For Quick Alerts
ALLOW NOTIFICATIONS  
For Daily Alerts

ನಿಮ್ಮ ಅದೃಷ್ಟ ಮತ್ತು ಪ್ರೀತಿಯ ಜೀವನದ ಬಗ್ಗೆ ತಿಳಿಯಬೇಕಾ? ಹಾಗಿದ್ದರೆ ಇದೇ ಮೇ ತಿಂಗಳ ರಾಶಿಚಕ್ರದ ಭವಿಷ್ಯ ಅರಿಯಿರಿ

By Divya Pandit
|

ಭವಿಷ್ಯ ಎಂದಾಗ ಸಾಮಾನ್ಯವಾಗಿ ಮನಸ್ಸು ಬಯಸುವುದು ಒಳ್ಳೆಯ ವಿಚಾರಗಳು ಏನಿವೆ ಎಂದು. ಆದರೆ ವಾಸ್ತವವಾಗಿ ಅದೃಷ್ಟದ ವಿಚಾರದೊಂದಿಗೆ ದುರಾದೃಷ್ಟದ ಸಂಗತಿಗಳನ್ನು ಸಹ ಸಮನಾಗಿಯೇ ಸ್ವೀಕರಿಸಬೇಕಾಗುವುದು. ಹೊಸ ವರ್ಷದ ಆರಂಭವಾಗಿ ಆಗಲೇ 5ನೇ ತಿಂಗಳಿಗೆ ಕಾಲಿಡುತ್ತಿದ್ದೇವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಗ್ರಹಗತಿಗಳ ಬದಲಾವಣೆ ಹಾಗೂ ಸಂಚಾರಗಳಿಂದಾಗಿ ಪ್ರತಿಯೊಬ್ಬರ ರಾಶಿಚಕ್ರದ ಮೇಲೆ ವಿಶೇಷವಾದ ಪ್ರಭಾವ ಉಂಟಾಗುವುದು. ಅಲ್ಲದೆ ಪ್ರೀತಿ ಹಾಗೂ ಅದೃಷ್ಟವು ಹೊಸ ತಿರುವನ್ನು ತಂದುಕೊಡುವುದು ಎಂದು ಹೇಳಲಾಗುತ್ತದೆ.

ಇಂಗ್ಲಿಷ್ ಪಂಚಾಂಗದ ಪ್ರಕಾರ 5ನೇ ತಿಂಗಳಾದ ಮೇ ತಿಂಗಳಲ್ಲಿ ನಿಮ್ಮ ಪ್ರೀತಿಯ ಜೀವನ ಹೇಗೆ ಬದಲಾವಣೆ ಕಾಣುವುದು ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಮುಂದೆ ವಿವರಿಸಲಾದ ರಾಶಿಚಕ್ರದ ವಿವರಣೆಯನ್ನು ಪರಿಶೀಲಿಸಿ.

ಮೇಷ:

ಮೇಷ:

ಈ ತಿಂಗಳಲ್ಲಿ ಬರುವ ಅಮವಾಸ್ಯೆಯು ನಿಮಗೆ ಅವಿಭಾಜ್ಯ ಹಣ ಮತ್ತು ಆದಾಯದ ಅವಕಾಶಗಳನ್ನು ತಂದೊಡ್ಡುತ್ತದೆ. ತಿಂಗಳ ಆರಂಭದಲ್ಲಿ ಅನೇಕ ಸಾಮಾಜಿಕ ಕೆಲಸಗಳಲ್ಲಿ ಕೈಗೊಳ್ಳುವ ಸಾಧ್ಯತೆಗಳಿವೆ. ಆದರೆ ನೀವು ಯಾವುದೋ ಒಂದು ವಿಚಾರಕ್ಕೆ ಬದ್ಧರಾಗಿರುವುದು ಅಥವಾ ಒಳ್ಳೆಯದನ್ನು ಬಿಟ್ಟುಬಿಡುವ ಕೆಲಸಕ್ಕೆ ಹೋಗಬಾರದು. ತಿಂಗಳ ಕೊನೆಯಲ್ಲಿ ನೀವು ಸಹ ಕೆಲವು ಅನಾನುಕೂಲತೆಯನ್ನು ಅನುಭವಿಸಬಹುದು.

