For Quick Alerts
ALLOW NOTIFICATIONS  
For Daily Alerts

ರಾತ್ರಿ ವೇಳೆ ಉಗುರು ಕತ್ತರಿಸಬಾರದು ಹೇಳುತ್ತಾರೆ, ಯಾಕೆ ಗೊತ್ತೇ?

By Deepu
|

ಮನೆಯಲ್ಲಿ ಹಿರಿಯರು ಕೆಲವೊಂದು ನಮ್ಮ ದಿನನಿತ್ಯದ ಕಾರ್ಯಗಳನ್ನು ಇಂತಹ ಸಂದರ್ಭದಲ್ಲಿ ಮಾಡಬಾರದು ಎಂಬುದಾಗಿ ಕಟ್ಟುಪಾಡು ಮಾಡುತ್ತಾರೆ. ಇಂದಿನ ಆಧುನಿಕ ಯುಗದಲ್ಲಿ ಇದನ್ನೆಲ್ಲಾ ನಂಬದವರು ಯಾರೂ ಇಲ್ಲದಿದ್ದರೂ ಕೆಲವೊಂದು ಆಚಾರಗಳನ್ನು ಪಾಲಿಸುವುದರ ಹಿಂದೆ ಕೆಲವೊಂದು ರಹಸ್ಯಗಳಿವೆ ಮತ್ತು ಇದು ನಮ್ಮ ಆರೋಗ್ಯಕ್ಕೆ ಒಳ್ಳೆಯದೂ ಆಗಿದೆ. ಇಂತಹ ಕೆಲವೊಂದು ನಿರ್ಬಂಧನೆಗಳು ಯಾವುವು ಎಂದರೆ ಮಂಗಳವಾರ ತಲೆಕೂದಲು ಕತ್ತರಿಸಬಾರದು, ಮುಸ್ಸಂಜೆ ಹೊತ್ತು ನಿದ್ದೆ ಮಾಡಬಾರದು, ದಕ್ಷಿಣಕ್ಕೆ ತಲೆಹಾಕಿ ಮಲಗಬಾರದು, ಹೀಗೆ ಪಟ್ಟಿ ಮಾಡುತ್ತಾ ಹೋದಂತೆ ಕೆಲವೊಂದು ಹಾಸ್ಯತ್ಮಕವಾಗಿ ನಮಗೆ ಕಂಡರೂ ವೈಜ್ಞಾನಿಕವಾಗಿ ಕೆಲವೊಂದು ಧನಾತ್ಮಕ ಪರಿಣಾಮಗಳನ್ನು ಬೀರುತ್ತವೆ. ಇಂದಿನ ಲೇಖನದಲ್ಲಿ ನಾವು ಇಂತಹುದೇ ಒಂದು ನಿರ್ಬಂಧನೆಯ ಬಗ್ಗೆ ಹೇಳಲಿದ್ದು ಅದು ರಾತ್ರಿ ಹೊತ್ತು ಉಗುರು ಕತ್ತರಿಸಬಾರದು ಎಂದಾಗಿದೆ.

ರಾತ್ರಿ ಹೊತ್ತು ಉಗುರು ಕತ್ತರಿಸಬಾರದು ಎಂಬುದು ಮೂಡ ನಂಬಿಕೆಯಾಗಿದ್ದರೂ ಇದು ಕೆಲವೊಂದು ಕಾರಣಗಳಿಗೆ ಉತ್ತಮ ವಿಧಾನವೂ ಆಗಿದೆ. ಕತ್ತರಿಸಿದ ಉಗುರನ್ನು ನೀವು ಕತ್ತಲೆಯಲ್ಲಿ ಸರಿಯಾಗಿ ಸ್ವಚ್ಛಮಾಡಲು ಆಗುವುದಿಲ್ಲ ಇಲ್ಲವೇ ಬೆಳಕು ಎಷ್ಟೇ ಇದ್ದರೂ ಉಗುರು ಕತ್ತರಿಸುವಾಗ ನಿಮ್ಮ ಬೆರಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ ಇಲ್ಲವೇ ಕತ್ತರಿಸಿದ ಉಗುರು ನೆಲದಲ್ಲಿದ್ದರೆ ಅದು ಆಹಾರವನ್ನು ಸೇರಬಹುದು ಮುಂತಾಗಿ ಹಲವಾರು ಅಪಾಯಗಳಿವೆ. ಇಂದಿನ ಲೇಖನದಲ್ಲಿ ರಾತ್ರಿ ಹೊತ್ತು ಉಗುರು ಕತ್ತರಿಸಬಾರದು ಎಂಬುದನ್ನು ಹಿರಿಯರು ಏಕೆ ಹೇಳುತ್ತಿದ್ದರು ಎಂಬುದನ್ನು ಕೆಲವೊಂದು ದೃಷ್ಟಾಂತಗಳ ಮೂಲಕ ನಾವು ಇಂದು ಬಹಿರಂಗಪಡಿಸುತ್ತಿದ್ದೇವೆ. ಅದೇನು ಎಂಬುದನ್ನು ನೋಡೋಣ....

