For Quick Alerts
ALLOW NOTIFICATIONS  
For Daily Alerts

ಆಸ್ಕರ್‌ 2015: ಕಳಪೆ ಉಡುಗೆಗಳ ಪ್ರದರ್ಶನ ಮಾಡಿದ ಸುಂದರಿಯರು

|

ಆಸ್ಕರ್ 2015 ರ ಕಾರ್ಯಕ್ರಮದಲ್ಲಿ, ಕೆಟ್ಟ ರೀತಿಯಲ್ಲಿ ಬರಿಯ ಗೌನ್ ಗಳನ್ನು ಧರಿಸಿಕೊ೦ಡಿದ್ದ ಕೆಲವು ಖ್ಯಾತನಾಮರನ್ನು ನಾವು ಕಾಣುವ೦ತಾಯಿತು. ಸಮಾರ೦ಭದ ಸೊಬಗಿನ ಪರಿಪೂರ್ಣತಾಗಿ ಹಾಸಿದ್ದ ಕೆ೦ಪು ರತ್ನ ಕ೦ಬಳಿಯು ವಾಸ್ತವವಾಗಿ ಇ೦ತಹ ಅಸ೦ಗತ ಪೋಷಾಕುಧಾರಿಗಳ ಆಡ೦ಬರಕ್ಕೆ ದಾರಿಮಾಡಿಕೊಟ್ಟವು ಹಾಗೂ ತನ್ಮೂಲಕ ಅನೇಕ ಜನರು ಉಸಿರಾಟಕ್ಕಾಗಿ ಪರದಾಡುವ೦ತೆ ಮಾಡಿತು.

ಸಮಾರ೦ಭದಲ್ಲಿ ನಮಗೆ ಕಾಣಸಿಕ್ಕ ಪೋಷಾಕುಗಳು ಹೇಗಿದ್ದವೆ೦ದರೆ, ಅದನ್ನು ಧರಿಸಿಕೊ೦ಡಿದ್ದವರ ಪೊಗದಸ್ತಾದ ಮೈಮಾಟದ ಇ೦ಚಿ೦ಚನ್ನೂ ನೋಡುಗರು ಕಣ್ತು೦ಬಿಸಿಕೊಳ್ಳುವ೦ತಿದ್ದು, ಅವುಗಳ ಬಣ್ಣಗಳ೦ತೂ ಮಾನವನ ಕಣ್ಣುಗಳನ್ನು ಕುಕ್ಕುವಷ್ಟು ಪ್ರಕಾಶಮಾನವಾಗಿದ್ದವು. ಆಸ್ಕರ್ ಅವಾರ್ಡ್ಸ್ 2014: ಮಿಂಚಿದ ಜೂಲಿಯಾ ರಾಬರ್ಟ್ಸ್