ಅದೃಷ್ಟದ ದಿನಗಳು : 5,15,24

ದುರಾದೃಷ್ಟದ ದಿನಗಳು: 12, 16

ವೃಷಭ:

ವೃಷಭ:

ಈ ತಿಂಗಳ ಅಮವಾಸ್ಯೆಯ ಅಂತ್ಯದಲ್ಲಿ ಒಂದು ಕಠಿಣ ಯೋಜನೆಯನ್ನು ಕೈಗೊಳ್ಳುವ ಸಾಧ್ಯತೆಗಳಿವೆ. ಕೆಲವು ಗ್ರಹಗಳ ಬದಲಾವಣೆಯಿಂದಾಗಿ ನಿಮ್ಮ ಆಶಯದಂತೆ ಹೆಚ್ಚು ಸಾಧಿಸುವ ಶಕ್ತಿಯನ್ನು ಪಡೆದುಕೊಳ್ಳುವಿರಿ. ನಿಮ್ಮ ಗುರಿಯ ಮೇಲೆ ಬಹಳಷ್ಟು ಹಿಡಿತವನ್ನು ನೀವು ಹೊಂದಿರಬೇಕು ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಜೊತೆಗೆ ನಿಮ್ಮನ್ನು ಹಿಡಿದಿಡುವಂತಹ ಅಥವಾ ಕೆಳಕ್ಕೆ ತಳ್ಳುವಂತಹ ಸಂಪರ್ಕವನ್ನು ಕತ್ತರಿಸಿಕೊಳ್ಳಬೇಕು.

ಅದೃಷ್ಟದ ದಿನಗಳು: 17, 19, 20

ದುರಾದೃಷ್ಟದ ದಿನಗಳು: 7, 20.

ಮಿಥುನ:

ಮಿಥುನ:

ಇದು ನಿಮ್ಮ ತಿಂಗಳು ಎಂದು ಹೇಳಬಹುದು. ಅಮವಾಸ್ಯೆಯ ನಂತರ ನೀವು ಅತೀಂದ್ರಿಯ ಸಾಮಥ್ರ್ಯವನ್ನು ಪಡೆದುಕೊಳ್ಳುವಿರಿ. ತಿಂಗಳ ಮಧ್ಯದಲ್ಲಿ ಸೂರ್ಯನು ನಿಮ್ಮ ರಾಶಿಗೆ ಪ್ರವೇಶಿಸಿದಾಗ ನೀವು ವಿಪರೀತ ಶಕ್ತಿಯನ್ನು ನಿರೀಕ್ಷಿಸಬಹುದು. ಒಟ್ಟಾರೆಯಾಗಿ ಈ ವರ್ಷವು ನಿಮಗೆ ಒಂದು ದೊಡ್ಡ ವರ್ಷವಾಗಿ ಪರಿಣಮಿಸಲಿದೆ. ನೀವು ನಿರೀಕ್ಷಿಸಿದಕ್ಕಿಂತ ಹೆಚ್ಚಿನ ಬದಲಾವಣೆಯನ್ನು ಕಾಣಬಹುದು.

ಅದೃಷ್ಟದ ದಿನಗಳು: 13, 18, 25

ದುರಾದೃಷ್ಟದ ದಿನಗಳು: 7, 22

ಕರ್ಕ:

ಕರ್ಕ:

ತಿಂಗಳ ಮಧ್ಯದಲ್ಲಿ ಅಂದರೆ ಅಮವಾಸ್ಯೆಯ ಅಂತ್ಯದಲ್ಲಿ ನೀವು ಸಾಮಾಜಿಕವಾಗಿ ತೆರೆದುಕೊಳ್ಳುವ ಸಾಧ್ಯತೆಗಳಿವೆ. ದೊಡ್ಡ ಗುಂಪಿನಲ್ಲಿರುವ ಸ್ನೇಹಿತರ ಬಳಗದಲ್ಲಿ ನೀವು ಸಂತೋಷವನ್ನು ಪಡೆಯುವಿರಿ. ಹರಿವಿನಂತಿರುವ ಅವಕಾಶಗಳೊಂದಿಗೆ ನೀವು ಸಹ ಭಾವನಾತ್ಮಕವಾಗಿ ತೂರಿಕೊಂಡು ಹೋಗುವಿರಿ. ಮೇ29 ರ ಹುಣ್ಣಿಮೆಯ ದಿನ ನಿಮ್ಮ ಸಾಮಾಜಿಕ ಜೀವನದ ಮೇಲೆ ಹೆಚ್ಚಿನ ಬೆಳಕು ಚೆಲ್ಲುವುದು.

ಅದೃಷ್ಟದ ದಿನಗಳು: 7, 18, 27.

ದುರಾದೃಷ್ಟದ ದಿನಗಳು: 5,24.

ಸಿಂಹ:

ಸಿಂಹ:

ಈ ತಿಂಗಳು ನಿಮಗೆ ಧನಾತ್ಮಕವಾದ ಹಣಕಾಸಿನ ಹರಿವು ಅನುಕೂಲಕರ ಸ್ಥಿತಿಯನ್ನು ರಚಿಸುವುದು. ನೀವು ತಾಳ್ಮೆಯನ್ನು ಪಡೆದುಕೊಳ್ಳುವಿರಿ. ಇನ್ನೊಂದೆಡೆ ಸೂರ್ಯನು ಮಿಥುನ ರಾಶಿಗೆ ಪ್ರವೇಶಿಸುವುದರಿಂದ ಸಾಮಾಜಿಕ ಜೀವನದಲ್ಲಿ ಹೆಚ್ಚಿನ ಗಮನ ನೀಡಬೇಕು ಎನ್ನುವುದನ್ನು ಭಾವಿಸುವಿರಿ. ನೀವು ಈಗ ತೆಗೆದುಕೊಳ್ಳುವ ತೀರ್ಮಾನವು ಮುಂಬರುವ ದಿನಗಳಲ್ಲಿ ಹೆಚ್ಚಿನ ಪರಿಣಾಮ ಬೀರುವುದು.

ಅದೃಷ್ಟದ ದಿನಗಳು: 8, 11, 23

ದುರಾದೃಷ್ಟದ ದಿನಗಳು: 22, 28

ಕನ್ಯಾ:

ಕನ್ಯಾ:

ಬುಧನು ಮೇ 13ರಂದು ವೃಷಭ ರಾಶಿಗೆ ಪ್ರವೇಶ ಪಡೆಯುವನು. ಇದರಿಂದಾಗಿ ಈ ಅಮವಾಸ್ಯೆಯು ನಿಮಗೆ ವೃತ್ತಿಪರ ಸಮಸ್ಯೆಯನ್ನು ಹೆಚ್ಚು ಸ್ಪಸ್ಟಪಡಿಸುತ್ತದೆ. ನೀವು ಶಾಶ್ವತವಾಗಿ ನಿಲ್ಲುವ ಹಂತವನ್ನು ತೆಗೆದುಕೊಳ್ಳಲು ಧೈರ್ಯವನ್ನು ಹೊಂದಬಹುದು. ಮತ್ತೊಂದೆಡೆ ಹುಣ್ಣಿಮೆಯ ಸಮಯದಲ್ಲಿ ನೀವು ಭೂಮಿಗೆ ಸಂಬಂಧಿತ ವ್ಯವಹಾರ ಮಾಡುವ ಸಾಧ್ಯತೆಗಳಿವೆ. ರಾಶಿಚಕ್ರದ ಅನುಸಾರ ನೀವು ಎಲ್ಲವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಅದೃಷ್ಟದ ದಿನಗಳು: 2, 18, 25.

ದುರಾದೃಷ್ಟದ ದಿನಗಳು: 7, 23.