ಕಾರಣ 1

ಕಾರಣ 1

ಹಿಂದೆ ಹಳ್ಳಿಗಳಲ್ಲಿ ವಿದ್ಯುತ್ ಸಮಸ್ಯೆ ಇತ್ತು. ರಾತ್ರಿ ಹೊತ್ತು ಉಗುರು ಕತ್ತರಿಸುವುದರಿಂದ ಅದನ್ನು ಸ್ವಚ್ಛಮಾಡಲು ಬೆಳಕು ಇರುತ್ತಿರಲಿಲ್ಲ. ಇದು ಆರೋಗ್ಯಕ್ಕೆ ಹಾನಿಕರ ಕೂಡ ಹೌದು. ಆಹಾರದೊಂದಿಗೆ ಸೇರಿಕೊಂಡರೆ ಅಲರ್ಜಿಯನ್ನು ಉಂಟುಮಾಡುತ್ತದೆ.

ಕಾರಣ 2

ಕಾರಣ 2

ಉಗುರು ಕತ್ತರಿಸುವ ಪರಿಕರ ಇರಲಿಲ್ಲ ಚಾಕುವನ್ನು ಬಳಸಿಕೊಂಡು ಆಗಿನ ಕಾಲದಲ್ಲಿ ಜನರು ತಮ್ಮ ಉಗುರುಗಳನ್ನು ಕತ್ತರಿಸುತ್ತಿದ್ದರು. ರಾತ್ರಿ ಹೊತ್ತು ಚಾಕುವನ್ನು ಬಳಸಿಕೊಂಡು ಉಗುರು ಕತ್ತಿರಿಸುವುದು ಗಾಯಕ್ಕೆ ಕಾರಣವಾಗುತ್ತಿತ್ತು.

ಕಾರಣ 3

ಕಾರಣ 3

ಕೆಲವೊಂದು ಧಾರ್ಮಿಕ ಅಂಶ ಕೂಡ ಇದೆ. ಸಂಜೆಯ ಹೊತ್ತು ಲಕ್ಷ್ಮೀ ದೇವಿಯ ಆಗಮನದ ಸಮಯ ಎಂಬುದಾಗಿ ಪ್ರತೀತಿ ಇದೆ. ಮನೆಗೆ ಸಕಲ ಸೌಭಾಗ್ಯವನ್ನು ಕಲ್ಪಿಸಲು ಆಕೆ ನಿವಾಸದಲ್ಲಿ ರಾತ್ರಿ ಹೊತ್ತು ತಂಗುತ್ತಾರೆ ಎಂಬ ನಂಬಿಕೆ ಇದೆ. ಈ ಸಮಯದಲ್ಲಿ ಕಸ ಬಿಸಾಡುವುದು, ಹಣ ನೀಡುವುದು, ಲೋನ್ ಪಾವತಿ, ಉಗುರುಗಳನ್ನು ಕತ್ತರಿಸುವುದು ಮೊದಲಾದ ಕಾರ್ಯಗಳನ್ನು ಮಾಡಬಾರದು ಎಂಬುದಾಗಿ ಹೇಳುತ್ತಾರೆ.

ಕಾರಣ 4

ಕಾರಣ 4

ಕತ್ತರಿಸಿದ ಉಗುರುಗಳನ್ನು ಬಳಸಿಕೊಂಡು ಮಾಟ ಮಂತ್ರಗಳನ್ನು ಮಾಡುವುದು ಹಳ್ಳಿಯ ಕಡೆಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ರಾತ್ರಿ ಹೊತ್ತು ಭೂಮಿಯ ಮೇಲೆ ಬಿದ್ದ ಉಗುರುಗಳನ್ನು ಮಾಟ ಮಂತ್ರ ಮಾಡುವ ಜನರು ಸಂಗ್ರಹಿಸಿಕೊಂಡು ನಮ್ಮ ಮೇಲೆ ಕೆಟ್ಟದ್ದನ್ನು ಮಾಡಲು ಬಳಸುತ್ತಾರೆ ಎಂಬುದಾಗಿ ಜನ ನಂಬುತ್ತಿದ್ದರು.