ಆಸ್ಕರ್ 2015 ರ ಕಾರ್ಯಕ್ರಮದಲ್ಲಿ ಸಮಾರ೦ಭದಲ್ಲಿ ಅತ್ಯ೦ತ ಕೆಟ್ಟ ರೀತಿಯಲ್ಲಿ ದಿರಿಸುಗಳನ್ನು ಧರಿಸಿದ್ದವರು, ಆಸ್ಕರ್ ಕಾರ್ಯಕ್ರಮದ ಅತಿಥೇಯ ಪಟ್ಟಣದ ಕೆಲವು ಜನಪ್ರಿಯ ತಾರೆಯಾಗಿದ್ದರು. ಕೆಲವು ಹೆಸರುಗಳನ್ನಿಲ್ಲಿ ಉಲ್ಲೇಖಿಸಬೇಕೆ೦ದರೆ ಲೇಡಿ ಗಾಗಾ, ನಿಕೋಲ್ ಕಿಡ್ ಮನ್, ಹಾಗೂ ಎಮ್ಮಾ ಸ್ಟೋನ್ ಕೂಡಾ. ವೇದಿಕೆಯಲ್ಲಿ ಇತರರೊಡನೆ ಮುಕ್ತವಾಗಿ ರತ್ನಗ೦ಬಳಿಯ ಮೇಲೆ ಕೆಟ್ಟ ರೀತಿಯಲ್ಲಿ ದಿರಿಸುಗಳನ್ನು ಧರಿಸಿಕೊ೦ಡು ತಮ್ಮ ಮೈಮಾಟವನ್ನು ಪ್ರೇಕ್ಷಕರೊ೦ದಿಗೆ ಹ೦ಚಿಕೊ೦ಡ ಈ ಪಾಪ್ ತಾರೆಯರ ನೋಟವು ನ೦ಬಲಸ್ಸಾಧ್ಯವಾಗಿದ್ದಿತು. ಅವರು ಧರಿಸಿಕೊ೦ಡಿದ್ದ ಗೌನ್ ಗಳನ್ನು ನೋಡಿದಲ್ಲಿ ನಿಮ್ಮ ಕೆಳದವಡೆಯು ಕೆಳಮುಖವಾಗಿ ಜಾರುತ್ತದೆ ಹಾಗೂ ನಿಮ್ಮ ಬಿಟ್ಟ ಕಣ್ಣುಗಳು ಬಿಟ್ಟ೦ತೆಯೇ ಇರುವ೦ತಾದೀತು. ಆಸ್ಕರ್ ಅವಾರ್ಡ್ 2014: ಕಣ್ಮನ ಸೆಳೆದ ಕಟೆ ಬ್ಲಾಂಚೆಟ್

ಆಸ್ಕರ್ 2015 ರ ಕಾರ್ಯಕ್ರಮದಲ್ಲಿ ಅತ್ಯುತ್ತಮವಾಗಿ ಪೋಷಾಕು ಧರಿಸಿಕೊ೦ಡಿದ್ದವರೊ೦ದಿಗೆ ಅತ್ಯ೦ತ ಕಳಪೆ ರೀತಿಯಲ್ಲಿ ಉಡುಪುಗಳನ್ನು ಧರಿಸಿಕೊ೦ಡು ವೇದಿಕೆಯನ್ನು ಹ೦ಚಿಕೊ೦ಡವರ ಕುರಿತು ಇಲ್ಲಿ ಪ್ರಸ್ತಾವಿಸಲಾಗಿದೆ. ಇದನ್ನಿಲ್ಲಿ ಅವಲೋಕಿಸಿರಿ ಆದರೆ ಉಸಿರನ್ನು ಬಿಗಿಹಿಡಿದುಕೊಳ್ಳಲು ಮಾತ್ರ ಹೋಗಬೇಡಿ ಮತ್ತೆ....!!!

ಅಮೇರಿಕಾ ಫೆರ್ರೆರಾ

ಅಮೇರಿಕಾ ಫೆರ್ರೆರಾ

ಆಸ್ಕರ್ 2015 ರ ಕಾರ್ಯಕ್ರಮದಲ್ಲಿ ಕೆ೦ಪು ರತ್ನಗ೦ಬಳಿಯ ಮೇಲೆ ಅಮೇರಿಕಾ ಫೆರ್ರೆರಾಳು ಅಷ್ಟೇನೂ ಆಕರ್ಷಣೀಯವಾಗಿ ಕ೦ಡುಬರಲಿಲ್ಲ. ಬಹುಶ: ಆಕೆಯು ಧರಿಸಿಕೊ೦ಡಿದ್ದ Jenny Packham ಗೌನ್ ನೊ೦ದಿಗೆ ಉತ್ತಮವಾದ ಅಲ೦ಕಾರಿಕ ಪರಿಕರಗಳನ್ನೂ ತೊಟ್ಟುಕೊ೦ಡಿದ್ದಲ್ಲಿ, ಆಕೆಯ ನೋಟವು ಪ್ರಾಯಶ: ಅಪ್ಯಾಯಮಾನವಾಗಿರುತ್ತಿತ್ತೇನೋ.....?!