ತುಲಾ:

ತುಲಾ:

ಹಣದ ಹಿಂದೆ ಹೋಗುವಂತೆ ಈ ಅಮವಾಸ್ಯೆ ನಿಮ್ಮನ್ನು ಪ್ರಚೋದಿಸುವುದು. ಹಣಕಾಸಿಗೆ ಸಂಬಂಧಿಸದ ಕೆಲವು ಸತ್ಯಗಳನ್ನು ನೀವು ಆಧರಿಸಬೇಕಾಗುವುದು. ನಿಮ್ಮ ವೆಚ್ಚಗಳ ನಿಯಂತ್ರಣವನ್ನು ನೀವು ಪಡೆಯಬೇಕು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಮೇ 25ರಂದು ಚಂದ್ರನ ಚಲನೆಯು ಶುಕ್ರ ಮತ್ತು ಶನಿಯ ವಿರೋಧದಿಂದ ನೆರವೇರುತ್ತದೆ ಎಂದು ಊಹಿಸಲಾಗಿದೆ. ನಿಮ್ಮ ಆರಾಮ ವಲಯದಿಂದ ಹೊರಬರಲು ನೀವು ಪರಿಗಣಿಸಬೇಕಾದ ಸಮಯ ಇದು.

ಅದೃಷ್ಟದ ದಿನಗಳು: 17, 23, 27

ದುರಾದೃಷ್ಟದ ದಿನಗಳು: 7, 25.

ವೃಶ್ಚಿಕ:

ವೃಶ್ಚಿಕ:

ತಿಂಗಳ ಮಧ್ಯದ ಅವಧಿಯಲ್ಲಿ ನೀವು ಪ್ರೀತಿಯ ಆಟವನ್ನು ಕಾಣುವಿರಿ. ನಿಮ್ಮ ಪಾಲುದಾರಿಕೆಯಲ್ಲಿ ಮಿಶ್ರಿತ ಹಣಕಾಸನ್ನು ಹೊಂದುವಿರಿ. ನಿಮ್ಮ ಮಾನಸಿಕ ಚಿತ್ತವನ್ನು ಆದಷ್ಟು ಶಾಂತ ಅಥವಾ ತಣ್ಣಗಾಗಿ ಇಟ್ಟುಕೊಳ್ಳಬೇಕು. ತಿಂಗಳ ಕೊನೆಯಲ್ಲಿ ಹಣಕಾಸಿನ ವಿಚಾರವಾಗಿ ಆಳವಾದ ಹೊಂಡವನ್ನು ನೀವು ಕಾಣುವಿರಿ. ಹಾಗಾಗಿ ಅದೃಷ್ಟದ ಜೊತೆಗೆ ಆದಷ್ಟು ಬುದ್ಧಿವಂತಿಕೆಯನ್ನು ಬಳಸುವುದನ್ನು ತಿಳಿದುಕೊಳ್ಳಿ.

ಅದೃಷ್ಟದ ದಿನಗಳು: 5, 23, 25

ದುರಾದೃಷ್ಟದ ದಿನಗಳು: 7, 16.

ಧನು:

ಧನು:

ಮೇ 8ರಂದು ಸೂರ್ಯ ಮತ್ತು ಗುರುಗ್ರಹದ ನಡುವೆ ಒಂದು ಅಡಚಣೆ ಕಂಡುಬರುತ್ತದೆ. ಅದು ನಿಮ್ಮ ಅಧಿಕಾರದ ಮೇಲೆ ಪರಿಣಾಮ ಬೀರುತ್ತದೆ. ನೀವು ಅದನ್ನು ನಿಭಾಯಿಸಬಹುದು ಎನ್ನುವುದನ್ನು ನೆನಪಿಡಿ. ಯಾವುದೇ ಕೆಲಸವನ್ನು ಕೈಗೊಂಡರೂ ಸಹ ಅದನ್ನು ವಿಶ್ವಾಸದಿಂದ ಕಾರ್ಯನಿರ್ವಹಿಸಿ. ಯಾವುದೇ ವಿಚಾರವು ನಿಮಗೆ ನಿರಂತರವಾಗಿ ನಿರುತ್ಸಾಹ ಅಥವಾ ತೊಡಕನ್ನು ಉಂಟುಮಾಡುತ್ತಿದ್ದರೆ ಅದನ್ನು ತೊಡೆದುಹಾಕಿ.