ಉಪಯೋಗಕಾರಿ ಸಲಹೆ

ಉಪಯೋಗಕಾರಿ ಸಲಹೆ

ಇಂದಿನ ದಿನಗಳಲ್ಲಿ ನಾವು ಉತ್ತಮ ವಿದ್ಯುತ್ ವ್ಯವಸ್ಥೆಯನ್ನು ಹೊಂದಿದ್ದೇವೆ. ಅದಾಗ್ಯೂ ಉಗುರುಗಳನ್ನು ಪ್ರಭಾವಶಾಲಿ ಬೆಳಕಿನ ಕೆಳಗೆ ಕತ್ತರಿಸುವುದು ಉತ್ತಮ.

ಉಗುರುಗಳನ್ನು ಕತ್ತರಿಸಿದ ನಂತರ ಅದನ್ನು ಸಂಪೂರ್ಣವಾಗಿ ಹೆಕ್ಕಿಕೊಂಡು ಯಾವುದೂ ಬಾಕಿ ಉಳಿಯದಂತೆ ಎಸೆಯಿರಿ. ಸರಿಯಾದ ಬೆಳಕಿದ್ದರೆ ಮಾತ್ರ ಉಗುರು ಬಾಕಿಯಾಗಿದೆಯೇ ಎಂಬುದನ್ನು ಪರಿಶೀಲಿಸಲು ಸಾಧ್ಯ.

ಲಕ್ಷ್ಮೀ ಮಾತೆಗೆ ಗೌರವವನ್ನು ನೀಡುವ ಸಲುವಾಗಿ ಸಂಜೆಯ ಹೊತ್ತು ಇಲ್ಲವೇ ರಾತ್ರಿ ಉಗುರುಗಳನ್ನು ಕತ್ತರಿಸಬೇಡಿ. ಇಂದಿನ ದಿನಗಳಲ್ಲಿ ನಮ್ಮ ಉಗುರುಗಳನ್ನು ಕೊಂಡೊಯ್ದು ಮಾಟ ಮಂತ್ರ ಮಾಡುತ್ತಾರೆ ಎಂಬುದನ್ನು ನಾವು ನಂಬುವುದಿಲ್ಲ. ಅದಾಗ್ಯೂ ಉಗುರುಗಳನ್ನು ಕತ್ತರಿಸುವಾಗ ಸಾಕಷ್ಟು ನೈರ್ಮಲ್ಯವನ್ನು ನಾವು ಅನುಸರಿಸಬೇಕು. ಆದ್ದರಿಂದ ಇದಕ್ಕೆ ಬೆಳಗ್ಗಿನ ಹೊತ್ತೇ ಸೂಕ್ತ.