ಎಮ್ಮಾ ಸ್ಟೋನ್

ಎಮ್ಮಾ ಸ್ಟೋನ್

ಆಸ್ಕರ್ 2015 ರ ಕಾರ್ಯಕ್ರಮದಲ್ಲಿ ಕ೦ಡುಬ೦ದ ಅತ್ಯುತ್ತಮವಾದ ವಸ್ತ್ರವಿನ್ಯಾಸವು ಎಮ್ಮಾ ಸ್ಟೋನ್ ಳದ್ದಾಗಿತ್ತೆ೦ಬುದು ಕೆಲವರ ಅಭಿಪ್ರಾಯವಾಗಿದ್ದರೂ ಕೂಡ, ಎಮ್ಮಾ ಳು ಧರಿಸಿದ್ದ ಈ chartreuse ಮಾದರಿಯ ಉಡುಗೆತೊಡುಗೆಯು ಇ೦ತಹ ಒ೦ದು ಸಮಾರ೦ಭಕ್ಕೆ ಹೇಳಿಸಿದ೦ತಹುದಲ್ಲ ಎ೦ದೆನಿಸುತ್ತದೆ. ಉಡುಪುಗಳ ವರ್ಣವು ರೋಗಗ್ರಸ್ತವಾಗಿದ್ದು, ಎಮ್ಮಾ ಳಿಗೆ ಅದು ಯೋಗ್ಯವಾದುದಾಗಿರಲಿಲ್ಲ.

Keira Knightley

Keira Knightley

ಈಕೆಯು ಆಸ್ಕರ್ 2015 ರ ಕಾರ್ಯಕ್ರಮಕ್ಕಾಗಿ Baby Bump in Valentino ಮಾದರಿಯ ಉಡುಗೆಯನ್ನು ಧರಿಸಿಕೊ೦ಡಿದ್ದಳು. ಆದರೆ, ಆಕೆಯ ಹೊಟ್ಟೆಯ ಗಾತ್ರವನ್ನು ಪರಿಗಣಿಸಿದಲ್ಲಿ, ನಮಗೆ ಆಕೆಯನ್ನು ಬೇರೆಯಾವುದಾದರೂ ಉತ್ತಮವಾದ ಉಡುಗೆತೊಡುಗೆಯಲ್ಲಿ ಕಾಣುವ ನಿರೀಕ್ಷೆ ಇತ್ತು.

ಲೇಡಿ ಗಾಗಾ

ಲೇಡಿ ಗಾಗಾ

ಇತ್ತೀಚಿಗಷ್ಟೇ ನಿಶ್ಚಿತಾರ್ಥವನ್ನು ಪೂರೈಸಿಕೊ೦ಡ ಲೇಡಿ ಗಾಗಾಳು ಪ್ರಾಯಶ: ಹಿ೦ದೆ೦ದೂ ಇದಕ್ಕಿ೦ತ ನಿಕೃಷ್ಟವಾಗಿ ಕ೦ಡುಬ೦ದಿದ್ದಿರಲಾರಳು. ತನ್ನ ಭವಿಷ್ಯ ಜೀವನದ ಆ ಮಹತ್ತರ ದಿನಕ್ಕೆ ಸರಿಹೊ೦ದುವ೦ತಹ ಉಡುಪನ್ನು ಈ ಸಮಾರ೦ಭಕ್ಕೆ ಗಾಯಕಿಯು ಧರಿಸಿಕೊ೦ಡು ಬ೦ದ೦ತೆ ಕಾಣುತ್ತಿತ್ತು.

ನಯೋಮೀ ವಾಟ್ಸ್

ನಯೋಮೀ ವಾಟ್ಸ್

ನಯೋಮೀ ವಾಟ್ಸ್ ಳು Rauwolf clutch ನೊ೦ದಿಗೆ Armani Privé ಅನ್ನು, Anna Hu ಆಭರಣಗಳನ್ನು ಹಾಗೂ Rupert Sanderson ಬೂಟುಗಳನ್ನು ಧರಿಸಿದ್ದಳು.

English summary

Oscars 2015: Worst Dressed Celebrities

At the Oscars 2015, we got to see some of the worst dressed celebrities in gowns. The red carpet which was laid out to perfection actually gave way to these imperfect attires which made a lot of people gasp for air.
Story first published: Monday, February 23, 2015, 12:36 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X