಲ್ಲಿರತ್ತಾನೆ. ಸಾಮಾನ್ಯವಾಗಿ ಮಕ್ಕಳ ಜನನವಾದಾಗ ಸೂರ್ಯ ಶುಕ್ರ ಗ್ರಹದಲ್ಲಿರಬೇಕು ಎಂಬ ನಂಬಿಕೆಯಿದೆ. ಈ ಸಮಯದಲ್ಲಿ ಹುಟ್ಟಿದ ಮಕ್ಕಳು ಹೆಚ್ಚು ಉನ್ನತ ಸ್ಥಾನಕ್ಕೆ ಹೋಗುತ್ತಾರೆ, ಪ್ರಸಿದ್ಧ ವ್ಯಕ್ತಿಗಳಾಗುತ್ತಾರೆ ಎಂಬ ಪರಿಕಲ್ಪನೆಯಿದೆ. ಆದ್ದರಿಂದ ಜನರು ತಮ್ಮ ಮಗು ಸೂರ್ಯ ಬುಧ ಗ್ರಹದಲ್ಲಿರುವಾಗ ಹುಟ್ಟುವುದನ್ನು ತಪ್ಪಿಸಲು ಹೀಗೆ ಮಾಡುವರು.

ಭಾರತದ ಅನೇಕ ಸ್ಥಳಗಳಲ್ಲಿ ಜನರು ಆಷಾಢ ತಿಂಗಳಲ್ಲಿ ಕೈ ಮತ್ತು ಕಾಲುಗಳಿಗೆ ಮೆಹಂದಿ ಹಚ್ಚುತ್ತಾರೆ. ಈ ತಿಂಗಳಲ್ಲಿ (ಜೂನ್ - ಜುಲೈ) ಸಂಭವಿಸಬಹುದಾದ ಹವಾಮಾನ ಬದಲಾವಣೆಗಳ ಪರಿಣಾಮಗಳನ್ನು ತಡೆಯುವುದೇ ಇದರ ಮುಖ್ಯ ಉದ್ದೇಶ. ಆಷಾಢ ಮಾಸ ಶುಭ ಕಾರ್ಯಕ್ರಮಗಳಿಗೆ ಉತ್ತಮವಲ್ಲದಿದ್ದರೂ, ಇದು ಪೂಜೆಗಳು ಮತ್ತು ವ್ರತಗಳಿಗೆ ಬಹಳ ಶುಭವಾಗಿದೆ. ಪುರಿ ಜಗನ್ನಾಥ ದೇವಸ್ಥಾನದಲ್ಲಿ ರಥಯಾತ್ರೆ ಈ ತಿಂಗಳಲ್ಲಿ ಆಚರಿಸಲಾಗುತ್ತದೆ. ಚತುರ್ಮಾಸ ವ್ರತ ಈ ತಿಂಗಳಲ್ಲಿ ಪ್ರಾರಂಭವಾಗುತ್ತದೆ.

English summary

Ashada Masam 2021: Scientific Facts behind Ashadha Masam

Here we talking about Ashada Masam 2021: Scientific Facts behind Ashadha Masam, read on
Story first published: Monday, July 12, 2021, 16:18 [IST]
X
Desktop Bottom Promotion