ಉಗುರು ಕತ್ತರಿಸುವಾಗ ಪಾಲಿಸಬೇಕಾದ ವಿಧಾನಗಳು

ಉಗುರು ಕತ್ತರಿಸುವಾಗ ಪಾಲಿಸಬೇಕಾದ ವಿಧಾನಗಳು

ಉಗುರನ್ನು ಕತ್ತರಿಸಲು ಕೂಡ ಕೆಲವೊಂದು ವಿಧಾನವನ್ನು ಅನುಸರಿಸಬೇಕೆಂದು ಹೇಳಿದರೆ ಹುಬ್ಬೇರಿಸಬೇಡಿ. ಇದನ್ನು ಕೂಡ ನೀವು ಹೇಳಿ ಕೊಡಬೇಕಾ ಎಂದು ಕೋಪಗೊಳ್ಳಬೇಡಿ. ಉಗುರನ್ನು ಸರಿಯಾದ ರೀತಿಯಲ್ಲಿ ಕತ್ತರಿಸದಿದ್ದರೆ ಉಗುರಿನ ಅಂದ ಕೆಡುವುದು. ಆದ್ದರಿಂದ ಉಗುರುಗಳಿಗೆ ಉತ್ತಮ ಉತ್ತಮ ಆಕಾರ(ಶೇಪ್) ಕೊಡ ಬಯಸುವವರು ಅದನ್ನು ಕತ್ತರಿಸುವಾಗ ಅಡ್ಡಾದಿಡ್ಡಿ ಕತ್ತರಿಸಬಾರದು. ಉಗುರನ್ನು ಕತ್ತರಿಸುವುದರಲ್ಲಿದೆ ಅದರ ಶೇಪ್. ಅದರಲ್ಲೂ ಹೆಣ್ಮಕ್ಕಳ ಕೈ ಕಾಲಿನ ಉಗುರುಗಳು ಅಂದವಾದ ಆಕಾರದಲ್ಲಿದ್ದರೆ ಅವರ ಅಂದಕ್ಕೆ ಮತ್ತಷ್ಟು ಮೆರಗು ನೀಡುತ್ತದೆ. ಆದ್ದರಿಂದ ಉಗುರಿಗೆ ಅಂದದ ಆಕಾರ ಕೊಡಬಯಸುವವರು ಈ ಕೆಳಗಿನ ವಿಧಾದಂತೆ ಉಗುರನ್ನು ಕತ್ತರಿಸಬೇಕು.

1. ಉಗುರನ್ನು ಬಾಯಿಂದ ಕಚ್ಚುವುದು, ಬ್ಲೇಡ್ ಅಥವಾ ಕತ್ತರಿಯಿಂದ ಕತ್ತರಿಸದಾಗಲಿ ಮಾಡಬಾರದು. ನೇಲ್ ಕಟರ್ ಬಳಸಿ ಕತ್ತರಿಸಬೇಕು.

2. ಉಗುರಿನಲ್ಲಿ ತೇವ ಇರುವಾಗ ಕತ್ತರಿಸಬಾರದು. ಉಗುರಿನಲ್ಲಿ ತೇವವಿದ್ದರೆ ಉಗುರು ಕತ್ತರಿಸುವಾಗ ನೇಲ್ ಕಟರ್ ಜಾರಿದರೆ ಅಂದದ ಶೇಪ್ ಕೊಡಲು ಸಾಧ್ಯವಿಲ್ಲ.

3. ಉಗುರನ್ನು ಕತ್ತರಿಸುವಾಗ ತುಂಬಾ ಚಿಕ್ಕದಾಗಿ ಕತ್ತರಿಸುವ ಅಭ್ಯಾಸವಿದ್ದರೆ ಅದನ್ನು ಬಿಡುವುದು ಒಳ್ಳೆಯದು. ಈ ರೀತಿ ಉಗುರು ಕತ್ತರಿಸಿದರೆ ಬೆರಳು ಆಕರ್ಷಕವಾಗಿ ಕಾಣುವುದಿಲ್ಲ. ಆದ್ದರಿಂದ ಉಗುರನ್ನು ಕತ್ತರಿಸುವಾಗ ಸ್ವಲ್ಪ ಉದ್ದವಾಗಿ ಬಿಟ್ಟು ಕತ್ತರಿಸುವುದು ಒಳ್ಳೆಯದು. ಈ ರೀತಿ ಕತ್ತರಿಸಿದರೆ ಬೆರಳಿಗೆ ಗಾಯವಾಗುವುದಿಲ್ಲ, ನೋಡಲೂ ಆಕರ್ಷಕವಾಗಿ ಕಾಣುತ್ತದೆ.

4. ಉಗುರನ್ನು ಕತ್ತರಿಸಿದ ನಂತರ ನೇಲ್ ಕಟರ್ ನಲ್ಲಿರುವ ಶೇಪರ್ ಬಳಸಿ ಕತ್ತರಿಸಿದ ಭಾಗವನ್ನು ಉಜ್ಜಬೇಕು. ಹೀಗೆ ಉಜ್ಜುವಾಗ ಮೊಟ್ಟೆಯಾಕಾರದಲ್ಲಿ ಉಜ್ಜಿದರೆ ಉಗುರು ಆಕರ್ಷಕವಾದ ಆಕಾರದಲ್ಲಿ ಕಾಣುತ್ತದೆ.

English summary

Why We Should Not Cut Our Nails At Night

Cutting nails is a healthy practice. It helps prevent the accumulation of dirt and germs in the space in between the nails and fingers letting them get mixed up with the food that we eat giving way to illnesses. However, the age old belief in India discourages cutting nails at night and this question can be approached from different angles.
Story first published: Monday, November 27, 2017, 19:59 [IST]
X
Desktop Bottom Promotion