ಅದೃಷ್ಟದ ದಿನಗಳು: 10, 18, 27

ದುರಾದೃಷ್ಟದ ದಿನಗಳು: 5, 22

ಮಕರ:

ಮಕರ:

ಮಧ್ಯ ತಿಂಗಳು ಅಮವಾಸ್ಯೆಯು ನಿಮ್ಮ ಕರುಳಿನ ಕೂಗಿಗೆ ಹೆಚ್ಚು ಕಿವಿಕೊಡಬೇಕಾಗುವುದು. ನೀವು ಅನೇಕ ಜನರಿಂದ ಸಂತೋಷವನ್ನು ಪಡೆದುಕೊಂಡಿದ್ದೀರಿ. ಯಾವುದೇ ಕೆಲಸ ಅಥವಾ ನಿರ್ಣಯವನ್ನು ತೆಗೆದುಕೊಳ್ಳುವಾಗ ದೀರ್ಘಕಾಲದ ಬಗ್ಗೆ ಚಿಂತನೆ ನಡೆಸಬೇಕಿದೆ. ತಿಂಗಳ ಅಂತ್ಯದಲ್ಲಿ ಕೆಲವು ವಿಚಾರದಲ್ಲಿ ನಿಮಗೆ ಸಹಾಯ ದೊರೆಯುವುದು.

ಅದೃಷ್ಟದ ದಿನಗಳು: 4, 14, 30.

ದುರಾದೃಷ್ಟದ ದಿನಗಳು: 1, 25.

ಕುಂಭ:

ಕುಂಭ:

ಈ ತಿಂಗಳ ಅಮವಾಸ್ಯೆಯು ನಿಮಗೆ ಕೆಲವು ಸಮಸ್ಯೆಗಳನ್ನು ತಂದೊಡ್ಡುವುದು. ಬೇರೆಯವರ ವಸ್ತುಗಳನ್ನು ಬಳಸಿ ಮುಂದೆ ಸಾಗುವುದು ತಪ್ಪು ಎನ್ನುವುದನ್ನು ನೀವು ಅರಿಯುವಿರಿ. ಹಣಕಾಸಿನ ವಿಚಾರದಲ್ಲಿ ನೀವು ಬ್ಯಾಂಕ್ ಖಾತೆಯ ಬಗ್ಗೆ ಹೆಚ್ಚು ಗಮನ ನೀಡಬೇಕಾಗುವುದು. ನಿಮ್ಮ ಕನಸಿನ ಕೆಲಸವು ಸುಲಭವಾಗಿ ನೆರವೇರುವುದು.

ಅದೃಷ್ಟದ ದಿನಗಳು: 3, 13, 19

ದುರಾದೃಷ್ಟದ ದಿನಗಳು: 15, 25

ಮೀನ:

ಮೀನ:

ಮೇ 8ರಂದು ಗುರು ಸೂರ್ಯನನ್ನು ವಿರೋಧಿಸುವುದರಿಂದ ನಿಮ್ಮಲ್ಲಿ ಆತ್ಮವಿಶ್ವಾಸದ ಮಟ್ಟವು ಕುಗ್ಗುವುದು. ನಿಮ್ಮ ಬೆನ್ನಿಗಿರುವ ಸ್ನೇಹಿತರು ಸಹಾಯ ಮಾಡುವರು ಎನ್ನುವುದನ್ನು ನೆನಪಿಟ್ಟುಕೊಳ್ಳಿ. ವೃತ್ತಿ ಮತ್ತು ವೈಯಕ್ತಿಕ ವಿಚಾರದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿರುತ್ತವೆ.

ಅದೃಷ್ಟದ ದಿನಗಳು: 10, 22, 25

ದುರಾದೃಷ್ಟದ ದಿನಗಳು: 7, 20

Read more about: life
English summary

what-does-your-love-or-luck-predictions-reveal-for-the

what-does-your-love-or-luck-predictions-reveal-for-the
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more